ಕೊರೊನಾ ಎಫೆಕ್ಟ್:ನೌಕರರಿಗೆ ಗೇಟ್ ಪಾಸ್ ಕೊಡುತ್ತಿದೆ  ಬಾಲ್ಡ್ ವಿಲ್ ಶಾಲೆ 

0

ಬೆಂಗಳೂರು: ಇದೆಂಥಾ ಅನ್ಯಾಯರೀ…ಕೊರೊನಾ ವೈರಲ್ ಆದ್ರೆ ಪಾಪ ಈ ನಿಷ್ಪಾಪಿ ಚಾಲಕ ಏನ್ ಮಾಡ್ತಾನೆ…ಅದರಲ್ಲಿ ಆತನ ತಪ್ಪೇನಿದೆ..ಕೊರೊನಾ ಬಂದಿದ್ದಕ್ಕೆ ಆ ಚಾಲಕನನ್ನೇ ಕೆಲಸದಿಂದ ತೆಗೆದು ಹಾಕಿದೆ ಬೆಂಗಳೂರಿನ ಪ್ರತಿಷ್ಟಿತ ಬಾಲ್ಡ್ ವಿನ್ ಶಾಲೆ.

ಕೊರೊನಾ ಬಂದಿದ್ದಕ್ಕೆ ಶಾಲಾ ಚಟುವಟಿಕೆಗಳೆಲ್ಲಾ ನಿಂತು,ತಮಗೆ ಸಿಕ್ಕಾಪಟ್ಟೆ ಆರ್ಥಿಕ ನಷ್ಟ ಉಂಟಾಗಿದೆ.ಸಿಬ್ಬಂದಿ ಹೊರೆ ಕೂಡ ಆಗ್ತಿದೆ.ಹಾಗಾಗಿ ರಿಚ್ ಮಂಡ್ ರಸ್ತೆಯಲ್ಲಿರುವ ಬಾಲ್ಡ್ ವಿನ್ ಬಾಯ್ಸ್ ಶಾಲೆಯ ಪ್ರಾಂಶುಪಾಲರೇ ಖುದ್ದಾಗಿ ಸಿಬ್ಬಂದಿಗೆ ಫೋನ್ ಮಾಡಿ ನೀವು ಮುಂದಿನ ವರ್ಷದಿಂದ ಕೆಲಸಕ್ಕೆ ಬರೋ ಅವಶ್ಯಕತೆಯಿಲ್ಲ.

“ನಿಮ್ಮ ಡ್ಯೂಸ್ ಏನಿದೆಯೋ ಅದನ್ನು ಬಂದ ಕಲೆಕ್ಟ್ ಮಾಡ್ಕಂಡು ಹೋಗಿ” ಎಂದು ಹೇಳುತ್ತಿದ್ದಾರೆ.ತಮ್ಮ ಅಳಲು ಹಾಗೂ ನೋವು ತೋಡಿಕೊಂಡ್ರೂ ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಆ ಪ್ರಾಂಶುಪಾಲೆಗಿಲ್ಲ.

ಕೊರೊನಾದ ನೆವ ಇಟ್ಟುಕೊಂಡು ಯಾರನ್ನೂ ಕೆಲಸದಿಂದ ತೆಗೆಯುವಂತಿಲ್ಲ ಎಂದು ಸ್ಪಷ್ಟವಾಗಿ ಪ್ರಧಾನಿಮೋದಿ ಅವರೇ ಆರ್ಡರ್ ಮಾಡಿದ್ರೂ ಈ ಶಾಲೆ ಆಡಳಿತ ಮಂಡಳಿ ಮಾತ್ರ ಮುಲಾಜಿಲ್ಲದೆ ಸಿಬ್ಬಂದಿಯನ್ನು ಕೆಲಸದಿಂದ ತೆಗದು ಹಾಕುತ್ತಿದೆ.ಹಾಗಾದ್ರೆ ಈ ಶಾಲೆಗಳು ಅಕ್ಷರ ದಾಸೋಹ ಮಾಡ್ತಿವೆಯೋ ಬ್ಯುಸಿನೆಸ್ ಮಾಡ್ತಿವೆಯೋ ಗೊತ್ತಾಗ್ತಿಲ್ಲ.ಹೀಗೆ  ಆರ್ಡರ್ ಮಾಡಿದ ಪ್ರಿನ್ಸಿಪಾಲ್ ಗೆ ಸರಿಯಾದ ಶಾಸ್ತಿ ಮಾಡಿಸುವುದರ ಮೂಲಕ ಹೀಗೆ ಮಾಡಲು ಮುಂದಾಗಿರೋರಿಗೆ ತಕ್ಕ ಪಾಠ ಕಲಿಸಬೇಕಿದೆ.ಇಲ್ಲವಾದಲ್ಲಿ ಕೊರೊನಾ ಕಾಲದಲ್ಲಿ ಹೀಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯೋ ಕೆಟ್ಟಚಾಳಿ  ಎಲ್ಲರಿಗೂ ಹರಡುತ್ತೆ.

ಶಾಲಾ ಪ್ರಾಂಶುಪಾಲೆ ಹಾಗೂ ಡ್ರೈವರ್ ಪ್ರಶಾಂತ್ ಕುಮಾರ್ ನಡುವಿನ ಸಂಭಾಷಣೆಯ ಆಡಿಯೋ ಕನ್ನಡ ಫ್ಲಾಶ್ ನ್ಯೂಸ್ ಗೆ EXCLUSIVE ಆಗಿ ಸಿಕ್ಕಿದೆ.ಇದರ ಡೀಟೈಲ್ಸ್ ಕೆಳಕಂಡಂತಿದೆ ಕೇಳಿ..

ನಿಮ್ಮ ಅವಶ್ಯಕತೆ ನಮಗಿಲ್ಲ..ಡ್ಯೂಟಿಗೆ ಬರೋ ಅಗತ್ಯವಿಲ್ಲ.ಹೀಗ್ಹೇಳಿ ಕೆಲಸದಿಂದ ತೆಗೆದಾಕಿದ್ರೆ ಹೇಗೆ-

 

Spread the love
Leave A Reply

Your email address will not be published.

Flash News