ಸ್ಲಂ ಭರತ ಎನ್ ಕೌಂಟರ್-ಪೊಲೀಸರಿಗೆ ಮಾನವ ಹಕ್ಕು ಆಯೋಗ ನೊಟೀಸ್ !

0

ಬೆಂಗಳೂರು:ಕುಖ್ಯಾತ ಪಾತಕಿ ಸ್ಲಂ ಭರತನ ಪೊಲೀಸ್ ಎನ್ ಕೌಂಟರ್ ಇದೀಗ ಮಾನವ ಹಕ್ಕು ಆಯೋಗದ ಮೆಟ್ಟಿಲನ್ನೇರಿದೆ.ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಎನ್ ಕೌಂಟರ್ ನಡೆಸಿದ ಇನ್ಸ್ ಪೆಕ್ಟರ್ಸ್ ದಿನೇಶ್, ಲೋಹಿತ್ ಹಾಗೂ ಇನ್ನಿತರ ಸಿಬ್ಬಂದಿ ಸೇರಿದಂತೆ ಡಿಸಿಪಿ ಶಶಿಕುಮಾರ್ ಗೆ ನೊಟೀಸ್ ಜಾರಿ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ.

ಎನ್ ಕೌಂಟರ್ ನಡೆಸಿರುವ ರೀತಿಯ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ಅನುಮಾನ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಹ್ಯೂಮನ್ ರೈಟ್ಸ್ ನೊಟೀಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಯಾವುದೇ ಎನ್ ಕೌಂಟರ್ ನಡೆದಾಗ್ಲೂ ಸಾರ್ವಜನಿಕವಾಗಿ ವ್ಯಕ್ತವಾಗುವ ಆಕ್ಷೇಪಗಳ ಹಿನ್ನಲೆಯಲ್ಲಿ ಹ್ಯೂಮನ್ ರೈಟ್ಸ್ ದೂರು ದಾಖಲಿಸಿಕೊಳ್ಳೋದು ಕಾಮನ್.ಅದೇ ರೀತಿಯ ಬೆಳವಣಿಗೆ ಹೆಸರಘಟ್ಟದಲ್ಲಿ ನಡೆದ ಸ್ಲಂ ಭರತನ ಎನ್ ಕೌಂಟರ್ ವಿಷಯದಲ್ಲೂ ಮುಂದುವರೆದಿದ್ದು ಎನ್ ಕೌಂಟರ್ ನಡೆಸಿದ ಬಗ್ಗೆ ವಿಸ್ತ್ರತವಾದ ವರದಿಯನ್ನು ಡಿಸಿಪಿ ನೇತೃತ್ವದ ತಂಡ ನೀಡಬೇಕಾಗುತ್ತೆ.ಬಹುಷಃ ಸೋಮವಾರ ನೊಟೀಸ್ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ ಎಂದು ಮಾನವ ಹಕ್ಕುಗಳ ಆಯೋಗದ ಮೂಲಗಳು ತಿಳಿಸಿವೆ.

Spread the love
Leave A Reply

Your email address will not be published.

Flash News