ಪೊಲೀಸರಿಗೆ ತಲೆನೋವಾದ ಸ್ಟೂಡೆಂಟ್ಸ್ ಮಿಸ್ಸಿಂಗ್ ಕೇಸ್.

0

ಬೆಂಗಳೂರು:ನಾವು ದೂರ.ದೂರ..ತುಂಬಾ ಹೋಗುತ್ತಿದ್ದೇವೆ..ನಮ್ಮನ್ನು ಹುಡುಕುವ ಪ್ರಯತ್ನ ಮಾಡ್ಬೇಡಿ..ಹೀಗೊಂದು ಪತ್ರ ಬರೆದಿಟ್ಟು ಡಿಸೆಂಬರ್ 24 ರಂದು ನಾಪತ್ತೆಯಾದ ನಾಲ್ವರು ವಿದ್ಯಾರ್ಥಿಗಳು ಇನ್ನೂ ಪತ್ತೆಯಾಗಿಲ್ಲ.
ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದ
ತರುಣ್ ,ಸೃಜನ್, ಗೋಕುಲ್ ಆದಿತ್ಯ,ಸಿಂಹಾದ್ರಿ ಎನ್ನು‌ವ 16- 17 ವರ್ಷದ ಆಸುಪಾಸಿನ ವಿದ್ಯಾರ್ಥಿಗಳು ಮನೆಯಿಂದ ಸ್ವಲ್ಪ ಹಣ ಕಳ್ಳತನ ಮಾಡಿ ದಿಢೀರ್ ನಾಪತ್ತೆಯಾಗಿದ್ರು.
ನಾವು ಮನೆ ಬಿಟ್ಟು ಹೋಗ್ತಿದ್ದು, ಯಾರೂ ಹುಡುಕಾಟ ನಡೆಸದಂತೆ ಬರೆದಿರೋ ಲೆಟರ್ ಕೂಡ ನಾನಾ ಅನುಮಾನಗಳಿಗೆ‌ ಎಡೆ ಮಾಡಿಕೊಟ್ಟಿದೆ.ಆ ಪತ್ರವನ್ನು ವಿದ್ಯಾರ್ಥಿಗಳೇ ಬರೆದಿರೋದಾ ಎಂದು ಪೊಲೀಸ್ರು ಪರಿಶೀಲನೆ ನಡೆಸುತ್ತಿದ್ದಾರೆ.
ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿರೋ ಈ ನಾಲ್ವರು ಕೂಡ ಈಜುವುದರಲ್ಲಿ ಪಂಟರ್ಸ್ ಆಗಿದ್ದು,ಆ ಹುಚ್ಚಿಗೇನಾದ್ರೂ ಮನೆ ಬಿಟ್ರಾ ಗೊತ್ತಾಗ್ತಿಲ್ಲ.
ಶಾಲೆಯ ಸಹಪಾಠಿಗಳಿಗೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಗ್ತಿಲ್ಲ. ಯಾರ ಬಳಿ ಮೊಬೈಲೂ ಇಲ್ಲ.ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ತಲೆ ನೋವಾಗಿರುವುದೇ ಅಲ್ಲಿ,ಈ ಹಿನ್ನಲೆಯಲ್ಲಿ ತಂಡ ರಚನೆಯಾಗಿದ್ದು,ಆನೇಕಲ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸುತ್ತ ಮುತ್ತ ಹುಡುಕಾಟ ಮುಂದುವರೆದಿದೆ.
#kannadaflashnews #Kannadanews #Crime #Sslc #Students #Missing #electroniccity #Anekal #Singasandra #parappanaAgrahaara

Spread the love
Leave A Reply

Your email address will not be published.

Flash News