81 ಸಬ್ ಇನ್ಸ್ ಪೆಕ್ಟರ್ ಗಳಿಗೆ ಮುಂಭಡ್ತಿ ಭಾಗ್ಯ

0

ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಿಗೆ ಭಡ್ತಿ ನೀಡೊಕ್ಕೆ ಮುಂದಾಗಿದೆ.ಅನೇಕ ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಅಂದ್ರೆ 81 ಸಬ್ ಇನ್ಸ್ ಪೆಕ್ಟರ್ ಗಳಿಗೆ ಭಡ್ತಿ ನೀಡಲು ನಿರ್ಧರಿಸಿದೆ.ಇದರಿಂದ ಭಡ್ತಿ ನಿರೀಕ್ಷೆಯಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಗಳ ಕನಸು ನನಸಾದಂತಿದೆ. 

ಭಡ್ತಿ ನೀಡಬೇಕಾದ ಹಿನ್ನಲೆಯಲ್ಲಿ ಸರ್ಕಾರ  ಅದಕ್ಕೆ ಅರ್ಹರಾದವರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ.ಈ ಹಿನ್ನಲೆಯಲ್ಲಿ ರಾಜ್ಯದ 81 ಪಿಎಸ್ಐ ಗಳ ಪೂರ್ವಾಪರ ಮಾಹಿತಿ ನೀಡುವಂತೆ ಆದೇಶ ಕೂಡ ನೀಡಿದೆ.ಅವರ  ಮೇಲೆ ಬಾಕಿರುವ ಆರೋಪ,ಇಲಾಖಾ ತನಿಖೆ,ಚಾಲ್ತಿ ಶಿಕ್ಷೆ ,ಕ್ರಿಮಿನಲ್ ಕೇಸ್ ಬಗ್ಗೆಯೂ ಸಮಗ್ರ ಮಾಹಿತಿ  ನೀಡುವಂತೆ ಸಂಬಂಧ ಪಟ್ಟ ಎಲ್ಲಾ ಘಟಕಾಧಿರಿಗಳಿಗೆ ಸೂಚನೆ ಕೂಡ ನೀಡಲಾಗಿದೆ. ಘಟಾಧಿಕಾರಿಗಳು ಪಿಎಸ್ಐ ಗಳಿಗೆ ನೀಡುವ ಎನ್ ಓಸಿ ಮೇಲೇನೆ ಅವರ ಮುಂಬಡ್ತಿ ಭಾಗ್ಯ ಅವಲಂಭಿಸಿದೆ

ಅಂದ್ಹಾಗೆ ಭಡ್ತಿಗೆ ಪೂರಕವಾಗಿ  2014 -15 ಹಾಗೂ 2018-19 ರ ಸೇವೆಯ ಪರಿಶೀಲನೆ ನಡೆಸಿ ವರದಿ ನೀಡಲು ಆದೇಶ ನೀಡಲಾಗಿದ್ದು 02.01.2020 ರೊಳಗೆ ವರದಿ ನೀಡಲು ಎಲ್ಲಾ ಘಟಕಾಧಿಕಾರಿಗಳಿಗೆ  ಡಿಜಿಪಿ ನೀಲ ಮಣಿ ಎನ್ ರಾಜು ಆದೇಶ ನೀಡಿದ್ದಾರೆ.ಒಟ್ಟಾರೆ ಅನೇಕ ವರ್ಷಗಳಿಂದ ಪ್ರಮೋಷನ್ ಗೆ ಚಾತಕ ಪಕ್ಷಿಗಳಂತಾಗಿದ್ದ ಸಬ್ ಇನ್ಸ್ ಪೆಕ್ಟರ್ ಗಳ ಕನಸು ಹಾಗೂ ನೇವರಿಕೆ ಫಲಿಸಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಮುಂಭಡ್ತಿ ಭಾಗ್ಯ ದೊರೆಯಲಿರುವ ಸಬ್ ಇನ್ಸ್ ಪೆಕ್ಟರ್ ಗಳ ಸಮಗ್ರ ವಿವರದ ಪಟ್ಟಿ ಲಭಿಸಿದೆ.

 

 

Spread the love
Leave A Reply

Your email address will not be published.

Flash News