SSLC ಪರೀಕ್ಷೆ RTE ಪ್ರಕ್ರಿಯೆ-ಶೈಕ್ಷಣಿಕ ದಾಖಲಾತಿ ಎಲ್ಲವೂ  ಮುಂದೂಡಿಕೆ 

0

ಬೆಂಗಳೂರು:ಕೊರೊನಾ ವೈರಸ್ ನ ಭೀಕರತೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆತಂಕಕ್ಕೀಡಾಗಿರುವ ರಾಜ್ಯ ಸರ್ಕಾರ ಆರೋಗ್ಯ ಮೊದಲು, ಉಳಿದದ್ದೆಲ್ಲಾ ನಂತ್ರ ಎನ್ನುವ ನಿರ್ದಾರಕ್ಕೆ ಬಂದಿದೆ.ಈ ಹಿನ್ನಲೆಯಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪರಿಸ್ಥಿತಿ ತಹಬದಿಗೆ ಬರುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ಮುಂದೂಡಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ಸುತ್ತೋಲೆಯೊಂದನ್ನು ಕೂಡ ಹೊರಡಿಸಿದೆ.ಇದರ ಪ್ರಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ,2020ರ ಶೈಕ್ಷಣಿಕ ವರ್ಷದ ದಾಖಲಾತಿಗಳನ್ನು ಮುಂದೂಡಲಾಗಿದೆ.

ಕೊರೊನಾ ಭೀತಿ ನಡುವೆ ಯಾವುದೇ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಸಮಸ್ಯೆ ಮತ್ತಷ್ಟು ಉಲ್ಭಣಿಸೊಕ್ಕೆ ಅವಕಾಶ ನೀಡದಿರಲು ನಿರ್ಧರಿಸಿರುವ ಸರ್ಕಾರ ಏಪ್ರಿಲ್ 20ರ ನಂತರವೇ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ನಿರ್ಧರಿಸಿದೆ.ಇದಕ್ಕೂ ಮುನ್ನ ಮಾರ್ಚ್ 31ರವರೆಗೂ ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿತ್ತು.ಆದ್ರೆ ಪ್ರಧಾನಿ ಮೋದಿ ಅವರು ಏಪ್ರಿಲ್ 15 ರವರೆಗೆ ದೇಶವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿರುವುದರಿಂದ ಪರೀಕ್ಷಾ ದಿನಾಂಕವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

ಇನ್ನು 7 ರಿಂದ 9ನೇ ತರಗತಿ ಪರೀಕ್ಷೆಗಳನ್ನು ಕೂಡ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.ಪರಿಸ್ಥಿತಿ ತಹಬದಿಗೆ ಬರುವವರೆಗೂ ಯಾವುದೇ ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ.ಹಾಗೆಯೇ ಆರ್ ಟಿಇ ನಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನೂ ಕೂಡ ಮುಂದೂಡಲಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ 2020ರ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ತನ್ನ ಅಂತಿಮ ನಿಲುವನ್ನು ವ್ಯಕ್ತಪಡಿಸುವವರೆಗೂ ಮುಂದೂಡಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ಪ್ರಕಟಿಸಿದೆ.  

Spread the love
Leave A Reply

Your email address will not be published.

Flash News