ಬೆಂಗಳೂರಿನ ಹೊರವಲಯದಲ್ಲಿ ಹಾಡಹಗಲೇ ಬರ್ಭರ ಕೊಲೆ

0

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಹೆಣ ಬಿದ್ದಿದೆ.ಯಾವ್ ಕಾರಣಕ್ಕೆ ಕೊಲೆಯಾಗಿದೆ ಎಂದು ನಿಖರವಾಗಿ ತಿಳಿದುಬಂದಿಲ್ಲವಾದ್ರೂ ಹಳೇ ವೈಷಮ್ಯಕ್ಕೋ ಅಥವಾ ಹೆಣ್ಣಿನ ವಿಷಯಕ್ಕೋ  ಬಹುತೇಕ ಈ ದುಷ್ಕ್ರತ್ಯ ನಡೆದಿರಬಹುದೆನ್ನುವ ಅಂದಾಜಿನಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ.

ಹಾಡಹಗಲೇ ಬೈಕ್ ನಲ್ಲಿ ಫಾಲೋ ಮಾಡಿ ರೌಡಿಶೀಟರ್ ಮಂಜನನ್ನು ಕೊಲೆ ಮಾಡಲಾದ ಸ್ಥಳ
ಹಾಡಹಗಲೇ ಬೈಕ್ ನಲ್ಲಿ ಫಾಲೋ ಮಾಡಿ ರೌಡಿಶೀಟರ್ ಮಂಜನನ್ನು ಕೊಲೆ ಮಾಡಲಾದ ಸ್ಥಳ
ಕೊಲೆಯಾದ ರೌಡಿಶೀಟರ್ ಮಂಜ
ಕೊಲೆಯಾದ ರೌಡಿಶೀಟರ್ ಮಂಜ ಅಲಿಯಾಸ್ ಮಂಜುನಾಥ್

ಇಲ್ಲಿ ಕೊಲೆಯಾದವನು ರೌಡಿ ಶೀಟರ್.ಆತನನ್ನು  ಮಂಜುನಾಥ ಅಲಿಯಾಸ್ ಮಂಜು ಎಂದು ಗುರುತಿಸಲಾಗಿದೆ.ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಬೀಸನಹಳ್ಳಿಯಲ್ಲಿ ಈ ಕೃತ್ಯ ನಡೆದೋಗಿದೆ.

ಮಂಜ ಯುವತಿಯ ಜತೆಯಲ್ಲಿ ಹೋಗುತ್ತಿರುವಾಗ ಆತನನ್ನು ಡಿಯೋ ಬೈಕ್ ನಲ್ಲಿ ಮೂವರು ಫಾಲೋ ಮಾಡ್ಕೊಂಡು ಬಂದಿದ್ದಾರೆ.ಅದರ ಸಣ್ಣ ಸುಳಿವು ಇಲ್ಲದೆ ಜಾಲಿಯಾಗಿ ರೈಡ್ ಮಾಡುತ್ತಿರುವಾಗ್ಲೇ ಆತನ ಮೇಲೆರಗಿ ಅಟ್ಯಾಕ್ ಮಾಡಿ ಕೊಂದಾಕಿದ್ದಾರೆ.ಘಟನೆಯನ್ನು ಕಣ್ಣಾರೆ ಕಂಡ ಯುವತಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಘಟನೆ ಹಾಡಹಗಲೇ ನಡೆದಿದ್ದು ಕೊಲೆಗಾರರು ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.  ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಶೀಘ್ರವೇ  ಆರೋಪಿಗಳ ಹೆಡೆಮುರಿಕಟ್ಟುವಂತೆ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 

ರೌಡಿ ಶೀಟರ್ ಹತ್ಯೆ ನಡೆದಿದ್ದು ಹೀಗೆ…ನೋಡಿ…

  

Spread the love
Leave A Reply

Your email address will not be published.

Flash News