ತಾರೆಯರ ಮಾನ್ಸೂನ್ ಫುಡ್ ಡಯಟ್ ಹೇಗಿರುತ್ತೆ ಗೊತ್ತಾ..

0

ಮಳೆಗಾಲ..ಮನೆಯ ಹೊರಗೆ ಕಾಲಿಟ್ಟರೆ ತೇವ..ಚಳಿ ಚಳಿಎಲ್ಲೂ ಹೋಗಲು ಮನಸಾಗೊಲ್ಲ.ಹಾಗಂತ ಜನಸಾಮಾನ್ಯರೇನೋ ಸುಮ್ಮನಾಗ್ಬೋದು.ಆದ್ರೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವ ಚಿತ್ರ ತಾರೆಯರು ಮಳೆ..ಚಳಿ..ಬೇಸಿಗೆ ಎನ್ನದೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು..ಮಳೆಗಾಲದಲ್ಲೂ ಸಿನಿ ತಾರೆಯರು ತಮ್ಮ ದೇಹದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡ್ತಾರೆ.ಮಳೆಗಾಲದಲ್ಲಿ ತಮ್ಮ ದೇಹದ ಆರೋಗ್ಯ ಹಾಗೂ ಆಕಾರ ಮತ್ತು ಸ್ವರೂಪವನ್ನು ಕಾಪಾಡಿಕೊಳ್ಳೊಕ್ಕೆ ಚಿತ್ರ ತಾರೆಯರು ಏನೆಲ್ಲಾ ಫುಡ್ ತಗೋತಾರೆ..ಅದರಿಂದಿನ ಕಾರಣಗಳೇನು ಎನ್ನುವುದರ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ನಿಮ್ಮ ಕನ್ನಡ ಫ್ಲ್ಯಾಷ್ ನ್ಯೂಸ್.ಕಾಂನಲ್ಲಿ ಡೋಂಟ ಮಿಸ್ ಟು ರೀಡ್..

ಮಾನ್ಸೂನ್  ಎಂದಾಕ್ಷಣ ತಾರೆಯರು ಕೈ ಗೆ ಸಿಕ್ಕದ್ದನ್ನೆಲ್ಲಾ ತಿಂದ್ ಬಿಡ್ತಾರೆ..ಬಾಯಿ ಚಪಲಕ್ಕೆ ಬ್ರೇಕ್ ಹಾಕೋದಿಲ್ಲ ಎಂದು ಭಾವಿಸಿದ್ದರೆ ತಪ್ಪು.ಏಕೆಂದ್ರೆ ಮಾನ್ಸೂನ್‌ಸೀಸನ್‌ನಲ್ಲಿಯೂ ಪೌಷ್ಟಿಕಾಂಶ ಕ್ಕೆ ಹೆಚ್ಚಿನ ಆಧ್ಯತೆ ಕೊಡ್ತಾರೆ ಸಿನಿ ತಾರೆಯರು.

ಕಿರುತೆರೆ ಹಾಗೂ ಬೆಳ್ಳಿ ತೆರೆಯ ಖ್ಯಾತ ನಟ ಜೆ.ಕೆ ಸೀಸನ್ ಗೆ ತಕ್ಕ ಹಾಗೇ ನಾನು ತಿನ್ನೋದಿಲ್ಲ.,ನಾನು ಸಿಕ್ಕಾಪಟ್ಟೆ ಫುಡ್ಡಿ ಎನ್ತಾರೆ.ಹಾಗಂತ ಸಮತೋಲಿತ ಆಹಾರಕ್ಕೆ ಆಧ್ಯತೆ ಕೊಡುವುದಿಲ್ಲ ಎನ್ನುವುದಲ್ಲ.ಎಲ್ಲಾ ಸೀಸನ್ ನಂತೆ ಮಳೆಗಾಲವೂ ಕೂಡ ನನಗೆ ದೇಹದ ಆರೋಗ್ಯ ಅತೀ ಮುಕ್ತ.ಹಾಗಾಗಿ ಪ್ರತಿದಿನ ಮೊಟ್ಟೆ,ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತೇನೆ ಎನ್ತಾರೆ.ಡಯಟ್ ಗೆ ಹೆಚ್ಚು ಒತ್ತು ಕೊಡ್ತಿರೋದ್ರಿಂದ ದೇಹದ ತೂಕ ಕಡ್ಮೆ ಮಾಡಿಕೊಳ್ಳಬೇಕಿದೆ.ಹಾಗಾಗಿ ಡಯಟ್ ಆಹಾರದಿಂದ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದೇನೆ ಎನ್ತಾರೆ.

ಇನ್ನು ಮತ್ತೋರ್ವ ಕಿರುತೆರೆ ನಟ ವಿಜಯ್ ಯಾವಾಗ, ಯಾವ ಸಮಯದಲ್ಲಿ ಏನ್ ತಿನ್ನಬೇಕು ಎನ್ಸುತ್ತೋ ಅದನ್ನು ತಿನ್ಬೇಕು.ಸಾಮಾನ್ಯವಾಗಿ ಮಳೆಗಾಲ ಆಗಿರುವುದರಿಂದ ಬಜ್ಜಿ ,ಬೋಂಡಾದಂಥ ಕರಿದ ಪದಾರ್ಥಗಳನ್ನು ಸೇವಿಸಬೇಕೆಂದು ಎನಿಸುತ್ತದೆ. ಆದ್ರೆ  ಹೆಚ್ಚು ಕೊಲೆಸ್ಟ್ರಾಲ್‌ಇಲ್ಲದೆ ಆಲಿವ್‌ಎಣ್ಣೆ, ತೆಂಗಿನ ಎಣ್ಣೆಯ ಲ್ಲಿ ಕರಿದ ಪದಾರ್ಥಗಳನ್ನು ಮನೆಯಲ್ಲೇ ಮಾಡಿ ಸವಿಯಬಹುದು. ಅದು ಹೆಲ್ತಿಯಾಗಿಯೂ ಇರುತ್ತೆ ಅನ್ತಾರೆ ವಿಜಯ್.

ಇನ್ನು ಕೃಷ್ಣನ್ ಲವ್ ಸ್ಟೋರಿ..ಇಷ್ಟಕಾಮ್ಯ ಚಿತ್ರಗಳ ಸ್ಟಾರ್ ಮಯೂರಿ,ಬಾಯಿ ಚಪಲಕ್ಕೆ ಮಾನ್ಸೂನ್ ನಲ್ಲಿ ಬ್ರೇಕ್ ಹಾಕ್ಕೊಳ್ಳೋದು ಸೂಕ್ತ ಎನ್ತಾರೆ.ಏಕೆಂದ್ರೆ ಫುಡ್ ಕಂಟ್ರೋಲ್ ಮಾಡದಿದ್ದರೆ ದೇಹ ಜಾಸ್ತಿ ಊಟ ಕೇಳುತ್ತದೆ. ಹಸಿವು ಬೇಗ ಆಗುತ್ತಂತೆ.ಯಾವುದೇ ಸೀಸನ್‌ಇದ್ದರೂ ಕೂಡ ನಾನು ಹೆಚ್ಚು ನೀರು ಕುಡಿಯುತ್ತೇನೆ. ಇದೇ ನನ್ನ ಆರೋಗ್ಯದ ಗುಟ್ಟು ಎನ್ನುತ್ತಾರೆ.

ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ,ಬೇರೆ ಸೀಸನ್ ನಲ್ಲಿ ಮೂರು ಹೊತ್ತು ತಿನ್ತಿದ್ದೆ,ಆದ್ರೆ ಮಳೆಗಾಲದಲ್ಲಿ ಆ ಮೂರು ಹೊತ್ತಿನ ಊಟವನ್ನೇ ಐದು ಭಾಗವಾಗಿ ಮಾಡಿ ತಿನ್ತೇನೆ.ಯಾವುದೇ ಇರಲಿ ಅತಿಯಾಗ್ಬಾರ್ದು.ಅದು ಊಟವೂ ಹೌದು.ಪ್ರತಿದಿನ ಯೋಗ ಕಡ್ಡಾಯ.ಮಾನ್ಸೂನ್ ತುಂಬಾ ಸುಂದರವಾಗಿರುತ್ತೆ.ಅದನ್ನು ಎಂಜಾಯ್ ಮಾಡ್ಬೇಕು.ಹೊರಗಿನ ಊಟ ಬಿಟ್ಟು ಮನೆಯ ಊಟಕ್ಕೆ ಆಧ್ಯತೆ ಕೊಡ್ತೇನೆ.ಹೊರಗೆ ಊಟ ಮಾಡೋ ಅನಿವಾರ್ಯತೆ ಇದ್ದರೆ ಸೋಡಾ ಹಾಕದ ಹೊಟೇಲ್ ಗಳಲ್ಲಿ ಊಟ ಮಾಡೋದು ಒಳ್ಳೇದೆಂದು ಸಲಹೆ ಕೊಡ್ತಾರೆ.
ಇದೆಲ್ಲಕ್ಕಿಂತ ವಿಭಿನ್ನವಾದ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ ಸಂಜನಾ ಪ್ರಕಾಶ್.ಅವ್ರು ವೇಗನ್ ಆಗಿರೋದ್ರಿಂದ
ಪ್ರಾಣಿ ಅಥವಾ ಪ್ರಾಣಿಯಿಂದ ತಯಾರಿಸಿದ ಪದಾರ್ಥ ಮುಟ್ಟೋದೇ ಇಲ್ವಂತೆ.ಆರ್ಗ್ಯಾನಿಕ್ ಫುಡ್,ನ್ಯಾಚುರಲ್ ಫುಡ್ ಸೇವಿಸುತ್ತೇನೆ ಎನ್ನುತ್ತಾರೆ.

ಇನ್ನು ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಠಿಕಾಂಶ ನೀಡುವಂಥ  ಹಣ್ಣು ಮತ್ತು ತರಕಾರಿ, ಸೊಪ್ಪು, ಕಾಳನ್ನು ಹೆಚ್ಚಾಗಿ ಸೇವಿಸ್ತಾರಂತೆ.ಇದರಿಂದ ದೇಹ ಆರೋಗ್ಯವಾಗಿರುತ್ತಷ್ಟೇ ಅಲ್ಲ ಮನಸ್ಸೂ ಆಹ್ಲಾದಕರವಾಗಿರುತ್ತೆ ಎನ್ನುತ್ತಾರೆ ಮತ್ತೋರ್ವ ಕಿರುತೆರೆ ನಟ ಧ್ರುವ.

ಸ್ಯಾಂಡಲ್ ವುಡ್ ಗೆ ಕಂಪೇರ್ ಮಾಡಿದ್ರೆ ಅತೀ ಹೆಚ್ಚು ಡಯಟ್ ಸೆನ್ಸ್ ಇರೋದು ಬಾಲಿವುಡ್ ತಾರೆಯರಿಗೆ ಆಹಾರದಲ್ಲಿ ಸ್ವಲ್ಪ ವೆರಿಯೇಷನ್ ಆದ್ರೂ ಅವರ ಮನಸ್ಸು ಅಲ್ಲೋಲಕಲ್ಲೋಲವಾಗಿಬಿಡುತ್ತೆ.
ಯೋಗ ಗುರು ಶಿಲ್ಪಾಶೆಟ್ಟಿ, ಐಶ್ವರ್ಯ ರೈ,ಸೋನಾಕ್ಷಿ ಸಿನ್ಹಾ, ರಣವೀರ್ ಸಿಂಗ್,ದೀಪಿಕಾ ಪಡುಕೋಣೆ,ಸೋನಮ್‌ಕಪೂರ್‌, ಜಾನ್‌ಅಬ್ರಾಹಂ, ಅಕ್ಷಯ್‌ಕುಮಾರ್ ಅವ್ರಂಥ ಖ್ಯಾತನಾಮರು ಮಳೆಗಾದಲ್ಲಿ ತಾವೇನ್ ತಿನ್ತೀವೆನ್ನೋದನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.ವರ್ಕೌಟ್ ಮಾಡುವ ಜೊತೆಗೆ ಹೆಚ್ಚು ನೀರು ಕುಡಿಯುವುದು, ಸಾಧ್ಯವಾದಷ್ಟು ಹಣ್ಣು ತರಕಾರಿ ಸೇವಿಸುವುದಕ್ಕೆ ಆಧ್ಯತೆ ಕೊಡ್ತಾರೆ.ಹೈ ಕೊಲೆಸ್ಟ್ರಾಲ್‌  ಪದಾರ್ಥ, ಫಾಸ್ಟ್‌ಫುಡ್‌ಮತ್ತು ಜಂಕ್‌ಫುಡ್‌ಗಳಿಂದ ತಮ್ಮನ್ನು ಸದಾ ದೂರ ಇಟ್ಟುಕೊಳ್ಳಲು ಇಚ್ಛಿಸುತ್ತಾರೆ.ನೀವು ಕೂಡ ಹಾಗೆಯೇ ಮಾಡಿ ಎಂದು ಅಭಿಮಾನಿಗಳಿಗೇನೇ ಟಿಪ್ಸ್ ಕೊಟ್ಟಿದ್ದಾರೆ.

Spread the love
Leave A Reply

Your email address will not be published.

Flash News