ಉಗ್ರರದಮನಕ್ಕೆ ಬೆಂಗಳೂರು ಪೊಲೀಸ್ ಸಂಕಲ್ಪ/Kannadaflashnews

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು:ರಾಜ್ಯ ಉಗ್ರರ ತಾಣವಾಗುವ ಆತಂಕದಲ್ಲಿ ಉಗ್ರವಾದಿ ಚಟುವಟಿಕೆ ಹತ್ತಿಕ್ಕಲು ರಾಜ್ಯ ಪೊಲೀಸ್ರು ಸಂಕಲ್ಪ ತೊಟ್ಟಿದ್ದಾರೆ.ರಾಜ್ಯದಲ್ಲಿ ಉಗ್ರರ ಹೆಜ್ಜೆ ಗುರುತುಗಳು ಮೂಡಲಾರಂಭಿಸಿವೆ ಎನ್ನೋದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿಯಲ್ಲಿ ಅನುಮಾನಸ್ಪಾದ ವಸ್ತು ಸ್ಪೋಟವಾಗಿತ್ತು.ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ರುಹೈ ಅಲರ್ಟ್ ಆಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಇದರ ಭಾಗವಾಗಿ,ಬಾಂಬ್ ಸ್ಕ್ವಾಂಡ್ ಹಿರಿಯ ಅಧಿಕಾರಿಗಳ ಎದುರು ಬೆಂಗಳೂರಿನಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿತು.ಪ್ರಮುಖ ನಗರಗಳಲ್ಲಿ ಬಾಂಬ್ ಪತ್ತೆಯಾದಾಗ ಏನು ಮಾಡಬೇಕು.?ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು..ನಮ್ಮಲ್ಲಿರುವ ಆಯುಧಗಳನ್ನು ಬಾಂಬ್ ನಿಷ್ಕ್ರೀಯಗೊಳಿಸಲು ಹೇಗೆ ಬಳಸಬೇಕು ಎನ್ನುವುದರ ಸಮಗ್ರ ಮಾಹಿತಿಯ ಡೆಮೋ ನೀಡಲಾಯ್ತು.


ರಿಚ್ಮಂಡ್ ರಸ್ತೆಯ ಕೆಎಸ್ ಆರ್ ಪಿ ಬ್ಯಾಟಲಿಯನ್ ಗ್ರೌಂಡ್ ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ  ಬೆಂಗಳೂರು ನಗರ ಕಮೀಷನರ್ ಭಾಸ್ಕರ್ ರಾವ್ ,ಹಿರಿಯ ಅಧಿಕಾರಿ ಕಮಲ್ ,ಸಿಐಡಿ ಮುಖ್ಯಸ್ಥ ಪ್ರವೀಣ್ ಸೂದ್ ಭಾಗವಹಿಸಿ ಮಾಹಿತಿ ಪಡೆದು ಉಪಯುಕ್ತ ಸಲಹೆ ನೀಡಿದರು.ಸಾರ್ವಜನಿಕರು ಅನುಮಾನಸ್ಪಾದ ವಸ್ತುಗಳು ಕಂಡು ಬಂದರೆ ಹೇಗೆ ವರ್ತಿಅಬೇಕು.ಯಾವುದೇ ಕಾರಣಕ್ಕೂ ಯಾವುದೇ ವಸ್ತುವನ್ನು ಮುಟ್ಟದಂತೆ ಪೊಲೀಸರು ಹೇಗೆ ತಡೆಯಬೇಕು ಎನ್ನುವುದರ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಬಗ್ಗೆ ಕಾರ್ಯಾಗಾರದಲ್ಲಿ ಪೊಲೀಸರಿಗೆ ತಿಳಿಸಿಕೊಡಲಾಯ್ತು. ಮಡಿವಾಳ, ಚರ್ಚ್ ಸ್ಟ್ರೀಟ್ ,ಮಲೇಶ್ವರಂ ಬಾಂಬ್ ಬ್ಲಾಸ್ಟ್ ಜೊತೆಗೆ ಬೆಂಗಳೂರು ದೊಡ್ಡಬಳ್ಳಾಪುರ ಹಾಗೂ ರಾಮನಗರ ಉಗ್ರರ ಬಂಧನವಾದಂಥ ಘಟನೆ ಗಮನದಲ್ಲಿಟ್ಟುಕೊಂಡು ಐಎಸ್ ಡಿಯಿಂದ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.

Spread the love
Leave A Reply

Your email address will not be published.

Flash News