ಶಿವಾಜಿನಗರ ಬೈ ಎಲೆಕ್ಷನ್:ಕೈ ಅಭ್ಯರ್ಥಿಯಾಗಿ ರಿಜ್ವಾನ್ ನಾಮಪತ್ರ

0

ಬೆಂಗಳೂರು/ಶಿವಾಜಿನಗರ:ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಗೆಲ್ಲಲೇಬೇಕಾದ ಉಮೇದಿನಲ್ಲಿ ಕೈ ಎಮ್ಮೆಲ್ಸಿ ರಿಜ್ವಾನ್ ಅರ್ಷದ್ ಇಂದು ನಾಮಪತ್ರ ಸಲ್ಲಿಸಿದ್ರು.
ಶಿವಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಎಮ್ಮೆಲ್ಸಿ ಐವಾನ್ ಡಿಸೋಜಾ ಸೇರಿದಂತೆ ಹಲವರು ಸಾಥ್ ಕೊಟ್ಟರು.
ಇದೇ ವೇಳೆ ಮಾತ್ನಾಡಿದ ದಿನೇಶ್ ಗುಂಡೂರಾವ್,ಕ್ಷೇತ್ರದ ಮತದಾರರು ಕೈಗೆ ಆಶೀರ್ವಾದ ಮಾಡಿದ್ರು ರೋಷನ್ ಬೇಗ್ ಅದನ್ನು ಧಿಕ್ಕರಿಸಿ ಇವತ್ತು ಎಡಬಿಡಂಗಿಯಂತಾಗಿದ್ದಾರೆ.ಕ್ಷೇತ್ರದ ಜನ ಯಾವತ್ತೂ ಇಲ್ಲಿ ಕೈ ಕೊಟ್ಟಿಲ್ಲ.ರಿಜ್ವಾನ್ ಅವರನ್ನು ಗೆಲ್ಲಿಸೋ ಮೂಲಕ ಮತ್ತೆ ಕ್ಷೇತ್ರ ಕೈ ಭದ್ರಕೋಟೆ ಎನ್ನೋದನ್ನು ಪ್ರೂವ್ ಮಾಡಲಿದ್ದಾರೆ ಎಂದ್ರು.ಇದೇ ವೇಳೆ ರಿಜ್ವಾನ್ ಕೂಡ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು.

 

 

Spread the love
Leave A Reply

Your email address will not be published.

Flash News