ಕೆಪಿಸಿಸಿ ಸಾರಥಿಯಾಗ್ಲಿಕ್ಕೆ ಪೈಪೋಟಿ-ಡಿಕೆಶಿ-ಮುನಿಯಪ್ಪ ನಡುವೆ ಫೈಟ್-ಪಾಟೀಲ್ ಗೆ ವಿಪಕ್ಷ ನಾಯಕ ಪಟ್ಟ ಬಹುತೇಕ ಫೈನಲ್

0
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ
ಮಾಜಿ  ಸಚಿವ ಕೆ.ಎಚ್.ಮುನಿಯಪ್ಪ

ನವದೆಹಲಿ/ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಪಕ್ಷದೊಳಗೆ ವ್ಯಾಪಕ ಪೈಪೋಟಿ ನಿರ್ಮಾಣವಾಗಿದೆ.15 ಕ್ಷೇತ್ರಗಳ ಬೈ ಎಲೆಕ್ಷನ್ ನಲ್ಲಿ ಪಕ್ಷದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ದಿನೇಶ್ ಗುಂಡೂರಾವ್ ಸಲ್ಲಿಸಿರುವ ರಾಜೀನಾಮೆ ಯನ್ನು ಪಕ್ಷದ ವರಿಷ್ಠರು ಸ್ವೀಕರಿಸುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.ಹಾಗೆಯೇ ಸಿದ್ಧರಾಮಯ್ಯ ಅವರ ರಾಜಿನಾಮೆಯಿಂದ ತೆರವಾಗಿರುವ ವಿಪಕ್ಷ ನಾಯಕನ ಸ್ಥಾನಕ್ಕೂ ಕೈ ಮುಖಂಡರ ನಡುವೆ ಬಿರುಸಿನ ಸ್ಪರ್ದೆ ಏರ್ಪಟ್ಟಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಪಕ್ಷದೊಳಗೆ ನಡೆಯುತ್ತಿರುವ ಪೈಪೋಟಿ ಇದೀಗ ದೆಹಲಿಗೆ ಶಿಫ್ಟ್ ಆಗಿದೆ.ದೆಹಲಿ ನಾಯಕರನ್ನು ಮನವೊಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ರಾಜ್ಯ ನಾಯಕರು ಕೂಡ ಕನ್ಫರ್ಮ್ ಆಗುವವರೆಗೂ ದೆಹಲಿ ಬಿಟ್ಟು ಬಾರದಿರಲು ನಿರ್ಧರಿಸಿದ್ದಾರೆ.

ಮಂಚೂಣಿಯಲ್ಲಿ ಡಿಕೆಶಿ-ಪೈಪೋಟಿಯಲ್ಲಿ ಮುನಿಯಪ್ಪ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವವರಲ್ಲಿ ಡಿ.ಕೆ.ಶಿವಕುಮಾರ್ ಮಂಚೂಣಿಯಲ್ಲಿದ್ದಾರೆ. ಪಕ್ಷದೊಳಗೆ ಫೈರ್ ಬ್ರ್ಯಾಂಡ್ ಎನಿಸಿಕೊಂಡಿರುವ ಡಿಕೆಶಿಗೇನೆ ಅಧ್ಯಕ್ಷ ಸ್ಥಾನ ಕೊಟ್ಟರೆ ಮಾತ್ರ ಕುಸಿಯುವ ಸ್ಥಿತಿಯಲ್ಲಿರುವ ಪಕ್ಷ ಉಳಿಯಬಲ್ಲದು ಎನ್ನುವುದನ್ನು ಮನದಟ್ಟು ಮಾಡಿಕೊಡಲು ಡಿಕೆಶಿ ಹಾಗೂ ಅವರ ಬೆನ್ನಿಗೆ ನಿಂತಿರುವ ವರಿಷ್ಠರು ನಿರ್ಧರಿಸಿದ್ದಾರೆ.

ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅವರಿಗೂ ಡಿಕೆಶಿ ಅವರ ಆಯ್ಕೆಯೇ ಅಲ್ಟಿಮೇಟ್ ಎನಿಸುತ್ತಿದೆ.ಪಕ್ಷವನ್ನು ಎಲ್ಲಾ ನಿಟ್ಟಿನಲ್ಲೂ ಸಂಘಟನೆಗೊಳಿಸಲು ಡಿಕೆಶಿಯಷ್ಟು ಸಮರ್ಥ ಆಯ್ಕೆ ಮತ್ತೊಂದಿಲ್ಲ ಎನ್ನುವ ತೀರ್ಮಾನಕ್ಕೆ ಬರಲು ಅನೇಕ ಸನ್ನಿವೇಶಗಳು ಕಾರಣ ಎನ್ನಲಾಗುತ್ತಿದೆ.ಹಾಗಾಗಿ ಪಕ್ಷದ ವರಿಷ್ಠರು ಲಾಭಿ ಮಾಡದಿದ್ರೂ ಡಿಕೆಶಿ ಅವರ ಹೆಗಲಿಗೇ ಕೆಪಿಸಿಸಿ ಹೊಣೆ ಹೊರಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನೋ ಮಾಹಿತಿಗಳು ಕನ್ನಡ ಪ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಕೆ.ಎಚ್.ಮುನಿಯಪ್ಪ ಬೆನ್ನಿಗೆ ನಿಂತಿರುವ ರಾಜ್ಯ ಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್
ಕೆ.ಎಚ್.ಮುನಿಯಪ್ಪ ಬೆನ್ನಿಗೆ ನಿಂತಿರುವ ರಾಜ್ಯ ಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್

ಡಿಕೆಶಿಗೆ ಆಯ್ಕೆ ಅಷ್ಟು ಸಲೀಸಾಗಿಯೂ ಇಲ್ಲ:ಏಕೆಂದ್ರೆ ಡಿಕೆಶಿಗೆ ಬಿರುಸಿನ ಪೈಪೋಟಿ ನೀಡೊಕ್ಕೆ ಹಲವರು ಮುಂದಾಗಿದ್ದು ಆ ಪೈಕಿ ಮೊದಲ ಹೆಸರಾಗಿ ಕೇಳಿ ಬರುತ್ತಿರುವುದು ಮಾಜಿ ಕೇಂದ್ರ ಸಚಿವ,ಮಾಜಿ ಸಂಸದ ಕೆ.ಎಚ್ ಮುನಿಯಪ್ಪ.ಹಿರಿಯ ಮುಖಂಡ ಎನ್ನುವ ಹೆಗ್ಗಳಿಕೆ ಜತೆಗೆ ದಲಿತ ಎನ್ನುವ ಟ್ಯಾಗ್ ಕೂಡ ಮುನಿಯಪ್ಪ ಬೆನ್ನಿಗಿದೆ.ದಲಿತ ಮತ ಬ್ಯಾಂಕ್ ಗಳನ್ನೇ ಹೆಚ್ಚು ನಂಬಿರುವ ಕಾಂಗ್ರೆಸ್ ಗೆ ದಲಿತರನ್ನೇ ಕೆಪಿಸಿಸಿಗೆ ತಂದು ಕೂರಿಸಿದ್ರೆ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಬಹುದಲ್ವಾ ಎನ್ನುವ ಆಲೋಚನೆಯೂ ಇದ್ದಿರಬಹುದು.

ಹಾಗಾಗಿ ಡಿಕೆಶಿ ಮೊದಲ ಸೂಕ್ತ ಆಯ್ಕೆ ಎನಿಸಿದ್ರೂ  ಕೆ.ಎಚ್ ಮುನಿಯಪ್ಪ ಅವರನ್ನು ಅಷ್ಟು ಈಸಿಯಾಗಿ ಮೂಲೆಗೆ ತಳ್ಳೋಕ್ಕೆ ಆಗೊಲ್ಲ.ಕೈ ಪಕ್ಷದಿಂದ ದಲಿತರು ವಿಮುಖವಾಗುತ್ತಿರುವ ಸಂದರ್ಭದಲ್ಲಿ ಹೈಕಮಾಂಡ್ ಇದಕ್ಕೆ ತೇಪೆ ಹಚ್ಚಲು ಮುಂದಾಗಬೇಕಿದೆ.ಇಲ್ಲದಿದ್ದರೆ ಶಾಶ್ವತವಾಗಿ ದಲಿತರು ಕೈ ತೊರೆಯುವ ಸಾಧ್ಯತೆಗಳಿವೆ.ಈ ಆತಂಕವೂ ಹೈಕಮಾಂಡ್ ಗಿದೆ.ಹಾಗಾಗಿ ಇಬ್ಬರನ್ನು ಕೂರಿಸಿ ವಾಸ್ತವತೆಯನ್ನು ಮನಗಾಣಿಸುವ ಸವಾಲಿನ ಕೆಲಸಕ್ಕೆ ಈಗ ಹೈ ಕಮಾಂಡ್ ಕೈ ಹಾಕಬೇಕಿದೆ.

ಮುನಿಯಪ್ಪ ಬೆಂಬಲಕ್ಕೆ ಡಿಕೆಶಿ ರಾಜಕೀಯ ಶತೃ ಹರಿಪ್ರಸಾದ್: ಮುನಿಯಪ್ಪ ಬೆಂಬಲಕ್ಕೆ ರಾಜ್ಯ ಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಇದ್ದಾರೆ.ಇದಕ್ಕೆ ಕಾರಣವೂ ಇದೆ.ಹರಿಪ್ರಸಾದ್ ಗೂ ಡಿಕೆಶಿಗೂ ಅಷ್ಟಕ್ಕಷ್ಟೇ.ಸಾಕಷ್ಟು ಸಂದರ್ಭಗಳಲ್ಲಿ ಇಬ್ಬರೂ ಟೀಕಾಪ್ರಹಾರ ಮಾಡ್ಕೊಂಡಿದ್ದಾರೆ.ಡಿಕೆಶಿಯನ್ನು ಕೆಪಿಸಿಸಿ ಅಧ್ಯಕ್ಷಗಾಧಿಗೆ ಕೂರಿಸಿದ್ರೆ ದಲಿತ ಮತ ಬ್ಯಾಂಕ್ ಚೆದುರಿ ಹೋಗುವ ಆತಂಕವಿದೆ.ಕೈಯನ್ನು ಮೊದಲಿಂದ್ಲೂ ಮುನ್ನಡೆಸ್ತಾ ಬಂದಿರೋದೇ ದಲಿತ ಮತಬ್ಯಾಂಕ್.ಹಾಗಾಗಿ ದಲಿತರಿಗೇನೆ ಮಣೆ ಹಾಕ್ಬೇಕೆನ್ನುವ ವಾದವನ್ನು ಹೈಕಮಾಂಡ್ ಮುಂದೆ ಮಂಡಿಸಲು ಹರಿಪ್ರಸಾದ್ ಮುಂದಾಗಿದ್ದಾರೆ ಎನ್ನಲಾಗಿದೆ.ಇವರಿಬ್ಬರಲ್ಲಿ ಯಾರನ್ನು ಕಳಕೊಂಡ್ರೂ ನಷ್ಟ ಇದ್ದಿದ್ದೆ.ಹಾಗಾಗಿ ಇವರಿಬ್ಬರನ್ನು ಇಟ್ಟುಕೊಂಡೇ ಪಕ್ಷವನ್ನು ಮುನ್ನಡೆಸಬೇಕಾದ ಅನಿವಾರ್ಯತೆಯನ್ನು ವರಿಷ್ಠರು ಮನಗಂಡಿದ್ದಾರೆ.ಹಾಗಾಗಿ ನಾಳೆ ದೆಹಲಿಯಲ್ಲಿ ಮೀಟಿಂಗ್ ಮ್ಯಾರಥಾನ್ ಗಳೇ ನಡೆಯಲಿವೆ.

ವಿಪಕ್ಷ ನಾಯಕ ಸ್ಥಾನಾಕಾಂಕ್ಷಿ ಎಚ್.ಕೆ ಪಾಟೀಲ್
ವಿಪಕ್ಷ ನಾಯಕ ಸ್ಥಾನಾಕಾಂಕ್ಷಿ ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್ ಆಯ್ಕೆಗೆ ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸುತ್ತಿರುವ ಕೈ ನಾಯಕ ಮಲ್ಲಿಕಾರ್ಜುನ್ ಖರ್ಗೆ
ಪಾಟೀಲ್ ಆಯ್ಕೆಗೆ  ಲಾಭಿ ನಡೆಸುತ್ತಿರುವ ಕೈ ನಾಯಕ ಮಲ್ಲಿಕಾರ್ಜುನ್ ಖರ್ಗೆ

ವಿಪಕ್ಷ ನಾಯಕ ಸ್ಥಾನಕ್ಕೆ ಪಾಟೀಲ್ ಬಹುತೇಕ ಫೈನಲ್: ಇದು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕಥೆಯಾದ್ರೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಅತ್ಯಗತ್ಯವಾಗಿರುವ ವಿಪಕ್ಷ ನಾಯಕನ ಸ್ಥಾನ ತನಗೇ ಬೇಕೆಂದು  ಮಾಜಿ ಸಚಿವ ಎಚ್.ಕೆ. ಪಾಟೀಲ್ ಲಾಭಿ ನಡೆಸುತ್ತಿದ್ದಾರೆ.ಅವರ ಬೆನ್ನಿಗೆ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ನಿಂತಿದ್ದಾರೆ.ಈಗಾಗಲೇ ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿ ಈ ವಿಷಯವನ್ನು ಅವರ ಬಳಿ ಚರ್ಚಿಸೊಕ್ಕೆ ಖರ್ಗೆ ಮುಂದಾಗಿದ್ದಾರೆ.ಈ ನೆಪವಾಗೇ ಅವರು ದೆಹಲಿಗೆ  ಭಾರತ್ ಬಚಾವೋ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ.

ಮಾಜಿ ಸಚಿವ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಎಚ್ ಕೆ ಪಾಟೀಲ್ ಅವರಿಗೆ ಪೈಪೋಟಿ ನೀಡುವಂಥ ಪ್ರಬಲ ನಾಯಕರು ಸಧ್ಯಕ್ಕೆ ಯಾರೊಬ್ಬರೂ ಎದ್ದು ಕಾಣ್ತಿಲ್ಲ.ಕೊನೇ ಕ್ಷಣದಲ್ಲಿ ಒಂದಷ್ಟು ಹೆಸರುಗಳು ಮಂಚೂಣಿಗೆ ಬರುವ ಸಾಧ್ಯತೆಗಳಿವೆ.ಆದ್ರೆ ಮಲ್ಲಿಕಾರ್ಜುನ್ ಖರ್ಗೆ ಅವರಂಥವ್ರೇ ಎಚ್ .ಕೆ ಪಾಟೀಲ್ ಅವರ ಬೆನ್ನಿಗೆ ನಿಂತಿರುವುದರಿಂದ  ಎಚ್.ಕೆ ಪಾಟೀಲ್ ಅವರೇ ವಿಪಕ್ಷ ನಾಯಕನ ಸ್ಥಾನ ಅಲಂಕರಿಸುವ ಸಾಧ್ಯತೆಗಳು ಹೆಚ್ಚಿವೆ.

Spread the love
Leave A Reply

Your email address will not be published.

Flash News