ಎಣ್ಣೆ ಏಟಿಗೆ ಅಮಾಯಕನ ಬಲಿ..

0

 

ಎಣ್ಣೆ ಏಟಿಗೆ ಅಮಾಯಕನ ಬಲಿ..

    ಹೋಂ ಗಾರ್ಡ್ ಹಾಗೂ ಆತನ ತಂಡ ಬೆಂಗಳೂರಿನಲ್ಲಿ ಯುವಕನನ್ನು‌ ಹಲ್ಲೆ ನಡೆಸಿ ಕೊಂದಿದೆ..ಜೆಪಿ ನಗರ ಠಾಣೆ ಹೋಂ ಗಾರ್ಡ್ ಚಂದ್ರ ಅಂಡ್ ಟೀಂ‌ ಸುಹಾಸ್ ಎನ್ನುವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ.

ಬೆಂಗಳೂರು:ಹೋಂ ಗಾರ್ಡ್ ಗಳೆಂದ್ರೆ ಕೈ ಲಾಗದವ್ರು ಎಂದ್ಕೋಬೇಡಿ…ಗ್ರಹಚಾರ ಕೆಟ್ಟರೆ ಅವರೂ ಕೊಲೆಗಾರರಾಗ್ತಾರೆ ಎನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.

ಇಲ್ಲೋರ್ವ ಹೋಂ ಗಾರ್ಡ್ ಬೆಂಗಳೂರಿನಲ್ಲಿ ಯುವಕನನ್ನು‌ ಹಲ್ಲೆ ನಡೆಸಿ ಕೊಂದಿದ್ದಾನೆ.ಜೆಪಿ ನಗರ ಠಾಣೆ ಹೋಂ ಗಾರ್ಡ್ ಚಂದ್ರ ಅಂಡ್ ಟೀಂ‌ ಸುಹಾಸ್ ಎನ್ನುವ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ.

ಚನ್ನಪಟ್ಟಣ ಮೂಲದ ಸುಹಾಸ್,ಬಾರ್ ವೊಂದ್ರಲ್ಲಿ ಕುಡಿಯುವಾಗ ಅದೇ ಟೇಬಲ್ ಪಕ್ಕದಲ್ಲಿ ಕುಳಿತು ಕುಡಿಯುತ್ತಿದ್ದ ಚಂದ್ರ ಕಿರಿಕ್ ಶುರು ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ‌ ಚಂದ್ರ ಹಾಗೂ ಮೂವರು‌ ಸುಹಾಸ್ ನನ್ನು ಮನಸೋಇಚ್ಛೆ ಥಳಿಸಿ ಕೊಂದಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ಜೆಪಿನಗರ ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಚಂದ್ರ ಕೊಲೆ ನಡೆದ ಬೆನ್ನಲ್ಲಿ ಪರಾರಿಯಾಗಿದ್ದಾನೆ.ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love
Leave A Reply

Your email address will not be published.

Flash News