ಪಿಕ್ ಅಂಡ್ ಡ್ರಾಪ್ ಗಾಗಿ ನಡೆದೋಯ್ತು ಮರ್ಡರ್/kannadaflashnews

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ) 

ಕೊಲೆಯಾದ ಆಟೋ ಡ್ರೈವರ್ ಮನೋಜ್
ಕೊಲೆಯಾದ ನತದೃಷ್ಟ  ಆಟೋ ಡ್ರೈವರ್ ಮನೋಜ್

ಬೆಂಗಳೂರು:ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಇದು.ಅದೇಕೋ ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗ್ತಲೇ ಇವೆ.ಇದಕ್ಕೆ ಸೇರ್ಪಡೆ ಎನ್ನುವಂತೆ ಮತ್ತೊಂದು ಕೊಲೆ ತೃತೀಯ ಲಿಂಗಿಗಳ ಡ್ರಾಪ್, ಪಿಕ್ ಅಪ್ ವಿಚಾರವಾಗಿ ನಡೆದೋಗಿದೆ.

ಮನೋಜ್ ಎನ್ನುವ ಆಟೋ ಡ್ರೈವರ್ ಕೊಲೆಯಾದ ನತದೃಷ್ಟ.ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಮನೋಜ್ ಎಂಬ ಆಟೋಡ್ರೈವರ್ ನಿತ್ಯ ತೃತೀಯ ಲಿಂಗಿಗಳನ್ನ ಹೇಳಿದ್ದ ಜಾಗಕ್ಕೆ ಡ್ರಾಪ್ ಮಾಡ್ತಿದ್ದ.ಕಳೆದ ಮೂರು ದಿನಗಳ ಹಿಂದೆ ಆತ ಊರಿಗೆ ಹೋಗಿದ್ದ .ವಾಪಸ್ ಬಂದಾಗ ಅವರನ್ನು ಬೇರೊಬ್ಬ ಆಟೊ ಡ್ರೈವರ್ ಪಿಕ್ ಅಂಡ್ ಡ್ರಾಪ್ ಮಾಡುತ್ತಿದ್ದ,ಇದರಿಂದ ಕೆಂಡಾಮಂಡಲವಾದ ಮನೋಜ್ ಆಟೋ ಡ್ರೈವರ್ ಜತೆ ಜಗಳವಾಡಿಕೊಂಡಿದ್ದಾನೆ.ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರಬಹುದೆನ್ನುವುದು ದೂರು ದಾಖಲಿಸಿಕೊಂಡು ಕೊಲೆಗಾರರ ಪತ್ತೆಯಲ್ಲಿ ತೊಡಗಿರುವ ಕಾಮಾಕ್ಷಿಪಾಳ್ಯ ಪೊಲೀಸರ ಶಂಕೆ.ತನಿಖೆ ಮುಂದುವರೆದಿದೆ.

Spread the love
Leave A Reply

Your email address will not be published.

Flash News