ಕನಸು ಕಾಣೋ ಸಿಎಂಗೇಕೆ ಭ್ರಮನಿರಸನ ಮಾಡಲಿ-ಡಿಕೆಶಿ ಲೇವಡಿ

0

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದಿರುವ ಬೈ ಎಲೆಕ್ಷನ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಲ್ಲಾ 15 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದಿರುವ ವಿಚಾರಕ್ಕೆ ಕಾಂಗ್ರೆಸ್ನ ಫೈರ್ ಬ್ರ್ಯಾಂಡ್ ಡಿ.ಕೆ ಶಿವಕುಮಾರ್ ಕುಹಕವಾಡಿದ್ದಾರೆ.ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಡಿಕೆಶಿ,ಪಾಪ ಅವರಿಗೆ ರಾಜ್ಯದ ಜನರ ನಾಡಿಮಿಡಿತದ ಅರಿವಿದ್ದಂತಿಲ್ಲ.ಹಾಗಾಗಿ ಎಲ್ಲಾ 15 ನಮ್ಮದೇ ಅನ್ತಿದ್ದಾರೆ.ಪಾಪ ಫಲಿತಾಂಶಕ್ಕಿಂತ ಮುನ್ನ ಕನಸು ಕಾಣುವ ಅವರಿಗೇಕೆ ಭ್ರಮನಿರಸನ ಮಾಡಲಿ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಗೆ ಗೆಲ್ಲಲು ಸಾಮರ್ಥ್ಯವಿರೋದು ಕೇವಲ 3 ಸ್ಥಾನಗಳಲ್ಲಿ ಮಾತ್ರ..ಉಳಿದದ್ದೆಲ್ಲಾ ನಮ್ಮದೇ ಎಂದು ಯಡಿಯೂರಪ್ಪ ಹೇಳಿರುವ ವಿಚಾರಕ್ಕೆ ಕಟಕಿಯಾಡಿದ ಡಿಕೆಶಿ, ಎಲ್ಲಾ 15 ಅವ್ರೆ ಗೆಲ್ಲಲಿ ಬಿಡಿ..ಜನ ಕೊಡೋ ತೀರ್ಪಿನಿಂದ ಯಾವ್ ಮಟ್ಟಿಗಿನ ಭ್ರಮನಿರಸನವಾಗಲಿದೆ ಎನ್ನೋದು ಅವ್ರೇ ನೋಡಲಿ,ನಾನೇಕೆ ಹೆಚ್ಚು ಮಾತನಾಡಲಿ,ಕೊನೆಗೆ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ಅವರೇ ಹೇಳ್ತಾರೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದ್ರು.

ಗೆದ್ದ ಎಲ್ಲರನ್ನೂ ಮಂತ್ರಿ ಮಾಡ್ತೇವೆ ಎಂದು ಬಿಜೆಪಿ ಹೇಳಿದೆ.ಆದ್ರೆ ಅದೆಷ್ಟೋ ಅವಧಿಗೆ ಗೆದ್ದು ಸೀನಿಯಾರಿಟಿ ಪಡೆದುಕೊಂಡಿರುವ ಶಾಸಕರು ಸುಮ್ಮನಿರುತ್ತಾರೆ ಎಂದು ನಮಗೆ ಅನಿಸೋದಿಲ್ಲ.ಪಕ್ಷೇತರರು ಗೆದ್ದರೆ ಬಿಜೆಪಿ ಅವರ ಗ್ರಹಗತಿ ಕೆಟ್ಟಂತೆಯೇ..ಅವರು ಪಡುವ ಖುಷಿ ಕ್ಷಣಿಕ.ಅವರೊಂದು ರೀತಿಯಲ್ಲಿ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ..ಅದು ಸುಡದೆ ಬಿಡೊಲ್ಲ..ಕಾದು ನೋಡಿ ರಾಜ್ಯದ ಜನರಿಗೆ ಎಂಥಾ ಮನರಂಜನೆ ಸಿಗುತ್ತೆ ಎನ್ನೋದು ಎಂದ್ರು.

ರಾಜಕೀಯ ಲಾಭಕ್ಕಾಗಿ ಜನರ ಹಿತಾಸಕ್ತಿಯನ್ನು ಧಿಕ್ಕರಿಸಿದ ಸಿಎಂ ಯಡಿಯೂರಪ್ಪ ವಿರುದ್ದ ಹೋರಾಡಲು ಮೆಡಿಕಲ್ ಕಾಲೇಜ್ ಇಶ್ಯೂ ಇದೆ.ಸುಧಾಕರ್ ಗೆ ಮೆಡಿಕಲ್ ಕಾಲೇಜ್ ಕೊಡ್ಲಿ,ಆದ್ರೆ ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಲೇಜನ್ನು ರದ್ದು ಮಾಡಿ ಅವರಿಗೆ ನೀಡೋದು ಜನವಿರೋಧಿ..ಇದನ್ನು ಖಂಡಿಸಿ ಹೋರಾಡುವುದಾಗಿ ಹೇಳಿದ್ರು.ಮೆಡಿಕಲ್ ಕಾಲೇಜ್ ವಿಚಾರದಲ್ಲಿ ಸಿಎಂ ಬಿಎಸ್ ವೈ  ರಾಜಕೀಯ  ಮಾಡಿದ್ದು ಸರಿಯಲ್ಲ. ಹೋರಾಟಕ್ಕೆ ಸಾವಿರಾರು ಜನ ಬೇಕಿಲ್ಲ. ಒಂದಿಬ್ವರು ಎಂಎಲ್ಸಿ ಇದ್ದಾರೆ ಅಷ್ಟು ಸಾಕೆಂದ್ರು.ಇನ್ನು ರಾಮನಗರ ಜಿಲ್ಲೆಯ ಜಿಲ್ಲಾಡಳಿತವನ್ನು ಕ್ಲೀನ್ ಮಾಡುತ್ತೇನೆಂದು ಡಿಸಿಎಂ ಡಾ.ಅಶ್ವತ್ಥ ನಾರಾಯಣ ಅವರು ಹೇಳಿರುವ ವಿಚಾರಕ್ಕೆ ಹೆಚ್ಚೇನೂ ರಿಯಾಕ್ಡ್ ಮಾಡದ ಡಿಕೆಶಿ ಪಾಪ ಮಾಡ್ಲಿ..ಅವರಿಗೆ ಆಲ್ ದಿ  ಬೆಸ್ಟ್ ಹೇಳುತ್ತೇನಷ್ಟೇ ಎಂದ್ರು.

Spread the love
Leave A Reply

Your email address will not be published.

Flash News