ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ಬೈಕ್ ವೀಲ್ಹಿಂಗ್

0

ಬೆಂಗಳೂರು:ಬೆಂಗಳೂರು ಪೊಲೀಸ್ರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಹೆಚ್ಚಾಗುವ ಸಾಧ್ಯತೆಗಳಿವೆ.ಏಕೆಂದ್ರೆ ಬೇರೆ ರಸ್ತೆಗಳಿಗೆ ಸೀಮಿತವಾಗಿದ್ದಅಪಾಯಕಾರಿ ಬೈಕ್ ವೀಲ್ಹಿಂಗ್ ಏರ್ ಪೋರ್ಟ್ ರಸ್ತೆಗೂ ವ್ಯಾಪಿಸಿದೆ.ಬೆಳ್ಳಂಬೆಳಗ್ಗೆ ಏರ್ಪೋರ್ಟ್ ರಸ್ತೆಯಲ್ಲಿ ಡೇಂಜರಸ್ ಬೈಕ್ ವೀಲಿಂಗ್ ಮಾಡುತ್ತಿರುವ ದೂರುಗಳು ಹೆಚ್ಚಾಗುತ್ತಲೇ ಇವೆ.ಓವರ್ ಸ್ಪೀಡ್ ನಲ್ಲಿ ಸಂಚರಿಸುವ ವಾಹನಗಳ ನಡುವೆಯೇ ಪ್ರಾಣಕ್ಕೆ ಎದುರಾಗಬಹುದಾದ ಅಪಾಯಕ್ಕೂ ಕೇರ್ ಮಾಡದೆ ಮೂರು ಬೈಕ್ ಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಡಾರಿಗಳ ದೃಶ್ಯಗಳು ಲಭ್ಯವಾಗಿದೆ. ವೀಲಿಂಗ್ ಮಾಡುತ್ತಾ ಅಕ್ಕಪಕ್ಕದ ವಾಹನಗಳಿಗೆ ಚಮಕ್ ಕೊಡ್ತಿರೋ ಯುವಕರ ಡೆಡ್ಲಿ ವೀಲ್ಹಿಂಗ್ ನ ದೃಶ್ಯಗಳನ್ನು ಏರ್ಪೋರ್ಟ್ ರಸ್ತೆಯಲ್ಲಿ ಹೊರಟಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಫುಂಡ ಪೋಕರಿಗಳ ಈ ಅಪಾಯಕಾರಿ ವೀಲಿಂಗ್ ನಿಂದ ಅಕ್ಕಪಕ್ಕದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಹೈರಾಣಗೊಂಡಿದ್ದಾರಷ್ಟೇ ಅಲ್ಲದೇ,ಇಂಥವರಿಂದ ರಕ್ಷಣೆ ನೀಡುವಂತೆಯೂ ಪೊಲೀಸ್ ಕಮಿಷನರ್ ಅವರಲ್ಲಿ ಕೋರಿಕೊಂಡಿದ್ದಾರೆ.

ಇದನ್ನೂ ನೋಡಿ.. ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ಬೈಕ್ ವೀಲ್ಹಿಂಗ್

 

Spread the love
Leave A Reply

Your email address will not be published.

Flash News