ಪೇಜಾವರ ಶ್ರೀ ಅಸ್ವಸ್ಥ:ಆಸ್ಪತ್ರೆಗೆ ದಾಖಲು‌

0

ಉಡುಪಿ:ಉಡುಪಿಯ ಸುಪ್ರಸಿದ್ಧ ಪೇಜಾವರ ಮಠದ ವಿಶ್ವೇಶ್ವರಪಾದ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ.ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀಗಳನ್ನು ಆಸ್ಪತ್ರೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.89 ವರ್ಷ ವಯಸ್ಸಿನ ಪೇಜಾವರ ಶ್ರೀಗಳಿಗೆ ಕಫ ಹಾಗು ನ್ಯೂಮೇನಿಯ ಸಮಸ್ಯೆ ಕಾಡುತ್ತಿದ್ದು ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಚಿಕಿತ್ಸೆ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ‌ ಎಂದು ತಿಳಿದುಬಂದಿದೆ. ಕಫ‌ ಸಮಸ್ಯೆ ಜತೆಗೆ ನ್ಯುಮೋನಿಯಾ ಕೂಡ ತಗುಲಿದೆ .ಶ್ರೀಕೃಷ್ಣ ಶ್ರೀ ರಾಮನ ಎಲ್ಲಾ ಭಕ್ತರು ಶ್ರೀಗಳ‌ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಕನಿಷ್ಠ ಹತ್ತು ಬಾರಿ ಭಕ್ತಿಯಿಂದ ” ಹರೇ ರಾಮ‌ ಹರೇ ರಾಮ, ರಾಮರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ” ಜಪ, ಪ್ರಾರ್ಥನೆ ಸಲ್ಲಿಸುವಂತೆ‌ ಮನವಿ ಮಾಡಿದ್ದಾರೆ.ಪುತ್ತಿಗೆ ಮಠಾಧೀಶ,ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣು ಕನ್ನಡ ಫ್ಲ್ಯಾಶ್ ನ್ಯೂಸ್.ಕಾಂಗೆ ತಿಳಿಸಿದ್ದಾರೆ.
#KANNADAFLASHNEWS #KANNADANEWS #UDUPI #PEJAAVARSEER #VISHWESHAPAADA #NEUMONIA #COUGH #KMC #HOSPITAL #SHREEKRISHNA #CHANT #PUTHTHIGESEER #MUJARAI #MINISTER #KOTA #SRINIVASAPUJARI

Spread the love
Leave A Reply

Your email address will not be published.

Flash News