ಸ್ನೇಕ್ ಶ್ಯಾಂ ಸೃಷ್ಟಿಸಿದ ವಿಶ್ವದಾಖಲೆ ಏನ್ ಗೊತ್ತಾ/kannadaflashnews

0

(ಕನ್ನಡ ಫ್ಲ್ಯಾಶ್ ನ್ಯೂಸ್.ಕಾಂ-ಮೈಸೂರು ಪ್ರತಿನಿಧಿಯಿಂದ)

ಮೈಸೂರು:ಉರಗಪ್ರೇಮಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಹೊಸದೊಂದು ವಿಶ್ವದಾಖಲೆ ಬರೆದಿದ್ದಾರೆ.ಅದೇನ್ ಗೊತ್ತಾ,ಯಾವೊಬ್ಬ  ಉರಗಪ್ರೇಮಿ ಅಥ್ವಾ ಸಂರಕ್ಷಕ ಮಾಡದ ಸಾಧನೆ ಅದು..80 ಸಾವಿರ ಹಾವುಗಳನ್ನು ರಕ್ಷಿಸಿದ ಸಾಧನೆ.ಅದು ಸಾಧ್ಯವಾದದ್ದು ಅವರಿಗೆ ಮೈಸೂರಿನ  ಇನ್ ಫೋಸಿಸ್ ಕ್ಯಾಂಪಸ್ ನಲ್ಲಿ.

 

ವಿಶ್ವದಾಖಲೆ ವೀರ ಶ್ಯಾಮ್ ಸ್ಮೈಲ್ ವಿತ್ ಸ್ನೇಕ್
ವಿಶ್ವದಾಖಲೆ ವೀರ ಶ್ಯಾಮ್ ಸ್ಮೈಲ್ ವಿತ್ ಸ್ನೇಕ್.

 

ಕ್ಯಾಂಪಸ್ ನಲ್ಲಿ ಹಾವು ಬಂದಿದೆ ಎಂಬ ಕರೆಯ ಹಿನ್ನಲೆಯಲ್ಲಿ ಧಾವಿಸಿದ ಸ್ನೇಕ್ ಶ್ಯಾಂ,ಅಪಾಯಕಾರಿ ಕೊಳಕಮಂಡಲ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಈ ಮೂಲಕ ಅವರು 80 ಸಾವಿರಕ್ಕು ಹೆಚ್ಚು ಹಾವುಗಳನ್ನು ಸಂರಕ್ಷಿಸಿ ವಿಶ್ವದ  ಏಕೈಕ  ಉರಗತಜ್ಞ ಎನ್ನುವ ಕೀರ್ತಿಗೆ ಭಾಜನರಾದ್ರು.

1997 ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಸ್ನೇಕ್ ಶ್ಯಾಂ,40 ವರ್ಷದಿಂದ ಈವರೆಗೂ 80 ಸಾವಿರ ಹಾವುಗಳನ್ನು ಹಿಡಿದಿದ್ರೆ ಅಧೀಕೃತ ದಾಖಲೆನೇ 35 ಸಾವಿರದಷ್ಟಿದೆ ಎನ್ನಲಾಗಿದೆ.ಹಾವುಗಳು ಎಲ್ಲೇ ಇರಲಿ,ಎಷ್ಟೇ ಅಪಾಯಕಾರಿ ಮಟ್ಟದಲ್ಲಿರಲಿ,ತಕ್ಷಣ ಸ್ಥಳಕ್ಕೆ ಧಾವಿಸಿ ಅವುಗಳನ್ನು ಹಿಡಿದು ಸಂರಕ್ಷಿಸುವ ಶ್ಯಾಂ,ಇದೇ ಜನ ಪ್ರಿಯತೆ ಹಿನ್ನಲೆಯಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಮಹಾನಗರ ಪಾಲಿಕೆ ಸದಸ್ಯರೂ ಆದ್ರು.

ಹಾವು ಹಿಡಿಯುವುದರಲ್ಲಿ ನಿಪುಣರೂ ಆಗಿರುವ ಸ್ನೇಕ್ ಶ್ಯಾಂ,ಇದೇ ಕಾರಣಕ್ಕೆ ವಿಶ್ವಮಟ್ಟದಲ್ಲೂ ಹೆಸರಾಗಿದ್ದಾರೆ.ಅವರ ವಿಶ್ವದಾಖಲೆಯ ಸಾಧನೆಗೆ ಕನ್ನಡ ಫ್ಲಾಶ್ ನ್ಯೂಸ್ ಕೂಡ ಶ್ಯಾಂ ಅವರಿಗೆ ಅಭಿನಂದನೆ ಸಲ್ಲಿಸುತ್ತೆ.ಅವರ ಈ ಉರಗಸಂರಕ್ಷಣೆಯ ಅಭಿಯಾನ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತದೆ.

ವಿಶ್ವದಾಖಲೆ ಸೃಷ್ಟಿಸಿದ ಖುಷಿಯಲ್ಲಿ ಸ್ನೇಕ್ ಶ್ಯಾಮ್ ಚಿಯರ್ ಅಪ್..
ವಿಶ್ವದಾಖಲೆ ಸೃಷ್ಟಿಸಿದ ಖುಷಿಯಲ್ಲಿ ಸ್ನೇಕ್ ಶ್ಯಾಮ್ ಚಿಯರ್ ಅಪ್..
ಸ್ನೇಕ್ ಶ್ಯಾಮ್ ವಿಶ್ವದಾಖಲೆಗೆ ಸಾಕ್ಷಿಯಾದ ಮೈಸೂರು ಇನ್ಫೋಸಿಸ್ ಕ್ಯಾಂಪಸ್
ಸ್ನೇಕ್ ಶ್ಯಾಮ್ ವಿಶ್ವದಾಖಲೆಗೆ ಸಾಕ್ಷಿಯಾದ ಮೈಸೂರು ಇನ್ಫೋಸಿಸ್ ಕ್ಯಾಂಪಸ್
ಸ್ನೇಕ್ ಶ್ಯಾಮ್ ಅಪಾಯಕಾರಿ ಕೊಳಕುಮಂಡಲ ಹಾವನ್ನು ಸಂರಕ್ಷಿಸುತ್ತಿರುವ ದೃಶ್ಯ..
ಸ್ನೇಕ್ ಶ್ಯಾಮ್ ಅಪಾಯಕಾರಿ ಕೊಳಕುಮಂಡಲ ಹಾವನ್ನು ಸಂರಕ್ಷಿಸುತ್ತಿರುವ ದೃಶ್ಯ..
Spread the love
Leave A Reply

Your email address will not be published.

Flash News