“SARALA VAASTU” CHANDRASHEKAR GURUJI MURDER:”ಸರಳ ವಾಸ್ತು” ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ-ಭಕ್ತರ ಸೋಗಲ್ಲಿ ಬಂದು ಕೊಲೆ-ಸ್ಥಳದಲ್ಲೇ ಗುರೂಜಿ ಸ್ಪಾಟ್

ಹುಬ್ಬಳ್ಳಿಯ ಹೊಟೇಲ್ ನಲ್ಲಿ ಘಟನೆ-ವಾಸ್ತು ಪರಿಹಾರ ಕೇಳುವ ನೆಪದಲ್ಲಿ ಚಾಕು ಇರಿದ ದುಷ್ಕರ್ಮಿಗಳು

0

ಹುಬ್ಬಳ್ಳಿ:ಸರಳ ವಾಸ್ತು ಖ್ಯಾತಿಯ ಶ್ರೀ ಚಂದ್ರಶೇಖರ್ ಗುರೂಜಿ ಕೊಲೆಯಾಗಿದ್ದಾರೆ.ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ರೆಸಿಡೆಂಟ್ ಹೊಟೇಲ್ ನಲ್ಲಿದ್ದ ವೇಳೆ ಸರಳವಾಸ್ತುಗೆ ಪರಿಹಾರ ಕೇಳುವವನಂತೆ ಸೋಗಿನಲ್ಲಿ ಬಂದ ಅಪರಿಚಿತನೊಬ್ಬ ಚಾಕು ಇರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಾಳುವಾದ ಚಂದ್ರಶೇಖರ್ ಗುರೂಜಿ ಅವರನ್ನು ಉಳಿಸಲು ಯಾವುದೇ ಅವಕಾಶಗಳಿರಲಿಲ್ಲ.ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದಾನೆ.ಸರಳ ವಸ್ತು-ಸರಳ ಅಕಾಡೆಮಿ,ಸರಳ ಜೀವನ ಎನ್ನುವ ಪರಿಕಲ್ಪನೆಗಳ ಮೂಲಕ ಹೆಸರಾಗಿದ್ದ ಚಂದ್ರಶೇಖರ್ ಗುರೂಜಿ ದೇಶ ವಿದೇಶದಲ್ಲೂ ಹೆಸರಾಗಿದ್ದರು.

ಕಿಮ್ಸ್ ಆಸ್ಪತ್ರೆಗೆ ಚಂದ್ರಶೇಖರ ಗುರೂಜಿ ಶವ ರವಾನೆ ಮಾಡಲಾಗಿದ್ದು ಕೊಲೆಗೆ ಕಾರಣವೇನೆನ್ನುವುದು ಗೊತ್ತಾಗಿಲ್ಲ..ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂ ರಾಮ್ ದೌಡಾಯಿಸಿ ಪರಿಸ್ತಿತಿಯನ್ನು ಪರಿಶೀಲಿಸುತ್ತಿದ್ದಾರೆ.ಸಿಸಿಟಿವಿ ದೃಶ್ಯಾವಳಿ ಮೇಲೆ ಕೊಲೆಗಾರರ ಪತ್ತೆಗೆ ಬಲೆ ಬೀಸಿದ್ದಾರೆ.

ಜುಲೈ ರಂದು ಹೊಟೇಲ್ ಗೆ ಬಂದಿದ್ದ ಚಂದ್ರಶೇಖರ್ ಗುರೂಜಿ ನಾಳೆ ಹೊಟೇಲ್ ರೂಂ ಖಾಲಿ ಮಾಡಬೇಕಿತ್ತು.ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.ಮೂಲತಃ ಬಾಗಲಕೋಟೆಯ ಚಂದ್ರಶೇಖರ್ ಗುರೂಜಿ, ಸಿವಿಲ್ ಎಂಜಿನಿಯರ್ ಕೋರ್ಸ್ ಮಾಡಿಕೊಂಡು ಸರಳ ವಾಸ್ತುವನ್ನೇ ಪ್ರಧಾನವಾಗಿಟ್ಟುಕೊಂಡು ದೇಶವಿದೇಶಗಳಲ್ಲಿ ಹೆಸರಾಗಿದ್ದರು

 

Spread the love
Leave A Reply

Your email address will not be published.

Flash News