ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ಬಿಲೇನಿಯರ್-ಆಸ್ತಿಯಲ್ಲಿ 200 ಕೋಟಿ ಹೆಚ್ಚಳ 

0

ಹೊಸಕೋಟೆ: ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಬಿಲೇನಿಯರ್ ಎನ್ನುವುದು ಅವರು ಸಲ್ಲಿಸಿರುವ ನಾಮಪತ್ರದ ಜತೆಗಿನ ದಾಖಲೆಗಳಿಂದ್ಲೇ ಸ್ಪಷ್ಟವಾಗಿದೆ.ಎಂಟಿಬಿ ನಾಗರಾಜ್ ಅಷ್ಟೇ ಅಲ್ಲ ಅವರ ಪತ್ನಿ ಶಾಂತಕುಮಾರಿ ಕೂಡ ಕೋಟ್ಯಾಧೀಶೆಯಾಗಿರುವುದು ವಿಶೇಷ.

ಎಂಟಿಬಿ ನಾಗರಾಜ್ ಅವರ ಆಸ್ತಿ ಘೋಷಣೆಯ ಇಂಟರೆಸ್ಟಿಂಗ್ ವಿವರ ಇಲ್ಲಿದೆ.

ಎಂಟಿಬಿ ನಾಗರಾಜ್ 1,12,02,23,637 (112 ಕೋಟಿ) ಒಡೆಯ, ಪತ್ನಿ 71,89,65,570 ಕೋಟಿ.

ಕೈಯಲ್ಲಿ ಇರುವ ನಗದು 89,04,927-ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ, ಖಾಯಂ ಠೇವಣಿ 166.97 ಕೋಟಿ.

ಎಂಟಿಬಿ ನಾಗರಾಜ್ ಅವರ ವ್ಯವಹಾರ-ಉದ್ಯಮ-ಪಾಲುದಾರಿಕೆ ಹಾಗೂ ಹೂಡಿಕೆ:

ಎಂಟಿಬಿ ಎಸ್ಟೇಟ್ಸ್ ಅಂಡ್ ಪಾರ್ಪರ್ಟಿಸ್ ಪಾಲುದಾರಿಕೆ ಸಂಸ್ಥೆಯಲ್ಲಿ 141 ಕೋಟಿ.

LIC,PNB ವಿಮೆ- 64,76,009

ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ನೀಡಿರುವ ಸಾಲ-272 ಕೋಟಿ.

ಕಾರುಗಳು:5,99,78,832 ಕೋಟಿ ಮೌಲ್ಯದ 3 ಐಶಾರಾಮಿ ಕಾರುಗಳು,2,54,13,964 ಬೆಲೆ ಬಾಳುವ lexury 6 ಕಾರುಗಳು

ಚರಾಸ್ಥಿ-ಸ್ಥಿರಾಸ್ಥಿ:ಕುಟುಂಬದ ಹೆಸರಿನಲ್ಲಿ ಆಸ್ತಿ:ಪತ್ನಿ ಮತ್ತು ನಾಗರಾಜ್ ಹೆಸರಿನಲ್ಲಿ 618 ಕೋಟಿ ಸ್ಥಿರಾಸ್ತಿ. 437.15 ಕೋಟಿ ಚರಾಸ್ತಿ.

ಆಭರಣ: 3.7 ಕೋಟಿ ಮೌಲ್ಯದ 3606 ಗ್ರಾಂ ಚಿನ್ನಾಭರಣ, 85 ಕ್ಯಾರೆಟ್ ವಜ್ರ, 240 ಕೆಜಿ ಬೆಳ್ಳಿ ಆಭರಣಗಳು,

ಕೃಷಿ ಭೂಮಿ ಒಡೆತನ: ನಾಗರಾಜ್ ಹೆಸರಿನಲ್ಲಿ 63 ಎಕರೆ, ಪತ್ನಿ ಹೆಸರಿನಲ್ಲಿ 4 ಎಕರೆ ಸೇರಿದಂತೆ 58.1 ಕೋಟಿ ಮೌಲ್ಯದ ಕೃಷಿ ಜಮೀನು.

367.15 ಕೋಟಿ ಮೌಲ್ಯದ ಕೃಷಿಯೇತರ ಜಮೀನು,

ಕಟ್ಟಡ-ಕಾಂಪ್ಲೆಕ್ಸ್: 88 ಕೋಟಿ ರೂಗಳ ವಾಸದ ಕಟ್ಟಡಗಳಿರೂದಾಗಿ ಆಸ್ತಿ.

ಸಾಲ:ವಿವಿಧ ಬ್ಯಾಂಕ್ಗಳಲ್ಲಿ 27.70 ಕೋಟಿ ಸಾಲ.

ಆಸ್ತಿ ಪ್ರಮಾಣದಲ್ಲಿ ಏರಿಕೆ: ಎಂಟಿಬಿ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.2018 ರ‌ ಚುನಾವಣೆ ವೇಳೆ ಅವರ ಆಸ್ತಿ ಪ್ರಮಾಣದಲ್ಲಿ  200 ಕೋಟಿಗೂ ಹೆಚ್ಚು ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಎಂಟಿಬಿ ಆಸ್ತಯಲ್ಲಿ ಬಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಆಸ್ತಿ ವಿವರ ಘೋಷಣೆಯಲ್ಲಿ ತಮ್ಮ ಕುಟುಂಬದ ಯಾವುದೇ ಸದಸ್ಯರು ಹಾಗೂ ಸಂಬಂಧಿಕರೊಂದಿಗಿನ ಹಣಕಾಸು ಅಥವಾ ವ್ಯವಹಾರಿಕ ವಿಷಯಗಳನ್ನು ಸೇರಿಸಿಲ್ಲ.ಅವರ ಆಸ್ತಿ ಸೇರಿದ್ರೆ ಎಂಟಿಬಿ ಆಸ್ತಿ ಪ್ರಮಾಣ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.

 

 

 

Spread the love
Leave A Reply

Your email address will not be published.

Flash News