ಗಜ‌ ಸಂತ್ರಸ್ಥರಿಗೆ ಗ್ರಹಭಾಗ್ಯ ಕೊಟ್ಟ ತಲೈವಾ…

0

(ಕನ್ನಡ ಫ್ಲಾಶ್ ನ್ಯೂಸ್ .ಕಾಂ)

ಚೆನ್ನೈ:ಕಳೆದ ವರ್ಷ ತಮಿಳ್ನಾಡಿನಲ್ಲಿ ಗಜ ಚಂಡ ಮಾರುತ ಸಂಭವಿಸಿ ಅಪಾರ ಪ್ರಮಾಣದ ಜೀವಹಾನಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.ಈ ದುರಂತದಲ್ಲಿ 50 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.ದುರಂತದಲ್ಲಿ ಸಾವಿರಾರು ಜನ ನೆಲೆ ಕಳಕೊಂಡಿದ್ರು.ಅವರಿಗೆ ಎಷ್ಟರ ಮಟ್ಟಿಗೆ ಸರ್ಕಾರ ಪುನರ್ವಸತಿ ಕಲ್ಪಿಸ್ತೋ ಇಲ್ವೋ ಗೊತ್ತಿಲ್ಲ.ಆದ್ರೆ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಒಂದಷ್ಟು ಸಂತ್ರಸ್ಥರ ಮುರಿದು ಹೋದ ಬದುಕುಗಳನ್ನು ಮತ್ತೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಗಜ ಚಂಡಮಾರುತದಲ್ಲಿ ಸಂತ್ರಸ್ಥರಾದವರಿಗೆ ನಿರ್ಮಿಸಿಕೊಡಲಾದ ಮನೆಗಳ ಕೀಯನ್ನು ಹಸ್ತಾಂತರಿಸಿದ ತಲೈವಾ
ಗಜ ಚಂಡಮಾರುತದಲ್ಲಿ ಸಂತ್ರಸ್ಥರಾದವರಿಗೆ ನಿರ್ಮಿಸಿ ಕೊಡಲಾದ ಮನೆಗಳ ಕೀಯನ್ನು ಹಸ್ತಾಂತರಿಸಿದ ತಲೈವಾ
ಬಲಗೈನಿಂದ ಮಾಡುವ ಉಪಕಾರ ಎಡಗೈಗೆ ಗೊತ್ತಾಗಬಾರದೆನ್ನುವುದಕ್ಕೆ ರಜನಿಯ ಮಹಾದಾನವೇ ಶ್ರೇಷ್ಟ ಸಾಕ್ಷಿ
ಬಲಗೈನಿಂದ ಮಾಡುವ ಉಪಕಾರ ಎಡಗೈಗೆ ಗೊತ್ತಾಗಬಾರದೆ ನ್ನುವುದಕ್ಕೆ ರಜನಿಯ ಮಹಾದಾನವೇ ಶ್ರೇಷ್ಟ ಸಾಕ್ಷಿ

ಅದನ್ನು ಕೇವಲ ಹೇಳಿಕೆಗೆ ಸೀಮಿತಗೊಳಿಸದೆ ಕಾರ್ಯಗತ ಮಾಡಿದ್ದಾರೆ ಕೂಡ.2018 ರ ನವೆಂಬರ್ ನಲ್ಲಿ ನಾಗಪಟ್ಟಣಂ ನಲ್ಲಿ ಸಂಭವಿಸಿದ್ದ ಗಜ ಚಂಡಮಾರುತದಿಂದ ನೆಲೆ ಕಳಕೊಂಡವ್ರ ಪೈಕಿ 10 ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು ಹೃದಯವೈಶಾಲ್ಯತೆ ಮೆರೆದಿದ್ದಾರೆ.

ಆ ಮನೆಗಳ ಕೀಗಳನ್ನು ಇತ್ತೀಚೆಗೆ ತಲೈವಾ ಹಸ್ತಾಂತರಿಸಿದ್ದಾರೆ ಕೂಡ.ಮನೆ ಕಳಕೊಂಡವ್ರ ಪಾಲಿಗೆ ರಜನಿಕಾಂತ್ ನಿಜಕ್ಕೂ ತಲೈವಾ ಆಗಿ ಪರಿಣಮಿಸಿದ್ದಾರೆ.

ಹೃದಯವೈಶಾಲ್ಯ ತೆ ಎಂದ್ರೆ ಇದಲ್ವೇ..ಬಲಗೈ ಕೊಡೋ ವಿಷಯ ಎಡಗೈಗೆ ಗೊತ್ತಾಗದಂತೆ ನೀಡೋ ದಾನವೇ ಸರ್ವಶ್ರೇಷ್ಟ ಎನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ..

 

Spread the love
Leave A Reply

Your email address will not be published.

Flash News