ಸರ್ಕಾರದ ಅ”ಸಹಕಾರ”ದಿಂದಲೇ ಸಂಸ್ಥೆಗೆ ಶಾಶ್ವತ ಬೀಗ..ಸಾವಿರಾರು ಕಾರ್ಮಿಕ ಕುಟುಂಬಗಳು ಬೀದಿಪಾಲು

0

ಬೆಂಗಳೂರು/ಚಿಕ್ಕಮಗಳೂರು/ಕೊಪ್ಪ: ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಅವರೇ ಎಲ್ಲಿದ್ದೀರಾ..ಎಲ್ಲಿ ಮರೆಯಾಗಿದ್ದೀರಾ..ನಿಮ್ಮ ಕ್ಷೇತ್ರದಲ್ಲಿ ಏನಾಗ್ತಿದೆ ಎನ್ನೋದು ನಿಮ್ಗೆ ಗೊತ್ತಿಲ್ವ..ನಿಮಗೆ ಗೊತ್ತಿಲ್ಲದೇ ಇದೆಲ್ಲಾ ನಡೆಯೊಕ್ಕೆ ಸಾಧ್ಯನಾ.. ನಿಮ್ಮ ಮಾತಿಗೆ ಸರ್ಕಾರ ಕೊಟ್ಟ ಬೆಲೆ ಇದೇನಾ…ಮಲೆನಾಡ ಜನರ ಸಂಚಾರದ ಜೀವನಾಡಿಯೇ ಆಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ ನಿನ್ನೆ ಬೀಗಮುದ್ರೆ ಬಿದ್ದಿದೆ.ಅದನ್ನೆ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕಾರ್ಮಿಕರೆಲ್ಲಾ ಬೀದಿಗೆ ಬಿದ್ದಿದ್ದಾರೆ..ಆ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ ನಿಮ್ಮ ಮಾತಿಗೆ ಬೆಲೆ ಕೊಡದೆ ರಾಜ್ಯ ಸರ್ಕಾರ ಸಹಕಾರ ಸಾರಿಗೆಗೆ ಅನುದಾನ ಕೊಡದೆ ಅದು ಮುಚ್ಚಿ ಹೋಗ್ಲಿಕ್ಕೆ ಕಾರಣವಾಗಿದೆ.ಇಷ್ಟೆಲ್ಲಾ ಆಗುತ್ತಿದ್ದರೂ ನೀವ್‌ ಮಾತ್ರ ಮೌನಕ್ಕೆ ಶರಣಾಗಿದ್ದೀರಲ್ಲಾ..ಇಷ್ಟೇನಾ ನಿಮ್ಮ ಪವರ್‌..ಪೊಗರು ಮೇಡಮ್.ಎಂದು ಪ್ರಶ್ನಿಸ್ಲೇಬೇಕಾಗಿದೆ.

ಶಾಶ್ವತವಾಗಿ ಇತಿಹಾಸದ ಪುಟ ಸೇರಲಿದೆಯೇ? ಸಹಕಾರ ಸಾರಿಗೆ ಸಂಸ್ಥೆಗೆ ನಿನ್ನೆಯಿಂದಲೇ ಬೀಗಮುದ್ರೆ ಬಿದ್ದಿದೆ.ನಿನ್ನೆವರೆಗೂ ಎಂದಿನಂತೆ ಕೆಲಸ ಮಾಡಿದ್ದ ಸಾವಿರಾರು ನೌಕರರು ಇಂದು ಅಕ್ಷರಶಃ ಅತಂತ್ರರಾಗಿದ್ದಾರೆ.ಅವರನ್ನು ನಂಬಿಕೊಂಡಿದ್ದ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ… ಆಡಳಿತ ಮಂಡಳಿ ಸಂಸ್ಥೆ ನಷ್ಟದಲ್ಲಿದೆ ಎನ್ನುವ ಕಾರಣ ಮುಂದೊಡ್ಡಿ ಸಂಸ್ಥೆಗೆ ಬೀಗ ಜಡಿದಿದೆ.ಈ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಅನೇಕ ದಶಕಗಳ ಕಾಲ ಅತ್ಯುತ್ತಮ ಸಾರಿಗೆ ಸೇವೆ ನೀಡಿದ್ದ ಸಂಸ್ಥೆಯೊಂದು ಶಾಶ್ವತವಾಗಿ ಇತಿಹಾಸದ ಪುಟ ಸೇರಿದಂತಾಗಿದೆ.

ಸಹಕಾರ ಸಾರಿಗೆ..ಮಲೆನಾಡ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಸಾರಿಗೆ ಸಂಸ್ಥೆ,ಉತ್ತಮ ಸಾರಿಗೆ ವಿಷಯಕ್ಕೆ ಬಂದ್ರೆ ಅನೇಕ ದಶಕಗಳವರೆಗೂ  ಸರ್ಕಾರಿ ಸಾರಿಗೆ ವ್ಯವಸ್ಥೆಗೇನೆ ಸೆಡ್ಡು ಹೊಡೆದು ಜನರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿದ ಕೀರ್ತಿ ಹೆಗ್ಗಳಿಕೆ ಇದಕ್ಕಿದೆ.ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅದೇಕೋ ಮ್ಯಾನೇಜ್ಮೆಂಟ್‌ ಇದ್ದಕ್ಕಿದ್ದಂತೆ ಸಂಸ್ಥೆ ನಷ್ಟದಲ್ಲಿದೆ ಎನ್ನುವ ವರಾತ ತೆಗೆಯುತ್ತಲೇ ಇತ್ತು.ಎಲ್ಲಾ ರೀತಿಯಲ್ಲೂ ಸರಿಯಾಗಿದ್ದ ಸಂಸ್ಥೆಗೇನು ಬಂತು ಎನ್ನುವ ಪ್ರಶ್ನೆ ಅಲ್ಲಿನ ಕಾರ್ಮಿಕರ ಜತೆಗೆ ಪ್ರಯಾಣಿಕರಿಗೂ ಕಾಡಿದ್ದಿದೆ.ಇದ್ದಕ್ಕಿದ್ದಂತೆ ಆಡಳಿತ ಮಂಡಳಿ ಸಂಸ್ಥೆ ನಿರ್ವಹಣೆ ಮಾಡಲಾಗ್ತಿಲ್ಲ.ಸೇವೆಯನ್ನು ಸ್ಥಗಿತಗೊಳಿಸ್ತೇವೆ ಎಂದಾಗ ಮದ್ಯ ಪ್ರವೇಶ ಮಾಡಿದ್ದು ಕ್ಷೇತ್ರ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ.

ನಿಜವಾದ ಕಾಳಜಿಗೋ..ಅಥ್ವಾ ವೋಟ್‌ ಬ್ಯಾಂಕ್‌ ರಾಜಕಾರಣಕ್ಕೋ ಗೊತ್ತಿಲ್ಲ,ಸರ್ಕಾರದ ಮಟ್ಟದಲ್ಲಿ ಸಂಸ್ಥೆ ಉಳಿಸಲಿಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಿದ ಕರಂದ್ಲಾಜೆ.ಸರ್ಕಾರಕ್ಕೂ ಪತ್ರ ಬರೆದು ಸಂಸ್ಥೆ ಉಳಿಸಲು ಮನವಿ ಮಾಡಿದ್ರು.ತಕ್ಷಣಕ್ಕೆ ಸ್ಪಂದಿಸಿದ ಸರ್ಕಾರ ಅನುದಾನ ನೀಡುವ ಭರವಸೆಯನ್ನೂ ನೀಡ್ತು. ಶೋಭಾ ಹೇಳಿದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ಸರ್ಕಾರ ನೀಡಿಲ್ಲ ಎನ್ನುವದಕ್ಕೆ ಅನುದಾನದ ಕೊರತೆಯಿಂದ ಬೀಗಜಡಿದ ಘಟನೆಯೇ ಸಾಕ್ಷಿಯಾಗಿದೆ. ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಿಲ್ಲ..ಸಂಸ್ಥೆ ನಿರ್ವಹಣೆಯೂ ಕಷ್ಟವಾಗಿರುವುದರಿಂದ ನಾಳೆಯಿಂದ ಸಂಸ್ಥೆ ನಡೆಸೊಲ್ಲ,ಬೀಗ ಹಾಕ್ತಿದ್ದೇವೆಂದು ಆಡಳಿತ ಮಂಡಳಿ ಕಾರ್ಮಿಕರಿಗೆ ತಿಳಿಸಿ ಇವತ್ತು ಅದನ್ನು ಕಾರ್ಯಗತಗೊಳಿಸಿಯೇ ಬಿಟ್ಟಿದೆ.

ಸಹಕಾರ ಸಂಸ್ಥೆ ಬಗ್ಗೆ ಒಂದಿಷ್ಟು: ಕಾಫಿ ನಾಡಿನ ಅಸ್ಮಿತೆಯೆಂದೇ ಕರೆಯಿಸಿಕೊಂಡಿದ್ದ ಸಹಕಾರ ಸಾರಿಗೆ ತನ್ನ ಸಂಚಾರ ಸೌಲಭ್ಯ ಸ್ಥಗಿತಗೊಳಿಸಿರುವುದು ಭಾರೀ ದೊಡ್ಡ ನಷ್ಟಕ್ಕೆ ಕಾರಣವಾಗ್ತಿರುವುದಂತೂ ಸತ್ಯ.ಕಾರ್ಮಿಕರ ಶ್ರಮದಿಂದ್ಲೇ ಅಸ್ಥಿತ್ವಕ್ಕೆ ಬಂದು ಅಷ್ಟೇ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದು,ಅತೀ ದೊಡ್ಡ ಸಂಪರ್ಕ ಜಾಲವಾಗಿ ಬೆಳೆದ ಹೆಗ್ಗಳಿಕೆ ಸಹಕಾರ ಸಾರಿಗೆ ಸಂಸ್ಥೆಯದು.ಅನೇಕ ಏಳುಬೀಳುಗಳ ಸವಾಲನ್ನು ಮೆಟ್ಟಿನಿಂತು ಮಲೆನಾಡಿನ ಜನರ ಸೇವೆ ಮಾಡುತ್ತಿತ್ತು.

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚಾರ ಜಾಲ ಹೊಂದಿದ್ದ ಸಹಕಾರ ಸಾರಿಗೆಯನ್ನು  1.10 ಲಕ್ಷ ಪ್ರಯಾಣಿಕರು ಅವಲಂಭಿಸಿದ್ದರು.ನಿತ್ಯ, 12 ಸಾವಿರ ವಿದ್ಯಾರ್ಥಿಗಳನ್ನು ರಿಯಾಯಿತಿ ದರದಲ್ಲಿ ಶಾಲೆ ಕಾಲೇಜಿಗೆ ಕರೆದೊಯ್ಯುತ್ತಿದ್ದ ಸಹಕಾರ ಸಾರಿಗೆ ಬಂದ್‌ ಆಗ್ತಿರುವುದು ವಿದ್ಯಾರ್ಥಿಗಳಿಗೆ ನೋವು ತಂದಿದೆ.ಸಾರಿಗೆ ಪ್ರಾಧಿಕಾರದ ನಿಯಮಗಳು, ಏರಿಕೆಯಾದ ಇಂಧನ ಬೆಲೆ, ದುಬಾರಿ ಬಿಡಿಭಾಗಗಳ ಖರೀದಿಯಿಂದ ಸಂಸ್ಥೆ ಆರ್ಥಿಕ ದುಸ್ಥಿಗೆ ತುಲುಪಿದ್ದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.

ಸಿಎಂ ಆದೇಶಕ್ಕೂ ಕವಡೆ ಕಾಸಿನ ಬೆಲೆ ಕೊಡದ ಅಧಿಕಾರಿಗಳು: ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಸಂಚಾರ ನಾಡಿಯೇ ಆಗಿದ್ದ ಸಂಸ್ಥೆ ಆರ್ಥಿಕ ನಷ್ಟಕ್ಕೆ ಸಿಲುಕಿದ್ದನ್ನು ಶೋಭಾ ಸರ್ಕಾರದ ಗಮನಕ್ಕೆ ತಂದಿದ್ರು.

ತಕ್ಷಣ ಸ್ಪಂದಿಸಿದ ಸಿಎಂ ಯಡಿಯೂರಪ್ಪ 2019ರ ಸೆ.7ರಂದು ವಿದ್ಯಾರ್ಥಿಗಳ ಬಸ್ ಪಾಸ್​ಗಾಗಿ 6.62 ಕೋಟಿ ರೂ. ಅನುದಾನಕ್ಕೆ ಆದೇಶ ಮಾಡಿದ್ದರು.ಅಗತ್ಯ ಬಿದ್ದರೆ ಇನ್ನೊಂದಷ್ಟು ಅನುದಾನ ಬಿಡುಗಡೆಗೂ ಸೂಚನೆ ನೀಡಿದ್ರು. ಆದರೆ ಆರ್ಥಿಕ ಇಲಾಖೆ ಸಲ್ಲದ ನೆಪವೊಡ್ಡಿ ಸಂಸ್ಥೆಗೆ ಅನುದಾನ ನಿರಾಕರಿಸಿರುವುದರಿಂದ ಬಸ್​ಗಳು ಕೊಪ್ಪದ ಸಂಸ್ಥೆ ಆವರಣದಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಲಂಗರು ಹಾಕಿ ನಿಂತಿವೆ,ಇದನ್ನು ನೋಡಿ ಶಾಕ್‌ ಆಗಿರುವ ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.ಇಷ್ಟೆಲ್ಲಾ ಆಗ್ತಿದ್ರೂ ಸಂಸದೆ ಶೋಭಾ ಕರಂದ್ಲಾಜೆ ತುಟಿ ಬಿಚ್ಚದಿರುವ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸ್ತಿದ್ದಾರೆ.

ರಾಜ್ಯದಲ್ಲಿ ಕಾರ್ಮಿಕ ಶ್ರಮದಿಂದ್ಲೇ ಮೇಲೆ ಬಂದು,ಅತ್ಯುತ್ತಮ ಸಾರಿಗೆ ಎನ್ನುವ ಹೆಗ್ಗಳಿಕೆ ಪಡೆದಿದ್ದ ಏಕೈಕ ಸಾರಿಗೆ ವ್ಯವಸ್ಥೆಯಾಗಿದ್ದ  ಸಹಕಾರ ಸಾರಿಗೆ ಸಂಸ್ಥೆಗೆ ಬೀಗ ಬೀಳ್ತಿರೋದು ಒಂದು ಉತ್ತಮ ಸಾರಿಗೆ ಕಂಪೆನಿಯನ್ನು ಉಳಿಸಿಕೊಳ್ಳದ  ಸರ್ಕಾರಕ್ಕೆ ನಾಚಿಕೆ ತರುವಂತದ್ದು.ಶೋಭಾ ಅವರಿಗೆ ನೈತಿಕತೆ ಹಾಗೂ ಬದ್ಧತೆ ಇದ್ದರೆ ಸಂಸ್ಥೆ ಉಳಿಸ್ಬೇಕೆನ್ನುವ ಸವಾಲನ್ನು ಮಲೆನಾಡಿಗರು ಹಾಕ್ತಿದ್ದಾರೆ.ಈಗಲಾದ್ರೂ ಗಾಢ ನಿದ್ರೆಯಲ್ಲಿರುವ ಶೋಭಾ ಎಚ್ಚೆತ್ತುಕೊಳ್ತಾರಾ..ಕಾದು ನೋಡ್ಬೇಕಿದೆ.

#kannadaflashnews #kannadanews #transport #sahakaarasaarige #bus #finance #lost #lockout #cityservice #koppa #chickmaglur #shivamogga #udupi #chiefminister #bsyediyurappa #memberofparliament-shobhakarandlaaje

Spread the love
Leave A Reply

Your email address will not be published.

Flash News