FINALLY.. TULASI MADODDINENI TRNSFER..!! “ಮೋಸ್ಟ್ ಪವರ್ ಫುಲ್ IAS” ತುಳಸಿ ಮದ್ದಿನೇನಿ ಟ್ರಾನ್ಸ್ ಫರ್:…ತುಳಸಿ ಹುದ್ದೆಗೆ ಐಆರ್ ಎಸ್ ಜಯರಾಮ್ ರಾಯ್ಪುರ .. :

ತುಳಸಿ ಹಠಾವೋ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ:ಮಿನಿಸ್ಟರ್ ಲಾಭಿ ಹೊರತಾಗ್ಯೂ ತುಳಸಿ ವರ್ಗಾವಣೆ

0
ಐಆರ್ ಎಸ್ ಅಧಿಕಾರಿ ಜಯರಾಂ ರಾಯ್ ಪುರ
ಐಆರ್ ಎಸ್ ಅಧಿಕಾರಿ ಜಯರಾಂ ರಾಯ್ ಪುರ
ಹಣಕಾಸು ವಿಭಾಗದಿಂದ ವರ್ಗಾವಣೆಯಾದ ತುಳಸಿ ಮದ್ದಿನೇನಿ
ಹಣಕಾಸು ವಿಭಾಗದಿಂದ ವರ್ಗಾವಣೆಯಾದ ತುಳಸಿ ಮದ್ದಿನೇನಿ

ಬೆಂಗಳೂರು: ಯಾರೇ ಬಂದ್ರೂ ನನ್ನ ಖುರ್ಚಿ ಅಲ್ಲಾಡಿಸೊಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ಪ್ರಭಾವಿಯಾಗಿ ಬೆಳೆದಿದ್ದ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಕೊನೆಗೂ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ಐಎಎಸ್ ಜಯರಾಂ ರಾಯ್ ಪುರ ನಿಯುಕ್ತಿಗೊಂಡಿದ್ದಾರೆ.

ಹಣಕಾಸು ಸಚಿವಾಲಯದ ಕಂದಾಯ ವಿಭಾಗದಲ್ಲಿ ನೇರ ತೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಜಯರಾಂ ರಾಯ್ ಪುರ ಅವರು ಸಧ್ಯಕ್ಕೆ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿಯೂ  ಸೆಕ್ರೆಟರಿ-2 ಹುದ್ದೆಯನ್ನು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ.

ಹಣಕಾಸು ವಿಭಾಗದಲ್ಲಿ ಪರಿಣಿತ ಪಡೆದಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಮುತುವರ್ಜಿ ವಹಿಸಿ ತುಳಸಿ ಜಾಗದಲ್ಲಿ ರಾಯ್ ಪುರ್ ಅವರನ್ನು ನಿಯೋಜಿಸಿದ್ದಾರೆ. ಅವರು ಹಣಕಾಸು ವಿಭಾಗಕ್ಕೆ ಬರುತ್ತಿರುವುದು ಅನೇಕರಲ್ಲಿ ಸಂತಸ ಮೂಡಿಸಿದೆ.ಪ್ರಮುಖವಾಗಿ ಕೆಲಸ ಮಾಡಿಯೂ ಹಣ ಬಾರದೆ ಇರುವ ನೂರಾರು ಗುತ್ತಿಗೆದಾರರ ವಲಯದಲ್ಲಿ ಹರ್ಷ ಮೂಡಿಸಿದೆ.

ತುಳಸಿ ಮದ್ದಿನೇನಿ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದ್ದು ಓರ್ವ ಬೆಂಗಳೂರು ಮೂಲದ ಪ್ರಭಾವಿ ಸಚಿವರೆನ್ನುವ ಮಾತಿದೆ.ಅವರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಮೇಡಮ್ ಬಂದಿದ್ದರಂತೆ..ಆ ಋಣವನ್ನು ಸಚಿವರು ತುಳಸಿ ಮೇಡಮ್ ಅವರನ್ನು ಧೀರ್ಘಾವಧಿವರೆಗೆ ಬಿಬಿಎಂಪಿಯಲ್ಲುಳಿಸುವ ಮೂಲಕ ತೀರಿಸಿದ್ದರೆನ್ನುವ ಮಾತಿದೆ..?!
ತುಳಸಿ ಮದ್ದಿನೇನಿ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದ್ದು ಓರ್ವ ಬೆಂಗಳೂರು ಮೂಲದ ಪ್ರಭಾವಿ ಸಚಿವರೆನ್ನುವ ಮಾತಿದೆ. 

ತುಳಸಿ ಮದ್ದಿನೇನಿಯನ್ನು ಮಣಿವಣ್ಣನ್ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ತಪ್ಪಿಸೊಕ್ಕೆ ತುಳಸಿ ಮದ್ದಿನೇನಿ ಸಾಕಷ್ಟು ಹರಸಾಹಸ ಮಾಡಿದ್ರು.ತಮಗೆ ಆತ್ಮೀಯವಾದ ಮಿನಿಸ್ಟರ್ ಒಬ್ಬರಿಂದ ವ್ಯಾಪಕ ಶಿಫಾರಸ್ಸು ಮಾಡಿಸಿದ್ದರಂತೆ.ಆ ಮಿನಿಸ್ಟರ್ ಕೂಡ ತುಳಸಿ ಮೇಡಮ್ ಟ್ರಾನ್ಸ್ ಫರ್ ಕ್ಯಾನ್ಸಲ್ ಮಾಡಿಸೊಕ್ಕೆ ಸಿಎಂ ಅವರ ಹತ್ತಿರ ಫೈಲ್ ಇಟ್ಕೊಂಡು ಅಡ್ಡಾಡಿದ್ದುಂಟಂತೆ. ಆದರೆ ತುಳಸಿ ವಿರುದ್ದ ಸಾಕಷ್ಟು ಆರೋಪ ಕೇಳಿಬಂದಿದ್ದರಿಂದ ಅನಿವಾರ್ಯವಾಗಿ ಅವರನ್ನು ಬೇರೆಡೆಗೆ ವರ್ಗ ಮಾಡುವ ನಿರ್ದಾರಕ್ಕೆ ಬಂತೆಂತು ಹೇಳಲಾಗಿದೆ.

“ತುಳಸಿ ಮದ್ದಿನೇನಿ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದ್ದು  ಬೆಂಗಳೂರು ಮೂಲದ ಓರ್ವ ಪ್ರಭಾವಿ ಸಚಿವರೆನ್ನುವ ಮಾತಿದೆ.ಅವರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಮೇಡಮ್ ಬಂದಿದ್ದರಂತೆ..ಆ ಋಣವನ್ನು ಸಚಿವರು ತುಳಸಿ ಮೇಡಮ್ ಅವರನ್ನು ಧೀರ್ಘಾವಧಿವರೆಗೆ ಬಿಬಿಎಂಪಿಯಲ್ಲುಳಿಸುವ ಮೂಲಕ ತೀರಿಸಿದ್ದರೆನ್ನುವ ಮಾತಿದೆ..?!”

ತುಳಸಿ ಮದ್ದಿನೇನಿ ಅವರ ಕಾರ್ಯವೈಖರಿಗೆ ಬೇಸತ್ತು ಈ ಹಿಂದೆ ಗುತ್ತಿಗೆದಾರರು ತುಳಸಿ ಹಠಾವೋ ಎನ್ನುವ ವ್ಯಾಪಕ ಪ್ರತಿಭಟನೆಯನ್ನೂ ನಡೆಸಿದ್ದರು.ಬಹುಷಃ ಇದು ಬಿಬಿಎಂಪಿ ಇತಿಹಾಸದಲ್ಲಿ ಐಎಎಸ್ ವಿರುದ್ದ ನಡೆದ ಮೊದಲ ಪ್ರತಿಭಟನೆಯಾಗಿತ್ತು.ಆ ಘಟನೆ ಸರ್ಕಾರಕ್ಕೆ ತೀವ್ರ ಮುಜುಗರ ತಂದಿತ್ತು.ಆಗಲೇ ಸಾಕಷ್ಟು ಗುತ್ತಿಗೆದಾರರು ಬೆಂಗಳೂರಿನ ಶಾಸಕರ ಮೂಲಕ ಸಿಎಂ ಮೇಲೆ ತುಳಸಿ ಟ್ರಾನ್ಸ್ ಫರ್ ಗೆ ಲಾಭಿ ನಡೆಸಿದ್ದರಂತೆ.

ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿರುವಂತೆ  ಐಎಎಸ್ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರೋದು,ಅವರ ನಡುವಳಿಕೆಯಿಂದ ಮುಜುಗರಕ್ಕೆ ಈಡಾಗುವಂತದ್ದು..ಅದು ಚುನಾವಣೆ ಮೇಲೆ ಪ್ರಭಾವ ಬೀರೋದು..ಇದೆಲ್ಲಾ ಸರ್ಕಾರಕ್ಕೆ ಸರಿ ಕಂಡುಬಾರದ ಹಿನ್ನಲೆಯಲ್ಲಿ ತೀವ್ರ ಒತ್ತಡದ ಹೊರತಾಗ್ಯೂ ಸಿಎಂ ಬಸವರಾಜ್ ಬೊಮ್ಮಾಯಿ ತುಳಸಿ ಮದ್ದಿನೇನಿಯನ್ನು ವರ್ಗಾವಣೆ ಮಾಡಿದೆ. ಸರ್ಕಾರದ ನಡುವಳಿಕೆಗೆ ಗುತ್ತಿಗೆದಾರರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

Spread the love
Leave A Reply

Your email address will not be published.

Flash News