ಕುಖ್ಯಾತ ರಾಬರ್ ಕುಣಿಗಲ್ ರವಿ ಅಂದರ್

0

ಬೆಂಗಳೂರು:ಕುಖ್ಯಾತ ಮನೆಗಳ್ಳ-ನಟೋರಿಯಸ್ ದರೋಡೆಕೋರ ರೌಡಿಶೀಟರ್​ ಕುಣಿಗಲ್​ ಗಿರಿಯನ್ನ ಸಿಸಿಬಿ ಪೊಲೀಸ್ರು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಕಳೆದ ವಾರವಷ್ಟೆ ನಗರ ಕುಖ್ಯಾತ ರೌಡಿಶೀಟರ್​ ಸ್ಲಂಭರತ ಎನ್​ಕೌಂಟರ್​ ಮಾಡಿ ರೌಡಿ ಅಸಾಮಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದ ಪೊಲೀಸರು ಮತ್ತೊಬ್ಬ ರೌಡಿಯನ್ನ ಬಲೆಗೆ ಬೀಳಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತನ್ನದೇ ಹವಾ ಇಟ್ಕೊಂಡು ದಬ್ಬಾಳಿಕೆ ನಡೆಸ್ತಿದ್ದ ನಟೋರಿಯಸ್​ ರೌಡಿಶೀಟರ್​ ಕುಣಿಗಲ್​ ಗಿರಿಯನ್ನು ಸಿಸಿಬಿ ಪೊಲೀಸರು ಪ್ಯಾಲೇಸ್​ ಮೈದಾನದಲ್ಲಿರುವ ಕಂಟ್ರಾಕ್ಟರ್​ ಕ್ಲಬ್​ನಲ್ಲಿ ಗ್ಯಾಂಬ್ಲಿಂಗ್​ ಆಟ ಆಡುವಾಗ ಖೆಡ್ಡಾಕ್ಕೆ ಬೀಳಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಗ್ಯಾಂಬ್ಲಿಂಗ್​ ಆಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಇನ್ಸ್​​ಪೆಕ್ಟರ್​ ಶ್ರೀಧರ್​ ಪೂಜಾರ್ ನೇತೃತ್ವದ ತಂಡ ಗಿರಿ ಸೇರಿದಂತೆ ಗ್ಯಾಂಬ್ಲಿಂಗ್​ ನಲ್ಲಿ ತೊಡಗಿದ್ದ 17 ಜನರನ್ನ ವಶಕ್ಕೆ ಪಡೆದುಕೊಂಡಿದೆ. ಅಂದ್ಹಾಗೆ ಕೊಲೆಯತ್ನ, ಸುಲಿಗೆ, ದರೋಡೆ, ಬೆದರಿಕೆ ಸೇರಿದಂತೆ ರೌಡಿ ಕುಣಿಗಲ್​ ಗಿರಿ ಮೇಲೆ ಸುಮಾರು 120ಕ್ಕು ಹೆಚ್ಚು ಕೇಸ್​ಗಳಿವೆ.ಅದರಲ್ಲಿ ಗಂಭೀರ ಪ್ರಕರಣಗಳ ಮೇಲೆ ಪೊಲೀಸರು ಗಿರಿಗೆ ಡ್ರಿಲ್​ ಶುರುವಿಟ್ಟಿದ್ದಾರೆ.

ಗಿರಿ ಕಳೆದ ವರ್ಷ ರೆಸಿಡೆನ್ಸಿ ರಸ್ತೆಯ ಟೈಮ್ಸ್​ ಬಾರ್​ನಲ್ಲಿ ಬರ್ತಡೇ ಪಾರ್ಟಿ ನಡೆಸುವಾಗ,ಸಿಸಿಬಿ ಪೊಲೀಸರು ದಾಳಿ ನಡೆಸಿದ್ರು. ಈ ವೇಳೆ ಆಸಾಮಿ ಪ್ರಿಡ್ಜ್​ನಲ್ಲಿ ಅವಿತುಕೊಂಡು ಬಳಿಕ ಹಿಂಬಾಗಿಲ ಮೂಲಕ ಎಸ್ಕೇಪ್​ ಆಗಿದ್ದ. ಅಂದಿನಿಂದ ಆತನ ಪತ್ತೆಗಾಗಿ ಪೊಲೀಸರು ಹೊಂಚಾಕುತ್ತಿದ್ದರು. ಒಂದು ವರ್ಷದಿಂದ ತಲೆಮರೆಸಿಕೊಂಡೇ ಆಕ್ಟೀವ್ ಆಗಿದ್ದ ಗಿರಿಯನ್ನು ನಿನ್ನೆ ಕಂಟ್ರಾಕ್ಸರ್​ ಕ್ಲಬ್ ನಿಂದ ಪೊಲೀಸರು ಎತ್ತಾಕಂಡು ಬಂದಿದ್ದಾರೆ. ಖಾಕಿ ಬಲೆಗೆ ಬಿದ್ದಿದ್ದಾನೆ. 

Spread the love
Leave A Reply

Your email address will not be published.

Flash News