“ಮಂತ್ರಿ” ಒತ್ತುವರಿ ಸಾಬೀತು-ಶೀಘ್ರವೇ ಪಾಲಿಕೆ ವಶ!

ಬೆಂಗಳೂರು:ಪ್ರತಿಷ್ಟಿತ ಮಂತ್ರಿ ಸಂಸ್ಥೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟಿದೆ.ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಸರ್ವೇಯರ್ಸ್ ನಡೆಸಿದ ಸರ್ವೆಯಲ್ಲಿ ಮಂತ್ರಿ ಸಂಸ್ಥೆ ಸರ್ಕಾರದ 4.28 ಎಕ್ರೆ ಭೂಮಿಯನ್ನು ಒತ್ತುವರಿ ಮಾಡಿರುವುದು ಪ್ರೂವ್ ಆಗಿದೆ.ವರದಿಯನ್ನು ಕಮಿಷನರ್ ಅವರಿಗೆ ಸಲ್ಲಿಸಲಾಗಿದೆ.ಮಂತ್ರಿ ಸಂಸ್ಥೆಯ ಮಂತ್ರಿ ಮಾಲ್ ಹಾಗೂ ಮಂತ್ರಿ ಗ್ರೀನ್ಸ್ ನಿಂದ ಸರ್ಕಾರದ ಭೂಮಿ ಒತ್ತುವರಿ ಪ್ರೂವ್ ಆಗಿದ್ದು, ವರದಿಯಲ್ಲಿ ಮಂತ್ರಿ ಸಂಸ್ಥೆ 4.28 ಎಕ್ರೆ ಒತ್ತುವರಿ ಮಾಡಿರುವುದು ಸಾಬೀತಾಗಿದೆ.

ಕಮಿಷನರ್ ಅವರಿಗೆ ಸಲ್ಲಿಕೆಯಾಗಿರುವ ರಿಪೋರ್ಟನ್ನು ಪಶ್ಚಿಮ ವಲಯ ಜಂಟಿ ಆಯುಕ್ತರಿಗೆ ರವಾನೆ ಮಾಡಲಾಗುವುದು.ಅದನ್ನು ಅವಲೋಕಿಸಿ ಕಮಿಷನರ್ ಗೆ ಮಾಹಿತಿ ನೀಡಲಿದ್ದಾರೆ.ಒತ್ತುವರಿ ಜಾಗವನ್ನು ವಶಕ್ಕೆ ಪಡೆಯಲು ಅಗತ್ಯ ಕ್ರಮಗಳ ಬಗ್ಗೆ ಅಂತಿಮ ನಿರ್ದಾರ ಕೈಗೊಳ್ಳುವ ಸಾಧ್ಯತೆಗಳಿವೆ‌..

ಅಪಾರ್ಟ್ಮೆಂಟ್..ಮಾಲ್ ವಶವಾಗಲಿದೆಯೇ:ಈಗ ಉಳಿದಿರುವ ಪ್ರಶ್ನೆ ಏನಂದರೆ,ಒತ್ತುವರಿ ಮಾಡಿರುವ ಮಂತ್ರಿ ಮಾಲ್ ಹಾಗೂ ಮಂತ್ರಿ ಅಪಾರ್ಟ್ಮೆಂಟ್ ನಿಜವಾಗ್ಲೂ ಬಿಬಿಎಂಪಿ ವಶವಾಗುತ್ತಾ ಎನ್ನೋದು‌.ಏಕೆಂದ್ರೆ ಇವತ್ತಿನವರೆಗೂ ಆ ರೀತಿ ಪಾಲಿಕೆ ವಶವಾದ ಉದಾಹರಣೆಗಳೇ ಇಲ್ಲ.ಹೀಗಿರುವಾಗ ಅಂತದ್ದೊಂದು ಅಚ್ಚರಿ ನಡೆಯುತ್ತಾ ಎನ್ಮೋದು‌.ಆದ್ರೆ ಇದನ್ನು ಮಾಡಿಯೇ ತೀರುತ್ತೇವೆ ಎನ್ತಾರೆ ಬಿಬಿಎಂಪಿ ಜಂಟಿ ಆಯುಕ್ತ ಚಿದಾನಂದ್.ಅದೇನೇ ಆಗಲಿ,ಮಂತ್ರಿ ಮಾಡಿರುವ ಅಕ್ರಮಕ್ಕೆ ಸರಿಯಾದ ಶಾಸ್ತಿ ಆಗಲೇಬೇಕು…ಅದು ಏನ್ ಮಾಡಿದ್ರೂ ನಡೆದೋಗುತ್ತೆ ಎನ್ನುವ ಮನಸ್ಥಿತಿಯಲ್ಲಿರುವ ಬಿಲ್ಡರ್ಸ್ ಗಳಿಗೆ ಎಚ್ಚರಿಕೆಯ ಪಾಠವಾಗ್ಬೇಕು.  

Spread the love

Comments are closed.

Flash News