ಹರ್ಯಾಣ ಹೋಲಿಕೆಯಲ್ಲಿ ಬೆಂಗ್ಳೂರ್ ಸೇಫ್ ಎಂದ್ರು ಯುವತಿಯರು

0

 ಬೆಂಗಳೂರು: ಹೈದ್ರಾಬಾದ್ ಘಟನೆ ನಂತರ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ.ಮಹಿಳೆಯರ ಸುರಕ್ಷತೆಗೆ ಪೂರಕವಾಗಿ ಹೆಲ್ಪ್ ಲೈನ್ ಶುರುಮಾಡಿದ್ರೂ ಅದರ ಬಗ್ಗೆ ಮಾಹಿತಿ ಕೊರತೆ ಎದ್ದು ಕಾಣ್ತಿದೆ.ಇನ್ನು ಅಸ್ಥಿತ್ವದಲ್ಲಿರುವ ಹೆಲ್ಪ್ ಲೈನ್ ಯಾವ್ ರೀತಿ ಕೆಲಸ ಮಾಡುತ್ತಿದೆ ಎನ್ನುವುದರ ಮಾಹಿತಿ ಪಡೆಯೊಕ್ಕೆ ಬೆಂಗಳೂರು ಕೇಂದ್ರ ವಲಯದ ಡಿಸಿಪಿ ಚೇತನ್ ಸಿಂಗ್ ರಾಥೋಡರ್ ರಿಯಾಲಿಟಿ ಚೆಕ್ ಗೆ ಮುಂದಾದ್ರು.

ಪೊಲೀಸ್ ಇಲಾಖೆಯ ಡಯಲ್ ೧೦೦ ಗೆ ಕರೆ ಮಾಡಿಸಿದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಮಹಿಳೆಯರ ಸುರಕ್ಷತೆಗೆ ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತಿದೆ ಎನ್ನುವುದರ ಮಾಹಿತಿ ಪಡೆದರು.ರಾತ್ರಿ ೧.೪೫ ರಲ್ಲಿ ಯುಬಿಸಿಟಿಯಲ್ಲಿ ಊಟಕ್ಕೆ ಬಂದಿದ್ದ ಹರ್ಯಾಣ ಮೂಲದ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ನಿಲ್ಲಿಸಿ ಮಾತನಾಡಿದ ಚೇತನ್ ಸಿಂಗ್ ರಾಥೋಡ್ ಮಹಿಳೆಯರ ಸುರಕ್ಷತೆ ಬಗ್ಗೆ ಅಭಿಪ್ರಾಯ ಕೇಳಿದ್ರು.

ಡಿಸಿಪಿ ರಾಥೋಡ್
ಡಿಸಿಪಿ  ಚೇತನ್ ಸಿಂಗ್  ರಾಥೋಡ್

ಆದರೆ ಆ ಯುವತಿ ಹಾಗೂ ಆಕೆಯ ಸ್ನೇಹಿತರು ಅವೆಲ್ಲಾ ಯುಸ್ ಅಗೊಲ್ಲ ಬಿಡಿ ಸಾರ್.. ಈ‌ ಮೊದಲು ಹರಿಯಾಣದಲ್ಲಿ ಕಾಲ್ ಮಾಡಿದ್ವಿ ಯೂಸ್ ಆಗಿಲ್ಲ ಅಂದ್ಲು.ಸ್ವಲ್ಪ ಮುಜುಗರಕ್ಕೀಡಾದ ಚೇತನ್ ಸಿಂಗ್ ರಾಥೋಡ್ ಡಯಲ್ ೧೦೦ಗೆ ಕರೆ ಮಾಡಿಸಿಯೂ ಬಿಟ್ದರು.ಮೊದಲ ಕರೆ ಎಂಗೇಜ್ ಆಗಿತ್ತು.ಆದ್ರೂ ಬಿಡದ ರಾಥೋಡ್ ಸಾಹೇಬ್ರು,ತಮ್ಮ ಗನ್ ಮ್ಯಾನ್ ಮೊಬೈಲ್ ನಲ್ಲಿ ಕರೆ ಮಾಡಿಸಿದ್ರು.

ಆಗ ತಕ್ಷಣಕ್ಕೆ ಕರೆ ಸ್ವೀಕರಿಸಿ ಲೋಕೇಷನ್ ಪಡೆದ ಡಯಲ್ ೧೦೦ ಸಿಬ್ಬಂದಿ ಕೇವಲ ಮೂರು ನಿಮಿಷಕ್ಕೆ ಯುಬಿಸಿಟಿಯ ಯುವತಿ ಇದ್ದ ಸ್ಥಳಕ್ಕೆ ಹೊಯ್ಸಳ ವಾಹನಗಳನ್ನು ಕಳುಹಿಸಿಕೊಟ್ಟರು.

ಅಚ್ಚರಿ ಎಂದ್ರೆ  ಹೊಯ್ಸಳ ವಾಹನಗಳ ಟೈಮನ್ನು ಕೌಂಟ್ ಮಾಡಿದ ರಾಥೋಡ್ ಸಾಹೇಬ್ರ ಲೆಕ್ಕಾಚಾರದಂತೆ ನಿಗಧಿತ ಅವಧಿಯೊಳಗೆ ಹೊಯ್ಸಳ ವಾಹನಗಳು ಆಗಮಿಸಿ ಮಹಿಳೆಯರ ಸಮಸ್ಯೆ ಆಲಿಸಿದವು.ಇದರಿಂದ ಅಚ್ಚರಿ ಹಾಗೂ ಸಂತೋಷಗೊಂಡ ಯುವತಿಯರು ಪೊಲೀಸ್ ಕಾರ್ಯವೈಖರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Spread the love
Leave A Reply

Your email address will not be published.

Flash News