BBMP 44 TEACHERS FUTURE IN DARK.. ಬಿಬಿಎಂಪಿ ಶಿಕ್ಷಣ ಕೋಶದ ಯಡವಟ್ಟು: ಸೂಕ್ತ ವಿದ್ಯಾರ್ಹತೆ ಇಲ್ಲದ ಶಿಕ್ಷಕರ ವಜಾಕ್ಕೆ ಮುಖ್ಯ ಆಯುಕ್ತರ ಆದೇಶ: 44 ಶಿಕ್ಷಕರು ಬೀದಿಪಾಲು..

ಹೊರಗುತ್ತಿಗೆ ಶಿಕ್ಷಕರನ್ನು ಪೂರೈಸುವ ಕ್ರಿಸ್ಟಲ್ ಏಜೆನ್ಸಿ ಜತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲು..!? ಕೆಲಸ ಕಳೆದುಕೊಂಡ ಶಿಕ್ಷಕರ ಪಾಡೇನು,..?

0

ಬೆಂಗಳೂರು:ಬಿಬಿಎಂಪಿ ಶಿಕ್ಷಣ ಇಲಾಖೆಯಲ್ಲಿರುವ ಕೆಲವು ಅಯೋಗ್ಯರಿಂದಾಗಿ ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ 44 ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.ದಶಕಗಳಿಂದಲೂ ಕೆಲಸ ಮಾಡುತ್ತಿರುವ ಶಿಕ್ಷಕರು ಅಕ್ಷರಶಃ ಬೀದಿಗೆ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ.ಇದಕ್ಕೆ ಬಿಬಿಎಂಪಿ ಆಡಳಿತ ಕೊಡುತ್ತಿರುವ ಕಾರಣ ಸೂಕ್ತ ವಿದ್ಯಾರ್ಹತೆ ಕೊರತೆ. ಶಿಕ್ಷಕರು ಸೂಕ್ತ ವಿದ್ಯಾರ್ಹತೆ-ಡಿಗ್ರಿಗಳಿಲ್ಲದೆ ಕೆಲಸ ಮಾಡುತ್ತಿರುವುದು ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿರುವುದರಿಂದ ಅಂಥಾ 44 ಶಿಕ್ಷಕರನ್ನು ತತ್ ಕ್ಷಣಕ್ಕೆ ವಜಾಗೊಳಿಸಬೇಕೆನ್ನುವ ಉಲ್ಲೇಖ ಆದೇಶದಲ್ಲಿದೆ.

ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಗೆ ಮುಖ್ಯ ಅಯುಕ್ತರು ಹೊರಡಿಸಿರುವ ನೊಟೀಸ್ ಪ್ರತಿ..
ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಗೆ ಮುಖ್ಯ ಅಯುಕ್ತರು ಹೊರಡಿಸಿರುವ ನೊಟೀಸ್ ಪ್ರತಿ..
21-07-2022 ರೊಳಗೆ ಡಿಗ್ರಿ ಪಡೆಯದೆ ಕೆಲಸ ಮಾಡುತ್ತಿರುವ 44 ಶಿಕ್ಷಕರು/ಉಪನ್ಯಾಸಕರನ್ನು ತೆಗೆದುಹಾಕಿ ಅರ್ಹರನ್ನು ನಿಯೋಜಿಸಿಕೊಳ್ಳುವಂತೆ ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಗೆ ಮುಖ್ಯ ಅಯುಕ್ತರು ಹೊರಡಿಸಿರುವ ನೊಟೀಸ್ ಪ್ರತಿ..
21-07-2022 ರೊಳಗೆ ಡಿಗ್ರಿ ಪಡೆಯದೆ ಕೆಲಸ ಮಾಡುತ್ತಿರುವ 44 ಶಿಕ್ಷಕರು/ಉಪನ್ಯಾಸಕರನ್ನು ತೆಗೆದುಹಾಕಿ ಅರ್ಹರನ್ನು ನಿಯೋಜಿಸಿಕೊಳ್ಳುವಂತೆ ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಗೆ ಮುಖ್ಯ ಅಯುಕ್ತರು ಹೊರಡಿಸಿರುವ ನೊಟೀಸ್ ಪ್ರತಿ..

ಸೂಕ್ತ ವಿದ್ಯಾರ್ಹತೆಯುಳ್ಳವರನ್ನು ಮಾತ್ರ ಶಿಕ್ಷಕರ ಹುದ್ದೆಗೆ ಪರಿಗಣಿಸಬೇಕೆನ್ನುವ ಆದೇಶ ಸರ್ಕಾರದಿಂದ ಆಗಿರುವಂತದ್ದು ಬಿಬಿಎಂಪಿಗೂ ಅನ್ವಯಿಸಲಿದೆ.ಹಾಗಾಗಿ ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಆದೇಶ ಪಾಲನೆ ಮಾಡಬೇಕಿರುವುದರಿಂದ ಸೂಕ್ತ ಡಿಗ್ರಿ ಇಲ್ಲದ ಶಿಕ್ಷಕರನ್ನು ತೆಗೆಯಬೇಕಿದೆ.ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿರುವ  ಸಾಕಷ್ಟು ಶಿಕ್ಷಕರು ಅಗತ್ಯವಿರುವ ಡಿಗ್ರಿ ಪಡೆದಿಲ್ಲ.ಇದಕ್ಕೆ ಶಿಕ್ಷಕರನ್ನು ಹೊರಗುತ್ತಿಗೆ ಮೇಲೆ ನಿಯೋಜನೆ ಮಾಡಿಕೊಂಡು ಪೂರೈಸಿದ ಕ್ರಿಸ್ಟಲ್ ಇನ್ಫೋಸಿಸ್ಟಮ್ ಸಂಸ್ಥೆಯೇ ಹೊಣೆ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯ ಆಯುಕ್ತರು ಕ್ರಿಸ್ಟಲ್ ಏಜೆನ್ಸಿಗೆ ನೊಟೀಸ್ ಹೊರಡಿಸಿದ್ದಾರೆ.ಸೂಕ್ತ ಡಿಗ್ರಿಯುಳ್ಳವರನ್ನು ತಕ್ಷಣಕ್ಕೆ ಪೂರೈಸಬೇಕು.ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್
ಪ್ರಾತಿನಿಧಿಕ ಚಿತ್ರ
                                                                                                           (ಪ್ರಾತಿನಿಧಿಕ ಚಿತ್ರ)

ಆದ್ರೆ ಸಮಸ್ಯೆಗೆ ಮೂಲ ಕಾರಣವೇ ಕ್ರಿಸ್ಟಲ್ ಏಜೆನ್ಸಿಯಾಗಿರುವುದರಿಂದ ಅವರ ವಿರುದ್ಧ ಕಠಿಣಾತೀಕಠಿಣ ಕೈಗೊಳ್ಳಬೇಕೆನ್ನುವ ಕೂಗು ಕೇಳಿಬರುತ್ತಿದೆ.ಆದ್ರೆ ಈ ಸಂಗತಿ ನಡುವೆ 44 ಶಿಕ್ಷಕರ ಭವಿಷ್ಯ ಮಾತ್ರ ಡೋಲಾಯಮಾನವಾಗಿದೆ.ವಿಶೇಷ ಆಯುಕ್ತರನ್ನು ಭೇಟಿ ಮಾಡಿದ್ರೂ ಸೂಕ್ತ ಭರವಸೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಕ್ರಿಸ್ಟಲ್ ಇನ್ಫೋಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕ್ರಮವೇನು..? ಇದೆಲ್ಲಕ್ಕೂ ಮುಖ್ಯ ಕಾರಣವೇ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ

ಕ್ರಿಸ್ಟಲ್ ಇನ್ಫೋಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ.ಒಂದ್ ಹಂತದಲ್ಲಿ ವಿಜಯ್ ಕುಮಾರ್ ಎನ್ನುವ ವ್ಯಕ್ತಿಯ ಮಾಲೀಕತ್ವದ ಈ ಏಜೆನ್ಸಿಯೇ ಪಾಲಿಕೆಯಲ್ಲಿರುವ ಶಾಲಾ ಕಾಲೇಜು ಗಳಿಗೆ ಶಿಕ್ಷಕರನ್ನು ಪೂರೈಸುವ ಕೆಲಸ ಮಾಡುತ್ತಿದೆ.ಒಂದ್ ಹಂತದಲ್ಲಿ ಹೇಳೋದಾದ್ರೆ ಬಿಬಿಎಂಪಿ ಶಿಕ್ಷಣ ವ್ಯವಸ್ಥೆಯನ್ನು ಬಹುತೇಕ ಟ್ಯಾಕಲ್-ಕಂಟ್ರೋಲ್ ಮಾಡ್ತಿರೋದೇ ಈ ಕ್ರಿಸ್ಟಲ್ ಎನ್ನುವ ಆರೋಪಗಳಿವೆ.

ಮುಖ್ಯ ಆಯುಕ್ತರ ಆದೇಶದಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಬಿಬಿಎಂಪಿ ಶಾಲಾ ಕಾಲೇಜುಗಳ 44 ಶಿಕ್ಷಕರು/ಉಪನ್ಯಾಸಕರ ಪಟ್ಟಿ
ಮುಖ್ಯ ಆಯುಕ್ತರ ಆದೇಶದಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ ಬಿಬಿಎಂಪಿ ಶಾಲಾ ಕಾಲೇಜುಗಳ 44 ಶಿಕ್ಷಕರು/ಉಪನ್ಯಾಸಕರ ಪಟ್ಟಿ

ದಶಕಗಳಿಂದಲೂ ಹೊರಗುತ್ತಿಗೆ ಶಿಕ್ಷಕರನ್ನು ಪೂರೈಸುವ ಕೆಲಸವನ್ನು ಕ್ರಿಸ್ಟಲ್ ಮಾಡುತ್ತಿದೆ..ಬೇರೊಬ್ಬರಿಗೆ ಅವಕಾಶವನ್ನೇ ನೀಡಿಲ್ಲ.ಮತ್ತೊಬ್ಬ ಏಜೆನ್ಸಿಯವನಿಗೆ ಪಾಲಿಕೆಯೊಳಗೆ ಎಂಟ್ರಿಯಾಗ್ಲಿಕ್ಕೂ ಅವಕಾಶ ಕೊಟ್ಟಿಲ್ಲ ಎನ್ನೋದ್ರಲ್ಲೇ ಕ್ರಿಸ್ಟಲ್ ನ ಕೆಪಾಸಿಟಿ ಏನನ್ನೋದನ್ನು ಅರ್ಥ ಮಾಡಿಕೊಳ್ಬೋದು.ಆದ್ರೆ ಸತ್ಯ ಏನೆಂದ್ರೆ ಬೇರೊಬ್ಬರು ಬಿಡ್ ನಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದರೂ ಅದಕ್ಕೆ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನೇ ನೆಪವಾಗಿ ನೀಡಿ ಅವರಿಗೆ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಮಾತುಗ ಳಿವೆ.

ಒಂದ್ವೇಳೆ ವಿಷಯ ಅದೇ ಆಗಿದ್ರೆ, ಶಿಕ್ಷಣ ಕೋಶದಲ್ಲಿರುವವರಿಗೂ ಈ ಏಜೆನ್ಸಿಯವರಿಗೂ ಇರಬಹುದಾದ ಸಂಬಂಧ-ನಡುವೆ ಏರ್ಪಟ್ಟಿರಬಹುದಾದ ಒಳ ಒಪ್ಪಂದ-ಅದರ ಪರಿಣಾಮವಾಗಿ ಕೊಡುಕೊಳ್ಳುವಿಕೆ ಎಂಥಾ ಮಟ್ಟದಲ್ಲಿ ನಡೆದುಕೊಂಡು ಬಂದಿರಬಹು ದೆನ್ನುವುದನ್ನು ಅಂದಾಜಿಸ್ಬೋದೇನೊ.. ಕ್ರಿಸ್ಟಲ್ ಸಂಸ್ಥೆ ಬಿಬಿಎಂಪಿಗೆ ಹೊರಗುತ್ತಿಗೆ ಶಿಕ್ಷಕರನ್ನು ಪೂರೈಸುವಾಗಲೇ ಸೂಕ್ತ

ವಿದ್ಯಾರ್ಹತೆಯುಳ್ಳವರನ್ನೇ ಪೂರೈಸಿದ್ದರೆ ಇವತ್ತು 44 ಶಿಕ್ಷಕರಿಗೆ ಗೇಟ್ ಪಾಸ್ ಕೊಡಬೇಕಾದಂಥ ಸ್ತಿತಿ ನಿರ್ಮಾಣವಾಗ್ತಿತ್ತೇ..? ಅದ್ಯಾವ ಮಾನದಂಡಗಳನ್ನು ಇಟ್ಕೊಂಡು ಈ ಸಂಸ್ಥೆ ಶಿಕ್ಷಕರನ್ನು ಪೂರೈಸಿತೆನ್ನೋದು ಕೂಡ ಪ್ರಶ್ನಾರ್ಹ. ಕೆಲವರು ಅಭಿಪ್ರಾಯಿಸುವ ಪ್ರಕಾರ ಇಂತಿಷ್ಟು ಎಂದು ಕೊಟ್ಟರೆ ಮುಗೀತು, ಎಂಥವರಿಗೂ ಬಿಬಿಎಂಪಿ ಶಾಲೆ-ಕಾಲೇಜಿನೊಳಗೆ ಎಂಟ್ರಿ ಕೊಡಿಸುವಂಥ ಕೆಲಸ ಕ್ರಿಸ್ಟಲ್ ಮೂಲಕ ನಡೆಯುತ್ತಿತ್ತೆನ್ನ ಲಾಗುತ್ತಿದೆ.ಕೆಲವು ನಿವೃತ್ತ ಶಿಕ್ಷಕರೇ ಈ ಬಗ್ಗೆ ಹಿಂದಿನಿಂದಲೂ ಆಪಾದಿಸುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ.

ಪ್ರಾತಿನಿಧಿಕ ಚಿತ್ರ
(ಪ್ರಾತಿನಿಧಿಕ ಚಿತ್ರ)

ಅಷ್ಟೋ ಇಷ್ಟೊ ಕೊಟ್ಟವರು ಅಥವಾ ಯಾವುದೋ ಸನ್ನಿವೇಶಗಳಲ್ಲಿ ಎಂಟ್ರಿ ಪಡೆದುಕೊಂಡವರು ಅಡ್ಜೆಸ್ಟ್ ಮೆಂಟ್ ಆಧಾರದಲ್ಲಿ ವರ್ಷಗಳಷ್ಟು ಸಮಯ ಕಳೆದಿದ್ದಾರೆ.ಹತ್ತಾರು ವರ್ಷಗಳ ಅನುಭವ ಪಡೆದಿದ್ದಾರೆ.ಅನುಭವದಷ್ಟೇ ವಯಸ್ಸೂ ಆಗಿದೆ.ಲೈಫ್ ಸೆಟ್ಲ್ ಮಾಡ್ಕೊಂಡು ಆರಾಮಾಗಿ ನಿವೃತ್ತಿಯಾಗಬಹುದೆನ್ನುವ ಆಲೋಚನೆಯಲ್ಲಿದ್ದವರಿಗೆ ಮುಖ್ಯ ಆಯುಕ್ತರ ಆದೇಶ ಶಾಕ್ ನೀಡೋದು ಕೂಡ ಸಹಜವಲ್ವೆ..?

ಕ್ರಿಸ್ಟಲ್ ಏಜೆನ್ಸಿಯ ಮಾಲಿಕ ವಿಜಯಕುಮಾರ್ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳುವಾಗಲೇ ಅರ್ಹ ಸ್ಥಾನಕ್ಕೆ ಸೂಕ್ತ ವಿದ್ಯಾರ್ಹತೆ ಹೊಂದಿರುವವರನ್ನೇ ತೆಗೆದುಕೊಂಡಿದಿದ್ದರೆ ಇವತ್ತು ಈ ಸಮಸ್ಯೆನೇ ಉದ್ಭವವಾಗುತ್ತಿರಲಿಲ್ಲ.ಹಾಗೆ ಮಾಡದೆ ಪಾಲಿಕೆ ಶಿಕ್ಷಣ ಕೋಶದ ಅಧಿಕಾರಿಗಳೊಂದಿಗೆ ಪರ್ಸಂಟೇಜ್ -ಅಡ್ಜೆಸ್ಟ್ ಮೆಂಟ್ ವ್ಯವಹಾರ ಕುದುರಿಸಿಕೊಂಡು ಪರಿಸ್ತಿತಿಯನ್ನು ಹೇಗೋ ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದರಿಂದಾಗಿಯೇ ಇವತ್ತು 44 ಶಿಕ್ಷಕರು ವಿದ್ಯಾಕೌಶಲ್ಯ-ಪ್ರತಿಭೆ-ಸಾಮರ್ಥ್ಯ-ಕಲಿಕಾ ಪ್ರೌಢಿಮೆ ಇದ್ದ ಹೊರತಾಗ್ಯೂ ಬೀದಿಗೆ ಬೀಳುವಂತಾಯ್ತು.ಹಾಗಾಗಿ ಮೊದಲು ಕ್ರಿಸ್ಟಲ್ ವಿರುದ್ಧ ಕ್ರಮ ಆಗ್ಬೇಕು..ಅದು ಅಂತಿಂಥಾ ಕ್ರಮವಲ್ಲ,ಇನ್ನೆಂದೂ ಆತನಿಗೆ ಬಿಬಿಎಂಪಿಯೊಳಗೆ ಎಂಟ್ರಿ ಕೊಡಿಸದಂತೆ ಬ್ಲ್ಯಾಕ್ ಲೀಸ್ಟ್ ಗೆ ಸೇರಿಸುವಂಥ ಕಠಿಣ ನಿರ್ದಾರವನ್ನು ಬಿಬಿಎಂಪಿ ಆಡಳಿತ ತೆಗೆದುಕೊಳ್ಳಬೇಕೆನ್ನುವುದು ಬಿಬಿಎಂಪಿಯ ನಿವೃತ್ತ ಹೆಡ್ ಮಾಸ್ಟರ್ ರವರ ಅಭಿಪ್ರಾಯ.

ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ 44 ಶಿಕ್ಷಕರು/ಉಪನ್ಯಾಸಕರಿಗೆ ಪುನರ್ ಉದ್ಯೋಗದ ಭರವಸೆ ನೀಡಿರುವ ವಿಶೇಷ ಆಯುಕ್ತ ರಾಮ್ ಪ್ರಸಾದ್
ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವ 44 ಶಿಕ್ಷಕರು/ಉಪನ್ಯಾಸಕರಿಗೆ ಪುನರ್ ಉದ್ಯೋಗದ ಭರವಸೆ ನೀಡಿರುವ ವಿಶೇಷ ಆಯುಕ್ತ ರಾಮ್ ಪ್ರಸಾದ್

ಈ ಪಾಪಕಾರ್ಯದಲ್ಲಿ ಶಿಕ್ಷಣ ಕೋಶದವರೂ ಪಾಲುದಾರರೇ..!! :ಆದ್ರೆ ಬಿಬಿಎಂಪಿಯಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಎನಿಸಿಕೊಂಡಿರುವ ಶಿಕ್ಷಣ ಕೋಶದಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದವರು ಮಾಡಿದ್ದೇನು..? ಇದ್ಯಾವುದನ್ನು ಪರಿಶೀಲಿಸುವ ಗೋಜಿಗೇನೆ ಹೋಗಲಿಲ್ಲ. ಕ್ರಿಸ್ಟಲ್ ಏಜೆನ್ಸಿಯವನು ಕೊಡುವ ಪರ್ಸಂಟೇಜ್-ಕಿಕ್ ಬ್ಯಾಕ್ ಗೆ ಜೊಲ್ಲು ಸುರಿಸುಕೊಂಡು ಕೊಟ್ಟಷ್ಟನ್ನು ಬಾಯಿಗೆ ಬಡಿದುಕೊಂಡ್ರಷ್ಟೆ ಎನ್ನುವ ಮಾತುಗಳಿವೆ.

ಪ್ರಾಥಮಿಕ ಹಂತದಲ್ಲೇ ಶಿಕ್ಷಕರನ್ನು ಸೂಕ್ತ ಮಾನದಂಡಗಳ ಅನ್ವಯ ನೇಮಕಾತಿ ಮಾಡಿಕೊಳ್ಳುವ ಕೆಲಸವನ್ನು ನೀಯತ್ತಿನಲ್ಲಿ ಮಾಡಿದಿದ್ದರೆ ಇವತ್ತು 44 ಶಿಕ್ಷಕರು ಬೀದಿಗೆ ಬರುತ್ತಿರಲಿಲ್ಲವೇನೋ..? ಹಾಗಾಗಿ ಇದೆಲ್ಲದರ ನೈತಿಕ ಹಾಗೂ ಸಂಪೂರ್ಣ ಹೊರೆ ಹೊರಬೇಕಿರುವ ಶಿಕ್ಷಣ ಕೋಶದವರನ್ನು ಶಿಕ್ಷೆಗೆ ಗುರಿಪಡಿಸಬೇಕಿದೆ..ಈ ಕೆಲಸವನ್ನು ಶಿಕ್ಷಣ ಕೋಶದ ವಿಶೇಷ ಆಯುಕ್ತ ಮತ್ತು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ರಾಮ್ ಪ್ರಸಾದ್ ಅವರು ಮಾಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ.

ಕ್ರಿಸ್ಟಲ್ ನಷ್ಟೇ ಶಿಕ್ಷಣ ಕೋಶದವರು ಕೂಡ ಈ ಅಕ್ರಮಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿರುವುದರಿಂದ ಅವರ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.ಇದರ ಭಾಗವಾಗಿ ನಾಳೆಯೇ ಇದಕ್ಕೆ ಕಾರಣವಾದ ಶಿಕ್ಷಣ ಕೋಶದ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಸರ್ವ್ ಮಾಡಲಾಗುವುದು ಎಂದು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

“ಅರ್ಹ” ಡಿಗ್ರಿ ಪಡೆದುಕೊಂಡು ಬಂದ್ರೆ ಮತ್ತೆ ಕೆಲಸ: ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ವೇಳೆ “ಜನಸ್ಪರ್ಷಿ” ಎನ್ನುವಂಥ ಕೆಲಸಗಳಿಂದಲೇ ಜನಪ್ರಿಯರಾಗಿದ್ದ ರಾಮ್ ಪ್ರಸಾತ್ 44 ಶಿಕ್ಷಕರಿಗೆ ಆಗುವ ಅನ್ಯಾಯದ ಬಗ್ಗೆ ವೈಯುಕ್ತಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆದರೆ ಸರ್ಕಾರದ ನಿಯಮಗಳ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲೇಬೇಕಾಗ್ತದೆ ಎಂದಿದ್ದಾರೆ.ಆದರೂ ನಮ್ಮ ಶಿಕ್ಷಕರನ್ನು ಬಿಟ್ಟುಕೊಡಲು ನಾವು ಸಿದ್ಧರಿಲ್ಲ.ಹಾಗಾಗಿ ಯಾರ್ಯಾರು ಕೆಲಸ ಕಳೆದುಕೊಳ್ಳುತ್ತೇವೆನ್ನುವ ಭೀತಿಗೆ ಸಿಲುಕಿದ್ದಾರೋ ಅವರೆಲ್ಲರಿಗೆ ಈ ದಂಡನೆ ಕೇವಲ ತಾತ್ಕಾಲಿಕ ಅಷ್ಟೇ.ಅವರೇನಾದ್ರೂ ಸೂಕ್ತ ಡಿಗ್ರಿ ಪಡೆದುಕೊಂಡು ವಾಪಸ್ಸಾದ್ರೆ ಅವರಿಗೆ ಮುಕ್ತವಾಗಿ ಕೆಲಸ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಇದು ಬೀದಿಪಾಲಾಗುವ ಭೀತಿಯಲ್ಲಿರೋರಿಗೆ ಒಂದಷ್ಟು ರಿಲ್ಯಾಕ್ಸ್ ನೀಡಿರುವುದಂತೂ ಸತ್ಯ.

ಚುನಾಯಿತರ ಅವಧಿಯಲ್ಲಿ ಆದ ಯಡವಟ್ಟಂತೆ: ಇದೆಲ್ಲದರ ನಡುವೆ ಬಿಬಿಎಂಪಿ ಶಿಕ್ಷಣಕೋಶದ ಉಪಆಯುಕ್ತ ಉಮೇಶ್ ಸ್ಪೋಟಕ ಎನ್ನುವಂಥ ಮಾಹಿತಿ ಕೊಟ್ಟಿದ್ದಾರೆ.ಈ ನೇಮಕಾತಿ ಬಹುತೇಕ ಚುನಾಯಿತರ ಪ್ರೆಷರ್ ನಿಂದಲೇ ನಡೆದಿರಬಹುದು.ಮಾಜಿ ಕಾರ್ಪೊರೇಟರ್ ಆಗಿದ್ದವರು ಹಾಗೂ ಶಾಸಕರು ಮತ್ತು ಮಂತ್ರಿಗಳೆನಿಸಿಕೊಂಡವರೇ ಪ್ರೆಷರ್ ಹಾಕ್ಸಿ ತಮಗೆ ಬೇಕಾದ ಕ್ಯಾಂಡಿಡೇಟ್ಸ್ ಗಳನ್ನು ಕ್ರಿಸ್ಟಲ್ ಮೂಲಕ ಎಂಟ್ರಿ ಕೊಡಿಸಿರುವ ಸಾಧ್ಯತೆಗಳಿವೆ ಎಂದಿದ್ದಾರೆ.ಅಂದ್ರೆ ಅನರ್ಹರನ್ನು ತೆಗೆದುಕೊಳ್ಳಲು ಶಿಕ್ಷಣಕೋಶಕ್ಕೆ ಮನಸಿಲ್ಲದಿದ್ದರೂ ರಾಜಕೀಯ ಒತ್ತಡಕ್ಕೆ ಮಣಿಯಬೇಕಾಯ್ತು ಎನ್ನುವುದು ಅವರ ಮಾತಿನ ಮರ್ಮವಿರಬಹುದೇನೋ..?

ಅದೇನೆ ಆಗಲಿ 44 ಶಿಕ್ಷಕರು ಕೆಲಸ ಕಳೆದುಕೊಳ್ಳೋದಂತೂ ಕನ್ಫರ್ಮ್..ರಾಜಕೀಯ ಒತ್ತಡಗಳು ಬಂದ್ರೆ ಅದು ಪೋಸ್ಟ್ ಪೋನ್ ಆಗಬಹುದೇ ಹೊರತು, ಗೇಟ್ ಪಾಸ್ ಅಂತೂ ಶತಸಿದ್ಧ ಎನ್ನಲಾಗ್ತಿದೆ.ಇದರ ನಡುವೆ ಕೋರ್ಟ್ ಮೆಟ್ಟಿಲೇರುವ ಆಲೋಚನೆ ಮಾಡಿರುವವರಿಗೆ ಸರ್ಕಾರದ ಸುತ್ತೋಲೆ ತೊಡಕಾಗಬಹುದೇನೋ..ಏನ್ ಮಾಡಬೇಕೆಂದು ತೋಚದೆ 44 ಶಿಕ್ಷಕರು ಪೇಚಿಗೆ ಸಿಲುಕಿದ್ದಾರೆ.

BBMP 44 TEACHERS FUTURE IN DARK.. ಬಿಬಿಎಂಪಿ ಶಿಕ್ಷಣ ಕೋಶದ ಯಡವಟ್ಟು: ಸೂಕ್ತ ವಿದ್ಯಾರ್ಹತೆ ಇಲ್ಲದ ಶಿಕ್ಷಕರ ವಜಾಕ್ಕೆ ಮುಖ್ಯ ಆಯುಕ್ತರ ಆದೇಶ: 44 ಶಿಕ್ಷಕರು ಬೀದಿಪಾಲು..

 

Spread the love
Leave A Reply

Your email address will not be published.

Flash News