ಪತ್ನಿಯ ಹುಟ್ಟುಹಬ್ಬದಂದೇ “ಮರ್ಡರ್” ಅಟೆಂಪ್ಟ್ ಮಾಡಿದ ಕೀಚಕಪತಿರಾಯ.

0

ಬೆಂಗಳೂರು: ಇಡೀ ಜಗತ್ತು  ನ್ಯೂ ಇಯರ್ ಸೆಲಬ್ರೇಷನ್ ಗುಂಗಿನಲ್ಲಿರುವಾಗ ರಾಜಧಾನಿ ಬೆಂಗಳೂರಿನಲ್ಲೊಬ್ಬ ಮಹಾನುಭಾವ  ತನ್ನ ಹೆಂಡ್ತಿಯನ್ನೇ ಕೊಲ್ಲಲು ಯತ್ನಿಸಿದ್ದಾನೆ.ಆಕೆಯ ನಡುವಳಿಕೆ ಸರಿ ಇರಲಿಲ್ಲ..ಆಕೆ ಇತ್ತೀಚೆಗೆ ನನ್ನ ಜೊತೆ ಸರಿಯಾಗಿ ಹಾಸಿಗೆಯಲ್ಲಿ ಸಹಕರಿಸುತ್ತಿರಲಿಲ್ಲ..ಹೀಗೆ ಬೇಡದ ಸಬೂಬನ್ನು ಮುಂದಿಟ್ಟುಕೊಂಡು ಆಕೆಯನ್ನು ಮುಗಿಸೇ ಬಿಡುವ ಯೋಚನೆಯಲ್ಲಿ ಚಾಕುವಿನಿಂದ ಇರಿದಿದ್ದಾನೆ.ಆದ್ರೆ ಆಕೆಯ ಅದೃಷ್ಟ ಚೆನ್ನಾಗಿತ್ತು ಬದುಕುಳಿದಿದ್ದಾಳೆ.

ಅಂದ್ಹಾಗೆ ಈ ಘಟನೆ ನಡೆದಿರುವುದು ಜ್ಞಾನಭಾರತಿ ಠಾಣೆಯ ಮಾರುತಿ ನಗರದಲ್ಲಿ.ಜನವರಿ ಒಂದರಂದು ಪತ್ನಿ ನಾಝಿಯ ಹುಟ್ಟು ಹಬ್ಬವಿತ್ತು.ಅವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳೊಕ್ಕಂಥ ತನ್ನ ಅಮ್ಮನ ಜತೆ ಹೋಗ್ತಿದ್ಲು.ಕಳೆದ ರಾತ್ರಿವರೆಗೂ ನಾಳೆ ಹುಟ್ಟುಹಬ್ಬವನ್ನು ಹಾಗ್ ಆಚರಿಸ್ಬೇಕು..ಹೀಗ್ ಆಚರಿಸ್ಬೇಕಂತೆಲ್ಲಾ ನೂರಾರು ಬಣ್ಣದ ಮಾತುಗಳನ್ನಾಡುತ್ತಿದ್ದ ಪತಿ ಅಲ್ತಾಫ್ ಬಗ್ಗೆ ಸಣ್ಣ ಅನುಮಾನವೂ ಆಕೆಗೆ ಬಂದಿರ್ಲಿಲ್ಲ.

ತನ್ನ ತಾಯಿ ಜತೆ ಹುಟ್ಟು ಹಬ್ಬ ಆಚರಿಸ್ಲಿಕ್ಕಂಥ ಹೋಗ್ತಿದ್ದ ನಾಝಿಯನ್ನು ಫಾಲೋ ಮಾಡ್ಕಂಡ್ ಬಂದ ಅಲ್ತಾಫ್,ಬೈಕ್ ನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾನೆ.ಅದರ ರಭಸಕ್ಕೆ ಆಕೆ ಕೆಳಕ್ಕುರುಳಿ ಬಿದ್ದಿದ್ದಾಳೆ.ಅವಾಚ್ಯವಾಗಿ ಬೈಯ್ತಾ ಕೈಲಿದ್ದ ಚಾಕುವಿನಿಂದ ತಲೆ, ಎದೆ,ಕೈ,ಹೊಟ್ಟೆ ಭಾಗಕ್ಕೆ ಇರಿದು ವಿಕೃತ ಮೆರೆದಿದದ್ದಾನೆ.ಅಲ್ಲೇ ನಡೆದು ಹೋಗ್ತಿದ್ದ ಕುಮಾರ್ ಎಂಬಾತ ಈ ದೃಶ್ಯ ನೋಡಿ ಓಡೋಡಿ ಬಂದಿದ್ದಾನೆ.ಆತ ಬರುತ್ತಿದ್ದಂಗೆ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಅಲ್ತಾಫ್.ತಕ್ಷಣ ಪೊಲೀಸರ ನೆರವಿನಿಂದ ಆಕೆಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.ಜ್ಞಾನಭಾರತಿ ಠಾಣೆಯ ಪೊಲೀಸ್ ಅಧಿಕಾರಿ ಶಿವಾರೆಡ್ಡಿ ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಪತಿ ಅಲ್ತಾಫ್ ಪತ್ತೆ ಕಾರ್ಯದಲ್ಲಿ ನಿರತವಾಗಿದ್ದಾರೆ.

Spread the love
Leave A Reply

Your email address will not be published.

Flash News