ನಾಳೆಯಿಂದ ಬಸ್ ನಿಲ್ದಾಣಗಳಲ್ಲಿ ತಿನ್ನೋಕ್ಕೂ ಸಿಗೊಲ್ಲ..ಕುಡಿಯಲಿಕ್ಕೂ ದಕ್ಕೊಲ್ಲ..

0

ಬೆಂಗಳೂರು:ನಾಳೆಯಿಂದ ಕೆಂಪೇಗೌಡ ಬಸ್ ನಿಲ್ದಾಣ ಅಥವಾ ಮೆಜೆಸ್ಟಿಕ್ ನಲ್ಲಿ ತಿಂಡಿ..ಉಪಹಾರ..ಕಾಫಿ-ಟೀ..ಸಿಗುತ್ತದೆಂದು ನಂಬಿ ಹೋದೀರಿ..ನಿಮ್ಗೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ನಿಲ್ದಾಣಗಳಲ್ಲಿ ತಿನ್ನೊಕ್ಕೆ ಕುಡಿಯೊಕ್ಕೆ ಏನೂ ಸಿಗಲಿಕ್ಕಿಲ್ಲ..ಕಾರಣ ಬಂದ್..ಬಂದ್…ಬಂದ್..

ಲಾಕ್ ಡೌನ್ ಸಡಿಲಿಕೆಯಾದ್ರೂ ವ್ಯಾಪಾರವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವವರ ಪೈಕಿ ಬಸ್ ನಿಲ್ದಾಣಗಳಲ್ಲಿ ಸಣ್ಣಪುಟ್ಟ ಸ್ಟಾಲ್ ಇಟ್ಕೊಂಡಿರುವ ವ್ಯಾಪಾರಿಗಳು ಕೂಡ ಒಬ್ಬರು.ದುಡಿಮೆ ಆಗಲಿ,ಆಗದೇ ಇರಲಿ,ಪ್ರತಿ ತಿಂಗಳು ಹತ್ತಿರತ್ತಿರ ಲಕ್ಷಾಂತರ ಬಾಡಿಗೆ ಕಟ್ಟಲೇಬೇಕಾದ ಸ್ತಿತಿ ಅವರದು.ತಮ್ಮ ನೆರವಿಗೆ ಬನ್ನಿ ಎಂದು ಸಾರಿಗೆ ಸಚಿವರಾದಿಯಾಗಿ ನಾಲ್ಕೂ ನಿಗಮಗಳ ಎಂಡಿಗಳನ್ನು ರಿಕ್ವೆಸ್ಟ್ ಮಾಡಿಕೊಂಡ್ರೂ ಪ್ರಯೋಜನವಾಗಿಲ್ಲ.ಹಾಗಾಗಿ ರಾಜ್ಯಾದ್ಯಂತ ನಾಳೆಯಿಂದ ಅನಿರ್ಧಿಷ್ಟಾವಧಿಗೆ ಎಲ್ಲಾ ವ್ಯಾಪಾರಿಗಳು ತಮ್ಮ ಸ್ಟಾಲ್ ಗಳನ್ನು ಕ್ಲೋಸ್ ಮಾಡಲು ನಿರ್ಧರಿಸಿದ್ದಾರೆ.

ಕೊರೊನಾ ಟೈಮಲ್ಲಿ ಲಾಕ್ ಡೌನ್ ಕಾರಣಕ್ಕೆ ಸ್ಟಾಲ್ ಮಾಲೀಕರಿಗೆ ಬಾಡಿಗೆ ಮನ್ನಾ ಮಾಡಲಾಗಿತ್ತು.ಲಾಕ್ ಡೌನ್ ಸಡಿಲಿಕೆ ನಂತ್ರವೂ ಬಸ್ ನಿಲ್ದಾಣಗಳಿಗೆ ಪ್ರಯಾಣಿಕರು ಬರೋದೇ ಅಪರೂಪ ಎನ್ನುವಂತಾಗಿದ್ದರಿಂದ ವ್ಯಾಪಾರಿಗಳು ಕಂಗಾಲಾಗಿ ಹೋದ್ರು.ತಮ್ಮ ಸಂಕಷ್ಟವನ್ನು ಸಾರಿಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಯ್ತು.ನಂತರ ನಾಲ್ಕೂ ನಿಗಮಗಳ ಎಂಡಿಗಳನ್ನೂ ಭೇಟಿ ಮಾಡಿ ಸಮಸ್ಯೆ ತಿಳಿಸಲಾಯ್ತು.ಇಷ್ಟಾದ್ರೂ ವ್ಯಾಪಾರಿಗಳ ನೋವಿಗೆ ಸ್ಪಂದಿಸುವ ಔದಾರ್ಯವನ್ನು ಯಾರೂ ತೋರಲಿಲ್ಲ..ತಾಳ್ಮೆಯಿಂದ ಸುಮ್ಮನಿದ್ದ ವ್ಯಾಪಾರಿಗಳು ಈಗ ಅನಿವಾರ್ಯವಾಗಿ ಸಿಡಿದೆದ್ದು ವ್ಯಾಪಾರವನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.ತಮ್ಮ ಬೇಡಿಕೆಗೆ ಸ್ಪಂದಿಸದ ಸರ್ಕಾರ ಹಾಗೂ ಇಲಾಖೆ ತಮ್ಮ ಬೇಡಿಕೆಗೆ ಸ್ಪಂದಿಸುವವರೆಗೂ ಸ್ಟಾಲ್ ಗಳನ್ನು ತೆರೆಯೊಲ್ಲ ಎನ್ನೋದು ವ್ಯಾಪಾರಿಗಳ ವಾದ.

ಬಸ್ ನಿಲ್ದಾಣಗಳಿಗೆ ಬರೋ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.ಕೊರೊನಾದ ಭೀತಿಯಿಂದಾಗಿ ಪ್ರಯಾಣಿಕರು ಬಸ್ ಗಳಲ್ಲಿ ಸಂಚರಿಸೊಕ್ಕೆ ಹಿಂದೇಟು ಹಾಕ್ತಿದ್ದಾರೆ.ಪ್ರಯಾಣಿಕರನ್ನೇ ನಂಬಿಕೊಂಡು ಬದುಕುತ್ತಿರುವರು ನಾವು.ಪ್ರಯಾಣಿಕರೇ ಬರುತ್ತಿಲ್ಲ ಎಂದ್ಮೇಲೆ ನಮಗಾಗುತ್ತಿರುವ ನಷ್ಟವನ್ನು ಮಾನವೀಯ ನೆಲೆಗಟ್ಟಿನಲ್ಲಿ ಅವಲೋಕಿಸುವೆ ಕೆಲಸವನ್ನು ಸರ್ಕಾರ ಹಾಗೂ ನಿಗಮದ ಅಧಿಕಾರಿಗಳು ಮಾಡಬೇಕಿತ್ತು.

ಆದ್ರೆ ನಮ್ಮ ಸಮಸ್ಯೆಯನ್ನು ಹೇಳಿಕೊಂಡ್ರೂ ಅವರಿಂದ ಯಾವುದೇ ಸ್ಪಂದನೆ ಬಂದಿ್ಲ್ಲ.ತೀವ್ರ ನಷ್ಟದಲ್ಲಿರುವ ಉದ್ಯಮ ಸುಧಾರಿಸುವ ತನಕ ಬಾಡಿಗೆ ಮನ್ನಾ ಮಾಡಬೇಕು.ಇಲ್ಲವಾದಲ್ಲಿ ನಷ್ಟದ ಆಧಾರದಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಇಂತಿಷ್ಟು ಬಾಡಿಗೆ ಎಂದು ಫಿಕ್ಸ್ ಮಾಡಬೇಕು.ಅಲ್ಲಿವರೆಗೆ ವ್ಯಾಪಾರ ನಡೆಸೊಲ್ಲ ಎನ್ನುತ್ತಾರೆ ವ್ಯಾಪಾರಿ ಮೋಹನ್.

ನಿಲ್ದಾಣಗಳಲ್ಲಿರುವ ವ್ಯಾಪಾರದ ಮಳಿಗೆಗಳು ಮಾತ್ರವಲ್ಲ.ಹೊಟೇಲ್ ಗಳೂ ನಾಳೆಯಿಂದ ಬಂದ್ ಆಗಿರಲಿವೆ ಎಂದು ಹೊಟೇಲ್ ಮಾಲೀಕರು ತಿಳಿಸಿದ್ದು,ನಮ್ಮ ಬೇಡಿಕೆ ಈಡೇರುವವರೆಗೂ ಮಳಿಗೆಗಳನ್ನಾಗಲಿ,ಸ್ಟಾಲ್ ಗಳನ್ನಾಗಲಿ ಅಥವಾ ಹೊಟೇಲ್ ಗಳನ್ನು ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಳೆಯಿಂದ ಬಸ್ ನಿಲ್ದಾಣಗಳಲ್ಲಿ ತಿನ್ನೋಕ್ಕೂ ಸಿಗೊಲ್ಲ..ಕುಡಿಯಲಿಕ್ಕೂ ದಕ್ಕೊಲ್ಲ..ಯಾಕೆ ಗೊತ್ತಾ…

 

 

Spread the love
Leave A Reply

Your email address will not be published.

Flash News