ಹೊಸಕೋಟೆ-ಚಿಕ್ಕಬಳ್ಳಾಪುರ ಅಖಾಡಕ್ಕೆ ಧುಮುಕಲು ಡಿಕೆಶಿ ರೆಡಿ

0

ಬೆಂಗಳೂರು/ಚಿಕ್ಕಬಳ್ಳಾಪುರ/ಹೊಸಕೋಟೆ: ಮೆಡಿಕಲ್ ಕಾಲೇಜನ್ನು ತನ್ನಿಂದ ಕಿತ್ತುಕೊಂಡ ಅನರ್ಹ ಶಾಸಕ ಡಾ.ಕೆ ಸುಧಾಕರ್ ಮೇಲಿನ ಸಿಟ್ಟಿನಿಂದ ಕೊತ ಕೊತ ಕುದಿಯುತ್ತಿರುವ ಕೈ ಪಕ್ಷದ ಫೈರ್ ಬ್ರ್ಯಾಂಡ್ ಡಿ.ಕೆ ಶಿವಕುಮಾರ್ ಅಧೀಕೃತವಾಗಿ ಚಿಕ್ಕಾಬಳ್ಳಾಪುರ ಕಣಕ್ಕೆ ಇಳಿಯಲಿದ್ದಾರೆ.ಹಾಗೆಯೇ ಲೆಟ್ ವಿ ಮೀಟ್ ಇನ್ ಹೊಸಕೋಟೆ ಎಂದಿದ್ದ ಮಾತಿನಂತೆ ಹೊಸಕೋಟೆ ಚುನಾವಣಾ ಅಖಾಡಕ್ಕೂ ಧುಮುಕಲಿದ್ದಾರೆ.

ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ ಉಸ್ತುವಾರಿ ಹೊತ್ತಿರುವ ಡಿ.ಕೆ ಶಿವಕುಮಾರ್,‌ಡಾ.ಕೆ ಸುಧಾಕರ್ ಹಾಗೂ ಎಂಟಿಬಿ‌ ನಾಗರಾಜ್ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.ಹಾಗಾಗಿ ತನ್ನ ಕೆಲಸವನ್ನು ಆರಂಭಿಸಿರು ಡಿಕೆಶಿ ಈಗಾಗ್ಲೇ ಉಸ್ತುವಾರಿಗಳನ್ನ ಮನೆಗೆ ಕರೆಸಿಕೊಂಡು ಚರ್ಚೆ ಮಾಡಲಾರಂಭಿಸಿದ್ದಾರೆ.

ನಿನ್ನೆ ಚಿಕ್ಕಬಳ್ಳಾಪುರ ಪ್ರಚಾರದಲ್ಲಿ ಭಾಗವಹಿಸಿದ್ದ ಡಿಕೆಶಿ ಅಲ್ಲಿಯೇಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಸೋಲಿಸಲು ತಾನು ತೊಟ್ಟಿರು ಪಣದ ಮಾತುಗಳನ್ನು ಪುನರುಚ್ಛರಿಸಿದ್ದರು.

ಹೊಸಕೋಟೆ ಉಸ್ತುವಾರಿ ಕೃಷ್ಣಬೈರೇಗೌಡ ಮತ್ತು ಚಿಕ್ಕಬಳ್ಳಾಪುರ ಉಸ್ತುವಾರಿ ಶಿವಶಂಕರ್ ರೆಡ್ಡಿ ಜತೆ ಮಾತುಕತೆ ನಡೆಸಿರುವ ಡಿಕೆಶಿ,ನಿನ್ನೆ ಕೆಪಿಸಿಸಿಯಲ್ಲಿ ನಡೆದ ಎರಡು ಕ್ಷೇತ್ರದ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ಆದರೆ ಇಂದು ಸದಾಶಿವನಗರದ‌ ತಮ್ಮ‌ಮನೆಯಲ್ಲಿ ಎರಡು ಕ್ಷೇತ್ರಗಳ ಉಸ್ತುವಾರಿಗಳ ಜತೆ ಪ್ರತ್ಯೇಕ ಮಾತುಕತೆ ನಡೆಸಿದರು.ಕೃಷ್ಣಬೈರೇಗೌಡ ಮತ್ತು ಶಿವಶಂಕರ್ ರೆಡ್ಡಿ ನನ್ನ ಪಕ್ಷದ ನಾಯಕರು.ಅವರ ಜತೆ ಎರಡು ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದ್ರು.

ಪ್ರಚಾರಕ್ಕೆ ಸಮಯ ಕೇಳಿದ್ದಾರೆ ಬರುತ್ತೇನೆಂದು ಹೇಳಿದ್ದೇನೆ.ನಾನು ಸಿದ್ದರಾಮಯ್ಯ ಜಂಟೀ ಪ್ರಚಾರ ಮಾಡೋದು ಕೆಪಿಸಿಸಿ ನಿರ್ಧಾರ ಮಾಡುತ್ತೆ.ಕೆಲ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುತ್ತೆ ಎಲ್ಲವನ್ನೂ ಸರಿಪಡಿಸುತ್ತೇವೆ.ತಾಯಿಗೆ ದ್ರೋಹ ಮಾಡಿದವರಿಗೆ ಜನ ಸುಮ್ಮನೆ ಬಿಡಲ್ಲ ಎಂದರು.

ಪಕ್ಷಕ್ಕೆ ದ್ರೋಹ ಮಾಡಿದ್ರೆ ಅದು ತಾಯಿಗೆ ದ್ರೋಹ ಮಾಡಿದಂತೆ. ಜನರ ಬಳಿ ಮತ ಪಡೆದು ಮೋಸ ಮಾಡಿದ್ರೆ ಸುಮ್ಮನೆ ಬಿಡ್ತಾರಾ…?ಮತದಾರರು ಸರಿಯಾದ ಪಾಠವನ್ನೇ ಕಲಿಸ್ತಾರೆ.ಅವರು ತಾವು ಮಾಡಿದ ತಪ್ಪಿಗೆ ಕೈ ಕೈ ಹಿಸುಕಿಕೊಳ್ಳುವಂತೆ ಮಾಡದಿದ್ರೆ ನನ್ನ ಹೆಸ್ರು ಬದ್ಲಾಯಿಸ್ಬಿಡಿ ಎಂದು‌ ಸವಾಲೆಸೆದಿದ್ದಾರೆ.

#kannadaflashnews #kannadanews #Political #Karnatakabyelection2019 #Hosakote #Chikkaballapur #DKShivakumar #MTBNagaraj #Drsudhakar #RevengePolitics

Spread the love
Leave A Reply

Your email address will not be published.

Flash News