ಕಾರ್ಗಿಲ್ ವಿಜಯೋತ್ಸವದ ಮೂಲ ಪುರುಷರು

0

ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆ ವಿಜಯ ಸಾಧಿಸಲು ಅದರ ಹಿಂದಿರುವ ನಮ್ಮ ಮಾಸ್ಟರ್ ಮೈಂಡ್ ವೀರಕಲಿಗಳನ್ನು ನೆನಪಿಸಿಕೊಳ್ಳದೇ ಹೋದ್ರೆ ಸಂಭ್ರಮಕ್ಕೆ ಸಾರ್ಥಕತೆನೇ ಸಿಗೊಲ್ಲ.ಅಂಥವ್ರ ಪೈಕಿ ಮಂಚೂಣಿಯಲ್ಲಿ ನಿಲ್ಲುವಂಥವ್ರು

ವಿಕ್ರಮ್ ಬಾತ್ರಾ,ಯಾದವ್,ಸಂಜಯ ಕುಮಾರ್,ಮನೋಜ್ ಪಾಂಡೆ.

ಪ್ರತಿಯೊಂದು ಪರ್ವತವನ್ನು ಗೆದ್ದಾಗಲು ವಿಜಯದ ಕೇಕೆ ಬೀರುತ್ತಾ ಯೇ ದಿಲ್ ಮಾಂಗೆ ಮೋರ್ ಎಂದು ಅಬ್ಬರಿಸುತ್ತಿದ್ದ ವಿಕ್ರಮ್ ಬಾತ್ರಾರನ್ನು ಕಾರ್ಗಿಲ್ ಗೆಲುವಿನಿಂದ ಪ್ರತ್ಯೇಕಿಸಿಟ್ಟು ನೋಡಲು ಸಾಧ್ಯವೇ ಇಲ್ಲ.ಶತೃ ಸೈನಿಕರ ಎದೆ ಸೀಳಿದ ಪ್ರತಿಭಾವಂತ ಬಾತ್ರಾನನ್ನು ಶೇರ್ ಶಾ ಎಂದೆ ಬಣ್ಣಿಸಲಾಗಿತ್ತು.ಕಡಿದಾದ 5140,4575 ಶಿಖರಗಳನ್ನು ವಶಪಡಿಸಿಕೊಂಡು ಅಲ್ಲೆಲ್ಲಾ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಿ ಮಾ ತುಜೆ ಸಲಾಂ ಎನ್ನುತ್ತಲೇ ಯೇ ದಿಲ್ ಮಾಂಗೇ ಮೋರ್ ಎಂದು ಅಬ್ಬರಿಸುತ್ತಲೇ ಸೈನಿಕರನ್ನು ಹುರಿದುಂಬಿಸುತ್ತಿದ್ದ ಪರಿಯೇ ಅತ್ಯದ್ಭುತ.ಆದ್ರೆ 4575ರ ಶಿಖರವನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಕೊಲ್ಲಲೆಂದೇ ಹೊಂಚು ಹಾಕಿ ಕೂತಿದ್ದ ಪಾಕಿಗಳ ಷಡ್ಯಂತ್ರ ಅರ್ಥ ಮಾಡಿಕೊಳ್ಳದೆ ನುಗ್ಗಿದ ಬಾತ್ರಾನ ಎದೆಯನ್ನು ಶತೃಗಳ ಗುಂಡು ಸೀಳಿಬಿಟ್ಟಿತ್ತು.ಸುಬೇದಾರ್ ಒಬ್ರು ನಿಮಗೆ ಮಕ್ಕಳಿದ್ದಾರೆ ರಿಸ್ಕ್ ತಗೋಬೇಡಿ ಹಿಂದಕ್ಕೆ ಬನ್ನಿ ಸಾರ್ ಎಂದು ಕಾಷನ್ ಕೊಟ್ರು ವತನ್ ಪೆಹಲೇ,ಫ್ಯಾಮಿಲಿ ಬಾದ್ ಮೇ ಎಂದು ನುಗ್ಗುತ್ತಲೇ ಶತೃಗಳ ಗುಂಡುಗಳಿಗೆ ಎದೆಗೊಟ್ಟು ವೀರಮರಣವನ್ನಪ್ಪಿದ್ರು ಬಾತ್ರಾ.ಸತ್ತರೂ ಆ ಪರ್ವತವನ್ನು ಭಾರತ ಗೆದ್ದಿಯಾಗಿತ್ತು.

ಅವರಂತೆಯೇ ಘಾತಕ್ ತುಕಡಿಯನ್ನು ಮುನ್ನಡೆಸುತ್ತಿದ್ದ ಮತ್ತೊಬ್ಬ ಕಲಿ ಯಾದವ್ ವೀರಾವೇಶವನ್ನು ನೆನೆಯಲೇ ಬೇಕಾಗುತ್ತೆ.ಟೈಗರ್ ಹಿಲ್ಸ್ ಮೇಲಿದ್ದ 3 ಬಂಕರ್ ಗಳನ್ನು ವಶಪಡಿಸಿಕೊಳ್ಳುವ ಟಾಸ್ಕನ್ನಿಟ್ಟುಕೊಂಡು ಹೊರಟ ಯಾದವ್,ಕಡಿದಾದ ಮಾರ್ಗದಲ್ಲಿ ಶತೃ ಸೈನಿಕರನ್ನು ಕೊಂದು,ಹಿಮ್ಮೆಟ್ಟಿದ ರೀತಿ ಅತ್ಯದ್ಭುತ.ಪಾಕಿಸ್ತಾನಿ ಸೈನಿಕರು ನಿರಂತರ ಮಳೆಗೆರೆದ ಗುಂಡಿನ ದಾಳಿಗೆ ಎದೆಗೊಡುತ್ತಲೇ ಬಂಕರ್ ಗಳನ್ನು ಹೊಡೆದುರಳಿಸಿದ ಪರಾಕ್ರಮ ಅಪ್ರಮೇಯ.ಪಾಕಿ ಸೈನಿಕರ ಬಂದೂಕಿನಿಂದ ಹೊರಬಿದ್ದ 15ಕ್ಕೂ ಹೆಚ್ಚು ಗುಂಡುಗಳು ಎದೆ ಹೊಕ್ಕರೂ ಛಲ ಬಿಡದೆ ಗುರಿಯನ್ನು ಕ್ರಮಿಸಿದ ಯಾದವ್ ಅತಿ ಕಿರಿಯ ವಯಸ್ಸಿನಲ್ಲೇ ಪರಮವೀರಚಕ್ರ ಪಡೆದ ವೀರಕಲಿ.ಟೈಗರ್ ಹಿಲ್ಸ್ ಭಾರತದ ವಶವಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೇ ಈ ಯಾದವ್.

ಈ ಸಂದರ್ಭದಲ್ಲಿ ನೆನೆಯಲೇಬೇಕಾದ ಮತ್ತೋರ್ವ ಹೀರೋ ಮನೋಜ್ ಪಾಂಡೆ.ಗೂರ್ಖಾ ರೈಫಲ್ಸ್ ನ ಕಿರಿಯ ಅಧಿಕಾರಿಯಾಗಿದ್ದಾತ.ಬಟಾಲಿಕ್ ಸೆಕ್ಟರ್ ನಲ್ಲಿ ಅಡಗಿದ್ದ ಪಾಕಿಗಳನ್ನು ಹೊಡೆದುರುಳಿಸುವ ಟಾಸ್ಕನ್ನು ಬೆನ್ನತ್ತಿ ಹೊರಟ ಪಾಂಡೆ,ಖಿಲುಬಾರ್ ಪರ್ವತದ ತುದಿಯಲ್ಲಿ ಹೊಂಚಾಕಿ ಕುಳಿತಿದ್ದ ಸೈನಿಕರನ್ನು ಹಿಮ್ಮೆಟ್ಟುವ ಪ್ರಯತ್ನಕ್ಕೆ ಸೈನಿಕರೊಂದಿಗೆ ಮುಂದಾದ್ರು.ಆದ್ರೆ ಪಾಕಿಗಳ ದಾಳಿಗೆ ಎದೆಯೊಡ್ಡಿ ಸಾವನ್ನಪ್ಪಿದ ಅಪ್ರತಿಮ ಸೇನಾನಿ.ಶತೃಗಳ ಬಂಕರ್ ನಾಶಪಡಿಸಿ ಖಿಲುಬಾರ್ ಪರ್ವತ ನಮ್ಮ ವಶವಾಗಿದೆ ಎಂದು ಅಬ್ಬರಿಸುತ್ತಲೇ ಸಾವನ್ನಪ್ಪಿದ ಮನೋಜ್ ಪಾಂಡೆ ತ್ಯಾಗ ಬಲಿದಾನವನ್ನು ದೇಶ ಮರೆಯೊಕ್ಕೆ ಸಾಧ್ಯವೇ ಇಲ್ಲ.

ಇವರಂತೆ ಮತ್ತೊಬ್ಬ ವೀರಕಲಿ ಜಮ್ಮು ಕಾಶ್ಮೀರ್ ರೈಫಲ್ಸ್ ನ ಯೋಧ ಸಂಜಯ್ ಕುಮಾರ್ ಮುಷ್ಕೋಹ ಕಣಿವೆಯನ್ನು ಶತೃಗಳಿಂದ ವಶಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.ತನಗೆ ಕೊಟ್ಟ ಟಾಸ್ಕನ್ನು ನಿಭಾಯಿಸುವ ವೇಳೆ ಗುಂಡುಗಳು ಖಾಲಿಯಾದ್ರೂ ಸೈನಿಕರೊಂದಿಗೆ ಮುನ್ನುಗ್ಗುತ್ತಿದ್ದಾಗ ಎದುರಿನಿಂದ ಬಂದ ಗುಂಡುಗಳು ತೊಡೆ ಹೊಕ್ಕಿದ್ವು.ಆದ್ರೆ ಅದಕ್ಕೆ ವಿಚಲಿತರಾಗದೆ ಶತೃಗಳ ಮೆಷಿನ್ ಗನ್ ಕಿತ್ತುಕೊಂಡ ಶತೃ ಸಂಹಾರ ಮಾಡಿ 4874 ಮುಷ್ಕೋಹ ಕಣಿವೆ ಭಾರತದ ಪಾಲಾಗುವಂತೆ ಮಾಡಿದ್ದು ಕಡಿಮೆ ಸಾಧನೆಯೇನಲ್ಲ.

ಇವರಂತೆ  ಕ್ಯಾಪ್ಟನ್ ವೈಜಯಂತ್ ಥಾಪರ್, ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ಎನ್ ಕೆಂಗುರುಸೆ, ಕ್ಯಾಪ್ಟನ್ ಅನುಜ್ ನಾಯರ್,ಮೇಜರ್ ಅಜಯ್ ಸಿಂಗ್ ಜಸ್ರೋತಿಯಾ, ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ಕ್ಲಿಫರ್ಡ್ ಕೆ ನೊಂರಂಗ್ರುಮ್, ಲೆಫ್ಟಿನೆಂಟ್ ಬಲ್ವಾನ್ ಸಿಂಗ್,ಕ್ಯಾಪ್ಟನ್ ಜೆರ್ರಿ ಪ್ರೇಮ್ ರಾಜ್ ಅವ್ರಂಥ ಅಧಿಕಾರಿಗಳು ಹಾಗೂ ಸಾವಿರಾರು ಸೈನಿಕರ ವೀರಾವೇಶದಿಂದ ಕಾರ್ಗಿಲ್ ಗೆಲುವು ನಮ್ಮದಾಯ್ತು.

Spread the love
Leave A Reply

Your email address will not be published.

Flash News