“ಸರ್ಕಾರಿ” ಕಾರ್ ನಲ್ಲಿ KSRTC ಶಿವಮೊಗ್ಗ ಡಿಸಿ “ಖಾಸಗಿ” ದರ್ಬಾರ್

0
ಕಾರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಎದುರಿಸುತ್ತಿರುವ ಶಿವಮೊಗ್ಗ ವಿಭಾಗದ ಡಿವಿಷಲ್ ಕಂಟ್ರೋಲರ್ ನವೀನ್
ಕಾರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಎದುರಿಸುತ್ತಿರುವ ಶಿವಮೊಗ್ಗ ವಿಭಾಗದ ಡಿವಿಷಲ್ ಕಂಟ್ರೋಲರ್ ಡಿ.ಆರ್.ನವೀನ್

ಕನ್ನಡ ಫ್ಲಾಶ್ ನ್ಯೂಸ್.ಕಾಂ ಶಿವಮೊಗ್ಗ ಬ್ಯೂರೋ
ಶಿವಮೊಗ್ಗ:  ಕೆಳ ಹಂತದ ನೌಕರರು  ತಿಳಿದೋ..ತಿಳಿಯದೆಯೋ ಒಂದ್ ತಪ್ ಮಾಡಿದ್ರೂ ಸಾಕು,ಅವರ ವಿರುದ್ದ   ಹೊಂಚಾಕಿ ಕಾಯುತ್ತಾರೆ ಅಧಿಕಾರಿಗಳು.ಅದೇ ಉನ್ನತ ಹುದ್ದೆಯಲ್ಲಿ ರುವ ಮೇಲಾಧಿಕಾರಿಗಳು ಸರ್ಕಾರಿ  ಸವಲತ್ತುಗಳನ್ನು ಮನಸೋ ಇಚ್ಛೆ ಹೇಗೆ ದುರುಪಯೋಗಪಡಿಸಿಕೊಂಡು, ನಿಯಮಗಳನ್ನು ಬೇಕಾಬಿಟ್ಟಿ ಗಾಳಿಗೆ ತೂರಿದ್ರೂ ಅದನ್ನು ಪ್ರಶ್ನಿಸೋರೇ ಇಲ್ಲವಾಗಿದೆ KSRTCಯಲ್ಲಿ.ಈ ಘಟನೆ ಹೇಳೊಕ್ಕೆ ಕಾರಣವೂ ಇದೇ..

ಅಂದ್ಹಾಗೆ ಸರ್ಕಾರಿ ನಿಯಮಗಳಿರುವುದು ಪಾಲನೆಗೆ ಹಾಗೆಯೇ ಸವಲತ್ತುಗಳಿರೋದು ಸದ್ವಿನಿಯೋಗಕ್ಕೆ.ಆದ್ರೆ ಶಿವಮೊಗ್ಗ ವಿಭಾಗದ ನಿಯಂತ್ರಣಾಧಿಕಾರಿ ಟಿ.ಆರ್ ನವೀನ್ ಗೆ ಇದ್ಯಾವುದು ಅನ್ವಯಿಸೋದೇ ಇಲ್ಲ ಎನ್ಸುತ್ತೆ.ಏಕಂದ್ರೆ ಆ ಅಧಿಕಾರಿ ತನಗೆ ಕೊಟ್ಟಿರುವ KA,57, F, 1580 ಕ್ರಮ ಸಂಖ್ಯೆಯ ಕಾರನ್ನು ಸರ್ಕಾರಿ ಕೆಲಸವೊಂದಕ್ಕೆ ಬಿಟ್ಟು ಉಳಿದೆಲ್ಲಕ್ಕೂ ಬಳಸಿಕೊಂಡು ಕಣ್ಣೆದುರೇ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.ಕಾರಿನೊಂದಿಗೆ ಚಾಲಕನನ್ನು ಕೂಡ ದುರ್ವಿನಿಯೋಗಿಸಿಕೊಳ್ಳುತ್ತಿದ್ದಾರೆ.

ಕಚೇರಿಯ ಕೆಲಸವನ್ನೂ ನೀಯತ್ತಾಗಿ ಮಾಡದ ನವೀನ್ ಎನ್ನುವ ಉಢಾಳತನದ ನಿರ್ಲಜ್ಜ ಅಧಿಕಾರಿ ತನಗೆ ಸರ್ಕಾರಿ ಕೆಲಸಕ್ಕೆ ಕೊಟ್ಟ ಕಾರನ್ನು ತನ್ನ ಕುಟುಂಬವನ್ನು ದೇವಸ್ಥಾನ, ಶಾಪಿಂಗ್,ಟ್ರಾವೆಲಿಂಗ್ ಗೆ ಬಳಸಿಕೊಳ್ಳು ತ್ತಿರುವ ದೃಶ್ಯಗಳು ಕನ್ನಡ  ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿದೆ.ಕಾರಿನಲ್ಲಿ ತನ್ನ ಕುಟುಂಬದವರನ್ನು ಚಾಲಕ ಕುಳ್ಳರಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕೂಡ ಲಭ್ಯವಾಗಿದೆ.

ಟಿ.ಆರ್ ನವೀನ್ ಕುಮಾರ್ ಕಾರನ್ನು ಏರುತ್ತಿರುವ ಮಹಿಳಾ..ಇದಕ್ಕಾ ನವೀನ್ ಸಾಹೇಬ್ರೇ ನಿಮಗೆ ಕಾರ್ ಕೊಟ್ಟಿರೋದು
ಟಿ.ಆರ್ ನವೀನ್ ಕುಮಾರ್ ಕಾರನ್ನು ಏರುತ್ತಿರುವ ಮಹಿಳಾ..ಇದಕ್ಕಾ ನವೀನ್ ಸಾಹೇಬ್ರೇ ನಿಮಗೆ ಕಾರ್ ಕೊಟ್ಟಿರೋದು

ಒಂದು ಉದಾಹರಣೆ ಹೇಳ್ತೇವೇ ಕೇಳಿ.ಈ ನವೀನ್ ಎನ್ನುವ ಮಹಾಶಯ ಇಲಾಖೆ ತನಗೆ ಕೊಟ್ಟ ಕಾರನ್ನು ನವೆಂಬರ್ 1 ರಿಂದ ನವೆಂಬರ್ 4 ರವರೆಗೆ ತನ್ನ ಕುಟುಂಬವನ್ನು ಸುತ್ತಾಡಿಸ್ಲಿಕ್ಕೆ ಬಳಸಿಕೊಂಡಿದ್ದಾರೆನ್ನುವ ಗಂಭೀರ ಆರೋಪ ಕೇಳಿಬಂದಿದೆ.ನವೀನ್ ಈ ನಾಲ್ಕು ದಿನ ಕಚೇರಿಗೆ ಹಾಜರಾಗಿಯೇ ಇಲ್ಲ,ಅಲ್ಲದೇ ಕಾರಿನ ಚಾಲಕನಿಗೂ ರಜೆಯನ್ನು ಗ್ರ್ಯಾಂಟ್ ಮಾಡಿದ್ದಾರೆ.ಕಚೇರಿ ಕೆಲಸವಿದ್ದಾಗ ಮಾತ್ರ ಕಾರನ್ನು ಬಳಸಿಕೊಳ್ಳಬೇಕೆನ್ನುವ ನಿಯಮ ಸ್ಪಷ್ಟವಾಗಿ ಇದ್ದರೂ ನವೀನ್ ನಾಲ್ಕು ದಿನ ಕಾರನ್ನು ಚಾಲಕನಿಗೆ ಕೊಟ್ಟು ಕಳುಹಿಸಿ,ಆತನಿಗೂ ರಜೆಯನ್ನು ಗ್ರ್ಯಾಂಟ್ ಮಾಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಕೆಲಸ ಪೂರ್ಣಗೊಂಡಾಕ್ಷಣ ಕಾರನ್ನು ಕಚೇರಿ ಬಳಿಯೇ ಬಿಡ್ಬೇಕೆನ್ನುವ ನಿಯಮವಿದೆ.ಆದ್ರೆ  ನಾಲ್ಕು ದಿನ ಕಾರನ್ನು  ಕೊಂಡೋಯ್ದ ನವೀನ್ ವಾಪಸ್ ಕಳುಹಿಸಿಯೇ ಇಲ್ಲ.ಡ್ರೈವರ್ ಗೆ ಕಾರನ್ನು ಆತನೊಂದಿಗೆ ಕೊಂಡೊಯ್ಯಲು ಪರ್ಮಿಷನ್ ಕೊಟ್ಟವರು ಯಾರು ಎನ್ನುವ ಪ್ರಶ್ನೆ ನಿರ್ಮಾಣವಾಗಿದೆ.ಡ್ರೈವರ್ ರಜೆಯನ್ನು ಯಾವ ಕಾರಣ ನೀಡಿ ಮಂಜೂರು ಮಾಡಿಸಿಕೊಂಡಿರುವ ಬಗ್ಗೆಯೂ ಉಲ್ಲೇಖವಿಲ್ಲ. ಸರ್ಕಾರೇತರ ಸಂಸ್ಥೆ ಹಾಗೂ ನಿಗಮ ಮಂಡಳಿ ಗಳು(ಅಂದ್ರೆ ಸರ್ಕಾರಿ ಇಲಾಖೆಗಳೆಂದು ಪರಿಗಣಿಸಲ್ಪಟ್ಟ ಇಲಾಖೆಗಳು ಮಾತ್ರ) ಕಾರಿನ ಮೇಲೆ GOVERNMENT OF KARNATAKA ಎಂಬ  ನಾಮಫಲಕ ಹಾಕಬೇಕೆನ್ನುವ ನಿಯಮವಿದೆ.ಆದ್ರೆ ಕೆಎಸ್ ಆರ್ ಟಿಸಿ ಯ ಡಿವಿಷನಲ್ ಕಂಟ್ರೋಲರ್ ನವೀನ್ ತನ್ನ ಕಾರಿನ ಮೇಲೆ GOVERNMENT OF KARNATAKA ಬೋರ್ಡನ್ನು ಹಾಕಿ ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ.

ಟಿ.ಆರ್ ನವೀನ್ ಕುಮಾರ್ ಕಾರನ್ನು ಏರುತ್ತಿರುವ ಮಹಿಳೆ...
ಟಿ.ಆರ್ ನವೀನ್ ಕುಮಾರ್ ಕಾರನ್ನು ಏರುತ್ತಿರುವ ಮಹಿಳೆ…
ಹೀಗೆ ಗಂಟೆಗಟ್ಟಲೇ ಕಾಯೋದು ಕಾಮನ್ ಗೆ ರುಟೀನ್ ಪ್ರಾಕ್ಟೀಸ್ ಅನ್ಸುತ್ತೆ..
ಹೀಗೆ ಗಂಟೆಗಟ್ಟಲೇ ಕಾಯೋದು ಕಾಮನ್ ಗೆ ರುಟೀನ್ ಪ್ರಾಕ್ಟೀಸ್ ಅನ್ಸುತ್ತೆ..

ಕಾರನ್ನು ತನ್ನ ಕುಟುಂಬಕ್ಕಲ್ಲದೇ ತೀರಾ ಪರ್ಸಸನಲ್ಲಾಗಿ ಕಾರಣಗಳಿಗೆ ಬೇಕಾಬಿಟ್ಟಿ ಮಿಸ್ಯೂಸ್ ಮಾಡ್ಕಂಡು ಅನಧೀಕೃತವಾಗಿ ಗೈರಾಗುತ್ತಾ ಬಂದಿರುವ  ಉಡಾಳತನದ ಈ ನಿರ್ಲಜ್ಜ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಅದೇಕೆ ಹಿಂದೇಟು ಹಾಕಲಾಗ್ತಿದೆಯೋ ಗೊತ್ತಾಗ್ತಿಲ್ಲ.ಆದ್ರೆ  ಎಂಡಿ ಕಳಸದ್ ಅವರಿಂದ ಹಿಡಿದು ದೊಡ್ಡ ದೊಡ್ಡ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತನ್ನ ಜೇಬಿನಲ್ಲಿದ್ದಾರೆ.ನನ್ನನ್ನೇನು ಮಾಡಿಕೊಳ್ಳಲು ಆಗೊಲ್ಲ ಎಂದು ಅವಾಜ್ ಬಿಡ್ಕೊಳ್ತಾ ಓಡಾಡ್ತಿರುವ ನವೀನ್ ವಿರುದ್ದ ಕ್ರಮ ಕೈಗೊಳ್ಳುವವರು ಯಾರು ಎನ್ನೋದೇ ದೊಡ್ಡ ಪ್ರಶ್ನೆ..

Spread the love
Leave A Reply

Your email address will not be published.

Flash News