MURDERERS OF “HANDI ANNI” SURRENDERED TO THE CHIKMAGALUR POLICE: ಹಂದಿ ಅಣ್ಣಿ ಹಂತಕರ ಶರಣಾಗತಿ? ಚಿಕ್ಕಮಗಳೂರು ಪೊಲೀಸರಿಂದ ದೃಢ: ಶರಣಾಗತಿ ಸುದ್ದಿ ಒಪ್ಪದ ಶಿವಮೊಗ್ಗ ಪೊಲೀಸ್..?!

ಕೊಲೆ ಶಿವಮೊಗ್ಗದಲ್ಲಿ..!? ಶರಣಾಗತಿ ಚಿಕ್ಕಮಗಳೂರಿನಲ್ಲಿ..?! ಬಲವಂತದ ಶರಣಾಗತಿನಾ..? ಚಿಕ್ಕಮಗಳೂರಿನಲ್ಲೇ ಶರಣಾಗತಿ ಮಾಡಿಸೋದ್ರ ಹಿಂದಿರುವ ರಹಸ್ಯವೇನು..? ನಿಷ್ಪಕ್ಷಪಾತ ತನಿಖೆ ನಡುದ್ರೆ ಬಯಲಾಗುವ ಸ್ಪೋಟಕ ಸತ್ಯವೇ ಬೇರೆನಾ..?

0
ಕಾಡಾ ಕಾರ್ತಿ ತಂಡದಿಂದ ಕೊಲೆಯಾದ ಶಿವಮೊಗ್ಗದ ನಟೋರಿಯಸ್ ಪಾತಕಿ ಹಂದಿ ಅಣ್ಣಿ
ಕಾಡಾ ಕಾರ್ತಿ ತಂಡದಿಂದ ಕೊಲೆಯಾದ ಶಿವಮೊಗ್ಗದ ನಟೋರಿಯಸ್ ಪಾತಕಿ ಹಂದಿ ಅಣ್ಣಿ

ಚಿಕ್ಕಮಗಳೂರು:ಶಿವಮೊಗ್ಗವನ್ನು ಬೆಚ್ಚಿಬೀಳಿಸಿದ್ದ ಪಾತಕಿ ಹಂದಿಅಣ್ಣಿಯ ಹಂತಕರು ಜೀವಭಯದಿಂದ ಚಿಕ್ಕಮಗಳೂರು ಎಸ್ಪಿ ಎದುರು ಶರಣಾಗತರಾಗಿದ್ದಾರೆ.ಕಾಡಾ ಕಾರ್ತಿಕ್ ನಿತಿನ್ ಸೇರಿದಂತೆ ಒಟ್ಟು 8 ಹಂತಕರು ಚಿಕ್ಕಮಗಳೂರು ಎಸ್ಪಿ ಮುಂದೆ ತಪ್ಪೊಪ್ಪಿಕೊಂಡು ಶರಣಾಗತರಾಗಿರುವ ಸುದ್ದಿಯನ್ನು ಅಧೀಕೃತವಾಗಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹಾಡಹಗಲೇ ಹಂದಿ ಅಣ್ಣಿಯನ್ನು ಎಳೆನೀರಿನಂತೆ ಕೊಚ್ಚಿ ಕೊಂದಿದ್ದ ಕಾಡಾ ಕಾರ್ತಿ ತಂಡ ಮಲೆನಾಡಿನ ಅನೇಕ ಭಾಗಗಳಲ್ಲಿ ಆಶ್ರಯ ಹುಡುಕುವ ಪ್ರಯತ್ನ ಮಾಡಿದೆ.ಕೆಲವೆಡೆ ಅವರಿವರನ್ನು ಹೆದರಿಸಿ ಬೆದರಿಸಿ ಆಶ್ರಯವನ್ನೂ ಪಡೆದಿತ್ತಂತೆ.ಆದರೆ ತಮ್ಮನ್ನು ಶಿವಮೊಗ್ಗ ಹಾಗು ಚಿಕ್ಕಮಗಳೂರು ಪೊಲೀಸರು ಹುಡುಕುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮತ್ತೆಲ್ಲೋ ಅಡಗಿಕೊಳ್ಳುವುದು ಸೂಕ್ತ ಅಲ್ಲ ಎಂದೆಣಿಸಿ ಪರಸ್ಪರ ಮಾತ್ನಾಡಿಕೊಂಡು ನಿನ್ನೆ ರಾತ್ರಿ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮುಂದೆ ಶರಣಾಗತರಾಗಿದ್ದಾರೆ.

ಚಿಕ್ಕಮಗಳೂರು ಎಸ್ಪಿ ಹಕಾಯ್ ಅಕ್ಷಯ್
ಚಿಕ್ಕಮಗಳೂರು ಎಸ್ಪಿ ಹಕಾಯ್ ಅಕ್ಷಯ್

ಕಾಡಾ ಕಾರ್ತಿಕ್ ನೇ ಇಡೀ ಟೀಮ್ ನ್ನು ಲೀಡ್ ಮಾಡಿದ್ದು ಜತೆಗಿದ್ದ ನಿತಿನ್ ಸೇರಿದಂತೆ ಒಟ್ಟು 8 ಜನರು ಆತನಿಗೆ ಹಲವಾರು ಕಾರಣಗಳಿಂದಾಗಿ ಅಣ್ಣಿ ಮುಗಿಸೊಕ್ಕೆ ಸಾಥ್ ಕೊಟ್ಟಿದ್ದಾರೆನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.ಕಾಡಾ ಕಾರ್ತಿಕ್ ಹಿನ್ನಲೆಯನ್ನು ತಡಕಾಡಿದ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರಕಿದೆ ಎನ್ನಲಾಗಿದೆ.

ಹಾಡಹಗಲೇ ವಿನೋಬನಗರದಲ್ಲಿ ಕೊಲೆಯಾಗಿದ್ದ ಹಂದಿ ಅಣ್ಣಿ,ಕಾಡಾ ಕಾರ್ತಿ ಹಾಗು ತಂಡವೇ ಕೊಲೆ ಮಾಡಿರಬಹುದೆನ್ನುವ ಶಂಕೆಯನ್ನು ಅಂದೇ ಶಿವಮೊಗ್ಗದ ಎಸ್ಪಿ ಲಕ್ಷ್ಮಿಪ್ರಸಾದ್ ವ್ಯಕ್ತಪಡಿಸಿದ್ದರು.ಇದಕ್ಕಾಗಿ 8 ಪ್ರತ್ಯೆಕ ತಂಡಗಳನ್ನು ರೂಪಿಸಿದ್ದರು.
ಹಾಡಹಗಲೇ ವಿನೋಬನಗರದಲ್ಲಿ ಕೊಲೆಯಾಗಿದ್ದ ಹಂದಿ ಅಣ್ಣಿ,ಕಾಡಾ ಕಾರ್ತಿ ಹಾಗು ತಂಡವೇ ಕೊಲೆ ಮಾಡಿರಬಹುದೆನ್ನುವ ಶಂಕೆಯನ್ನು ಅಂದೇ ಶಿವಮೊಗ್ಗದ ಎಸ್ಪಿ ಲಕ್ಷ್ಮಿಪ್ರಸಾದ್ ವ್ಯಕ್ತಪಡಿಸಿದ್ದರು.ಇದಕ್ಕಾಗಿ 8 ಪ್ರತ್ಯೆಕ ತಂಡಗಳನ್ನು ರೂಪಿಸಿದ್ದರು.
ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್
ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್

ಕಾಡಾ ಕಾರ್ತಿ ಬಂಕ್ ಬಾಲುನ ಸಹಚರ ಎನ್ನಲಾಗಿದೆ.ತನ್ನ ಬಾಸ್ ಕೊಲೆ ಹಿಂದೆ ಹಂದಿ ಅಣ್ಣಿ ಸ್ಕೆಚ್ ಇರುವುದು ಗೊತ್ತಾದ ದಿನದಿಂದಲೂ ಆತನ ಮುಗಿಸೊಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದ ಎನ್ನಲಾಗಿದೆ.ಹಂದಿ ಅಣ್ಣಿಯನ್ನು ಹೊಡೆದ್ರೆ ನಟೋರಿಟಿ ತನ್ನ ಹೆಸರಿಗೆ ಥಳಕು ಹಾಕ್ಕೊಳ್ತದೆ.ಅದರಿಂದ ಹಂದಿ ಅಣ್ಣಿಗೆ ಶಿವಮೊಗ್ಗದ ಭೂಗತ ಜಗತ್ತಿನಿಂದ ದೊರೆಯುತ್ತಿದ್ದ ಎಲ್ಲಾ ಸಂಪನ್ಮೂಲ ನನಗೆ ದೊರೆಯುತ್ತೆ.ಒಂದಷ್ಟು ವರ್ಷ ಫೀಲ್ಡ್ ಮಾಡಿ ಕೈ ತುಂಬಾ ಸಂಪಾದನೆಯಾದ ಮೇಲೆ ಸೈಲೆಂಟ್ ಆಗಿರ್ಬೋದೆನ್ನುವುದು ಆತನ ಆಲೋಚನೆಯಾಗಿದ್ದಿರಬಹುದು ಎನ್ನಲಾಗ್ತಿದೆ.

ಹಂದಿ ಅಣ್ಣಿ ಮರ್ಡರ್ ಪ್ಲ್ಯಾನ್ ಗೆ ಇತರರು ಕೂಡ ಕೈ ಜೋಡಿಸಿದ್ದಾರೆ.ಅವರಲ್ಲಿ ನವುಲೆ ಆನಂದನ ಹುಡುಗರು ಮತ್ತು ಫೀಲ್ಡ್ ಹಳೇ ರೌಡಿ ಬ್ರದರ್ಸ್ ಲವಕುಶ ಭಂಟರು ಕೈ ಜೋಡಿಸಿರಬಹುದು ಎನ್ನಲಾಗಿದೆ.ಎಲ್ಲವೂ ಪ್ಲ್ಯಾನ್ ನಂತೆಯೇ ನಡೆದಿದೆ.ಆದರೆ ಯಾರಿಗೂ ಗೊತ್ತಾಗದಂತೆ ಮುಗಿಸಾಕಬೇಕು ಎಂದೇಕೊಂಡಿದ್ದ ಹಂತಕ ಪಡೆ ಸ್ಕೆಚ್ ಮಿಸ್ ಮಾಡಿಕೊಂಡಿದೆ.ಕಾಯುತ್ತಾ ಕೂತ್ರೆ ಸಮಸ್ಯೆ ತಮಗೇನೆ ಎಂದ್ಕೊಂಡು ಬೆಳ್ಳಂಬೆಳಗ್ಗೆ ಎಳೆನೀರಿನಂತೆ ಸಿಗಿದಾಕಿಬಿಟ್ಟಿದೆ.ಎಲ್ಲಾ ಸಂಗತಿಗಳನ್ನು ಕಾಡಾ ಕಾರ್ತಿ ಪೊಲೀಸರ  ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಚಿಕ್ಕಮಗಳೂರು ಪೊಲೀಸರು ಶರಣಾಗತಿಯನ್ನು ದೃಢೀಕರಿಸಿದ್ದರೂ ಅದನ್ನು ಶಿವಮೊಗ್ಗ ಪೊಲೀಸ್ ಒಪ್ಪಲು ಹಿಂದೇಟು ಹಾಕುತ್ತಿರುವ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ.ಶಿವಮೊಗ್ಗ ಪೊಲೀಸರು ಎಂಟು ತಂಡಗಳಾಗಿ ಹಂತಕರ ಹಡೆಮುರಿಕಟ್ಟೊಕ್ಕೆ ಪ್ರಯತ್ನಿಸುತ್ತಿರುವಾಗಲೇ ಹಂತಕರು ಚಿಕ್ಕಮಗಳೂರಿನಲ್ಲಿ ಶರಣಾಗತರಾಗಿದ್ದಾರೆ.ಕ್ರೆಡಿಟ್ ತಪ್ಪೋಯ್ತಲ್ಲ ಎನ್ನುವ ಕಾರಣಕ್ಕೆ ಅಸಮಾಧಾನವಾ ಗೊತ್ತಾಗ್ತಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಕಾಡಾ ಕಾರ್ತಿ ಎಂಡ್ ಹಿಸ್ ಟೀಮ್ ಶಿವಮೊಗ್ಗ ಪೊಲೀಸರ ಮುಂದೆ ಶರಣಾಗದೆ ಚಿಕ್ಕಮಗಳೂರು ಪೊಲೀಸರ ಮುಂದೆ ಶರಣಾಗಿದ್ದೇಕೆ ಎನ್ನುವುದು ಕೂಡ ಆಶ್ಚರ್ಯ ಹಾಗೂ ಗುಮಾನಿ ಮೂಡಿಸಿದೆ.ಚಿಕ್ಕಮಗಳೂರಿನಲ್ಲಿ ಬಲವಂತವಾಗಿಯೇ ಅವರನ್ನು ಶರಣಾಗತಿ ಮಾಡಿಸಲಾಯ್ತಾ..ಶಿವಮೊಗ್ಗದಲ್ಲಿ ಶರಣಾಗತಗೊಳಿಸದಿರುವ ಹಿಂದೆ ಬೇರಿನ್ನ್ಯಾರ ಕೈವಾಡ ಇದೆಯಾ..? ಶಿವಮೊಗ್ಗದಲ್ಲಿ ಶರಣಾಗತರಾದ್ರೆ ಅದು ಅವರ ಬುಡಕ್ಕೆ ಬರಬಹುದೆನ್ನುವ ಕಾರಣಕ್ಕೆ ಹೀಗಾಯ್ತಾ..? ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ..

ಶಿವಮೊಗ್ಗ ಪೊಲೀಸರು ಹಂತಕರನ್ನು ಸರಿಯಾಗಿ ವರ್ಕೌಟ್ ಮಾಡಿ,ನಿಷ್ಪಕ್ಷಪಾತ ತನಿಖೆ ನಡೆಸಿದ್ದೇ ಆದಲ್ಲಿ ಶರಣಾಗತಿ ಹೇಳಲೊರಟಿರುವ ಮತ್ತೊಂದು ರೋಚಕ ಹಾಗೂ ನಿಗೂಢ ಕಹಾನಿ ಹೊರಬರಬಹುದೇನೋ..? ಶಿವಮೊಗ್ಗದ ಪೊಲೀಸರಿಗೆ ರೀತಿಯ ಒತ್ತಡ ಬಾರದೆ ಇರುತ್ತಾ..? ಎನ್ನುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಶರಣಾಗತಿ ಸುದ್ದಿ ಶಿವಮೊಗ್ಗ ಪೊಲೀಸರಿಂದ ದೃಢ:ಹಂದಿ ಅಣ್ಣಿಯ 8 ಜನ ಪಾತಕರ ತಂಡ ಚಿಕ್ಕಮಗಳೂರು ಪೊಲೀಸರ ಎದುರು ಶರಣಾಗತವಾಗಿರುವ ಸುದ್ದಿಯನ್ನು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ಸುದ್ದಿಗೋಷ್ಟಿಯಲ್ಲಿ ದೃಢೀಕರಿಸಿದ್ದಾರೆ.ಹೆಚ್ಚಿನ ವಿಚಾರಣೆಗೆ ಕೋರ್ಟ್ ನಿಂದ ಅನುಮತಿ ಕೋರಿದ್ದೇವೆ.ಅವರನ್ನು ನಮ್ಮ ಕಸ್ಟಡಿಗೆ ಒಪ್ಪಿಸುತ್ತಿದ್ದಂತೆ ಕೊಲೆ ರಹಸ್ಯ ಬೇಧಿಸಲು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ಕೊಲೆಗಾರರು ಸಿಕ್ಕಿದ್ದರೂ ಅವರ ಹಿಂದೆ ಬೇರಿನ್ನ್ಯಾರೋ ಹುನ್ನಾರ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ.ಕಾಡಾ ಕಾರ್ತಿ,ನಿತಿನ್,ಮದನ್,ಫಾರೂಖ್,ಆಂಜನೇಯ ಸೇರಿದಂತೆ ಒಟ್ಟು 8 ಜನರ ತಂಡ ಕೃತ್ಯ ನಡೆಸಿರುವುದು ಸ್ಪಷ್ಟವಾಗಿದೆ. ಬೆಂಗಳೂರು-ಹೊನ್ನಾವರ-ಕೊಡಗು ಹಾಗೂ ಶಿವಮೊಗ್ಗದಲ್ಲಿ ಹಂತಕರ ಸೆರೆಗೆ ತಂಡಗಳನ್ನು ರಚಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಹಿಂದೆ ಪ್ರತೀಕಾರವಿರುವುದು ಗೊತ್ತಾಗಿದೆ.ಕೊಲೆಗೆ ಶಾಸಕರೊಬ್ಬರ ಪುತ್ರನ ಕೈವಾಡ ಇರುವ ಶಂಕೆ ಬಗ್ಗೆ ನಿಖರವಾಗಿ ಏನೂ ದೊರೆತಿಲ್ಲ.ತನಿಖೆ ನಂತರವೇ ಎಲ್ಲಾ ಬಯಲಾಗಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News