ಕ್ರೈಸ್ತರ ಮಾಜಿ ಮಹಾಧರ್ಮ ಗುರು ಮೇಲೆ ಭೂಅಕ್ರಮದ ಆರೋಪ ಮಾಜಿ ಅರ್ಚ್ ಬಿಷಪ್ ವಿರುದ್ಧ ದಾಖಲಾಯ್ತು ಎಫ್ ಐಆರ್

0

ಬೆಂಗಳೂರು:ಇಡೀ  ಕರ್ನಾಟಕದ ಕ್ರೈಸ್ತ ಸಮುದಾಯದ ಸ್ವಾಭಿಮಾನ ಹಾಗೂ ಐಕ್ಯತೆಯ  ಸಾಕ್ಷಿಪ್ರಜ್ಞೆಯಾಗ್ಬೇಕಿದ್ದ ಕ್ರೈಸ್ತರ ಮಾಜಿ ಸರ್ವೊಚ್ಛ ಗುರು(ನಿವೃತ್ತ ಅರ್ಚ್ ಬಿಷಪ್) ಬರ್ನಾಡ್ ಮೊರಾಸ್ ಅಕ್ರಮವೊಂದರಲ್ಲಿ ಕೈ ಬಾಯಿಯೊಂದಿಗೆ ಹೆಸರನ್ನೂ ಕೆಡಿಸಿಕೊಂಡಿರುವ ಆಪಾದನೆಗೆ ತುತ್ತಾಗಿದ್ದಾರೆ.ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಫ್ ಐ ಆರ್ ಕೂಡ ದಾಖಲಾಗಿದೆ.

ಅಧಿಕಾರದಲ್ಲಿದ್ದಷ್ಟು ದಿ‌ನ ಕ್ರೈಸ್ತ ಸಮುದಾಯದ ಉದ್ಧಾರ ಮಾಡಿದ್ದಕ್ಕಿಂತ ಅಧಿಕಾರ ದುರ್ಬಳಕೆ ಮಾಡ್ಕೊಂಡು ಕ್ರೈಸ್ತ ಸಮುದಾಯದ ಆಸ್ತಿಯನ್ನೆಲ್ಲಾ ಲೂಟ್ ಮಾಡಿ ತಾನ್ ಮಾತ್ರ ದುಂಡಗಾಗಿದ್ದಷ್ಟೇ ಬರ್ನಾಡ್ ಮೊರಾಸ್ ಸಾಧನೆ ಎನ್ನೋ ಗಂಭೀರ ಆರೋಪ ಅವ್ರ ಮೇಲಿದೆ. ಅಕ್ರಮದ ವಿರುದ್ದ ಧ್ವನಿ ಎತ್ತಿದ್ರೆ ಅಂಥವ್ರನ್ನು ಪೊಲೀಸ್ರ ಮೂಲಕ ನಿಯಂತ್ರಿಸ್ತಿದ್ದ ಆಪಾದನೆಗೂ ಅವ್ರು ತುತ್ತಾಗಿದ್ರು.ಅವರ ವಿರುದ್ದ   ಎಫ್ ಐ ಆರ್ ಲಾಡ್ಜ್ ಆಗಿರೋದು ದೂರುದಾರರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಕರಣವೇನು‌…

ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸೆಂಟ್ ಪಿಯೂಸ್ ಚರ್ಚ್ ಗೆ ಸೇರಿದ ಅಕ್ರಮ ಪ್ರಕರಣ ಇದೀಗ ಮೊರಾಸ್ ಹಾಗೂ ಅಕ್ರಮಕ್ಕೆ ಸಾಥ್ ಕೊಟ್ಟ ಬಿಬಿಎಂಪಿ ಅಧಿಕಾರಿಗಳ ಬುಡಕ್ಕೆ ನೀರು ಕಾಯಿಸುವ ಸ್ಥಿತಿ ತಂದೊಡ್ಡಿದೆ.ತಪ್ಪು ದಾಖಲೆಗಳನ್ನು ನೀಡಿ ಸ್ವಾಧಿನಾನುಭವ ಪತ್ರ(ಓ.ಸಿ) ಪ್ರಮಾಣ ಪತ್ರ ಪಡೆದಿದ್ದಾರೆ ಮೊರಾಸ್ ಎನ್ನೋದು ಅವರ ಮೇಲಿನ ಗಂಭೀರ ಆರೋಪ.

ಕಮ್ಮನಹಳ್ಳಿ ಆಸ್ತಿ ಸಂಖ್ಯೆ 225 ರಲ್ಲಿ ಚರ್ಚ್ ನಿರ್ಮಾಣವಾಗಿದೆ.ಆದ್ರೆ ನಕ್ಷೆ ಮಂಜೂರಾತಿಯೇ ಆಗದೆ ಅದ್ಹೇಗೆ ಚರ್ಚ್ ನಿರ್ಮಾಣ‌ಮಾಡಲಾಯ್ತು ಎನ್ನುವುದು ದೂರುದಾರ ಬರ್ತಲೋಮಿಯಾ ಹಾಗೂ ಇತರ ಕ್ರೈಸ್ತರ ಪ್ರಶ್ನೆ.

ಸಾರ್ವಜನಿಕ ದಾಖಲೆ ತಿದ್ದಿ ನಕಲಿ ಸ್ವಾಧೀನಾನುಭವ ಪತ್ರ ಪಡೆಯಲಾಗಿದೆ.ನಿರ್ಮಾಣದ ವೇಳೆ ಸೈಟ್ ನಂಬರ್ 255 ರ ದಾಖಲೆ ಕೊಡೋದ್ರ ಬದಲು ಸೈಟ್ ನಂಬರ್ 140 ರ ದಾಖಲೆ ಕೊಡಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲು ಏರಿದ್ರು.

ಮೊರಾಸ್ ನೀಡಿದ ಎಂಜಲು ಕಾಸಿಗೆ ನಾಲಿಗೆ ಒಡ್ಡಿದ ಟೌನ್ ಪ್ಲ್ಯಾನಿಂಗ್ ಜಂಟಿ ಆಯುಕಚತ ಸುದರ್ಶನ್,ಎಇಇ ವಿ.ನಟರಾಜು,ಜಂಟಿ ಆಯುಕ್ತ ಪ್ರಭುಲಿಂಗಸ್ವಾಮಿ,ಮುಖ್ಯ ಅಭಿಯಂತರ ಎಸ್‌.ಪ್ರಸಾದ್ ಅವರ ವಿರುದ್ಧವೂ ದೂರು ದಾಖಲಿಸಿದ್ರು.

ಮೂರು ವರ್ಷಗಳ ನಿರಂತರ ಕಾನೂನು ಹೋರಾಟದ ಫಲವಾಗಿ ಕೋರ್ಟ್ ಎಸಿಬಿಗೆ ಆದೇಶಿಸಿದ ತನಿಖೆಯಲ್ಲಿ   ಕ್ರೈಸ್ತ ಸಮುದಾಯಕ್ಕೇನೆ ಕಳಂಕ ತರುವಂಥ ಕೆಲಸ ಮಾಡಿರುವ ಡಾ.ಮೊರಾಸ್ ಹಾಗೂ ಅಕ್ರಮಕ್ಕೆ ಸಾಥ್ ಕೊಟ್ಟ ಪಾಲಿಕೆ ಅಧಿಕಾರಿಗಳ ಅಕ್ರಮ ಸಾಬೀತಾಗಿದೆ.ಹಾಗಾಗಿ ಇವರೆಲ್ಲರ  ವಿರುದ್ಧ FIR ದಾಖಲಿಸಿಕೊಂಡಿದೆ.ಮೊರಾಸ್ ಮಾಡಿರುವ ಹೊಲಸು ತಿನ್ನುವ ಕಾರ್ಯದಿಂದ ಕ್ರೈಸ್ತ ಸಮುದಾಯವೇ ತಲೆ ತಗ್ಗಿಸುವಂತಾಗಿದೆ.ಅರ್ಚ್ ಬಿಷಪ್ ಮಾಡಿರುವ ಅಕ್ರಮಗಳ ವಿರುದ್ಧದ ನಮ್ಮ ಕ್ರೈಸ್ತರ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಹೋರಾಟದ ಮಂಚೂಣಿಯಲ್ಲಿರುವ ಕ್ರೈಸ್ತ ಮುಖಂಡ ಬರ್ತಲೋಮಿಯಾ ಕನ್ನಡಫ್ಲ್ಯಾಶ್ನ್ಯೂಸ್.ಕಾಂ ಗೆ ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News