“ಶಾಧಿಭಾಗ್ಯ” ರದ್ದು ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣನಾ?!

0

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆಯೇ…ಈ ಅನುಮಾನಕ್ಕೆ ಕಾರಣ ಅಲ್ಪಸಂಖ್ಯಾತರ ಪಾಲಿಗೆ ಸಂಜೀವಿನಿಯಾಗಿದ್ದ ಶಾಧಿಭಾಗ್ಯ ಯೋಜನೆಯ ರದ್ದು.ಯೆಸ್…ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಮಹತ್ವಾಕಾಂಕ್ಷೆಯ ಶಾಧಿಭಾಗ್ಯ ಯೋಜನೆಯನ್ನು ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ.ಶಾಧಿಭಾಗ್ಯದಿಂದ ಸಾಕಷ್ಟು ಮುಸ್ಲಿಂ ಕುಟುಂಬಗಳಿಗೆ ಆರ್ಥಿಕವಾಗಿ ಅನುಕೂಲವಾಗುತ್ತಿತ್ತು.ಆದ್ರೆ ಆ ಯೋಜನೆಯನ್ನು ರದ್ದುಪಡಿಸಿರುವುದು ಇದೀಗ ಮುಸ್ಲಿಂ ಸಮುದಾಯವನ್ನು ಕೆಂಡಾಮಂಡಲಗೊಳಿಸಿದೆ.

ಯಾವುದೇ ಯೋಜನೆಗಳಿಗೂ ಕೊಕ್ಕೆ ಹಾಕದ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಅನುಕೂಲಕರವಾಗಿದ್ದ ಶಾಧಿಭಾಗ್ಯ ಯೋಜನೆಗೆ ಕೊಕ್ಕೆ ಹಾಕಿರುವುದರ ಹಿಂದೆ ದ್ವೇಷ ರಾಜಕಾರಣ ಅಡಗಿದೆ ಎಂದು ಕೈ ನಾಯಕರು ಆಪಾದಿಸಿದ್ದಾರೆ.ಶಾಧಿಭಾಗ್ಯ ಯೋಜನೆಯನ್ನು ರದ್ದುಪಡಿಸುವ ಮೂಲಕ ಮಂಗಳೂರು ಗಲಭೆ ಪ್ರಕರಣದ ವಿಷಯದಲ್ಲಿ ಆಗಿದ್ದ ಮುಖಭಂಗಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ದ್ವೇಷ ಮನೋಭಾವ ಪ್ರದರ್ಶಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಬಗ್ಗೆ ಇರುವ ಮುನಿಸಿಗೆ ಮುಸ್ಲಿಂ ಸಮುದಾಯವನ್ನೇಕೆ ಟಾರ್ಗೆಟ್ ಮಾಡ್ಬೇಕು.ಮುಸ್ಲಿಂ ಸಮುದಾಯ ಬಿಜೆಪಿಗೆ ಓಟ್ ಹಾಕಿಯೇ ಇಲ್ವಾ…ಚುನಾವಣೆಗೆ ಮುನ್ನ ಮುಸ್ಲಿಮರನ್ನು ಓಲೈಸಿದ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂಗೆ ಮುಸ್ಲಿಂ ಸಮುದಾಯವನ್ನು ಬೇಕಂತಕೇ ಟಾರ್ಗೆಟ್ ಮಾಡುತ್ತಿದೆ.ಬಿಜೆಪಿ ಸರ್ಕಾರ ರದ್ದುಮಾಡಿರುವ ಶಾಧಿಭಾಗ್ಯ ಯೋಜನೆಯ ಜಾರಿಗೆ ಹೋರಾಟ ನಡೆಸುವಂಥ ಸ್ಥಿತಿಯನ್ನು ಬಿಜೆಪಿನೇ ಸೃಷ್ಟಿ ಮಾಡಿದೆ ಎಂದು ಖಾದರ್ ಎಚ್ಚರಿಸಿದ್ದಾರೆ. 

Spread the love
Leave A Reply

Your email address will not be published.

Flash News