ಮಾಜಿ ಪ್ರಧಾನಿ ದೇವೇಗೌಡ್ರಿಗಿಂತ, ಪತ್ನಿ ಚೆನ್ನಮ್ಮ ಶ್ರೀಮಂತೆ..!20 ಸಾವಿರ ಸಾಲಗಾರ-3 ಅಂಬಾಸಿಡರ್ ಕಾರುಗಳ ಒಡೆಯ…

0

ಬೆಂಗಳೂರು:ಮಾಜಿ ಪ್ರಧಾನಿ ದೇವೇಗೌಡ ಅವರಿಗಿಂತ ಪತ್ನಿ ಚೆನ್ನಮ್ಮರೇ ಶ್ರೀಮಂತೆ..ಪತ್ನಿ..ಮೊಮ್ಮಗನಿಗೆ ಸಾಲ ನೀಡಿರುವ ದೇವೇಗೌಡರ ಮೇಲೆಯೇ 20 ಸಾವಿರ ಬ್ಯಾಂಕ್ ಸಾಲ ಇದೆ..ವಾರ್ಷಿಕ ಆದಾಯ ಕೇವಲ 10.25 ಲಕ್ಷ..  ಚರಾಸ್ತಿ  72.60 ಲಕ್ಷ..ಸ್ಥಿರಾಸ್ತಿ 41.53 ಲಕ್ಷ ರೂ..ಇದು ದೇವೇಗೌಡರು ಚುನಾವಣಾಧಿಕಾರಿಗೆ ಸಲ್ಲಿಸಿರುವ ತಮ್ಮ ಅಫಿಡವಿಟ್..ನಂಬೊಕ್ಕೆ ಕಷ್ಟ ಎನಿಸಿದ್ರೂ ದಾಖಲೆಗಳೇ ಅದನ್ನು ಸ್ಪಷ್ಟಪಡಿಸುತ್ತೆ.

ರಾಜ್ಯಸಭೆಗೆ ದೊಡ್ಡ ಗೌಡರ ಹಾದಿ ಸುಗಮವಾಗಿದೆ.ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇವೇಗೌಡರು ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರ ಸ್ವಲ್ಪ ರೋಚಕ-ಕುತೂಹಲಕಾರಿಯಾಗಿದೆ.ಇಷ್ಟು ವರ್ಷ ರಾಜಕೀಯ ಮಾಡಿಕೊಂಡು,ಅಧಿಕಾರ ಅನುಭವಿಸಿದವರ ಗಳಿಕೆ ಇಷ್ಟಾನಾ ಎನ್ನುವ ಅನುಮಾನ ಕಾಡಿದ್ರೂ ದಾಖಲೆಗಳು ಆ ಕಹಿ ಸತ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಮಾಡಿದೆ.

ಅಂದ್ಹಾಗೆ ದೇವೇಗೌಡರ ಬ್ಯಾಂಕ್ ಖಾತೆಯಲ್ಲಿ  37,63,086 ರೂ ನಗದಿದೆಯಂತೆ.ಇನ್ನು ಅವರ ಪತ್ನಿ ಚೆನ್ನಮ್ಮ ಖಾತೆಯಲ್ಲಿ 80,29,325 ರೂ.ನಗದು ಇದೆ.ಗಳಿಕೆ ಹಾಗೂ ಆದಾಯ-ಉಳಿತಾಯದ ವಿಷಯದಲ್ಲಿ ದೇವೇಗೌಡರಿಗಿಂದ ಪತ್ನಿ ಹೆಚ್ಚು ಶ್ರೀಮಂತರಂತೆ. ವಿವಿಧ ವಿಮಾ ಕಂಪನಿಗಳಲ್ಲಿ  ದೇವೇಗೌಡ  ಹೂಡಿಕೆ ಮತ್ತು ಉಳಿತಾಯ ಮಾಡಿರುವ ಹಣ ಎಷ್ಟು ಗೊತ್ತಾ ಕೇವಲ 6,51,349 ರೂ.?! ಇನ್ನು ಹಣ ವ್ಯವಹಾರದ ವಿಚಾರಕ್ಕೆ ಬಂದ್ರೆ ಪತ್ನಿ ಚೆನ್ನಮ್ಮ ಅವರಿಗೆ 6,00,027 ದೇವೇಗೌಡರು  ಸಾಲ ನೀಡಿದ್ದಾರಂತೆ. ತನ್ನ ಮುದ್ದಿನ ಮೊಮ್ಮಗ  ಸೂರಜ್ ರೇವಣ್ಣಗೂ  9,45,000   ಸಾಲ ನೀಡಿದ್ದಾರೆ ದೇವೇಗೌಡರು..

ಇನ್ನು  ದೇವೇಗೌಡರ 2019-20 ನೇ  ವಾರ್ಷಿಕ ಆದಾಯ ಗಮನಿಸಿದರೆ ವರ್ಷದ ಆದಾಯ ಕೇವಲ 10.25 ಲಕ್ಷ ರೂ.ಧರ್ಮಪತ್ನಿ ಚೆನ್ನಮ್ಮ ಅವರ ವಾರ್ಷಿಕ ಆದಾಯ 2.81 ಲಕ್ಷ ರೂ. ದೇವೇಗೌಡರ ಬಳಿ  ಒಟ್ಟು  72.60 ಲಕ್ಷ ರೂ ಮೌಲ್ಯದ ಚರಾಸ್ತಿಯಿದೆ. ಪತ್ನಿ ಚೆನ್ನಮ್ಮ ಬಳಿ  2.14 ಕೋಟಿ ರೂ  ಮೌಲ್ಯದ ಚರಾಸ್ತಿ ಇದೆ. ಇನ್ನು ಸ್ಥಿರಾಸ್ತಿ ವಿಷಯಕ್ಕೆ ಬಂದ್ರೆ  ದೇವೇಗೌಡರ ಒಟ್ಟು ಸ್ಥಿರಾಸ್ತಿ 41.53 ಲಕ್ಷ ರೂ. ಪತ್ನಿ ಚೆನ್ನಮ್ಮ ಬಳಿ ಒಟ್ಟು 7.08 ಕೋಟಿ ರೂ ಸ್ಥಿರಾಸ್ತಿ ಇದೆ.

ಇನ್ನು  ದೇವೇಗೌಡರ ಬಳಿ ಎಷ್ಟು ಚಿನ್ನಾಭರಣ ಇದೆ ಎನ್ನೋದನ್ನು ನೋಡಿದ್ರೆ ಮನೆಯೆಲ್ಲಾ ಹುಡುಕಿದ್ರೂ ಅವರ ಬಳಿ ಸಿಗೋದು  ಕೇವಲ  50 ಸಾವಿರ ಮೌಲ್ಯದ ಚಿನ್ನಾಭರಣವಂತೆ.ಚೆನ್ನಮ್ಮ ಬಳಿ 6.50 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆಯಂತೆ. ಮಣ್ಣಿನ ಮಗನಾಗಿರುವ ದೇವೇಗೌಡರ ಬಳಿ ಸುಮಾರು 21 ಎಕರೆ ಕೃಷಿ ಭೂಮಿ ಇದೆಯಂತೆ. ಪತ್ನಿ ಚೆನ್ನಮ್ಮ ಬಳಿ 53 ಎಕರೆ ಕೃಷಿ ಭೂಮಿ‌ ಇದೆ.ವಾಹನಗಳ ವಿಚಾರದಲ್ಲೂ  ದೇವೇಗೌಡರು ಪಾಪ ಬಡವರು.ಅವರ ಬಳಿ ಇರೋದು ಕೇವಲ ಒಂದು ಹಳೇ ಮಾಡೆಲ್ ಹಾಗೂ ಎರಡು ಹೊಸ ಅಂಬಾಸಡರ್ ಕಾರ್ ಗಳಂತೆ.  ಪತ್ನಿ ಚೆನ್ನಮ್ಮ ಬಳಿ ಎರಡು ಟ್ರಾಕ್ಟರ್ ಗಳಿವೆ. ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಸಾಲದ ವಿಚಾರ ಸ್ವಲ್ಪ ಇಂಟರೆಸ್ಟಿಂಗಾಗಿದೆ. ತಮ್ಮ ಹೆಸರಲ್ಲಿ ಕೇವಲ 20 ಸಾವಿರ ರೂ ಬ್ಯಾಂಕ್ ಸಾಲ ತೋರಿಸಿದ್ದಾರೆ ದೇವೇಗೌಡರು. ಪತ್ನಿ ಚೆನ್ನಮ್ಮ ಹೆಸರಲ್ಲಿ 97.98 ಲಕ್ಷ ರೂ ಸಾಲವಿದೆಯಂತೆ. ದೇವೇಗೌಡರಿಗೆ 61 ಸಾವಿರ ರೂ ಪಿಂಚಣಿ ಬರ್ತಿದೆಯಂತೆ.ಇವೆಲ್ಲ ನಂಬಲಿಕ್ಕೆ ಸ್ವಲ್ಪ ಕಷ್ಟ ಎನಿಸಿದರೂ ದೇವೇಗೌಡರು ತಮ್ಮ ಅಫಿಡವಿಟ್ ನಲ್ಲಿ ಇದಕ್ಕೆ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ.

Spread the love
Leave A Reply

Your email address will not be published.

Flash News