BreakingMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

TOMMOROW…!! 10 CITY CORPORATIONS COMPLETE BUNDH..?! ನಾಳೆ 10 ಮಹಾನಗರ ಪಾಲಿಕೆ ಚಟುವಟಿಕೆ ಬಂದ್-2 ಲಕ್ಷ ಅಧಿಕಾರಿ ಸಿಬ್ಬಂದಿ ಕೆಲಸಕ್ಕೆ ಗೈರು-ಪಾಲಿಕೆಗಳ ಎಲ್ಲಾ ನಾಗರಿಕ ಸೇವೆಗಳು ಬಹುತೇಕ ಅಲಭ್ಯ ಸಾಧ‍್ಯತೆ..!?

“ಆರೋಗ್ಯ ಸಂಜೀವಿನಿ ಯೋಜನೆ” ಯಿಂದ ಮಹಾನಗರ ಪಾಲಿಕೆಗಳು ಹೊರಕ್ಕೆ-ಮುಷ್ಕರದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

  • ಸರ್ಕಾರದಿಂದ ಇದೆಂಥಾ ಒಡೆದು ಆಳುವ ದ್ವಂದ್ವ ನೀತಿ
  • ಸರ್ಕಾರಿ ನೌಕರರ ನಡುವೆಯೇ ತಂದಿಟ್ಟು ನೋಡುವ ಧೋರಣೆ
  • ಆರೋಗ್ಯಕ್ಷೇಮಕ್ಕಿರುವ ಯೋಜನೆಯಲ್ಲೇ  ಏಕಿಷ್ಟು ಪಕ್ಷಪಾತ
  • ಸರ್ಕಾರಿ ಇಲಾಖೆಗಳ ನೌಕರರಿಗೆ  ಮಾತ್ರ ಏಕೆ ಯೋಜನೆಯ ಪ್ರಯೋಜನ
  • ನಗರದ ಸ್ವಚ್ಛತೆಯಲ್ಲಿ ನಿರ್ಣಾಯಕ-ಮುಂಚೂಣಿಯಲ್ಲಿರುವವರ ನಿರ್ಲಕ್ಷ್ಯವೇಕೆ
  • ನಗರ ಪಾಲಿಕೆಗಳಲ್ಲಿ ಕೆಲಸ ಮಾಡುವ ನೌಕರ ಸಿಬ್ಬಂದಿಗೇಕಿಲ್ಲ ಯೋಜನೆ ಲಾಭ
  • “ಆರೋಗ್ಯ ಸಂಜೀವಿನಿ” ಯೋಜನೆಯಿಂದ ಪಾಲಿಕೆ ನೌಕರರನ್ನು ಹೊರಗಿಟ್ಟ ಸರ್ಕಾರ 
  • ಪಾಲಿಕೆ ನೌಕರರು-ಪೌರ ಕಾರ್ಮಿಕರಿಗಿಲ್ವಂತೆ ಆರೋಗ್ಯ ಸಂಜೀವಿನಿ
  • ನಗರಗಳ ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿರುವ ನೌಕರರೇನು ಪಾಪ ಮಾಡಿದ್ರು
  • ಸ್ವಚ್ಛತೆ-ಸೌಂದರ್ಯ ಕಾಪಾಡೊಕ್ಕೆ ಮಾತ್ರ ಪಾಲಿಕೆ ನೌಕರರು ಬೇಕು
  • ನೈಜವಾಗಿ ಅವರಿಗೇ  ಸಿಗ್ಬೇಕಾದ ಸರ್ಕಾರಿ ಯೋಜನೆಯೇಕೆ ಅಲಭ್ಯ
  • ಸರ್ಕಾರದ ಧೋರಣೆ ಖಂಡಿಸಿ ನಾಳೆ ಬೀದಿಗಿಳಿಯಲಿದ್ದಾರೆ ಪಾಲಿಕೆಗಳ ನೌಕರರು
  • ರಾಜ್ಯದೆಲ್ಲಾ ಮಹಾನಗರ ಪಾಲಿಕೆಗಳ ಅಧಿಕಾರಿ/ನೌಕರರು/ಪೌರ ಕಾರ್ಮಿಕರ ಪ್ರತಿಭಟನೆ 
  • ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಾಳೆ ನೌಕರರ ಮುಷ್ಕರ
  • ರಾಜ್ಯದ 10 ಮಹಾನಗರ ಪಾಲಿಕೆಗಳ ನೌಕರರು/ಪೌರ ಕಾರ್ಮಿಕರು ಭಾಗಿ
  • 2 ಲಕ್ಷಕ್ಕೂ ಹೆಚ್ಚು ನೌಕರ ಸಿಬ್ಬಂದಿಯ ಸೇವೆ ನಾಳೆ ಅಲಭ್ಯ ಸಾಧ್ಯತೆ
  • ನಗರವೂ ಸ್ವಚ್ಛವಾಗೊಲ್ಲ..ಸ್ವಚ್ಛತಾಯೋಧರು ರಸ್ತೆಗಿಳಿದು ಕ್ಲೀನ್ ಮಾಡೊಲ್ಲ
  • ಪಾಲಿಕೆಗಳ ಅಧಿಕಾರಿ/ನೌಕರರು/ಪೌರ ಕಾರ್ಮಿಕರ ಸೇವೆ ಸಂಪೂರ್ಣ ಅಲಭ್ಯ 
  • ಪಾಲಿಕೆಗಳ ವ್ಯಾಪ್ತಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು
  • ಕ್ಲಿಷ್ಟ ಪರಿಸರದಲ್ಲಿ ಕೆಲಸ ಮಾಡೋ ಮಂಚೂಣಿ ನೌಕರರಿಗೆ ಯೋಜನೆ ಅನ್ವಯವಾಗಬೇಕು
  • ತತ್ ಕ್ಷಣಕ್ಕೆ ತಾರತಮ್ಯ ಧೋರಣೆ ಕೈ ಬಿಟ್ಟು ಯೋಜನೆ ಜಾರಿ ಸುತ್ತೋಲೆ ಹೊರಡಿಸಬೇಕು
  • ಮುಷ್ಕರದ ಮೂಲಕ ಸರ್ಕಾರದ ಮನವೊಲಿಸುವ ಪ್ರಯತ್ನ
  •  ಸರ್ಕಾರಕ್ಕೆ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್ ಎಚ್ಚರಿಕೆ

ಬೆಂಗಳೂರು/ಶಿವಮೊಗ್ಗ/ಮಂಗಳೂರುತುಮಕೂರು/ದಾವಣಗೆರೆ/ಹುಬ್ಬಳ್ಳಿ-ಧಾರವಾಡ/ವಿಜಯಪುರ / ಕಲ್ಬುರ್ಗಿ/ಬೆಳಗಾವಿ/ಬಳ್ಳಾರಿ/ಮೈಸೂರು: ನಾಳೆ ಬಹುತೇಕ ರಾಜ್ಯವೇ ಇವರ ಸೇವೆಯ ಅಲಭ್ಯತೆಯ ಪರಿಣಾಮ ಎದುರಿಸಲಿದೆ ಅನ್ಸುತ್ತೆ. ಇವರಿಲ್ಲದಿದ್ದರೆ ನಗರಗಳು ಸ್ವಚ್ಛವಾಗೂ ಇರೊಲ್ಲ..ಸುಂದರವಾಗಿಯೂ ಕಾಣೊಲ್ಲ.

ಏಕೆಂದ್ರೆ ಪ್ರತಿಯೊಂದು ನಗರಗಳ ಸೌಂದರ್ಯ-ಆರೋಗ್ಯ-ಸ್ವಚ್ಛತೆಯಲ್ಲಿ ಇವರದೇ ನಿರ್ಣಾಯಕ ಪಾತ್ರ.ಅಂದ್ಹಾಗೆ ಇವರೆಲ್ಲಾ ಮುಷ್ಕರ ಹಮ್ಮಿಕೊಳ್ಳುತ್ತಿರುವ ಉದ್ದೇಶವೇ,ಇವರಿಗೆ ಅತ್ಯಗತ್ಯದಷ್ಟೇ ತುರ್ತಾಗಿ ಸಿಗ್ಬೇಕಿರುವ ಆರೋಗ್ಯ ಸಂಜೀವಿನಿಯೋಜನೆಯ ಪ್ರಯೋಜನ ನಮಗೂ ಕೊಡಿ ಎನ್ನುವುದಷ್ಟೇ..

ಸರ್ಕಾರ ಮಹಾನಗರ ಪಾಲಿಕೆಗಳ ಅಧಿಕಾರಿ/ನೌಕರರು ಹಾಗೂ ಪೌರ ಕಾರ್ಮಿಕರನ್ನು ಅವರಿಗೆ ಅತ್ಯಗತ್ಯ-ತುರ್ತಾಗಿರುವ ಆರೋಗ್ಯ ಸಂಜೀವಿನಿ ಯೋಜನೆಯಿಂದ ಅದ್ಹೇಕೆ ಕೈ ಬಿಟ್ಟಿತೋ ಗೊತ್ತಾಗ್ತಿಲ್ಲ.ಇದು ನಮಗೆ ಆಶ್ಚರ್ಯ ಎನ್ನುವುದಕ್ಕಿಂತ ಗಾಬರಿ ಮೂಡಿಸಿದೆ. ಈ ನಿರ್ಲಕ್ಷ್ಯ ದ ವಿಚಾರವನ್ನು ಸರ್ಕಾರದ ಇಲಾಖೆಗಳ ಗಮನಕ್ಕೆ   ತರಲಾಗಿದೆ. ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ನಾಳೆ ನಡೆಯಲಿರುವ ಮುಷ್ಕರದಲ್ಲಿ 2 ಲಕ್ಷ ನೌಕರರು ಪಾಲ್ಗೊಳ್ಳಲಿದ್ದಾರೆ.ಕೆಲಸ ಕಾರ್ಯಗಳು ವ್ಯತ್ಯಯವಾಗೋದು ಸಹಜ.ಜನರು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇವೆ,ಈ ಮುಷ್ಕರಕ್ಕೆ ಬಿಬಿಎಂಪಿ ನೈತಿಕ ಬೆಂಬಲ ಸೂಚಿಸಲಿದೆ.

-ಅಮೃತರಾಜ್, ಕರ್ನಾಟಕ ರಾಜ್ಯ  ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ

ನಾಳೆ 10 ಮಹಾನಗರ ಪಾಲಿಕೆ ಚಟುವಟಿಕೆ ಬಂದ್-2 ಲಕ್ಷ ಅಧಿಕಾರಿ ಸಿಬ್ಬಂದಿ ಕೆಲಸಕ್ಕೆ ಗೈರು-ಪಾಲಿಕೆಗಳ ಎಲ್ಲಾ ನಾಗರಿಕ ಸೇವೆಗಳು ಬಹುತೇಕ ಅಲಭ್ಯ ಸಾಧ‍್ಯತೆ..!?

ಹೌದು ನಾಳೆ ಒಂದು ದಿನ( ನಾಳೆಯ ಮುಷ್ಕರ ಕೇವಲ ಸಾಂಕೇತಿಕ..ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಯುವ ಆತಂಕವೂ ಇದೆ)ರಾಜ್ಯದ 10 ಮಹಾನಗರಪಾಲಿಕೆಗಳ ಸುಮಾರು 2 ಲಕ್ಷ ಅಧಿಕಾರಿಗಳು/ನೌಕರರು.ಪೌರ ಕಾರ್ಮಿಕರು ತಮ್ಮ ಸೇವೆಯನ್ನು ನಿಲ್ಲಿಸಿ ಮುಷ್ಕರ ನಡೆಸಲಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ. ಕರ್ನಾಟಕ ರಾಜ್ಯ  ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಅಮೃತರಾಜ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು,ನಾಳೆ ಆಗುವ ವ್ಯತ್ಯಗಳಿಗೆ ಸರ್ಕಾರವೇ ನೇರ ಹಾಗೂ ನೈತಿಕ ಹೊಣೆ ಎಂದೂ ತಿಳಿಸಿದ್ದಾರೆ.

ಅಂದ್ಹಾಗೆ ಸರ್ಕಾರ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಪಾಲಿಕೆಗಳ ನೌಕರರು/ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರನ್ನೇ ಕೈಬಿಡಲಾಗಿದೆಯಂತೆ.ಇತರೆಲ್ಲಾ ಇಲಾಖೆಗಳವರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡುವ ಮುಂಚೂಣಿ  ನೌಕರ ಸಮುದಾಯವನ್ನೇ ಯೋಜನೆಯ ವ್ಯಾಪ್ತಿಯಿಂದ ಕೈಬಿಟ್ಟಿರುವುದು ಸಹಜವಾಗೇ ಸರ್ಕಾರದ ವಿರುದ್ಧ ಮುಷ್ಕರಕ್ಕೆ ಇಳಿಯುವಂತೆ ಮಾಡಿದೆ.

ಮಹಾನಗರ ಪಾಲಿಕೆಗಳ ಅಧಿಕಾರಿಸಿಬ್ಬಂದಿಯ ಸ್ಥಿತಿ, ಅವರು ಎಲ್ಲಕ್ಕೂ ಬೇಕು..ಆದರೆ ಎಲ್ಲಕ್ಕೂ ಬೇಡ ಎನ್ನುವಂತಾಗಿದೆ.ಪ್ರತಿನಿತ್ಯ ತೆರಿಗೆ ವಸೂಲಾತಿ,ಸ್ವಚ್ಛತೆ,ನಗರ ಅಭಿವೃದ್ಧಿ,ಕಾಮಗಾರಿ,ಕೊವಿಡ್ ನಿಯಂತ್ರಣ ಕಾರ್ಯ ಸೇರಿದಂತೆ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ವಿವಿಧ ನಾಗರಿಕ ಯೋಜನೆಗಳ ಲಾಭ ಸಿಗುವಂತೆ ಮಾಡುವುದೇ ಈ ಮಹಾನಗರ ಪಾಲಿಕೆಗಳ ಅಧಿಕಾರಿ/ನೌಕರರು ಹಾಗೂ ಪೌರ ಕಾರ್ಮಿಕರ ಜವಾಬ್ದಾರಿ. ಅವರು ಒಂದ್ ದಿನ  ಹೊಣೆಗಾರಿಕೆ ಮರುತ್ರೆ ಏನಾಗ್ಬೋದೆನ್ನುವುದು ಕೂಡ ಅನೇಕ ಸನ್ನಿವೇಶಗಳಲ್ಲಿ ಪ್ರೂವ್ ಆಗಿದೆ.ಅದರಿಂದಾದ ಸಮಸ್ಯೆಗಳ ಅರಿವೂ ಸರ್ಕಾರಕ್ಕಿದೆ.ಪರಿಸ್ತಿತಿ ಹೀಗಿರುವಾಗ ಯಾವ ಸಮುದಾಯಕ್ಕೆ ನಿಜಕ್ಕೂ,ಅರ್ಹವಾಗಿ ಸಿಗಬೇಕಿರುವ ಯೋಜನೆಯನ್ನು ತಪ್ಪಿಸ್ತಿರುವುದು ಸಾರ್ವಜನಿಕವಾಗಿ ಟೀಕೆ-ಆಕ್ರೋಶಕ್ಕೆ ಕಾರಣವಾಗಿದೆ.

ನಗರಗಳ ಸ್ವಚ್ಛತೆಗೆ ನಾವ್ ಬೇಕು..ಸೌಂದರ್ಯ ನಾವ್ ಕಾಪಾಡ್ಬೇಕು.ಸದಾ ಕಸ-ಕೊಚ್ಚೆ-ರಾಡಿಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡ್ತೇವೆ.ನಮ್ಮನ್ನು ಸ್ವಚ್ಛತಾ ಯೋಧರೆಂದು ಕರೆಯುತ್ತಾರೆ.ಆದರೆ ನಮ್ಮ ಕಷ್ಟ-ಗೋಳು ಕೇಳೊರಿಲ್ಲದಂಗೆ ಆಗಿದೆ.ಸರಿಯಾದ ಆರೋಗ್ಯದ ಚಿಕಿತ್ಸೆ ಸಿಗದೆ ನಮ್ಮಲ್ಲಿ ವರ್ಷಕ್ಕೆ ಅದೆಷ್ಟೋ ಮಂದಿ ಸಾಯ್ತಿದಾರೆ.ಇದು ಸರ್ಕಾರಕ್ಕೆ ಗೊತ್ತಿದ್ದರೂ ಆರೋಗ್ಯ ಸಂಜೀವಿನಿ ಯೋಜನೆಯಿಂದ ನಮ್ಮನ್ನು ವಂಚಿಸಲಾಗಿದೆ.ಇದು ನಮಗೆ ಸರಕಾರ ಮಾಡುತ್ತಿರುವ ಘೋರ ಅನ್ಯಾಯ.ಇದನ್ನು ಖಂಡಿಸಿ ನಾಳೆ ಮುಷ್ಕರ ನಡೆಸುತ್ತಿದ್ದೇವೆ   

ಗುಲ್ಬರ್ಗಾ ಮಹಾನಗರ ಪಾಲಿಕೆಯ ಪೌರ ಕಾರ್ಮಿಕ

ಇತರೆಲ್ಲಾ ಇಲಾಖೆಗಳಿಗಿಂತ ಹೆಚ್ಚು ಗಂಭೀರ ಹಾಗೂ ಅಹಿತಕರ ಮತ್ತು ಅನಾರೋಗ್ಯಕರ ಸ್ತಿತಿಯಲ್ಲಿ ಕೆಲಸ ಮಾಡುವವರು ಮಹಾನಗರ ಪಾಲಿಕೆ ಸಿಬ್ಬಂದಿ.ಕೊರೊನಾ ಬಂದ ಮೇಲಂತೂ ಇವರ ಕಾರ್ಯವೈಖರಿಯೇನು ಎನ್ನುವುದು ಸಾರ್ವಜನಿಕವಾಗಿ ಗೊತ್ತಾಗಿದೆ.ಮಹಾನಗರ ಪಾಲಿಕೆಗಳಲ್ಲಿ ಕೆಲಸ ಮಾಡುವವರ ಆಯಸ್ಸು-ಆರೋಗ್ಯ ಇತರೆ ಇಲಾಖೆಗಳಿವರಿಗಿಂತ ಕಡಿಮೆ ಎನ್ನುವುದನ್ನುಸರ್ಕಾರವೂ ಮನಗಂಡಿದೆ.

ಪ್ರತಿನಿತ್ಯ ತೆರಿಗೆ ವಸೂಲಾತಿ, ಸ್ವಚ್ಛತೆ,ನಗರ ಅಭಿವೃದ್ಧಿ, ಕಾಮಗಾರಿ, ಕೊವಿಡ್ ನಿಯಂತ್ರಣ ಕಾರ್ಯ ,ಜನರಿಗೆ ಮೂಲಭೂತ ಸೌಲಭ್ಯ,ವಿವಿಧ ನಾಗರಿಕ ಯೋಜನೆಗಳ ಲಾಭ ಕೊಡುವಂಥ ಕೆಲಸಕ್ಕೆ ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತೆ.ನಾವು ಎಲ್ಲಕ್ಕೂ ಬೇಕು,ಆದರೆ ಯೋಜನೆ ವಿಚಾರಕ್ಕೆ ಮಾತ್ರ ನಮ್ಮನ್ನು ದೂರ ಇಡಲಾಗಿದೆ. ಇದು ಯಾವ ನ್ಯಾಯ.ನಾವು ಸುಮ್ಮನಿದ್ದೆವು ಎಂದಾಕ್ಷಣ ಅದು ನಮ್ಮ ದೌರ್ಬಲ್ಯ-ಅಸಹಾಯಕತೆ ಎಂದೇನಲ್ಲ.ನಾವು ಸಿಡಿದೆದ್ದರೆ ಏನಾಗುತ್ತೆ ಎನ್ನೋದಕ್ಕೆ ಇತಿಹಾಸವೇ ಸಾಕ್ಷಿಯಿದೆ.ಇದನ್ನು ಸರ್ಕಾರ ಮರೆಯಬಾರದು. 

ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿ

ಅವರ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ಕಾಳಜಿಪೂರಿತವಾಗ ಮಾತನಾಡುವ  ಅದೇ ಸರ್ಕಾರ ಇವತ್ತು ಈ ಮಹಾನಗರ ಪಾಲಿಕೆಗಳ ಅಧಿಕಾರಿ/ನೌಕರರು ಹಾಗೂ ಪೌರ ಕಾರ್ಮಿಕರನ್ನೇ ಆರೋಗ್ಯ ಸಂಜೀವಿನಿ ಯೋಜನೆಯಿಂದ ವಂಚಿತಗೊಳಿಸಿರುವುದು ಯಾವ ನ್ಯಾಯ ಎನ್ನುವುದು ,ಮಹಾನಗರ ಪಾಲಿಕೆಗಳಲ್ಲಿ ಕೆಲಸ ಮಾಡುವ ಅನೇಕರ ಪ್ರಶ್ನೆ.

ಆರೋಗ್ಯ ಸಂಜೀವಿನಿ ಯೋಜನೆಯ ಅಗತ್ಯ ಇತರೆಲ್ಲರಿಗಿಂತ ಮಹಾನಗರ ಪಾಲಿಕೆ ಅಧಿಕಾರಿ ಸಿಬ್ಬಂದಿಗೆ ಹೆಚ್ಚಾಗಿದ್ದರೂ ಅವರನ್ನು ಅದರಿಂದ ಹೊರಗಿಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಸಹಜವಾಗೇ ಕಾಡುತ್ತಿದೆ.ಆರೋಗ್ಯದ ಸಮಸ್ಯೆಯಿಂದ ತುಸು ಹೆಚ್ಚಾಗೇ ಬಳಲುವಂಥವರು ನಮ್ಮ  ಪೌರ ಕಾರ್ಮಿಕರು.ಆಸ್ಪತ್ರೆಗಳಿಗೆ ಭೇಟಿ ಕೊಡೋದು ಅವರ ವೃತ್ತಿ ಜೀವನದ ಭಾಗವಾಗಿ ಹೋಗಿರುತ್ತದೆ.

ಇದು ಯೋಜನೆ ರೂಪಿಸಿರುವ ಸರ್ಕಾರಕ್ಕೆ ತಿಳಿದಿರದ ವಿಚಾರವೇನು ಅಲ್ಲ.ಆದ್ರೂ ಯೋಜನೆ ರೂಪಿಸುವಾಗ ಇತರೆಲ್ಲರಿಗಿಂತ ಹೆಚ್ಚು ಅರ್ಹವಾದ ಶ್ರಮಿಕ ಸಮುದಾಯವನ್ನು ಮರೆತದ್ದು ಸರಿಯಲ್ಲ.ಇದರ ಬಗ್ಗೆ ಮುಷ್ಕರ ನಡೆಸಿ ಸರ್ಕಾರದ ಗಮನ ಸೆಳೆಯಲು ಮಾಡಲಾಗುತ್ತಿುವ ಪ್ರಯತ್ನ ಶ್ಲಾಘನಾರ್ಹ.ಈ ಮುಷ್ಕರಕ್ಕೂ ಸರ್ಕಾರ ಮಣಿಯದಿದ್ದರೆ ಅದರಷ್ಟು ದೌರ್ಭಾಗ್ಯಪೂರ್ಣವಾದ ಸಂಗತಿ ಮತ್ತೊಂದಿರಲಾರದೇನೋ  ಅನ್ಸುತ್ತೆ.

Spread the love

Related Articles

Leave a Reply

Your email address will not be published.

Back to top button
Flash News