ಕೆರೆ ಉದ್ಧಾರ ಮಾಡ್ದೋರೇ ಯೋರೋ…ಅವಾರ್ಡ್ ಪಡೆದವ್ರೋ ಇನ್ನ್ಯಾರೋ..ಬಯೋಕಾನಮ್ಮ ಏನಿದು..

0
ಅತ್ಯುತ್ತಮ ಕೆರೆ ಪ್ರಶಸ್ತಿಗೆ ದಾಖಲೆ
ಅತ್ಯುತ್ತಮ ಕೆರೆ ಪ್ರಶಸ್ತಿಗೆ ದಾಖಲೆ
ಕೆರೆ ಅಭಿವೃದ್ದಿಗೆ ಶ್ರಮಿಸದಿದ್ರೂ ಹೀಗೆ ಫೋಸ್ ಗೇನೂ ಕಡ್ಮೆಯಿಲ್ಲ ಕಿರಣ್ ಮಜುಂದಾರ್ ಶಾ ಮೇಡಂದು..
ಹೆಬ್ಬಗೋಡಿ  ಕೆರೆ ಅಭಿವೃದ್ದಿಗೆ ಶ್ರಮಿಸದಿದ್ರೂ ಹೀಗೆ ಫೋಸ್ ಗೇನೂ ಕಡ್ಮೆಯಿಲ್ಲ ಕಿರಣ್ ಮಜುಂದಾರ್ ಶಾ ಮೇಡಂದು..

ಬೆಂಗಳೂರು:ಇದನ್ನು ದುರಂತ ಎನ್ನಬೇಕೋ..ವಿಪರ್ಯಾಸ ಎನ್ನಬೇಕೋ..ಅನ್ಯಾಯದ ಪರಮಾವಧಿ ಎನ್ನಬೇಕೋ ಒಂದೂ ಗೊತ್ತಾಗ್ತಿಲ್ಲ.ಏಕೆಂದ್ರೆ  ನಮ್ಮ ಸರ್ಕಾರ ಇಷ್ಟೊಂದು ವಿವೇಚನಾರಹಿತವಾಗಿ ಕೆಲಸ ಮಾಡುತ್ತಾ ಎನ್ನುವ ಅನುಮಾನ ಮೂಡಿಸುವಂಥ ಪ್ರಕರಣ ಇದು.

ಇತ್ತೀಚೆಗೆ ರಾಜ್ಯ ಸರ್ಕಾರ   ರಾಜ್ಯದ ಅದರಲ್ಲೂ ಬೆಂಗಳೂರಿನ ಆಸುಪಾಸಿನಲ್ಲಿರುವ  ಕೆರೆಗಳನ್ನು ದತ್ತು ಪಡೆಯೊ ಅಭಿಯಾನಕ್ಕೆ ಚಾಲನೆ ಕೊಡ್ತು.ಇದೇ ವೇಳೆ ಉತ್ತಮ ಸ್ಥಿತಿಯಲ್ಲಿರುವ ಕೆರೆಗಳನ್ನು ಗುರುತಿಸಿ ಅವಕ್ಕೆ ಅವಾರ್ಡ್ ಕೂಡ ಕೊಡಲಾಯ್ತು.ಆ ವೇದಿಕೆಯಲ್ಲಿ ಬಯೋಕಾನ್ ಸಂಸ್ಥೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೆಬ್ಬಗೋಡಿ ವ್ಯಾಪ್ತಿಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿದ ಹಿನ್ನಲೆಯಲ್ಲಿ ಪ್ರಶಸ್ತಿಯನ್ನು ಬುಟ್ಟಿಗೆ ಹಾಕ್ಕೊಳ್ತು.ಆಗ್ಲೇ ಉರಿದು ಹೋಗಿದ್ದು ಸಾಮಾಜಿಕ ಕಾರ್ಯಕರ್ತ ಹಾಗೂ ಆ ಕೆರೆಯ ಅಭಿವೃದ್ಧಿಗೆ ತನ್ನ ಆರೋಗ್ಯ-ಬದುಕನ್ನೇ ಪಣವಾಗಿಟ್ಟುಕೊಂಡು ಅಹಿರ್ನಿಷಿ ಹೋರಾಡಿದ-ದುಡಿದ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ ಅತ್ರಿ.

ಕೆರೆ ಅಭಿವೃದ್ಧಿ ಪಡಿಸಿದ್ದು ನಾನು..ಆದ್ರೆ ಅವಾರ್ಡ್ ತಗೆದುಕೊಂಡಿರೋದು ಕಿರಣ್ ಮಜುಂದಾರ್...ಏನಿದು ಅನ್ಯಾಯ ಎಂದು ಪ್ರಶ್ನಿಸ್ತಿರುವ ನಿವೃತ್ತ ವಿಂಗ್ ಕಮಾಂಡರ್ ಅತ್ರಿ.
ಕೆರೆ ಅಭಿವೃದ್ಧಿ ಪಡಿಸಿದ್ದು ನಾನು..ಆದ್ರೆ ಅವಾರ್ಡ್ ತಗೆದುಕೊಂಡಿರೋ ದು ಕಿರಣ್ ಮಜುಂದಾರ್…ಏನಿದು ಅನ್ಯಾಯ ಎಂದು ಪ್ರಶ್ನಿಸ್ತಿರುವ ನಿವೃತ್ತ ವಿಂಗ್ ಕಮಾಂಡರ್ ಅತ್ರಿ.ಈ ಬಗ್ಗೆ  ಹೋರಾಟಕ್ಕೂ ಮುಂದಾಗಿದ್ದಾರೆ.
ಅತ್ರಿ ಹೆಸರನ್ನು ಸಾರಿ ಹೇಳುವ ಲೈಟ್ ಕಂಬಗಳು
ಅತ್ರಿ ಹೆಸರು ಸಾರಿ ಹೇಳುವ ಲೈಟ್ ಕಂಬಗಳು

ಒಂದು ಹಂತದಲ್ಲಿ  ತನ್ನ ಕಂಪೆನಿಯ ವಿಷಕಾರಿ ರಾಸಾಯನಿಕಗಳಿಂದ ಕೆರೆಯನ್ನು ಹಾಳು ಮಾಡಿ ತನ್ನ ಹೋರಾಟದ ಬಳಿಕ ಪ್ರಾಯಶ್ಚಿತ್ತದ ರೂಪದಲ್ಲಿ ಕೆರೆ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಿದ್ದವರೇ ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ.ಕೆರೆ ಅಭಿವೃದ್ಧಿಯ ಹೊಣೆಗಾರಿಕೆ ಶಾ ಹೆಗಲಿಗೇರುವಂತೆ ಮಾಡಿದವ್ರು ಕೂಡ ಅತ್ರಿಯವರೇ. ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡು ಕೆರೆ ಉಸ್ತುವಾರಿ ಸಮಿತಿಗೆ ಅತ್ರಿಯವರನ್ನೇ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದ ಶಾ,ಒಂದಷ್ಟು ಕೋಟಿಯನ್ನು ಖರ್ಚು ಮಾಡಿದ್ದುಂಟು.ಆದ್ರೆ ಯಾವಾಗ ಅದಕ್ಕೆ ಹತ್ತಾರು ಕೋಟಿಗಳಷ್ಟು ಖರ್ಚಾಗುತ್ತೆ ಎನ್ನೋದು ಅರ್ಥವಾಯ್ತೋ.. ನಿಧಾನವಾಗಿ ಜಾರಿಕೊಳ್ಳಲು ಯತ್ನಿಸಿದ್ರು.ಇದನ್ನು ಪ್ರಶ್ನಿಸಿದ್ದಕ್ಕೆ ಅತ್ರಿ ಅವರನ್ನೇ ಕಮಿಟಿಯಿಂದ ಹೊರಗಾಕಿದ್ದಾಗಿ ಅತ್ರಿ ಅವರೇ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಹೇಳಿಕೊಂಡಿದ್ದಾರೆ.

ಅತ್ರಿ ಹೋರಾಟಕ್ಕೆ ವೇದಿಕೆ ಅಣಿಮಾಡಿಕೊಳ್ಳುವವರೆಗೂ ಯಾರೊಬ್ಬರೂ  ಬಯೋಕಾನ್ ವಿರುದ್ಧ ಮಾತ್ನಾಡುತ್ತಿರಲಿಲ್ಲ.ಮಾತ್ನಾಡಲೆತ್ನಿಸಿದವ್ರ ಬಾಯನ್ನೇ ಮುಚ್ಚಿಸಲಾಗ್ತಿತ್ತು( ಕೆಲವು ಪತ್ರಕರ್ತರು-ರಾಜಕಾರಣಿಗಳು-ವಿವಿಧ ಸಂಘಟನೆಗಳ ಮುಖಂಡರು ಇದನ್ನೇ ಅಸ್ತ್ರವಾಗಿಸಿಕೊಂಡು  ಮಜುಂದಾರ್ ಶಾ ಅವರಿಂದ ಹಣ ಪಡೆದು ಬಾಯಿಗೆ ಬೀಗ ಹಾಕ್ಕೊಂಡಿರುವುದು ಕೂಡ ಸುಳ್ಳೇನಲ್ಲ).ಅತ್ರಿ ಅವರಿಗೂ ಇಂತದ್ದೊಂದಿಷ್ಟು ಆಸೆ-ಆಮಿಷ ಒಡ್ಡುವ ಕೆಲಸ ನಡೆಯಿತಾದ್ರೂ ಅದಕ್ಕೆ ಒಪ್ಪದೇ ಅವರ ವಿರುದ್ದ ಕಾನೂನಾತ್ಮಕ ಸಮರ ಸಾರೊಕ್ಕೆ ಹೊರಟೇ ಬಿಟ್ರು.

ಬಯೋಕಾನ್ ಜತೆಗೆ ಅತ್ರಿ ಮಾಡಿಕೊಂಡ MOU ಪ್ರತಿ
ಬಯೋಕಾನ್ ಜತೆಗೆ ಅತ್ರಿ ಮಾಡಿಕೊಂಡ MOU ಪ್ರತಿ
ಬಯೋಕಾನ್ ಪ್ರಶಸ್ತಿ ಪಡೆದಿದ್ದರ ಬಗ್ಗೆ ಅತ್ರಿ ಮಾಡಿರುವ ಟ್ವೀಟ್..
ಬಯೋಕಾನ್ ಪ್ರಶಸ್ತಿ ಪಡೆದಿದ್ದರ ಬಗ್ಗೆ ಅತ್ರಿ ಮಾಡಿರುವ ಟ್ವೀಟ್..

ಆಗಲೇ ಆದದ್ದು ಕೆರೆ ಅಭಿವೃದ್ಧಿಯ ಒಪ್ಪಂದ:ಕೆರೆ ಹಾಳಾಗೊಕ್ಕೆ ಕಾರಣವಾದ ಶಾ ಅವರನ್ನೇ ಅಭಿವೃದ್ಧಿಗೆ ಮುಂದಾಗುವಂತೆ ಮಾಡಿದ್ದ ಅತ್ರಿ ವಿರುದ್ದ ಕೊತ ಕೊತ ಕುದಿಯುತ್ತಿದ್ದ ಶಾ,ಕಾಲಾನಂತರದಲ್ಲಿ ಕೆರೆ ಕಡೆ ತಲೆ ಹಾಕಲೂ ಇಲ್ಲ,ಅದಕ್ಕೆ ಬೇಕಾದ ಹಣವನ್ನೂ ಕೊಡ್ಲಿಲ್ಲ.ಪ್ರಶ್ನಿಸಿದ ತಪ್ಪಿಗೆ ಉಸ್ತುವಾರಿಯಿಂದ ಹೊರಗಾಕಲ್ಪಟ್ಟ ಅತ್ರಿ ಸಂಪೂರ್ಣ ಕೆಟ್ಟು ಕೆರ ಹಿಡಿದಿರೋ ಕೆರೆಗೆ ಸರ್ಕಾರ ಅತ್ಯುತ್ತಮ ಕೆರೆ ಪ್ರಶಸ್ತಿ ನೀಡಿದ್ದರ ಬಗ್ಗೆ ಖೇದ-ಅಘಾತ-ಆಕ್ರೋಶ-ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಹೆಬ್ಬಗೋಡಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಮೊದ್ಲು ಮುಂದಾದವನೇ ನಾನು.ಈ ಕೆರೆ ಏನಾದ್ರೂ ಇವತ್ತು ಅಲ್ಪಸ್ವಲ್ಪ ಉದ್ಧಾರವಾಗಿದೆ,ನೀರಿನಿಂದ ನಳನಳಿಸ್ತಿದೆ ಎಂದ್ರೆ ಅದು ಒನ್ ಅಂಡ್ ಒನ್ಲಿ ಬಿಕಾಸ್ ಆಫ್ ಮಿ..ಪ್ರಶಸ್ತಿ ಸ್ವೀಕಾರದ ವಿಷಯವನ್ನು ಸೌಜನ್ಯಕ್ಕೂ ನನ್ನ ಗಮನಕ್ಕೆ ತರುವ ಕೆಲಸ ಮಾಡದಿರುವ ಶಾ ವಿರುದ್ಧ ಟ್ವೀಟ್ ಸಮರವನ್ನೇ ಸಾರಿದ್ದಾರೆ.ಶಾ ವಿರುದ್ಧ ತಮ್ಮ ಆಕ್ರೋಶವನ್ನು ಬಹಿರಂಗವಾಗೇ ವ್ಯಕ್ತಪಡಿಸಿದ್ದಾರೆ.

ಹೆಬ್ಬಗೋಡಿ ಕೆರೆ ಅಭಿವೃದ್ಧಿಯಲ್ಲಿ ಅತ್ರಿ ಅವರ ಪಾತ್ರ ಅಗಾಧ ಹಾಗೂ ನಿರ್ಣಾಯಕ.(ಕೆರೆ ವ್ಯಾಪ್ತಿಗೆ ಹೋದರೆ ಇದರ ಪರಿಚಯವಾಗುತ್ತೆ,ಕೆರೆ ಸುತ್ತಮುತ್ತ ಅವರ ಪ್ರಯತ್ನ ಹಾಗೂ ಕಾಳಜಿಯ ಧ್ಯೋತಕ ಸಿಗುತ್ತೆ) ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮ್ಮುಖದಲ್ಲಿ ಶಾ ಜತೆ ಮಾಡಿಕೊಂಡ MOU ಕೂಡ ಅತ್ರಿ ಬಳಿಯಿದೆ.ಆರಂಭದಲ್ಲಿ ಒಂದಷ್ಟು ಕೋಟಿಗಳನ್ನು ಕೊಟ್ಟಿದ್ದನ್ನು ಬಿಟ್ಟರೆ ಆಮೇಲೆ ಅದರ ಕಡೆಗೆ ಶಾ ತಲೆ ಹಾಕೂ ಮಲಗ್ಲಿಲ್ಲ.ಸಾಕಷ್ಟು ಸಂದರ್ಭಗಳಲ್ಲಿ ಅವರ ಹೊಣೆಗಾರಿಕೆಯನ್ನು ಅತ್ರಿ ನೆನಪಿಸಿಕೊಟ್ರೂ ಬಯೋಕಾನ್ ಒಮ್ಮೆಯೂ ಕೆರೆ ಕಡೆ ಗಮನ ಹರಿಸ್ಲಿಲ್ಲ.ಇತ್ತೀಚಿನ ವರ್ಷಗಳಲ್ಲಿ ಕೆರೆ ನಿರ್ವಹಣೆಯನ್ನೇ ಕೈ ಬಿಟ್ಟಿದ್ದ ಬಯೋಕಾನ್ ಅದ್ಯಾವ ಮಾನದಂಡದಲ್ಲಿ ಪ್ರಶಸ್ತಿಗೆ ಭಾಜನವಾಯ್ತೆನ್ನೋದೇ ಆಶ್ಚರ್ಯ ಎನ್ನೋದು ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷರೊಬ್ಬರ ಪ್ರಶ್ನೆ.

ನನ್ನ ಕ್ಯಾನ್ಸರ್ ಗೆ “ಶಾ”ನೇ ಕಾರಣ: ಕೇಳೊಕ್ಕೆ ಆಶ್ಚರ್ಯ ಎನಿಸ್ಬೋದು,ಆದ್ರೆ ಇದನ್ನು ಹೌದು ಎನ್ನುತ್ತಾರೆ ನಿವೃತ್ತ ವಿಂಗ್ ಕಮಾಂಡರ್ ಅತ್ರಿ.ಕೆರೆ ಅಭಿವೃದ್ಧಿಗೆ ತನ್ನ ಬದುಕನ್ನೇ ಮುಡಿಪಾಗಿಟ್ಟವನು ನಾನು.ಕೆರೆ ಒಳಗೆ ಇದ್ದ ಮಲಿನಕಾರಿ ರಾಸಾಯನಿಕಗಳನ್ನು ತೆಗೆಯುವ ಪ್ರಯತ್ನದೊಳಗೆ ನನ್ನ ಆರೋಗ್ಯವೇ ಹಾಳಾಗಿದೆ.ಇವತ್ತು ನನ್ನನ್ನು ಕಾಡುತ್ತಿರುವ ಕ್ಯಾನ್ಸರ್ ಗೆ ಮಜುಂದಾರ್ ಶಾನೇ ಕಾರಣ.ಅವರನ್ನು ಮಾತ್ರ ಸುಮ್ಮನೆ ಬಿಡೊಲ್ಲ ಎಂದು ಆಕ್ರೋಶಭರಿತರಾಗಿ ಮಾತ್ನಾಡ್ತಾರೆ.

ಪ್ರಶಸ್ತಿಗೆ  ಲಾಭಿ ಮಾಡಿದ್ರಾ  ಮಜುಂದಾರ್ ಶಾ: ಕಿರಣ್ ಮಜುಂದಾರ್ ಶಾ..ಈ ಹೆಸ್ರು ಕೇಳದಿರೋರೇ ಕಡ್ಮೆ ಬಿಡಿ..ಸಮಾಜದಲ್ಲಿ ಗಣ್ಯಸ್ಥಾನ ಪಡೆದುಕೊಂಡಿರುವ ಕಿರಣ್ ಮಜುಂದಾರ್ ಶಾ,ಬಲಾಢ್ಯೆಯಾಗಿರುವುದರಿಂದ್ಲೇ ಸರ್ಕಾರಗಳನ್ನು ಅಂಗೈಯಲ್ಲಿ ಆಡಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ.ತಮ್ಮ ಕಂಪೆನಿ ಬಗ್ಗೆ ಇರುವ ಸಾಕಷ್ಟು ಆರೋಪಗಳನ್ನು ಸರ್ಕಾರದ ಮಟ್ಟದಲ್ಲಿ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.ಅಂಥವರಿಗೆ ಒಂದು ಪ್ರಶಸ್ತಿ ಪಡೆಯೋದು ಕಷ್ಟವೇನಲ್ಲ.ಆದ್ರೆ ಹೆಬ್ಬಗೋಡಿ ಕೆರೆ ವಿಚಾರದಲ್ಲಿ ನಡೆದಿರುವುದು ಮಾತ್ರ ಲಾಭಿ ಎನ್ನಲಾಗುತ್ತಿದೆ.ಕೆರೆ ಅತ್ಯಂತ ಮಲಿನಕಾರಿ ಎನ್ನುವುದು ಗೊತ್ತಾದ ಮೇಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆಂದ್ರೆ ಸರ್ಕಾರದ ಮಟ್ಟದಲ್ಲಿ ಇದಕ್ಕೆ ಅವರು ಲಾಭಿ ನಡೆಸಿರುವ ಸಾಧ್ಯತೆಗಳನ್ನು ಕೂಡ ಅಲ್ಲಗೆಳೆಯುವಂತಿಲ್ಲ.

ಕೆರೆ ಮಲಿನವಾಗಿರು ವುದನ್ನು ಅತ್ರಿ ಹೇಳ್ತಿಲ್ಲ..ವರದಿಗಳೇ ಸಾರಿ ಹೇಳ್ತಿವೆ:ಅಂದ್ಹಾಗೆ ತಮ್ಮನ್ನು ಉಸ್ತುವಾರಿಯಿಂದ ಕೈ ಬಿಟ್ರು ಎನ್ನುವ ವೈಯುಕ್ತಿಕ ದ್ವೇಷಕ್ಕೆಅತ್ರಿ ಖಂಡಿತಾ ಇಂತದ್ದೊಂದು ಆರೋಪ ಮಾಡಿಲ್ಲ.ಕೆರೆ ಮಲಿನವಾಗಿದೆ.ಅದು ಅಷ್ಟಿಷ್ಟು ಪ್ರಮಾಣದಲ್ಲಲ್ಲ,ಅಲ್ಲಿನ ನೀರನ್ನು ಯಾವುದಕ್ಕೂ ಬಳಸಿಕೊಳ್ಳಲಿಕ್ಕಾಗದಷ್ಟು ಪ್ರಮಾಣದಲ್ಲಿ ಎನ್ನುವ ರಿಪೋರ್ಟನ್ನು ಸ್ವತಃ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ನೀಡಿದೆ.ಕೆರೆಯ ಗುಣಮಟ್ಟವನ್ನು ಪರೀಕ್ಷಿಸಿದ ಮೇಲೆಯೇ ಇದು ಅತ್ಯಂತ ಮಲಿನಕಾರಿ ಕೆರೆ ಎಂದು ಸರ್ಟಿಫೈಡ್ ಮಾಡಿದೆ.ಅಷ್ಟೇ ಅಲ್ಲ, ಯಾವುದೇ ಪ್ರಯೋಜನಕ್ಕೂ ಬಾರದಷ್ಟು ಮಾಲಿನ್ಯಗೊಂಡಿದೆ ಎಂಬ ಅಘಾತಕಾರಿ ಮಾಹಿತಿ ಹೊರಗಾಕಿದೆ.

ಮೊದಲು ವಿಷಜಾಲವಾಗಿದ್ದ ಹೆಬ್ಬಗೋಡಿ ಕೆರೆ ಅಭಿವೃದ್ಧಿಯಾಗಿರುವ ದೃಶ್ಯ
ಮೊದಲು ವಿಷಜಾಲವಾಗಿದ್ದ ಹೆಬ್ಬಗೋಡಿ ಕೆರೆ ಅಭಿವೃದ್ಧಿಯಾಗಿರುವ ದೃಶ್ಯ.ಇದು ಅತ್ರಿ ಅವರ ಪ್ರಯತ್ನದ ಫಲ..

ಅತ್ರಿ ಹೆಸರನ್ನು ಸಾರಿ ಹೇಳುವ ಲೈಟ್ ಕಂಬಗಳುಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ಗಾಧೆಯಂತೆ ಪರಿಸ್ತಿತಿ ಹೀಗಿರುವಾಗ ಹೆಬ್ಬಗೋಡಿ ಕೆರೆಗೆ ಅತ್ಯುತ್ತಮ ಪ್ರಶಸ್ತಿ ನೀಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಉದ್ಭವವಾಗೋದು ಸಹಜವೇ..ಸರ್ಕಾರ ಪೂರ್ವಾಪರ ಪರಿಶೀಲಿಸದೆ ಹೇಗೆ ಕಣ್ಮುಚ್ಚಿಕೊಂಡು ಪ್ರಶಸ್ತಿ ಕೊಡ್ತೋ ಗೊತ್ತಾಗ್ತಿಲ್ಲ.

ಸರ್ಕಾರವನ್ನೇ ತಮ್ಮ ಅಂಗೈಯಲ್ಲಿ ಆಡಿಸುವಷ್ಟು ಮಟ್ಟಿಗಿನ ಬಲಾಢ್ಯೆ ಕಿರಣ್ ಮಜುಂದಾರ್ ಶಾ..ಈ ಪ್ರಶಸ್ತಿ ವಿಚಾರದಲ್ಲಿ ದೊಡ್ಡ ಮಟ್ಟದ ಲಾಭಿ ಮಾಡಿದ್ರಾ ಎನ್ನುವ ಅನುಮಾನ ಒಟ್ಟಾರೆ ಚಿತ್ರಣ ನೋಡಿದಾಗ ಮೂಡುತ್ತೆ.ೀ ನಿಟ್ಟಿನಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ರಿ ಅವರಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ನೈತಿಕವಾಗಿ ಬೆಂಬಲ ನೀಡಲಿದೆ.

Spread the love
Leave A Reply

Your email address will not be published.

Flash News