ಸುಪಾರಿ ಮರ್ಡರ್ ಜಸ್ಟ್ ಮಿಸ್ಟ್ !

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಕ್ರೈಂ ಬ್ಯೂರೋ)

ಬೆಂಗಳೂರು: ಸಿಸಿಬಿ ಪೊಲೀಸರ ಸಮಯಪ್ರಜ್ಞೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ನಡೀಬೋದಾಗಿದ್ದ ಬಹುದೊಡ್ಡ ಅನಾಹುತ ತಪ್ಪಿದೆ .ಬೆಂಗಳೂರಿನಲ್ಲಿರುವ ರೌಡಿಶೀಟರ್ ತೌಸಿಫ್  ಹತ್ಯೆಗೆ ಮುಂಬೈನಿಂದ ಬಂದಿದ್ದ ಸುಪಾರಿ ಹಂತಕರು ನಡೆಸಿದ್ದ ಪ್ಲ್ಯಾನ್ ಫ್ಲಾಪ್ ಆಗಿದೆ.ಇಂತದ್ದೊಂದು ಅನಾಹುತದ ಸುಳಿವು ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿ ಸುಪಾರಿ ಹಂತಕರ ಜಾಲವನ್ನು ಬಂಧಿಸಿದ್ದಾರೆ.

ಮುಸ್ಲಿಂ ಭೂಗತಜಗತ್ತಿನ ಡಾನ್ ಆಗ್ಲಿಕ್ಕೆ ಹೊರಟಿರುವ ರೌಡಿ ತೌಸಿಫ್
ಮುಸ್ಲಿಂ ಭೂಗತಜಗತ್ತಿನ ಡಾನ್ ಆಗ್ಲಿಕ್ಕೆ ಹೊರಟಿರುವ ರೌಡಿ ತೌಸಿಫ್
ರೌಡಿ ತೌಸಿಫ್ ಬಂಟರು
       ರೌಡಿ ತೌಸಿಫ್ ಬಂಟರು

ಭೂಗತ ಜಗತ್ತಿನ ಸಧ್ಯದ ಡಾನ್ ,ರಶೀದ್ ಮಲಬಾರಿಯಿಂದ ರೌಡಿ ತೌಸಿಫ್ ಹತ್ಯೆಗೆ ಸುಪಾರಿ ಪಡೆದು ಬೆಂಗಳೂರಿಗೆ ಬಂದಿದ್ದ ಹಂತಕರ ಪಡೆ ತೌಸಿಫ್ ಚಲನವಲನದ ಮೇಲೆ ನಿಗಾ ಇಟ್ಟಿತ್ತು.ಆತ ಹೋಗಿ ಬರೋ ಕಡೆಯಲ್ಲೆಲ್ಲಾ ಹದ್ದುಗಣ್ಣಿನ ನಿಗಾ ಇಟ್ಟು ವಾಚ್ ಮಾಡ್ತಿತ್ತು.

ಮುಸ್ಲಿಂ ಅಂಡರ್ ವರ್ಲ್ಡ್ ನ ಡಾನ್ ಆಗಲಿಕ್ಕೆ ಹೊರಟಿರುವುದನ್ನು ತಡೆಯಲು ಈ ಸುಪಾರಿ ನೀಡಲಾಗಿತ್ತೆಂದು ತಿಳಿದುಬಂದಿದ್ದು ಈ ಕಾರಣಕ್ಕೆ ಆತನನ್ನು ಮುಗಿಸಲು ಸುಪಾರಿ ನೀಡಲಾಗಿತ್ತೆನ್ನಲಾಗಿದೆ.ಆದ್ರೆ ಈ ಮಾಹಿತಿಯನ್ನು ಹೇಗೋ ಕಲೆಕ್ಟ್ ಮಾಡಿದ ಸಿಸಿಬಿ ಪೊಲೀಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ್ಹಾಗೆ ಈ ಠಕ್ಕರ್ ಏಕೆ.. ಸುಪಾರಿ ಹಂತಕರು ಬೆಂಗಳೂರಿಗೆ ಬಂದಿದ್ದಕ್ಕೂ,ರೌಡಿ ತೌಸೀಫ್ ನನ್ನು ಮುಗಿಸ್ಲಿಕ್ಕೆ ಹೊಂಚು ಹಾಕ್ತಿದ್ದುದ್ದಕ್ಕೂ ಲಿಂಕ್ ಏನು ಎನ್ನುವುದನ್ನು ಹುಡುಕುತ್ತಾ ಹೋದ್ರೆ ಮೂಲ ಹೋಗಿ ತಲುಪೋದು ಭೂಗತ ಜಗತ್ತಿನ ದೊರೆ ರಶೀದ್ ಮಲ್ಬಾರಿ ಹತ್ತಿರ.ಮುಂಬೈ ಜೈಲಿನಲ್ಲಿದ್ದಾಗ ಯಾವ್ದೋ ಕಾರಣಕ್ಕೆ ಇವರಿಬ್ಬರ ನಡುವೆ ಠಕ್ಕರ್ ಆಗಿತ್ತು.ಆ ವೇಳೆ ತೌಸಿಫ್ ನಾನು ಬೆಂಗಳೂರು ಮುಸ್ಲಿಂ ರೌಡಿ ಜಗತ್ತಿನ ಸಾಮ್ರಾಟ್ ಆಗ್ಬೇಕೆಂದುಕೊಂಡಿದ್ದೇನೆ.

ಅದನ್ನು ಯಾರಿಂದಲೂ ತಡೆಯೊಕ್ಕಾಗೊಲ್ಲ ಎಂದು ಅವಾಜ್ ಹಾಕಿದ್ದ.ಇದೇ ವೇಳೆ ಮಲ್ಬಾರಿ ಎದುರಿಗೇನೆ ರೌಡಿ ಡೈನಮಿಕ್ ಖಲೀಲ್‌ನನ್ನ ಮುಗಿಸಲು ಪ್ಲಾನ್ ಮಾಡಿದ್ದೇನೆ,ನಿನ್ ಕೈಲಿಂದ ಏನಾಗುತ್ತೋ ಅದನ್ನು ಮಾಡ್ಕೋ ಹೋಗ್ ಎಂದು ಗದರಿಸಿದ್ದ

ರೌಡಿ ತೌಸಿಫ್ ಮುಗಿಸಲು ಬಂದಿದ್ದವರಿಂದ ವಶಪಡಿಸಿಕೊಳ್ಳಲಾದ ಕಾರು
ರೌಡಿ ತೌಸಿಫ್ ಮುಗಿಸಲು ಬಂದಿದ್ದವರಿಂದ ವಶಪಡಿಸಿಕೊಳ್ಳಲಾದ ಕಾರು

ಇದರಿಂದ ಕೆರಳಿದ್ದ ರಶೀದ್ ಮಲ್ಬಾರಿ ಅಂದೇ ತೌಸಿಫ್ ನನ್ನು ಮುಗಿಸಲು ಪಣತೊಟ್ಟಿದ್ದನಂತೆ.ಆತ ಜೈಲಿನಿಂದ ಬಿಡುಗಡೆಯಾಗ್ತಿದ್ದಂಗೆ ತನ್ನ ಕಡೆಯ ಹುಡುಗರಿಗೆ ಆತನನ್ನು ಹುಡುಕಿಕೊಂಡು ಹೋಗಿ ಮುಗಿಸಲು ಸುಪಾರಿ ಕೊಟ್ಟಿದ್ದನಂತೆ.

ಇದಕ್ಕಾಗಿ ತಿಂಗ್ಳುಗಟ್ಟಲೇ ಆತನ ಬೆನ್ನಿಂದೆ ಸುತ್ತಿ,ಆತನ ಜಾಡನ್ನು ಪತ್ತೆ ಮಾಡಿದ್ದ ಶಾರ್ಪ್ ಶೂಟರ್ಸ್ ತಂಡ ಇನ್ನೇನು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗುವ ಸನ್ನಾಹದಲ್ಲಿದ್ದಾಗ್ಲೇ ಸಿಸಿಬಿ ಪೊಲೀಸರು ಜಾಡನ್ನು ಪತ್ತೆ ಮಾಡಿ ಹಂತಕರನ್ನು ಬಂಧಿಸಿದ್ದಾರೆ.ಅವರಿಂದ ಹತ್ಯೆಗೆ ಬಳಸಲು ಇಟ್ಟುಕೊಂಡಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆಯನ್ನು ಮುಂದುವರೆಸಿದ್ದು ತೌಸಿಫ್ ಜೊತೆ ಇನ್ನ್ಯಾರರನ್ನು ಮುಗಿಸಲು ತಂತ್ರ ಹೂಡಲಾಗಿತ್ತು.ರಶೀದ್ ಲೀಸ್ಟ್ ನಲ್ಲಿ ಇನ್ನ್ಯಾರೆಲ್ಲಾ ಇದ್ದರೆನ್ನುವ ಮಾಹಿತಿ ಕಲೆಹಾಕುವ ಯತ್ನದಲ್ಲಿ ಪೊಲೀಸರಿದ್ದಾರೆ.ಪ್ರಾಥಮಿಕ ತನಿಖೆ ವೇಳೆ ಸ್ಪೋಟಕ ಎನ್ನುವಂಥ ಮಾಹಿತಿಯನ್ನು ಹಂತಕರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

 

 

Spread the love
Leave A Reply

Your email address will not be published.

Flash News