ಕೊರೊನಾ ಮಹಾಮಾರಿ ತಡೆಗೆ “ಆರೋಗ್ಯ ತುರ್ತು ಪರಿಸ್ಥಿತಿ” ಘೋಷಣೆ-13 ನಿಯಮ ಜಾರಿ

0

ಬೆಂಗಳೂರು: ಮಾರಕ ಕೊರೊನಾ ವೈರಸ್ ತನ್ನ ವಿದ್ವಂಸಕತೆಯನ್ನು ಮೆರೆಯುವ ಸಾಧ್ಯತೆಗಳನ್ನು ಅರಿತ ಹಿನ್ನಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲದ ರಾಜ್ಯ ಸರ್ಕಾರ “ಆರೋಗ್ಯ ತುರ್ತು ಪರಿಸ್ಥಿತಿ”ಯನ್ನು ಘೋಷಿಸಿದೆ.ಅಷ್ಟೇ ಅಲ್ಲ,ಕೊರೊನಾ ತಡೆಗೆ  ಕರ್ನಾಟಕ ಸರ್ಕಾರ ವಿಶೇಷ ಕಠಿಣ ಕಾನೂನು ಜಾರಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2,3 ಮತ್ತು 4ರಡಿ ರಾಜ್ಯ ಸರ್ಕಾರ ‘ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಯಂತ್ರಣ 2020′(Karnataka Epidemic Diseases, COVID-19 Regulations, 2020’) ಹೆಸರಿನಲ್ಲಿ 13 ನಿಯಮಗಳ ನಿಯಂತ್ರಣ ಕ್ರಮವನ್ನು ಪ್ರಕಟಿಸಿದ್ದು ತತ್ ಕ್ಷಣಕ್ಕೆ ಜಾರಿಗೊಳಿಸುವಂತೆಯೂ ಸೂಚಿಸಿದೆ.

ಆ 13 ನಿಯಮಗಳ ನಿಯಂತ್ರಣ ಕ್ರಮ ಏನು?ಅವುಗಳ ಜಾರಿ ಹೇಗೆ?

1. ಸೋಂಕು ಶಂಕಿತ ವ್ಯಕ್ತಿ ಸರ್ಕಾರಿ/ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ಕಡ್ಡಾಯ.ಚಿಕಿತ್ಸೆ ನಿರಾಕರಿಸಿದ್ರೆ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳೇ ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಬೇಕು. 14 ದಿನ ಐಸೋಲೇಷನ್ ಸೆಂಟರಿನಲ್ಲಿಯೇ  ಇಟ್ಟುಕೊಂಡು ಚಿಕಿತ್ಸೆ ನೀಡಬೇಕು.

  1. ಕೊರೊನಾ  ಪಾಸಿಟಿವ್  ರಿಪೋರ್ಟ್ ಆದ ವ್ಯಕ್ತಿ ವಾಸವಿರುವ ಪ್ರದೇಶ, ಹಳ್ಳಿ/ಬಡಾವಣೆ/ನಗರ/ ವಾರ್ಡ್/ ಕಾಲೋನಿಗಳಿಗೆ ಸಂಪೂರ್ಣ ದಿಗ್ಭಂಧನ.

  2. ಸೋಂಕಿತ ವ್ಯಕ್ತಿಯ ವಾಸ ಪ್ರದೇಶ  ಸಂಪೂರ್ಣ ನಿಷಿದ್ಧ ಪ್ರದೇಶವಾಗಿ ಘೋಷಣೆ.ಸಾರ್ವಜನಿಕರ  ಪ್ರವೇಶಕ್ಕೂ ನಿರ್ಬಂಧ.

  3. ಸೋಂಕಿತ ವ್ಯಕ್ತಿ ವಾಸವಿರುವ ಪ್ರದೇಶದವರು ಎಲ್ಲಿಯೂ ಹೊರಗೆ ಹೋಗುವಂತಿಲ್ಲ.ಆ ಏರಿಯಾದ ಶಾಲಾ ಕಾಲೇಜ್ , ಕಚೇರಿ ಹಾಗೂ ಸಾರ್ವಜನಿಕ ಸಮಾರಂಭ ಬಂದ್.ವಾಹನಗಳ ಓಡಾಟ ನಿಷೇಧ.

  4. ಸೋಂಕಿತರು  ಹಾಗೂ ಶಂಕಿತರು ಐಸೋಲೇಷನ್ ಸೆಂಟರ್‍ನಲ್ಲಿರಬೇಕು. ಈ ಸ್ಥಳದಲ್ಲಿನ ಖಾಸಗಿ ಸರ್ಕಾರಿ ಬಿಲ್ಡಿಂಗ್‍ಗಳನ್ನು ವಶಕ್ಕೆ ಪಡೆದುಕೊಂಡು ಅಲ್ಲಿ ಐಸೋಲೇಷನ್ ನಿರ್ಮಾಣ ಮಾಡಬೇಕು. ತುರ್ತು ಪರಿಸ್ಥಿತಿ ನಿಭಾಯಿಸಲು ಎಲ್ಲಾ ಸರ್ಕಾರಿ ಸಿಬ್ಬಂದಿ ಕೈಜೋಡಿಸಲೇಬೇಕು. ಕುಟುಂಬ ಮತ್ತು ಆರೋಗ್ಯ ಇಲಾಖೆಯ   ಸೂಚನೆ ಪಾಲನೆ ಕಡ್ಡಾಯ.

6.ತುರ್ತು ಪರಿಸ್ಥಿತಿಯ  ಕಾಯ್ದೆ ಜಾರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ಜನ್, ತಾಲೂಕು ಆರೋಗ್ಯ ಅಧಿಕಾರಿ, ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿಗಳ ಜೊತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿವೇಚನೆಗೊಳಪಟ್ಟಿರುತ್ತೆ.

  1. ಕೊರೊನಾ ಪಾಸಿಟಿವ್ ಕಂಡುಬಂದ ರೋಗಿ ವಿದೇಶಕ್ಕೆ ಹೋದ್ರೆ ಅಥವಾ ಆತ ಸಂಚರಿಸಿದ ಪ್ರದೇಶದ ಮಾಹಿತಿ ಸಂಗ್ರಹಿಸಬೇಕು. ಆ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಎಲ್ಲ ಮಾಹಿತಿ ಸಂಗ್ರಹ ಕಡ್ಡಾಯ.

  2. ಯಾರೇ ಅಥವಾ ಯಾವುದೇ ಸಂಸ್ಥೆ  ಕುಟುಂಬ ಮತ್ತು ಕಲ್ಯಾಣ ಇಲಾಖೆಯ ಅನುಮತಿ ಪಡೆಯದೇ ಕೊರೊನಾ  ಮಾಹಿತಿ ನೀಡುವಂತಿಲ್ಲ.  ಸುಳ್ಳು ಮಾಹಿತಿ ಹರಡಿದರೆ ಶಿಕ್ಷೆ ಕಡ್ಡಾಯ.

9. ರಾಜ್ಯದಲ್ಲಿ ಯಾವುದೇ ಖಾಸಗಿ ಲ್ಯಾಬೋರೇಟರಿಯವರಿಗೆ ಕೊರೊನಾ ವೈರಸ್ ಮಾದರಿ ಪರೀಕ್ಷೆ ಮಾಡಲು ಅನುಮತಿಯಿಲ್ಲ.ಭಾರತ ಸರ್ಕಾರ ನಿಗದಿಪಡಿಸಿದ ಮಾನದಂಡದಲ್ಲಿಯೇ ಎಲ್ಲವೂ ನಡೆಯಬೇಕು.

10.ಶಂಕಿತ  14 ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದರೆ ಅಥವಾ ಕೊರೊನಾ ಪಾಸಿಟಿವ್ ಕಂಡು ಬಂದ್ರೆ ಸಂಚರಿಸಿದ ಜಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳಿ,ಸಹಾಯವಾಣಿ 104ಕ್ಕೆ ಕರೆ ಮಾಡಿ ತಿಳಿಸಬೇಕು.

  1. ವ್ಯಕ್ತಿ ಕೊರೊನಾ ವೈರಸ್ ಇರುವ ದೇಶದಿಂದ ಆಗಮಿಸಿದ್ದರೆ  ಆ ವ್ಯಕ್ತಿ ಮನೆಯಲ್ಲೇ ಪ್ರತೇಕವಾಗಿ ಇರಬೇಕು  ಮುಖಕ್ಕೆ ಮಾಸ್ಕ್ ಧರಿಸಬೇಕು. 14 ದಿನ ಕುಟುಂಬದ ಸದಸ್ಯರ ಸಂಪರ್ಕದಿಂದ ದೂರ ಇರಬೇಕು.

13.  ಈ ಕಾಯ್ದೆ  ಒಂದು ವರ್ಷದವರೆಗೆ ಈ ಕಾನೂನು ಜಾರಿಯಲ್ಲಿರಲಿದೆ. ಈ ಕಾಯ್ದೆಯನ್ನು ಸಾರ್ವಜನಿಕರು/ ಸಂಸ್ಥೆಗಳು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶದ ಉಲ್ಲಂಘನೆ) ಅಡಿ ಶಿಕ್ಷಾರ್ಹ ಅಪರಾಧ.ನಿಯಮ ಉಲ್ಲಂಘನೆ ಕಂಡುಬಂದಲ್ಲಿ   ಶಿಕ್ಷೆ ನೀಡಬಹುದು.

 

Spread the love
Leave A Reply

Your email address will not be published.

Flash News