SUB INSPECTOR SLAPPED BMTC DRIVER..?! BMTC ಚಾಲಕನಿಗೆ ಖಾಕಿ ಕಪಾಳ ಮೋಕ್ಷ..?!

ನ್ಯಾಯ ಕೇಳೊಕ್ಕೆ ಹೋದ್ರೆ ಕಪಾಳ ಮೋಕ್ಷ ಮಾಡಿದ್ರಾ ಸಬ್ ಇನ್ಸ್ ಪೆಕ್ಟರ್ ಮುರುಳಿ.?!

0

ಬೆಂಗಳೂರು: ಭೂ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ಬಿಎಂಟಿಸಿ ಚಾಲಕನ ಮೇಲೆಯೇ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿ, ಒಪ್ಪದಿದ್ದಾಗ ಆತನ ಕೆನ್ನೆಗೆ ಬಾರಿಸಿರುವ ಆರೊಪಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ರು ತುತ್ತಾಗಿದ್ದಾರೆ.

ಹಲ್ಲೆಗೊಳಗಾದ ಬಿಎಂಟಿಸಿ ಚಾಲಕ ವೆಂಕಟೇಶ್
ಹಲ್ಲೆಗೊಳಗಾದ ಬಿಎಂಟಿಸಿ ಚಾಲಕ ವೆಂಕಟೇಶ್
( ಒಳಚಿತ್ರದಲ್ಲಿ ಕಪಾಳ ಮೋಕ್ಷಕ್ಕೆ ಕೆನ್ನೆಗೆ ಬಾವು ಉಂಟಾಗಿರುವುದು
 ಕಪಾಳ ಮೋಕ್ಷಕ್ಕೆ ಕೆನ್ನೆಗೆ ಬಾವು ಉಂಟಾಗಿರುವುದು
ಚಾಲಕನಿಗೆ ಕಪಾಳ ಮೋಕ್ಷ ಮಾಡಿದ ಆಪಾದನೆಗೆ ತುತ್ತಾಗಿರುವ ಸಬ್ ಇನ್ಸ್ ಪೆಕ್ಟರ್ ಮುರುಳಿ (ಪ್ರಾತಿನಿಧಿಕ ಚಿತ್ರ)
ಚಾಲಕನಿಗೆ ಕಪಾಳ ಮೋಕ್ಷ ಮಾಡಿದ ಆಪಾದನೆಗೆ ತುತ್ತಾಗಿರುವ ಸಬ್ ಇನ್ಸ್ ಪೆಕ್ಟರ್ ಮುರುಳಿ (ಪ್ರಾತಿನಿಧಿಕ ಚಿತ್ರ)

ಅಂದ್ಹಾಗೆ ಸಾಮಾಜಿಕ ನ್ಯಾಯದ ಅಪೇಕ್ಷೆಯಲ್ಲಿ ಠಾಣೆಗೆ ದೂರನ್ನಿತ್ತ ಪರಿಣಾಮ ಕೆನ್ನೆಗೆ ಬಾರಿಸಿಕೊಂಡಾತ ಬಿಎಂಟಿಸಿ ಚಾಲಕ ವೆಂಕಟೇಶ್,ಆತನ ಕೆನ್ನೆಗೆ ಹಿಂದುಮುಂದೆ ನೋಡದೆ ಬಾರಿಸಿ ಕಳುಹಿಸಿರುವ ಸಬ್ ಇನ್ಸ್ ಪೆಕ್ಟರ್ ಹೆಸರು ಮುರುಳಿ..ಈ ಮಹಾನುಭಾವ ರಾಮನಗರ ಪುರ ಆರಕ್ಷಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಂತೆ.

ರಾಮನಗರ ಟೌನ್ ನ ಸಿಂಗ್ರಾಬೋವಿ ದೊಡ್ಡಿಯಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆ ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಡೆದಿದೆ.ಸ್ಥಳೀಯ ನಿವಾಸಿಯಾಗಿರುವ ವೆಂಕಟೇಶ್ ಅರ್ಧ ಗುಂಟೆ ಭೂಮಿಯನ್ನು 2017 ರಲ್ಲಿ 3 ಲಕ್ಷಕ್ಕೆ ಖರೀದಿ ಮಾಡಿ ಅಲ್ಲಿ ಮನೆ ನಿರ್ಮಿಸಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ರು. ಅದಕ್ಕೆ ಹೊಂದಿಕೊಂಡಂತೆ ವಾಸವಾಗಿರುವ ಧನಂಜಯ,ಶ್ರೀನಿವಾಸ್ ಹಾಗು ಅವರ ಕುಟುಂಬ ವೆಂಕಟೇಶ್ ಜತೆ ರಸ್ತೆಗೆ ಜಾಗ ಬಿಡುವ ವಿಚಾರದಲ್ಲಿ ಮೊದಲಿಂದಲೂ ಗಲಾಟೆ ಮಾಡುತ್ತಿತ್ತು ಎನ್ನಲಾಗಿದೆ.

ಆದ್ರೆ ವೆಂಕಟೇಶ್ ಇದಕ್ಕೆ ಒಪ್ಪದಿದ್ದಾಗ ಆತನ ಮೇಲೆ ಹಲ್ಲೆ ಮಾಡುವಂಥ ಕೆಲಸವನ್ನೂ ಮಾಡಿದ್ದರಂತೆ.ಈ ಸಂಬಂಧ ವೆಂಕಟೇಶ್ ಕನಿಷ್ಟ 6-7 ಬಾರಿ ಇದೇ ಠಾಣೆಗೆ ದೂರನ್ನ ಕೂಡ ನೀಡಿದ್ರಂತೆ.ದುರಂತ ಎಂದ್ರೆ ಮೇಲ್ಕಂಡ ಪ್ರಕರಣದಲ್ಲಿ ಪೊಲೀಸ್ರು ಧನಂಜಯ್ ಪರವಾಗೇ ಕೆಲಸ ಮಾಡಿದ್ರು ಎನ್ನುವುದು ಸ್ಥಳೀಯರ ಆರೋಪ ಕೂಡ. ಇದೇ ವಿಚಾರದಲ್ಲಿ ನಿನ್ನೆ ಇದ್ದಕ್ಕಿದ್ದಂತೆ ವೆಂಕಟೇಶ್ ಜಾಗದಲ್ಲಿದ್ದ ಪೈಪ್,ನಲ್ಲಿ ಒಡೆದಾಕಿದ್ದಾರೆ.ಇದು ನಮ್ಮ ಜಮೀನು..ಇಲ್ಲೇಕೆ ನಿನ್ನ ವಸ್ತುಗಳನ್ನು ಹಾಕಿದ್ದೀಯ ಎಂದು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಾರೆ.ವೆಂಕಟೇಶ್ ಕೂಡ ಖಡಕ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.ಮಾತಿಗೆ ಮಾತು ಬೆಳೆದಾಗ ಅಲ್ಲಿ ನಡೆದ ಒಟ್ಟಾರೆ ಘಟನೆಯನ್ನು ಚಿತ್ರಿಕರಿಸಿ ಮೊಬೈಲ್ ನ್ನು ಪೊಲೀಸ್ ಠಾಣೆಗೆ ಒಪ್ಪಿಸಿ,ದೂರು ಕೂಡ ನೀಡಿದ್ದಾರೆ.

ತನ್ನ ಮೇಲೆ ನಡೆಸಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಟೆಸ್ಟ್ ಮಾಡಿಸಿರುವ ವೆಂಕಟೇಶ್ ಅವರ ಹೆಲ್ಪ್ ರಿಪೋರ್ಟ್
ತನ್ನ ಮೇಲೆ ನಡೆಸಲಾಗಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಟೆಸ್ಟ್ ಮಾಡಿಸಿರುವ ವೆಂಕಟೇಶ್ ಅವರ ಹೆಲ್ಪ್ ರಿಪೋರ್ಟ್

ಮನಸು ಮಾಡಿದಿದ್ದರೆ ಸಬ್ ಇನ್ಸ್ ಪೆಕ್ಟರ್ ಮುರುಳು ಅವರು ಅಲ್ಲಿಯೇ ನ್ಯಾಯ ತೀರಿಸಬಹುದಾಗಿತ್ತು. ಆದ್ರೆ ದೂರು ಕೊಡೋದನ್ನೇ ಖಯಾಲಿ ಮಾಡಿಕೊಂಡಿದ್ದಾನೆ ಈ ವೆಂಕಟೇಶ್,ಹಾಗಾಗಿ ಗೋವಿಂದಯ್ಯ ಅಂಡ್ ಫ್ಯಾಮಿಲಿ ಅವರಂತೆಯೇ ಈತನ ಮೇಲೂ ಎಫ್ ಐಆರ್ ಲಾಡ್ಜ್ ಮಾಡುವಂತೆ ಅಲ್ಲಿರೋ ಕೆಳಹಂತದ ಸಿಬ್ಬಂದಿಗೆ ತಿಳಿಸಿದ್ದಾರಂತೆ. ಅಷ್ಟಾಗಿದಿದ್ದರೆ ಪರ್ವಾಗಿರಲಿಲಲ್ಲ, ಅದ್ಯಾವ ಮಟ್ಟದ ಪ್ರೆಷರ್ ಬಂತೋ ಗೊತ್ತಿಲ್ಲ ಕೊಟ್ಟ ದೂರನ್ನು ವಾಪಸ್ ಪಡೆದುಕೊಂಡು ಕಾಂಪ್ರಮೈಸ್ ಮಾಡ್ಕೊಂಡು ಖುಲಾಸೆ ಮಾಡು ಎಂದು ವೆಂಕಟೇಶ್ ಗೆ ಪ್ರೆಷರ್ ಹಾಕಿ್ದ್ದಾರಂತೆ.

ನನಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಬಂದ್ರೆ ರಾಜಿಯಾಗು ಅಂತೀರಲ್ಲ ಸಾರ್ ಎಂದು ಸ್ವಲ್ಪ ಏರುದ್ವನಿಯಲ್ಲೇ ಕೇಳಿದ್ದಾರಂತೆ ವೆಂಕಟೇಶ್.ಮಾತಿಗೆ ಮಾತು ಬೆಳೆದಿದೆ.ವೆಂಕಟೇಶ್ ಕೆನ್ನೆಗೆ ಬಾರಿಸಿಯೇ ಬಿಟ್ಟಿದ್ದಾರಂತೆ ಮುರುಳಿ.ವೆಂಕಟೇಶ್ ಗೆ ಒಂದ್ ಕ್ಷಣ ತಲೆ ಗಿರ್ ಎಂದಿದೆ.ಅಲ್ಲೇ ಕೂತುಬಿಟ್ಟಿದ್ದಾನೆ.ಸ್ವಲ್ಪ ಹೊತ್ತಿನ ನಂತರ ಹೊರ ಬಂದು ನಾನ್ ಯಾವ್ ತಪ್ಪು ಮಾಡಿದೆ ಎಂದು ಅವ್ರು ನನ್ನ ಕೆನ್ನೆಗೆ ಬಾರಿಸಿದ್ರು ಎಂದು ಸಿಬ್ಬಂದಿಯನ್ನು ಕೇಳಿದ್ದಾರೆ.ನಮ್  ಸಾಹೇಬ್ರು ಸ್ವಲ್ಪ ಹಾಗೇನೆ ಎಂದಿದ್ದಾರಂತೆ.

ಭೂ ವ್ಯಾಜ್ಯದ ಸಂಬಂಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್ ಐ ಆರ್
ಭೂ ವ್ಯಾಜ್ಯದ ಸಂಬಂಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್ ಐ ಆರ್

ಅಲ್ಲಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಹೋದವನೇ ವೆಂಕಟೇಶ್ ಮೆಡಿಕಲ್ ಮಾಡಿಸಿದ್ದಾನೆ.ಆಸ್ಪತ್ರೆಯವರೇ ಪೊಲೀಸರನ್ನು ಕರೆಯಿಸಿ ಬೈದಿದ್ದಾರಂತೆ.ಅಲ್ಲಿಯೂ ಪೊಲೀಸ್ ಸಿಬ್ಬಂದಿ ಮುರುಳಿ ಬಗ್ಗೆ ಬೇಸರವಾಗಿಯೇ ಮಾತನಾಡಿದ್ದಾರಂತೆ.ತನಗಾದ ಅನ್ಯಾಯದ ವಿರುದ್ದ ಎಸ್ಪಿ ಕಚೇರಿಗೆ ದೂರು ಕೊಡಲು ಹೋದಾಗ  ಅಲ್ಲಿದ್ದ ಪೊಲೀಸ್ರು ಹೆದರಿಸಿ ಕಳುಹಿಸಿದ್ದಾರಂತೆ.

ಮುರುಳಿ ಅವರು ಮಾಡಿದ್ದಾರೆನ್ನಲಾಗಿರುವ ಕಪಾಳ ಮೋಕ್ಷದಿಂದ ವೆಂಕಟೇಶ್ ಅವರ ಕೆನ್ನೆ ಬಾತಿದೆ.;ಪೊಲೀಸರಿಂದಲೇ ನ್ಯಾಯ ಸಿಗಲಿಲ್ಲವಲ್ಲ ಎಂಬ ಬೇಸರದಿಂದ ವೆಂಕಟೇಶ್ ತನಗಾದ ಅನ್ಯಾಯಕ್ಕೆ ಕಾರಣವಾದ ಸಬ್ ಇನ್ಸ್ ಪೆಕ್ಟರ್  ಮುರುಳಿ ವಿರುದ್ದ ಪೊಲೀಸ್ ದೂರು ಪ್ರಾಧಿಕಾರದ ಕದ ತಟ್ಟೊಕ್ಕೆ ಮುಂದಾಗಿದ್ದಾರಂತೆ.

ಅದೇನೇ ಆಗಲಿ, ನ್ಯಾಯ ಕೇಳ್ಕಂಡು ಠಾಣೆಗೆ ಬರುವ ಸಾರ್ವಜನಿಕರ ಜತೆ ಪೊಲೀಸ್ರು ಸೌಜನ್ಯಯುತವಾಗಿ ವ್ಯವಹರಿಸುವುದನ್ನು ಬಿಟ್ಟು ಅವರ ಮೇಲೆ ದೈಹಿಕ ದೌರ್ಜನ್ಯ ನಡೆಸುವಂತದ್ದು ಎಷ್ಟು ಸರಿ..ಅಲ್ವಾ..

SUB INSPECTOR SLAPPED BMTC DRIVER..?! BMTC ಚಾಲಕನಿಗೆ ಖಾಕಿ ಕಪಾಳ ಮೋಕ್ಷ..?!ನ್ಯಾಯ ಕೇಳೊಕ್ಕೆ ಹೋದ್ರೆ ಕಪಾಳ ಮೋಕ್ಷ ಮಾಡಿದ್ರಾ ಸಬ್ ಇನ್ಸ್ ಪೆಕ್ಟರ್ ಮುರುಳಿ.?! 

 

Spread the love
Leave A Reply

Your email address will not be published.

Flash News