ಮುನಿರತ್ನಗೆ ಸಂಕಷ್ಟ-ತುಳಸಿ ಮುನಿರಾಜುಗೌಡಗೆ ಆನೆ ಬಲ ನೀಡಿದ ಹೈಕೋರ್ಟ್ ಆದೇಶ

0
ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿಮುನಿರಾಜುಗೌಡ
ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿಮುನಿರಾಜುಗೌಡ
ಮಾಜಿ ಶಾಸಕ ಮುನಿರತ್ನ
ಮಾಜಿ ಶಾಸಕ ಮುನಿರತ್ನ

ಬೆಂಗಳೂರು: ಮಾಜಿ ಶಾಸಕ ಮುನಿರತ್ನಗೆ ಮತ್ತೆ ಎದುರಾಗಿದೆ ಸಂಕಷ್ಟ.ಆರ್ ಆರ್ ನಗರ ಚುನಾವಣೆ ವೇಳೆ ಅಪಾರ್ಟ್ಮೆಂಟ್ ನಲ್ಲಿ ನಕಲಿ ಮತದಾರರ ಐಡಿ ಸೃಷ್ಟಿಸುತ್ತಿದ್ದ ಆರೋಪದ ಬಗ್ಗೆ ದಾಖಲಾದ ಪ್ರಕರಣವನ್ನು ಕೋರ್ಟ್ ತುಂಬಾ ಗಂಭೀರವಾಗಿ ಪರಿಗಣಿಸಿ ಕೇಸ್ ನ್ನು ರಿ ಓಪನ್ ಮಾಡಲು ನಿರ್ಧರಿಸಿದೆ.

ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿದ್ದಪಿಐಎಲ್ ವಿಚಾರಣೆಯನ್ನು ಹೈಕೋರ್ಟ್ ಅಂಗೀಕರಿಸಿದೆ,ಇದರಿಂದ ಮುನಿರತ್ನಗೆ ತೀವ್ರ ಸಂಕಷ್ಟ ಎದುರಾಗಿದೆ.ಈ ಹಿನ್ನಲೆಯಲ್ಲಿ ಹೈಕೋರ್ಟ್ ಅನರ್ಹ ಶಾಸಕ ಮುನಿರತ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. 

ಈ ಹಿಂದೆ ರಾಕೇಶ್ ಎಂಬುವವರು ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು.ಆದ್ರೆ ಮುನಿರತ್ನ ಬೆದರಿಕೆಯಿಂದಾಗಿ ಅವರು ಕೇಸ್ ನ್ನು ವಿಚಾರಣೆ ಹಂಐದಲ್ಲೇ ವಾಪಾಸ್ ಪಡೆದಿದ್ರು.ಆದ್ರೆ ಹೋರಾಟ ಕೈ ಬಿಡದ ಮುನಿರಾಜುಗೌಡ ತಮ್ಮ ಕಾನೂನಾತ್ಮಕ ಸಮರ ಮುಂದುವರೆಸಿದ್ದರು

.ನಕಲಿ ಓಟರ್ ಐಡಿ ಕಾರ್ಡ್ ನ ಪ್ರಮುಖ ಸಾಕ್ಷಿದಾರರಾದ ಆನಂದ್ ಕುಮಾರ್, ಸಂತೋಷ್ ಕುಮಾರ್ ಎಂಬುವವರಿಂದ ಇಂದು ಹೈ ಕೋರ್ಟ್ ಗೆ PIL ದಾಖಲಿಸಿದ್ದರು.ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು. ಪ್ರಕರಣದಲ್ಲಿ ಪೊಲೀಸ್ ತನಿಖೆಯೇ ಲೋಪಯುಕ್ತವಾಗಿದೆ ಎಂದು ಅಭಿಪ್ರಾಯಿಸಿದ್ರು.ಅಷ್ಟೇ ಅಲ್ಲ, ಮುನಿರತ್ನ ಪ್ರಭಾವೀ ವ್ಯಕ್ತಿಯಾಗಿರುವ ಕಾರಣ ಕೇಸ್ ನಲ್ಲಿ ಮುನಿರತ್ನ ಪರ ಪೋಲಿಸರು ಕೆಲಸ ಮಾಡಿದ್ದಾರೆ.

ಇದು ದೇಶದ ಗಮನ ಸೆಳೆದ ಪ್ರಕರಣ, ಪಾರದರ್ಶಕ ಚುನಾವಣೆಗೆ ಸವಾಲೊಡ್ಡಿದ ಪ್ರಕರಣವಾಗಿರೋದ್ರಿಂದ. ಕೇಸ್ ನ್ನು ಸಿಬಿಐ ತನಿಖೆ ಒಪ್ಪಿಸಬೇಕೆನ್ನುವ ಅರ್ಜಿದಾರರ ಒತ್ತಾಯ ಸರಿಯಾಗಿದೆ.ಹಾಗಾಗಿ ಅರ್ಜಿ ವಿಚಾರಣೆಯನ್ನುಕೈಗೆತ್ತಿಕೊಳ್ಳುವುದು ಸೂಕ್ತ ಹಾಗೂ ನ್ಯಾಯಯುಕ್ತ ಎಂದು ಅಭಿಪ್ರಾಯಿಸಿದ್ದಾರೆ.
ಹೈಕೋರ್ಟ್ ನ ಈ ಘೋಷಣೆಯಿಂದ ಮುನಿರತ್ನ ವಿರುದ್ಧ ಪಕ್ಷದ ವರಿಷ್ಠರನ್ನೇ ಎದುರಾಕಿಕೊಂಡು ಹೋರಾಟ ನಡೆಸುತ್ತಿರುವ ತುಳಸಿ ಮುನಿರಾಜು ಗೌಡ ಅವರಿಗೆ ಆನೆ ಬಲ ಬಂದಂತಾಗಿದೆ.

ಆದ್ರೆ ಮುನಿರತ್ನ ಅವರನ್ನು ಬೈ ಎಲೆಕ್ಷನ್ ಘೋಷಣೆಯಾದ್ರೆ ಕೊಟ್ಟ ಮಾತಿನಂತೆ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕೆನ್ನುವ ವರಿಷ್ಠರಿಗೆ ತೀವ್ತ ಮುಖಭಂಗ ಆದಂತಾಗಿದೆ.ಮುನಿರತ್ನ ಅವರಿಗಂತೂ ಜಂಘಾಬಲವೇ ಉಡುಗಿ ಹೋಗಿದೆ. 

Spread the love
Leave A Reply

Your email address will not be published.

Flash News