ಮಹಾಮಾರಿ ಕೊರೊನಾ ಮಾರಣಾಂತಿಕ ಸ್ಥಿತಿ ತಲುಪೋಯ್ತಾ?!

0
ಮನೀಷ್ ಮೌದ್ಗಿಲ್
ಮನೀಷ್ ಮೌದ್ಗಿಲ್

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವನ್ನು ಕಾಡಲಿಕ್ಕೆ ಶುರುಮಾಡಿರುವ ಪ್ರಶ್ನೆಯೇ ಇದು.ಕೊರೊನಾ ತನ್ನ ವಿದ್ವಂಸಕತೆ ಪ್ರದರ್ಶಿಸುವ ಮಾರಣಾಂ ತಿಕ ಸ್ಥಿತಿ ತಲುಪಿ ಬಿಟ್ಟಿದ್ಯೆ…?

ದಿನೇ ದಿನೇ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ  ರಾಜ್ಯ ಸರ್ಕಾರವನ್ನು ಕೂಡ ಚಿಂತೆಗೀಡುಮಾಡಿದೆ.ಹೇಗೆ ಪರಿಸ್ಥಿತಿ ನಿಭಾಯಿಸುವುದು ಎನ್ನುವ ಪ್ರಶ್ನೆ ಭೂತಾಕಾರವಾಗಿ ಬೆಳೆದು ನಿಂತಿದ್ದರೆ  ಕೊರೊನಾದ ಮೂಲೋತ್ಪಾಟನೆಗೆ ಕಂಕಣ ತೊಟ್ಟು ಕೆಲಸ ಮಾಡುತ್ತಿರುವ  ಸರ್ಕಾರಕ್ಕೆ  ಜನರ ಅಸಹಕಾರ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.ಇದೆಲ್ಲದರ ನಡುವೆಯೇ ಕೊರೊನಾ ಮಿಷನ್ ನ ನೋಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ರಾಜ್ಯದಲ್ಲಿ ಕೊರೊನಾದ ಸ್ಥಿತಿಗತಿಯ ಗ್ರಾಫಿಕ್ಸೊಂದನ್ನು ಬಿಡುಗಡೆ ಮಾಡಿದ್ದಾರೆ.

26-03-2020 ಅಂದ್ರೆ ಇವತ್ತಿನವರೆಗಿನ ಅಂಕಿಸಂಖ್ಯೆಯನ್ನು ಕ್ರೋಢೀಕರಿಸಿ ಗ್ರಾಫಿಕ್ಸನ್ನು ಬಿಡುಗಡೆ ಮಾಡಲಾಗಿದೆ.ಜಿಲ್ಲಾವಾರು ಪೈಕಿ ಅತೀ ಹೆಚ್ಚಿನ ಪ್ರಕರಣಗಳು ಬೆಂಗಳೂರು ಅಂದ್ರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಿದೆ.ಅಂದ್ರೆ 17 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.ನಂತರದ ಸ್ಥಾನ 15 ಪ್ರಕರಣ ಪತ್ತೆಯಾಗಿರುವ  ಬೆಂಗಳೂರು ನಗರ ಜಿಲ್ಲೆ ಪಡೆದಿದೆ.ಇನ್ನು ದಕ್ಷಿಣ ಕನ್ನಡದಲ್ಲಿ 6,ಚಿಕ್ಕಾಬಳ್ಳಾಪುರದಲ್ಲಿ 4 ಪ್ರಕರಣ ಪತ್ತೆಯಾಗಿದೆ.ಗುಲ್ಬರ್ಗಾ,ಉತ್ತರ ಕನ್ನಡದಲ್ಲಿ ತಲಾ 3 ಪ್ರಕರಣ ಪತ್ತೆಯಾಗಿದ್ರೆ,ಮೈಸೂರಿನಲ್ಲಿ 2 ಪ್ರಕರಣ ದಾಖಲಾಗಿದೆ.ಹಾಗೆಯೇ ಬೆಂಗಳೂರು ಗ್ರಾಮೀಣ,ದಾವಣಗೆರೆ,ಧಾರವಾಡ,ಕೊಡಗು ಹಾಗು ಉಡುಪಿಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.

ಜಿಲ್ಲಾವಾರು ಕೊರೊನಾ ಪತ್ತೆಯಾಗಿರುವ ವಿವರ

ಪ್ರದೇಶ                         ಪ್ರಕರಣ ಸಂಖ್ಯೆ 

ಬಿಬಿಎಂಪಿ                                       17

ಬೆಂಗಳೂರು ನಗರ                         15 

ದಕ್ಷಿಣ ಕನ್ನಡ                                 6

ಚಿಕ್ಕಾಬಳ್ಳಾಪುರ                             4

ಗುಲ್ಬರ್ಗಾ                                       3

ಉತ್ತರ ಕನ್ನಡ                                3

ಮೈಸೂರು                                      2

ಬೆಂಗಳೂರು ಗ್ರಾಮಾಂತರ            1

ದಾವಣಗೆರೆ                                    1

ಧಾರವಾಡ                                    1

ಉಡುಪಿ                                        1

ಇನ್ನು ಕರ್ನಾಟಕದಲ್ಲಿ ಕೊರೊನಾ ಪತ್ತೆ ಪ್ರಕರಣಗಳು ಹಾಗೂ ಅದರ ಆಗುಹೋಗುಗಳ ಬಗ್ಗೆ ನೋಡೊದಾದ್ರೆ ಈವರೆಗೆ ರಾಜ್ಯದಲ್ಲಿ 55 ಪ್ರಕರಣ ಪತ್ತೆಯಾಗಿದೆ. ಅವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದ್ದು 5 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.ಇಬ್ಬರು ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕು ಯಾವ ವಯಸ್ಸಿನವರಲ್ಲಿ ಕಂಡುಬಂದಿದೆ ಎನ್ನೋದನ್ನು ನೋಡುವುದಾದರೆ,30 ರಿಂದ 40 ವರ್ಷದೊಳಗಿನವರಲ್ಲೇ ಹೆಚ್ಚು ಸೋಂಕು ಅಂದ್ರೆ 14 ಜನರಲ್ಲಿ ಕಂಡುಬಂದಿದೆ.20 ರಿಂದ 30 ವರ್ಷದೊಳಗಿನ 11 ಜನರಲ್ಲಿ ಸೋಂಕು ಪತ್ತೆಯಾಗಿದೆ.60 ರಿಂದ 70ರ ವಯಸ್ಸಿನ 11 ಜನರಲ್ಲಿ ಸೋಂಕು ಕಂಡುಬಂದಿದೆ.8 ಪ್ರಕರಣಗಳು 40 ರಿಂದ 50 ವಯಸ್ಸಿನವರಲ್ಲಿ ಪತ್ತೆಯಾಗಿದೆ.50 ರಿಂದ 60 ವರ್ಷದ 6 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.5 ರಿಂದ 10 ವರ್ಷದೊಳಗಿನ ಇಬ್ಬರು ಮಕ್ಕಳಲ್ಲಿ ಸೋಂಕು ಕಂಡುಬಂದಿದೆ.10 ರಿಂದ 15,15 ರಿಂದ 20 ಹಾಗೂ 70 ರ ವಯಸ್ಸಿನವರಲ್ಲಿ ಒಂದೊಂದು ಪ್ರಕರಣ ಪತ್ತೆಯಾಗಿರುವುದು ಕಂಡುಬಂದಿದೆ.

ವಯಸ್ಸು                ಸೋಂಕಿನ ಸಂಖ್ಯೆ 

0 ರಿಂದ 5 ವರ್ಷ            0

5 ರಿಂದ 10 ವರ್ಷ          2

10 ರಿಂದ 15 ವರ್ಷ        1

15 ರಿಂದ 20 ವರ್ಷ        1

20 ರಿಂದ 30 ವರ್ಷ       11

30 ರಿಂದ 40 ವರ್ಷ       14

40 ರಿಂದ 50 ವರ್ಷ       08

50 ರಿಂದ 60 ವರ್ಷ      06

60 ರಿಂದ 70 ವರ್ಷ      11

70 ರಿಂದ…….                01

 ಇನ್ನು ಪುರುಷ ಹಾಗೂ ಮಹಿಳೆಯರ ಪೈಕಿ ಯಾರಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡುಬಂದಿದೆ ಎಂದ್ರೆ ಪುರುಷರಲ್ಲೇ ಹೆಚ್ಚಿನ ಸೋಂಕು ಅಂದ್ರೆ 35 ಜನರಲ್ಲಿ ಕಂಡುಬಂದಿದ್ರೆ,20 ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ .

ಲಿಂಗ             ಸೋಂಕಿತರ ಪ್ರಮಾಣ

ಪುರುಷರು         35     

ಮಹಿಳೆಯರು    20

ಅದೇನೇ ಆಗಲಿ ನೊಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ಅವರು ಹೊರಡಿಸಿರುವ ಈ ಗ್ರಾಫ್ ನಲ್ಲಿರುವ ಅಂಕಿಅಂಶಗಳು ಇಳಿಮುಖವಾದ್ರಷ್ಟೇ ಸಾಕು..

Spread the love
Leave A Reply

Your email address will not be published.

Flash News