ಬ್ರಹ್ಮಪುತ್ರ… ಈಶಾನ್ಯ ಭಾರತದ ಜೀವನದಿಗಳಲ್ಲೊಂದು..

0

ಸಹಜವಾಗಿ ನದಿಗಳನ್ನು ಹೆಣ್ಣಿಗೆ ಹೋಲಿಸುವ ಸಂಪ್ರದಾಯ ನಮ್ಮ ಭಾರತೀಯ ಸಂಸ್ಕ್ರತಿದ್ದು.ಆದ್ರೆ ಬ್ರಹ್ಮಪುತ್ರ ನದಿಯನ್ನು ಗಂಡಿಗೆ ಹೋಲಿಸಲಾಗುತ್ತದೆ.ಇದ್ರಲ್ಲೇ ಬ್ರಹ್ಮಪುತ್ರ ನದಿಯ ತಾಕತ್ತುಗತ್ತುಗೈರತ್ತು ಏನನ್ನೋದು ಗೊತ್ತಾಗುತ್ತೆ.

ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ..ಬ್ರಹ್ಮಪುತ್ರ ನದಿಯ ಪ್ರಶಾಂತತೆ ಹಾಗೆಯೇ ಅದ್ರ ರೌದ್ರಭಯಾನಕತೆ ಎಂತದ್ದೆನ್ನೋದನ್ನು.ಅದನ್ನು ತಿಳಿಸುವ ಪ್ರಯತ್ನ ಮಾಡ್ತಿದೆ ಕನ್ನಡ ಫ್ಲ್ಯಾಶ್ ನ್ಯೂಸ್.ಈಶಾನ್ಯ ಭಾರತದಲ್ಲಿ ಪ್ರವಾಹ ಸೃಷ್ಟಿಯಾದ್ರೆ ಏನೆಲ್ಲಾ ಸಮಸ್ಯೆದುರಂತ ಸೃಷ್ಟಿಯಾಗ್ತವೆನ್ನೋದನ್ನು ತಿಳಿಸೇಳಬೇಕಿಲ್ಲ.

ಅದೇ ಬ್ರಹ್ಮಪುತ್ರ ನದಿ ಮತ್ತೊಮ್ಮೆ ತನ್ನ ವಿದ್ವಂಸಕತೆ ಮೆರೆಯೊಕ್ಕೆ ಸನ್ನದ್ಧವಾಗ್ತಿದೆ.ಇದಕ್ಕೆ ವೇದಿಕೆ ಸೃಷ್ಟಿಸ್ತಿರುವುದು ಮಳೆಗಾಲ.

ಯೆಸ್..ಇತ್ತೀಚಿಗೆ ಅಸ್ಸಾಂನ 33 ಜಿಲ್ಲೆಗಳಲ್ಲಿ ಆದ ವರುಣನ ರುದ್ರನರ್ತನ ಹಲವು ಪ್ರಾಣಅಪಾರ ಆಸ್ತಿಹಾನಿಗೆ ಕಾರಣವಾದದ್ದು ಎಲ್ಲರಿಗೂ ಗೊತ್ತೇ ಇದೆ.ಅಷ್ಟೇ ಅಲ್ಲ ನೆರೆಯ ಬಿಹಾರದಲ್ಲೂ 33 ಮಂದಿ ಪ್ರಾಣ ತೆತ್ತು,26 ಲಕ್ಷ ಸಂತ್ರಸ್ಥರಾದ್ರು.ಏಷ್ಯಾದ ಏಕೈಕ ಖಡ್ಗಮೃಗಗಳ ಅಭಯದಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಜಲಾವೃತ್ತವಾಯ್ತು.ಇದಷ್ಟೇ ಅಲ್ಲ ಪಕ್ಕದ ಅರುಣಾಚಲ ಪ್ರದೇಶದಲ್ಲೂ ನೆರೆ ಹಾವಳಿ ಭೀತಿ ಜನರನ್ನು ಕಾಡಹತ್ತಿದೆ.ಅಪಾರ ಜನಜಾನುವಾರುಆಸ್ತಿಪಾಸ್ತಿ ಹಾನಿಗೆ ಕಾರಣವಾಗುವ ಆತಂಕ ಹೆಚ್ಚಿದೆ.

ಈ ಎಲ್ಲಾ ಪ್ರಾಕೃತಿಕ ವಿಕೋಪಕ್ಕೂ ಕಾರಣವಾಗಲಿದೆ ಆ ಒಂದು ನದಿ..ಅದೇ ಬ್ರಹ್ಮಪುತ..

ಯೆಸ್..ಈಶಾನ್ಯ ಭಾರತದಲ್ಲಿ ಬಹುತೇಕ ಪ್ರವಾಹ ಸೃಷ್ಟಿಗೆ ಕಾರಣವೇ ಬ್ರಹ್ಮಪುತ್ರ ನದಿ.ದೇಶದ ಏಕೈಕ ಗಂಡುನದಿ ಇದು.ಅದು ಹುಟ್ಟಿ,ಹರಿಯುವುದು ಬಹುತೇಕ ನೆರೆಯ ಚೀನಾದಲ್ಲಿ.ಟಿಬೆಟ್ ನ ಒಂದು ಮೂಲೆಯಲ್ಲಿ ನೇಪಾಳದ ಸಮೀಪ ಹುಟ್ಟುವ ಬ್ರಹ್ಮಪುತ್ರ ನದಿಗೆ ಚೀನಿಯರು ಕೂಡ ತಮ್ಮದೇ ಹೆಸರೊಂದನ್ನು ಇಟ್ಟಿದ್ದಾರೆ.ಅದರ ಹೆಸರು. ಯಾರ್ಲಂಗ್ ಜಾಂಗ್ ಬೋ.ಅದೇ ರೀತಿ ಸಿಯಾಂಗ್ ಎಂತಲೂ ಇದನ್ನು ಕರೆಯುತ್ತಾರೆ.

ಚೀನಾದಲ್ಲಿ ಹುಟ್ಟುವ ಬ್ರಹ್ಮಪುತ್ರ ಅದೇ ದೇಶದಲ್ಲಿ 1,625 ಕಿಲೋಮೀಟರ್ ವ್ಯಾಪ್ತಿವರೆಗೂ ಹರಿಯುತ್ತದೆ.ಈ ಹರಿವಿನ ವ್ಯಾಪ್ತಿಯಲ್ಲೇ ನೂರಾರು ಉಪನದಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತದೆ.

ದಿ ಗ್ರೇಟ್ ಬೆಂಡ್ ಎಂದು ಕರೆಯಲಾಗುವ ಸ್ಥಳದಲ್ಲಿ ಇಂಗ್ಲೀಷ್ ನ ಯೂ ಆಕಾರದಲ್ಲಿ ತಿರುಗಿ ಭಾರತದ ಅರುಣಾಚಲಪ್ರದೇಶ ಪ್ರವೇಶಿಸುತ್ತೆ.ಇಡೀ ಅರುಣಾಚಲವನ್ನು ಆವರಿಸಿಕೊಂಡು ನಂತರ ಅಸ್ಸಾಮ್ ಪ್ರವೇಶಿಸುತ್ತೆ.ಅಲ್ಲಿಂದ ಬಾಂಗ್ಲಾದೇಶವನ್ನು ಸೇರಿ ಬಂಗಾಳ ಕೊಲ್ಲಿಯಲ್ಲಿ ವಿಲೀನವಾಗುತ್ತೆ.ಈ ನದಿಯ ಅಬ್ಬರದಿಂದ ನೂರಾರು ಸೀಳುಗಳಾಗಿ ನದಿ ರೂಪ ಪಡೆದಿವೆ.ಅಸ್ಸಾಮ್ ಹಾಗೂ ಬಾಂಗ್ಲಾದೇಶದಲ್ಲಿ ಇದು ಹತ್ತಾರು ಕಿಲೋಮೀಟರ್ ನಷ್ಟು ಅಗಲವಾಗಿದೆ.

ಅಂದ್ಹಾಗೆ ಬೃಹ್ಮಪುತ್ರ ಭಾರತದಲ್ಲಿ 918 ಕಿಲೋಮೀಟರ್ ಬಳಸಿಕೊಂಡು ಹರಿದ್ರೆ,ಪಕ್ಕದ ಬಾಂಗ್ಲಾದೇಶದಲ್ಲಿ 337 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಿಯುತ್ತೆ.ಅಸ್ಸಾಮ್,ಅರುಣಾಚಲಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳ ಪಾಲಿನ ಜೀವನದಿ ಎನಿಸಿಕೊಂಡಿರುವ ಬ್ರಹ್ಮಪುತ್ರ ಅಲ್ಲಿನ ಕೃಷಿ,ಮೀನುಗಾರಿಕೆ,ಸಾರಿಗೆ ಸಂಚಾರಕ್ಕೂ ಉಪಯುಕ್ತವಾಗಿದೆ.

ಪ್ರಶಾಂತವಾಗಿದ್ದರೆ ಜೀವನದಿ..ಕೆರಳಿದ್ರೆ ಸಾವಿನ ಸರಣಿಯನ್ನೇ ಸೃಷ್ಟಿಸುವ ಬ್ರಹ್ಮಪುತ್ರ ನದಿ ಇದ್ದಕ್ಕಿದ್ದಂತೆ ತನ್ನ ಪಾತ್ರ ಬದಲಿಸುವುದಕ್ಕೂ (ಕು)ಖ್ಯಾತಿ ಪಡೆದಿದೆ.ಅಂದಂತೆ ಈ ನದಿಯ ಮತ್ತೊಂದು ವಿಶೇಷ ಎಂದ್ರೆ ಅದರ ಹರಿವಿನ ವ್ಯಾಪ್ತಿಯಲ್ಲೆಲ್ಲಾ ಅದು ಸೃಷ್ಟಿಸುವ ಫಲವತ್ತಾದ ಮಣ್ಣು.ಈ ಮಣ್ಣಿನಲ್ಲಿ ಬಂಗಾರದ ಬೆಳೆ ಬೆಳೆಯಲಾಗ್ತಿರುವುದು ಎಲ್ಲರಿಗೂ ಗೊತ್ತಿರುವುದೇ..

ಅಸ್ಸಾಮ್,ಅರುಣಾಚಲ ಪ್ರದೇಶ,ಬಿಹಾರ್ ರಾಜ್ಯಗಳಲ್ಲಿ ಏನಾದ್ರೂ ನೆರೆ ಸೃಷ್ಟಿಯಾಗುತ್ತೆ ಎಂದ್ರೆ ಅದಕ್ಕೆ ಕಾರಣವೇ ಬ್ರಹ್ಮಪುತ್ರ ನದಿ.ಈ ನದಿ ಎಷ್ಟು ವರದಾನವಾಗಿ ಪರಿಣಮಿಸಿದೆಯೋ ಅಷ್ಟೇ ಮಾರಕವೂ ಕೂಡ.ಸಾಮಾನ್ಯವಾಗಿ ಅಸ್ಸಾಮ್ ಹಾಗೂ ಅರುಣಾಚಲಪ್ರದೇಶದಲ್ಲಿ ಹೆಚ್ಚು ಮಳೆಯಾದ್ರೆ ಬಿಹಾರದಲ್ಲಿ ಮಳೆಯೇ ಇರೊಲ್ಲ.ಇಷ್ಟಾದ್ರೂ ಇಲ್ಲೆಲ್ಲಾ ನೆರೆ ಉಂಟಾಗುತ್ತಲೇ ಇರುತ್ತೆ.ಇದಕ್ಕೆ ಮೂಲ ಕಾರಣವೇ ಬ್ರಹ್ಮಪುತ್ರ ನದಿ.

ಬ್ರಹ್ಮಪುತ್ರದ ಉಗಮ ಹಾಗೂ ಹರಿವು ನೇಪಾಳದಲ್ಲಿರುವುದರಿಂದ ಅಲ್ಲಿಂದ ಹಿಮಾಲಯಕ್ಕೆ ಹರಿದುಬರುವ ಭಾಗಮತಿ,ಕಮಲಾಬಲಾನ್,ಭೂತಾಹಿ ಬಲಾನ್,ಲಾಲ್ ಬಕಾಯಾ ಹಾಗೂ ಮಹಾನಂದ ನದಿಗಳು ಉಕ್ಕಿ ಹರಿದು ಬಿಹಾರದಲ್ಲೂ ಪ್ರವಾಹಕ್ಕೆ ಕಾರಣವಾಗುತ್ತವೆ.

ಮೊದ್ಲೇ ಹೇಳಿದಂಗೆ ಚೀನಾದ ಹರಿವು ಚೀನಾದಲ್ಲಿ ಯೂ ಇದೆ.ಬ್ರಹ್ಮಪುತ್ರ ನದಿ ಸೃಷ್ಟಿಸುವ ಪ್ರವಾಹವನ್ನು ಹಿಡಿದಿಡಲು ಈ ದೇಶಕ್ಕೂ ಆಗಿಲ್ಲ.ನೀರನ್ನು ಹಿಡಿದಿಡಲು ದೊಡ್ಡ ಅಣೆಕಟ್ಟುಗಳು ಇಲ್ಲದಿರುವುದೇ ಇದಕ್ಕೆ ಕಾರಣ.2014ರಲ್ಲಿ ನಿರ್ಮಾಣಗೊಂಡ ಚೀನಾದ ಬೃಹತ್ ಅಣೆಕಟ್ಟುಗಳಲ್ಲಾದ ಜಾಂಗ್ ಮು ನಿಂದ್ಲೂ ಸಾಧ್ಯವಾಗಿಲ್ಲ ಎಂದ್ರೆ ಬ್ರಹ್ಮಪುತ್ರದ ತಾಕತ್ತೇನೆನ್ನೋದು ಗೊತ್ತಾಗುತ್ತೆ.ಹಾಗಾಗಿನೇ ನದಿಯಲ್ಲಿ ನೀರಿನ ಕೊರತೆಯಾದಾಗ ಅದನ್ನು ಹಿಡಿದಿಟ್ಟು ಚೀನಾ ಬಿಹಾರ್ ನಲ್ಲಿ ಬರ ಸೃಷ್ಟಿಸುತ್ತೆ,ಅದೇ ರೀತಿ ನೀರು ಹೆಚ್ಚಾದಾಗ ಅದನ್ನು ಬಿಟ್ಟು ಪ್ರವಾಹಕ್ಕೆ ಕಾರಣವಾಗುತ್ತಿದೆ.ಹಾಗೆಯೇ ಚೀನಾ ಈ ಬ್ರಹ್ಮಪುತ್ರ ನದಿಯ ನೀರನ್ನು ಹಿಡಿದಿಟ್ಟುಕೊಂಡು ಉತ್ತರ ಭಾಗಕ್ಕೆ ಕೊಂಡೊಯ್ಯುವ ಯೋಜನೆಯೊಂದನ್ನು ಮಾಡ್ತಿದೆ.ಎಲ್ಲೋ ರಿವರ್ ಜೊತೆಗೆ ಪ್ರತಿ ವರ್ಷ 20 ಸಾವಿರ ಕೋಟಿ ಕ್ಯೂಬಿಕ್ ಮೀಟರ್ ನೀರನ್ನು ಸೇರಿಸುವ ಈ ಯೋಜನೆಗೆ ಈಗಾಗ್ಲೇ ನೀಲನಕ್ಷೆ ಸಿದ್ಧವಾಗ್ತಿದೆ ಕೂಡ.ಹೀಗಾಗಿದ್ದೇ ಆದಲ್ಲಿ ಭಾರತಕ್ಕೆ ಬ್ರಹ್ಮಪುತ್ರ ನದಿಯ ಪಾಲು ಕೈ ತಪ್ಪೋಗಲಿದೆ.

ಬ್ರಹ್ಮಪುತ್ರ ನದಿಯ ನೀರಿನ ಪ್ರಮಾಣ ಹಾಗೂ ಅದರ ಪ್ರಯೋಜನ ಭಾರತಕ್ಕಿಂತ ಚೀನಾಕ್ಕೆ ಹೆಚ್ಚು ದೊರೆಯುತ್ತಿದೆ ಎನ್ನುವ ಮಾಹಿತಿಗಳಿವೆ.ಏಕೆಂದ್ರೆ ಕೇಂದ್ರ ಜಲ ಆಯೋಗವೇ ಹೇಳುವಂತೆ ಬ್ರಹ್ಮಪುತ್ರ ನದಿಯ ಒಟ್ಟು ಪಾತ್ರದಲ್ಲಿ ಶೇಕಡಾ 50 ರಷ್ಟು ಪಾಲು ಟಿಬೆಟ್ ಗೆ ಸಿಕ್ಕಿದೆ.ಇದರ ಹೋಲಿಕೆಯಲ್ಲಿ ಭಾರತಕ್ಕೆ ಸಿಗ್ತಿರುವುದು ಕೇವಲ ಶೇಕಡಾ 34 ಮಾತ್ರ.ಇನ್ನುಳಿದಂತೆ ಶೇಕಡಾ 16 ರಷ್ಟು ಭೂತಾನ್,ಬಾಂಗ್ಲಾದ ಪಾಲಾಗ್ತಿದೆ.

ಬ್ರಹ್ಮಪುತ್ರ ನದಿಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಪ್ರಯೋಜನವನ್ನು ನೆರೆಯ ಚೀನಾ ಪಡೆಯುತ್ತಿದ್ದರೆ,ಕಡಿಮೆಯಾದಾಗ ನೀರನ್ನು ಹಿಡಿದಿಟ್ಟುಕೊಂಡು ಬರ,ಹೆಚ್ಚಾದಾಗ ಅದನ್ನು ಹರಿಯಬಿಟ್ಟು ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಕೆಲಸ ಮಾಡ್ತಿದೆ ಚೀನಾ.ಭಾರತದಲ್ಲಿ ಬ್ರಹ್ಮಪುತ್ರದಿಂದ ಕೆಡುಕಾಗ್ತಿರುವುದು ಪಕ್ಕದ ಚೀನಾದಿಂದ್ಲೇ.ಇದೇ ವೇಳೆ ಚೀನಾ ಗ್ರೇಟ್ ಬೆಂಡ್ ನದಿ ಪ್ರದೇಶದಲ್ಲಿ 9 ಅಣೆಕಟ್ಟು ನಿರ್ಮಿಸುವ ಯೋಜನೆ ಕೂಡ ಹಾಕ್ಕೊಂಡಿದೆ.ಹಾಗಾಗಿದ್ದೇ ಆದಲ್ಲಿ,ಬ್ರಹ್ಮಪುತ್ರ ನದಿಗೆ ಹೊಂದಿಕೊಂಡಿರುವ ಹಿಮಾಲಯಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.

ಬ್ರಹ್ಮಪುತ್ರ ನದಿಯ ಪ್ತಯೋಜನವನ್ನು ಚೀನಾದಷ್ಟೇ ಪ್ರಮಾಣದಲ್ಲೇ ಪಡೆದುಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ.ಈ ಹಿನ್ನೆಲೆಯಲ್ಲಿ ಬ್ರಹ್ಮಪುತ್ರ ಮಂಡಳಿಯನ್ನು ಪ್ರತ್ಯೇಕವಾಗಿ ರಚಿಸಿದೆ.1,300 ಕೋಟಿ ಕ್ಯೂಬಿಕ್ ಮೀಟರ್ ನೀರು ಸಂಗ್ರಹಿಸುವ,9,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿದೆ.

ಅದೇನೇ ಆಗಲಿ,ಬ್ರಹ್ಮಪುತ್ರ ನದಿಯನ್ನು ಸಮಗ್ರವಾಗಿ ಬಳಸಿಕೊಳ್ಳುವ ಕೆಲಸ ಕೇಂದ್ರ ಸರ್ಕಾರದ ಮೊದಲ ಆಧ್ಯತೆಯಾಗಬೇಕಿದೆ.ಪಕ್ಕದ ಚೀನಾ ಬ್ರಹ್ಮಪುತ್ರನ ಮೇಲೆ ಪೂರ್ಣ ಸ್ವಾಮ್ಯ ಸಾಧಿಸುವ ಮುನ್ನ ಭಾರತ ಅದರ ಮೇಲೆ ಪ್ರಭುತ್ವ ಸಾಧಿಸ್ಬೇಕಾದ ತುರ್ತಿದೆ.ನದಿಯಲ್ಲಿರುವ ಕೋಟ್ಯಾಂತರ ಕ್ಯೂಬಿಕ್ ಹೂಳನ್ನು ತೆಗೆಸುವ ಕೆಲಸ ನಡೆಯಬೇಕಿದೆ.ಹಾಗಾದಲ್ಲಿ ಮಾತ್ರ ಬ್ರಹ್ಮಪುತ್ರ ನದಿ ಸರ್ವಕಾಲಕ್ಕೂ ಜೀವನದಿಯಾಗಿ ಉಳಿಯಲು ಸಾಧ್ಯವಾಗಬಲ್ಲದೇನೋ..

Spread the love
Leave A Reply

Your email address will not be published.

Flash News