ನಾಳೆ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

0

ಬೆಂಗಳೂರು:ತಾಂತ್ರಿಕ ದುರಸ್ತಿ ಹಿನ್ನಲೆಯಲ್ಲಿ ನಾಳೆ ಒಂದು ದಿನ ಮೆಟ್ರೋ ವೇಳಾಪಟ್ಟಿಯಲ್ಲಿ ಬದ್ಲಾವಣೆ ಮಾಡಲಾಗಿದೆ.ರಾತ್ರಿ ವೇಳೆ ದುರಸ್ಥಿ ಕಾರ್ಯ ಮಾಡಲು ಬಿಎಂಆರ್ಸಿಎಲ್ ನಿರ್ಧರಿಸಿರುವುದರಿಂದ ಈ ಬದಲಾವಣೆ ಮಾಡಲಾಗಿದ್ದು ಇದರಿಂದಾಗಿ ಎಂಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿಗೆ ತೆರಳುವ ಮೆಟ್ರೊ ರೈಲು ರಾತ್ರಿ 10.30 ರವರೆಗೆ  ಸಂಚರಿಸುವುದಿಲ್ಲ.

ಬಯ್ಯಪ್ಪನಹಳ್ಳಿಯಿಂದ 10 ಗಂಟೆಗೆ ಮತ್ತು ಮೈಸೂರು ರಸ್ತೆಯಿಂದ ರಾತ್ರಿ‌ 9.30 ಗೆ ಹೊರಡುವ ಟ್ರೈನೇ ಮೆಟ್ರೋದ ಕೊನೆಯ ಟ್ರಿಪ್ ಆಗಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತರಾವ್ ಚವ್ಹಾಣ್ ತಿಳಿಸಿದ್ದಾರೆ.ಇನ್ನು ಬುಧವಾರದಿಂದ ಮುಂಜಾನೆ ಎಂದಿನಂತೆ 5 ಗಂಟೆಗೆ ಎಲ್ಲಾ ರೈಲುಗಳೂ ಟ್ರ್ಯಾಕ್ ಗೆ ಇಳಿಯಲಿವೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಕೊರೊನಾ ಎಫೆಕ್ಟ್ ನಿಂದಾಗಿ  ನಮ್ಮ ಮೆಟ್ರೋ ಲಾಭದ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದ್ದು ನಿತ್ಯ ಸಂಚರಿಸುತ್ತಿದ್ದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.ಇದು  ಸಂಚಾರದ ವೇಳಾಪಟ್ಟಿ ಬದಲಾವಣೆಗೆ ಕಾರಣವಾಗಲಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.ಆದರೆ ಈ ಬಗ್ಗೆ ಇನ್ನೂ ಮೆಟ್ರೋ ಆಡಳಿತ ಮಂಡಳಿ ಯಾವುದೇ ನಿರ್ದಾರ ಕೈಗೊಂಡಿಲ್ಲ. 

Spread the love
Leave A Reply

Your email address will not be published.

Flash News