ನೀವ್ ಸ್ಮಾರ್ಟ್ ಆಗಿ ಕಾಣ್ಬೇಕೆ..ಇಲ್ಲಿದೆ ನೋಡಿ ಟಿಪ್ಸ್..

0

ಸೌಂದರ್ಯ ಪ್ರಜ್ಞೆ ಯಾರಿಗಿರೊಲ್ಲ ಹೇಳಿ.ಎಲ್ಲರಿಗಿಂತ ಚೆನ್ನಾಗಿ ಕಾಣ್ಬೇಕು..ಎಲ್ಲರೂ ನಮ್ಮನ್ನು ಗುರುತಿಸ್ಬೇಕು..ಹತ್ತು ಜನರ ನಡುವಿದ್ರೂ ಎಲ್ಲರಿಗಿಂತ ಆಕರ್ಷಕವಾಗಿ ಎದ್ದು ಕಾಣ್ಬೇಕು ಎನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆ.ಇದು ಮಹಿಳೆಯರಲ್ಲಿ ಸಹಜವಾಗಿಯೇ ಹೆಚ್ಚಾಗಿದೆ ಎನ್ನೋದನ್ನು ಒಪ್ಪಿಕೊಳ್ಳಬಹುದಾದ್ರೂ ಈ ವಿಷಯದಲ್ಲಿ ಪುರುಷರೇನೂ ಹಿಂದೆ ಬಿದ್ದಿಲ್ಲ.

ಸೌಂದರ್ಯ ಪ್ರಜ್ಞೆ ಇರುವ ಪುರುಷರು ಸ್ಮಾರ್ಟ್ ಆಗಿ ಕಾಣ್ಬೇಕೆನ್ನುವ ಮಹತ್ವಾಕಾಂಕ್ಷೆ ಇದ್ದಲ್ಲಿ ಒಂದಷ್ಟು ಬ್ಯೂಟಿ ಹಾಗೂ ಹೆಲ್ತ್ ಟಿಪ್ಸನ್ನು ಮರೀದೇ ಫಾಲೋಮಾಡಿ,ಅಪ್ಲೈ ಮಾಡ್ಕೊಳ್ಳಿ.ಮುಖ..ಹಾಗೂ ತ್ವಚೆ ಎಲ್ಲರ ಮೊದ್ಲ ಆಯ್ಕೆ.ಎಲ್ಲರೂ ಹೆಚ್ಚು ಗಮನ ಕೊಡೋದೇ ಇದಕ್ಕೆ.ಏಕಂದ್ರೆ ಮುಖ ಹಾಗೂ ತ್ವಚೆ ಚೆನ್ನಾಗಿದ್ದರೆ ,ಆಕರ್ಷಕವಾಗಿದ್ದರೆ ಎಂಥವ್ರ ಮುಂದೆಯೂ ಗಮನ ಸೆಳೆಯಲ್ಪಡುತ್ತಾರೆ.ಹಾಗಾಗಿನೇ

ಮೊಡವೆ, ಬ್ಲ್ಯಾಕ್ಹೆಡ್ಸ್ ಅಂಡ್ವೈಟ್ಹೆಡ್ಸ್, ಕಪ್ಪು ಕಲೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಯತ್ನಿಸ್ತಲೇ ಇರುತ್ತಾರೆ.ಏಕಂದ್ರೆ ತ್ವಚೆಯ ಗೌರವಆಕರ್ಷಣೆ ಹಾಗೂ ಸೌಂದರ್ಯವನ್ನು ಕ್ಷೀಣಿಸುವಂಥ ಈ ಸಮಸ್ಯೆಗೆ ಪರಿಹಾರ ಕಂಡ್ಕೊಳ್ಳೋದು ಮೊದಲ ಆಧ್ಯತೆಯಾಗಿರುತ್ತೆ.ಪುರುಷರದ್ದು ಮಹಿಳೆಯರ ಹೋಲಿಕೆಯಲ್ಲಿ ಶುಷ್ಕ ಹಾಗೂ ಒರಟಿನ ತ್ವಚೆ.ಹಾಗಂತ ಅದನ್ನು ಆಕರ್ಷಕವಾಗಿಸಲು ಮಾರ್ಗಗಳೇ ಇಲ್ಲವೆಂದೇನಲ್ಲ.ಅದಕ್ಕಾಗಿ ಕೆಲವು ಟಿಪ್ಸ್ ಅನುಸರಿಸೋದು ಸೂಕ್ತ.

ಕ್ಲೀನ್‌ಅಪ್ ಕ್ಕೆ ಆಧ್ಯತೆ ಅತ್ಯಗತ್ಯ:

ಪುರುಷರೇ ನೀವು ಮುಖಕ್ಕೆ ಸೋಪನ್ನೇ ಬಳಸ್ತಿದ್ರೆ ತಕ್ಷಣಕ್ಕೆ ಅದನ್ನು ಬಿಟ್ಟುಬಿಡಿ.ಕ್ಲೆನ್ಸ್ ಗೆ ಆಧ್ಯತೆ ಕೊಡಿ.ಹೈಡ್ರೇಟಿಂಗ್ ಕ್ಲೆನ್ಸರ್ ಹಚ್ಚುವ ಮಿಸ್ಸೆಲರ್ ವಾಟರ್ ಬಳಸುವ ಕಡೆಗೆ ಗಮನ ಕೊಡಿ.ಕ್ಲೇ ಮಾಸ್ಕ್ ಗೆ ಒತ್ತು ಕೊಟ್ಟರೆ ತ್ವಚೆ ಲಕಲಕ ಎಂದು ಹೊಳೀದಿದ್ರೆ ಕೇಳ್ನೋಡಿ.ಶೇವ್ ಮಾಡುವ ವಿಧಾನದಲ್ಲೂ ಸ್ವಲ್ಪ ಬದ್ಲಾವಣೆ ಮಾಡಿಕೊಳ್ಳಲೇಬೇಕು.ಏಕಂದ್ರೆ ಶೇವಿಂಗ್ ಗೆ ಬಳಸಲಾಗುವ ಬ್ಲೇಡ್ ಕೂಡ ತ್ವಚೆ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತೆ.

ಉತ್ತಮ ಗುಣಮಟ್ಟದ ರೇಝರ್ ಬಳಕೆ ಒಳ್ಳೇದು.ಶೇವ್ ಮೊದಲು ಕ್ರೀಮ್ ಹಚ್ಚಿ ಶೇವ್ ತರುವಾಯ ಮಾಶ್ಚರೈಸರ್ ಹಚ್ಚೊಕ್ಕೆ ಮರೀಬಾರ್ದು.ಈ ಪ್ರಕ್ರಿಯೆ ಸರಿಯಾಗಿ ನಡಿದಿದ್ದೇ ಆದಲ್ಲಿ ತ್ವಚೆಯ ಗೌರವರ್ಣ ಹೆಚ್ಚುತ್ತೆ.ಅತಿಯಾದ ಬಿಸಿಲು ತ್ವಚೆಗೆ ಶತೃ ಎನ್ನುತ್ತಾರೆ.ಅದು ತ್ವಚೆಯ ಸೌಂದರ್ಯ-ಆರೋಗ್ಯ ಹಾಗೂ ಕಾಂತಿಯನ್ನು ಕುಂದಿಸುತ್ತೆ.ಸನ್ ಟ್ಯಾನ್(ಚರ್ಮದ ಮೇಲೆ ಕಪ್ಪು ಸುಕ್ಕುಗಳಾಗುವುದು) ಸಮಸ್ಯೆ ಸಹಜವಾಗೇ ಕಾಡುವುದನ್ನು ತಪ್ಪಿಸ್ಲಿಕ್ಕೆ ಮನೆಯಿಂದ ಹೊರ ಹೋಗುವ ಮುನ್ನ ಉತ್ತಮ ಗುಣಮಟ್ಟದ ಸ್ಕ್ರೀನ್ ಲೋಷನ್ ಬಳಸಿಸ್ರೆ ಉತ್ತಮ.

ತುಟಿಗೆ ಲಿಪ್ ಬಾಮ್ ಹಾಕುವುದು ಕೂಡ ಳ್ಳೇದು.ಅದರಂತೆಯೇ ಮಲಗುವ ಮುನ್ನ ವಿಟಮಿನ್ ಸಿ ಹೆಚ್ಚಾಗಿರುವ ಕ್ರೀಮ್ ಹಚ್ಚುವುದು ಕೂಡ ತ್ವಚೆ ಕಾಂತಿಯುತವಾಗಿ ಕಾಣುತ್ತೆ.ಇನ್ನು ಮುಖಕ್ಕೆ ಬಳಸುವ ಟವೆಲ್ ಕೂಡ ಅಷ್ಟೇ ಇಂಪಾರ್ಟೆಂಟ್.ಒಣಗಿದ ಟವೆಲ್ ಬಳಸಲೇಬೇಡಿ.ಬಳಸಲೇಬೇಕೆಂದು ಕೊಂಡ್ರೆ ನವಿರಾದ ಟವೆಲ್ ಬಳಸಿ,ಟವೆಲ್ ಗಿಂತ ಟಿಷ್ಯೂ ಪೇಪರ್ ಬಳಸೋದು ಎಲ್ಲಾ ರೀತಿಯಿಂದ್ಲೂ ಸೇಫ್ ಅಂಡ್ ಹೆಲ್ತಿಯೆಸ್ಟ್ ವೇ ಎನ್ನುತ್ತಾರ ಚರ್ಮ ವೈದ್ಯರು.

Spread the love
Leave A Reply

Your email address will not be published.

Flash News