ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮನೆ ಮಾಲೀಕನ ಯಡವಟ್ಟು ಬಾಲಕಿಯನ್ನು ಬಲಿಪಡೆದಿದೆ.ವಸಂತನಗರದ 5ನೆ ಕ್ರಾಸ್ ನಲ್ಲಿ ಶಿವಶಂಕರ್ ಎನ್ನುವವರ ಮನೆಯಲ್ಲಿ ವಿನೋದ್ ಎನ್ನುವವರು ವಾಸವಾಗಿದ್ರು.ವೈಯುಕ್ತಿಕ ಕಾರಣಕ್ಕೆ ವಿನೋದ್ ಕುಟುಂಬ ಊರಿಗೆ ತೆರಳಿತ್ತು.ಈ ಸಂದರ್ಭ ನೋಡಿಕೊಂಡ ಮನೆ ಮಾಲೀಕ ಮನೆಗೆಲ್ಲಾ ಜಿರಳೆ ಔಷದಿ ಹೊಡೆಸಿದ್ದಾರೆ.
ಜಿರಳೆ ಔಷಧಿ ಹೊಡೆಸಿದ ವಾರದೊಳಗೆ ವಿನೋದ್ ಮನೆಗೆ ವಾಪಸ್ಸಾಗಿದ್ದಾರೆ.ಮನೆಗೆ ಜಿರಳೆ ಔಷಧಿ ಹೊಡೆಸಿರುವ ಸಂಗತಿಯನ್ನು ಮನೆ ಮಾಲೀಕ ಬಾಡಿಗೆದಾರರ ಗಮನಕ್ಕೆ ತಂದಿಲ್ಲ.ಇದ್ಯಾವುದರ ಪರಿವೆ ಇಲ್ಲದೆ ಮನೆಮಂದಿಯೆಲ್ಲಾ ಮಲಗಿದ್ದಾಗ ವಿನೋದ್ ಅವರ ಆರು ವರ್ಷದ ಮಗಳು ಉಸಿರಾಟ ಸಮಸ್ಯೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ.
ಅಪಾಯಕಾರಿಯಾದ ಜಿರಳೆ ಔಷಧಿಯ ಘಾಟು ಬಾಲಕಿಯನ್ನು ಬಲಿಪಡೆದಿದೆ.ಮಾಲೀಕ ಶಿವಶಂಕರ್ ಅವರ ಹೊಣೆಗೇಡಿತನದಿಂದಲೇ ತಮ್ಮ ಮನೆಯ ನಂದಾದೀಪ ಆರಿದೆ ಎಂದು ಆಪಾದಿಸಿ ವಿನೋದ್ ಅವರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.ಒಟ್ಟಾರೆ ಮನೆ ಮಾಲೀಕನ ಹೊಣೆಗೇಡಿತನದಿಂದ ಮನೆಯ ನಂದಾದೀಪ ಆರಿ ಹೋದಂತಾಗಿದೆ.
CHILD DEATH BY HOUSE OWNER NEGLIGENCY..! :ಮನೆ ಮಾಲೀಕನ ಎಡವಟ್ಟಿಗೆ ಬಾಲಕಿ ಬಲಿ:ಮನೆಗೆ ಸಿಂಪಡಿಸಿದ ಜಿರಳೆ ಔಷಧಿ ಘಾಟು ಬಡಿದು ಕೊನೆಯುಸಿರು