
ಬೆಂಗಳೂರು/ಪುತ್ತೂರು: ಸಮಾಜ ಸೇವಕ, ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಅವರ ಅತ್ಯಾಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಗುಣರಂಜನ್ ಶೆಟ್ಟಿ ಅವರ ಹತ್ಯೆಗೆ ಹಾಕಲಾಗಿದ್ದ ಸ್ಕೆಚ್ ಮಿಸ್ ಆಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಗುಣರಂಜನ್ ಶೆಟ್ಟಿ ಸಮಾಜ ಸೇವೆ ಜತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.ಹೊಟೇಲ್ ಉದ್ಯಮಿಯೂ ಹೌದು..ನ್ಯೂಸ್ ಚಾನೆಲ್ ಮುಖ್ಯಸ್ಥರೂ ಹೌದು..ಇದೆಲ್ಲದಕ್ಕಿಂತ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರ ಕೂಡ.
ಮುತ್ತಪ್ಪ ರೈ ತೀರಿ ಹೋದ ಜಯಕರ್ನಾಟಕ ಇಬ್ಭಾಗವಾಯಿತು.ಆಗ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಜಯಕರ್ನಾಟಕ ಜನಪರ ವೇದಿಕೆಯನ್ನು ಹುಟ್ಟಾಕಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು.
ಎಲ್ಲವೂ ಸರಿಯಾಗಿಯೇ ನಡೆಯುತ್ತಿದ್ದಾಗಲೇ ಶಾಕಿಂಗ್ ಎನ್ನುವಂಥ ಸುದ್ದಿ ಹೊರಬಿದ್ದಿದೆ.ಗುಣರಂಜನ್ ಶೆಟ್ಟಿ ಅವರನ್ನು ಹೇಗಾದರೂ ಮಾಡಿ ಮುಗಿಸಲೇಬೇಕೆನ್ನುವ ಸ್ಕೆಚ್ ಭೂಗತ ಪಾತಕಿಗಳಿಂದ ರೆಡಿಯಾಗಿದೆ.ಇದು ಸಧ್ಯದಲ್ಲೇ ಇಂಪ್ಲಿಮೆಂಟ್ ಆಗಲಿದೆ ಎನ್ನುವ ಅಘಾತಕರ ಸುದ್ದಿಯನ್ನು ಪೊಲೀಸ್ ಮೂಲಗಳು ತಿಳಿಸಿವೆಯಲ್ಲದೇ ಎಚ್ಚರಿಕೆಯಿಂದಿರುವಂತೆಯೂ ಸೂಚಿಸಿವೆ.
ಮುತ್ತಪ್ಪ ರೈ ಬದುಕಿದ್ದಾಗಲೂ ಅವರೊಂದಿಗೆ ಇದ್ದರೂ ಗುಣರಂಜನ್ ಶೆಟ್ಟಿ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಎಲ್ಲರೊಂದಿಗೆ ನಗುತ್ತಲೇ ಸೌಜನ್ಯದ ನಗುಬೀರುತ್ತ ಹಸನ್ಮುಖಿಯಾಗಿದ್ದರು.ಆದರೆ ಮುತ್ತಪ್ಪ ರೈ ಬದುಕಿದ್ದ ಆ ಸಮಯದಲ್ಲೇ ಅವರನ್ನು ಕೆಲವು ಪಾತಕಿಗಳು ಮುಗಿಸಲು ಸ್ಕೆಚ್ ರೂಪಿಸುತ್ತಿದ್ದರು.ಹಾಗಾಗಿ ಎಚ್ಚರಿಕೆಯಿಂದ ಇರಿ ಎಂದು ಪೊಲೀಸರು ಬುದ್ದಿ ಹೇಳಿದ್ದಾರೆ.
ವಿಚಿತ್ರ ಎಂದರೆಗುಣರಂಜನ್ ಶೆಟ್ಟಿ ಅವರ ಮರ್ಡರ್ ಗೆ ಸ್ಕೆಚ್ ರೂಪಿಸಿದವರಲ್ಲಿ ಪುತ್ತೂರಿನ ಮೂಲದವನೊಬ್ಬನಿದ್ದಾನೆ ಎನ್ನುವ ಮಾಹಿತಿ ದೊರೆತಿದೆ.ಇದು ಯಾರೆನ್ನುವುದನ್ನು ಗುಣರಂಜನ್ ಶೆಟ್ಟಿ ಅವರಿಗೂ ಗೊತ್ತಿದೆ.ಈ ಸಂಗತಿಯನ್ನು ಈಗಾಗಲೇ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಗುಣರಂಜನ್ ಶೆಟ್ಟಿ ಖಾಸಗಿಯಾಗಿ ನಾಲ್ವರು ಅಂಗರಕ್ಷಕರನ್ನು ಹೊಂದಿದ್ದಾರೆ.ಅಗತ್ಯಬಿದ್ದರೆ ಪೊಲೀಸ್ ಮೂಲಕವೂ ಬಾಡಿಗಾರ್ಡ್ ಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಅಧಿಕಾರಿಗಳು ಗುಣರಂಜನ್ ಶೆಟ್ಟಿ ಅವರಿಗೆ ತಿಳಿಸಿದ್ದಾರೆ.
ಅಂದ್ಹಾಗೆ ಗುಣರಂಜನ್ ಶೆಟ್ಟಿ, ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರು. ಚಿಕ್ಕಮುಡ್ನೂರು ಗ್ರಾಮದ ಉರಮಾಲು ನಿವಾಸಿ.ಮುತ್ತಪ್ಪ ರೈ ಅವರೊಂದಿಗೆ ಮೊದಲಿಂದಲೂ ಅತ್ಯಾಪ್ತತೆ ಬೆಳೆಸಿಕೊಂಡು ಅವರೊಂದಿಗೆ ಜಯಕರ್ನಾಟಕ ಸಂಘಟನೆ ಸ್ಥಾಪಿಸಿದ್ದರು.ರೈ ಕಾಲಾನಂತರ ಜಯಕರ್ನಾಟಕ ಜನಪರ ವೇದಿಕೆಯನ್ನು ಕಟ್ಟಿ ಬೆಳೆಸಿದರು.
ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದಿದ್ದರೂ ಯಾವ ಕಾರಣಕ್ಕೆ ಗುಣರಂಜನ್ ಶೆಟ್ಟಿಯವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬುದು ಬಹಿರಂಗವಾಗಿಲ್ಲ. ರಿಯಲ್ ಎಸ್ಟೇಟ್ ನ ವೈಷಮ್ಯ ಅಥವಾ ರೈ ವಿರುದ್ಧದ ಸೇಡು ಸ್ಕೆಚ್ ಹಿಂದೆ ವರ್ಕ್ ಮಾಡಿದೆಯೋ ಗೊತ್ತಾಗ್ತಿಲ್ಲ. ಆದರೆ ಒಟ್ಟಾರೆ ಬೆಳವಣಿಗೆ ಬಗ್ಗೆ ಮಂಗಳೂರು ಹಾಗೂ ಬೆಂಗಳೂರು ಪೊಲೀಸ್ರು ತಲೆ ಕೆಡಿಸಿಕೊಂಡಿರುವುದಂತೂ ಸತ್ಯ.