ಕೊರೊನಾ ಕುರಿತು ಅಣ್ಣಾಮಲೈ ಸಂದೇಶ ಏನ್ ಗೊತ್ತಾ…

0

ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಪೆಡಂಭೂತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ,ಜನತೆ ಧೈರ್ಯವಾಗಿ ಈ ಪಿಡುಗನ್ನು ಎದುರಿಸಲು ಮಾನಸಿಕ ಹಾಗೂ ಆರೋಗ್ಯಿಕವಾಗಿ ಸಿದ್ಧವಾಗಬೇಕೆಂದು ಮನವಿ ಮಾಡಿದ್ದಾರೆ.ಈ ಬಗ್ಗೆ  ಕಳವಳ‌ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ  ಅಣ್ಣಾಮಲೈ ಸ್ನೇಹಿತರೇ ಜೀವ ಅಮೂಲ್ಯವಾದದ್ದುಅದನ್ನು ಕಾಪಾಡಿಕೊಳ್ಳಬೇಕು.

ಯಾವುದೇ ನಿರ್ಲಕ್ಷ್ಯ ಬೇಡ.ಏಕೆಂದ್ರೆ  ಮುಂದಿನ 2 ವಾರ ಭಾರತಕ್ಕೆ ತೀವ್ರ  ಸಂಕಷ್ಟ ಎದುರಾಗಲಿದೆ.ಜಾಗೃತರಾಗಿರಿ, ಎಲ್ಲೂ ಪ್ರಯಾಣ ಮಾಡಬೇಡಿ.ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೊಡುವ ಸೂಚನೆ,ಸಲಹೆ ಹಾಗೂ  ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ.ದಿನೇ ದಿನೇ ಕೇಳಿಬರುತ್ತಿರುವ ಸುದ್ದಿಗಳನ್ನು ಕೇಳಿದ್ರೆ ಆತಂಕ ಹಾಗೂ ದುಃಖವಾಗುತ್ತೆ ಎಂದು ತಿಳಿಸಿರುವ ಅವರು ಕೊರೊನಾ ಸೋಂಕಿತರ ಶೀಘ್ರ ಚೇತರಿಕೆಗೂ ಹಾರೈಸಿದ್ದಾರೆ.

Spread the love
Leave A Reply

Your email address will not be published.

Flash News