ಹಣ ಲೂಟಿಗೆ ಬಿಬಿಎಂಪಿಯಲ್ಲಿ ಸಿದ್ಧವಾಯ್ತು-“ಸ್ಮೆಲ್ ಕಾರ್ಡ್” ಪರೀಕ್ಷೆ ಎನ್ನುವ ಮತ್ತೊಂದು ಮೆಗಾಪ್ಲ್ಯಾನ್..

0

ಬೆಂಗಳೂರು:ಭಾರೀ ಭ್ರಷ್ಟರ ಕೊಂಪೆ ಎನಿಸಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನುಂಗಣ್ಣರಿಂದ ಮತ್ತೊಂದು ಮೆಗಾಪ್ಲ್ಯಾನ್-ಸ್ಕೆಚ್ ಸಿದ್ಧವಾಗಿದೆ.ಕೊರೊನಾ ಕಂಟ್ರೋಲ್ ಗೆ ಬರದಿರುವುದಕ್ಕೆ ತನ್ನದೇ ಆದ ವಿಶ್ಲೇಷಣೆಯ ಕಾರಣವನ್ನು ಹುಡ್ಕೊಂಡಿದೆ.ಸೋಂಕಿತರು ಕೈ ಬಿಟ್ಟೋಗ್ತಿರೋದ್ರಿಂದ್ಲೇ ಸಮಸ್ಯೆಗೆ ಮೂಲ ಎಂಬ ವಾದ ಮುಂದೊಡ್ಡಿ ಇದೀಗ ಅದರ ಪತ್ತೆ ಮೊದಲಾಗ್ಬೇಕು..ಹಾಗಾಗಿ ಅವರ ಪತ್ತೆಗೆ ಪರೀಕ್ಷೆ ನಡೆಯಬೇಕೆಂದು ಹೊರಟಿದೆ.ಅದರ ಪತ್ತೆ ಹೇಗೆ ಸಾಧ್ಯ ಎನ್ನುವುದಕ್ಕೆ ಉತ್ತರವನ್ನೂ ಕಂಡುಕೊಂಡಿದೆ..ಆ ಉತ್ತರವೇ ಸ್ಮೆಲ್ ಕಾರ್ಡ್ ಪರೀಕ್ಷೆ..

ಸ್ಮೆಲ್ ಕಾರ್ಡ್  ಪರೀಕ್ಷೆಯಿಂದ ಕೊರೊನಾ ಸೋಂಕಿತರನ್ನು ಪತ್ತೆ ಮಾಡಬಹುದು..ಆಗಬೇಕಿರುವ ಮೊದಲ ಕೆಲಸವು ಅದೇ.ಅದಾಗದ ಹೊರತು ಏನೂ ಆಗೊಲ್ಲ ಎಂಬ ಅಭಿಪ್ರಾಯವನ್ನು ಸರ್ಕಾರದ ಮುಂದೆ ಬಿಬಿಎಂಪಿ ಮೇಯರ್ ವ್ಯಕ್ತಪಡಿಸಿದ್ದಾರಂತೆ.ಇದಕ್ಕೆ ಅಪ್ರೂವಲ್ ಸಿಕ್ಕರೆ ಸಮಸ್ಯೆ ಶೇಕಡಾ 50ರಷ್ಟು ಸಾಲ್ವ್ ಆಗುತ್ತೆನ್ನುವುದು ಮೇಯರ್ ಗೌತಮ್ ಕುಮಾರ್ ಅವರ ಅನಿಸಿಕೆ.

ನಿಮಗೆ ಗೊತ್ತಿರಲಿ.. ಹಣ ಮಾಡಲಿಕ್ಕೆ ಪ್ಲ್ಯಾನ್ ಗಳೇನಾದ್ರೂ ಬೇಕಿದ್ರೆ ನೇರವಾಗಿ ಬಿಬಿಎಂಪಿಗೆ ಬರೋದು ಉತ್ತಮ.ಅಲ್ಲಿ ಆಡಳಿತ ನಡೆಸೋರ ಪೈಕಿ ಹಲವರಿಗೆ ಬೆಂಗಳೂರ್ ಉದ್ಧಾರಕ್ಕಿಂತ ತಮ್ ಉದ್ದಾರವಾಗೋದೇ ಮುಖ್ಯವಾಗಿರುತ್ತೆ.ಅದಕ್ಕಾಗಿ  ಏನೆಲ್ಲಾ ಪ್ಲ್ಯಾನ್ ಗಳಿವೆಯೋ ಅದೆಲ್ಲವನ್ನು ಸೃಷ್ಟಿಸಿ ಅದಕ್ಕೊಂದು ನೀಲನಕ್ಷೆಯನ್ನು ರೆಡಿ ಮಾಡಿಕೊಡ್ತಾರೆ.ಹಾಗಾಗಿಯೇ ಈ ಐಡ್ಯಾಗಳೆಲ್ಲದರ  ಗರ್ಭಸ್ಥಾನವೇ ಬಿಬಿಎಂಪಿ ಎಂಬ ಕುಖ್ಯಾತಿಯೂ ಇದಕ್ಕಿದೆ.ಕೊರೊನಾ ನಿಯಂತ್ರಣದ ವಿಷಯಕ್ಕೆ ಬರೋದಾದ್ರೆ ನಿಯಂತ್ರಣಕ್ಕೆ ಏನೆಲ್ಲಾ ಸರ್ಕಸ್ ಮಾಡಿ ವಿಫಲವಾದ್ಮೇಲೆ ಈಗ ದುಡ್ಡು ಹೊಡೆಯೋ  ಮತ್ತೊಂದು ಪ್ಲ್ಯಾನ್ ಹೊಳೆದುಬಿಟ್ಟಿದೆ ಇಲ್ಲಿನ ಕೆಲವು ಬೃಹಸ್ಪತಿಗಳಿಗೆ. ಆ ಐಡ್ಯಾ-ಪ್ಲ್ಯಾನೇ ವಾಸನೆ ಗ್ರಹಿಕೆ ಪತ್ತೆ ಪರೀಕ್ಷೆ.

ಈ ವಾಸನೆ ಗ್ರಹಿಕೆ ಪತ್ತೆಯಿಂದ  ಏನಾಗುತ್ತೋ ಬಿಡುತ್ತೋ….ಕೊರೊನಾ ಎಷ್ಟರ ಮಟ್ಟಿಗೆ ಪತ್ತೆಯಾಗುತ್ತೋ..ಯಾರಿಗೆ ಪ್ರಯೋಜನವಾಗುತ್ತೋ ಗೊತ್ತಿಲ್ಲ..ಆದ್ರೆ ದುಡ್ ಮಾಡೊಕ್ಕೆ ಹೊರಟಿರೋ ಕೆಲವು ಲೂಟಿಕೋರರಿಗೆ ಮಾತ್ರ ಹಣ ಮಾಡ್ಲಿಕ್ಕೆ ರಾಜಮಾರ್ಗ ಕಲ್ಪಿಸಿಕೊಡುತ್ತೆನ್ನೋದ್ರಲ್ಲಿ ಡೌಟೇ ಇಲ್ಲ.ಎಲ್ಲರಿಗೂ ಗೊತ್ತಿರುವಂತೆ ಬಿಬಿಎಂಪಿ ಕೊರೊನಾ ಪತ್ತೆಗೆ ಕೋಟಿಗಳನ್ನು ನೀರಿನಂತೆ ಖರ್ಚು ಮಾಡುತ್ತಿದೆ.ಆದರೆ ಎಲ್ಲವೂ ಟೈಂಪಾಸ್ ಹಾಗೂ ಮನಿವೇಸ್ಟ್ ಎನ್ನುವಂತಾಗ್ತಿವೆ. ಈಗ ಇದರ ಮತ್ತೊಂದು ವ್ಯರ್ಥಪ್ರಯತ್ನವಾಗಿಯೇ ವಾಸನೆ ಗ್ರಹಿಕೆ ಪತ್ತೆ ಪರೀಕ್ಷೆ ಮಾಡಲು ಹೊರಟಿದೆ.ಆದರೆ ಮೇಯರ್ ಗೌತಮ್ ಕುಮಾರ್ ಮಾತ್ರ ಕೊರೊನಾ ಸೋಂಕಿತರನ್ನು ಅನಾಯಾಸವಾಗಿ ಪತ್ತೆ ಮಾಡೊಕ್ಕೆ ಇದು ಉತ್ತಮ  ಆಲೋಚನೆ ಎನ್ತಾರೆ.

ವಾಸನೆ ಗ್ರಹಿಕೆ ಪತ್ತೆ ಪರೀಕ್ಷೆ ಎನ್ನುವ ಹೊಸ ಪ್ಲ್ಯಾನ್ ಗೆ ಬಿಬಿಎಂಪಿ ಮುಂದಾಗೊಕ್ಕೆ ಕಾರಣವೇ, ಟೆಂಪರೇಚರ್ ಚೆಕ್ ಮಾಡಿದ್ರಿಂದ..ಸ್ಯಾನಟೈಸ್ ಮಾಡೋದ್ರಿಂದ…ಮಾಸ್ಕ್ ಹಾಕ್ತಿರೋದ್ರಿಂದ ಕೊರೊನಾ ಸೋಂಕು ತಡೆ ಸಾಧ್ಯವಾಗುತ್ತಿಲ್ಲ ಎನ್ನೋದು. ಹಾಗಾಗಿಯೇ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನೂ ಸಲ್ಲಿಸಲಾಗಿದೆಯಂತೆ. ರೋಗದ ಲಕ್ಷಣಗಳನ್ನು ಪತ್ತೆ ಮಾಡಲು ಇದು ಪ್ರಯೋಜನಕಾರಿಯಾಗಲಿದೆಯಂತೆ.ಏನೇ ಮಾಡಿದ್ರೂ ರೋಗದ ಲಕ್ಷಣ ಪತ್ತೆ ಮಾಡುವುದು ಕಷ್ಟಸಾಧ್ಯವಾಗುತ್ತಿದೆ.ಈ ಪರೀಕ್ಷೆ ಮೂಲಕ ಸೋಂಕನ್ನು ಪತ್ತೆ ಮಾಡಿ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಬಹುದಾಗಿದೆ ಎನ್ನುತ್ತಾರೆ ಮೇಯರ್ ಗೌತಮ್ ಕುಮಾರ್.  

ಸ್ಮೈಲ್ ಕಾರ್ಡ್ ಕಾನ್ಸೆಪ್ಟ್ ಏನ್ ಗೊತ್ತಾ..ಸ್ಮೆಲ್ ಕಾಡ್೯ ಪ್ರಯೋಗದ ಚಿಂತನೆ ಮಾಡಿರುವ ಬಿಬಿಎಂಪಿ, ಇನ್ಮುಂದೆ ಪ್ರತಿಯೊಂದು ಮಾಲ್ ಹಾಗೂ ಕಚೇರಿಗಳ ಮುಂದೆ ಟೆಂಪರೇಚರ್  ಚೆಕ್ ಮಾಡುವ  ರೀತಿಯಲ್ಲೇ  ಸ್ಮೆಲ್ ಕಾಡ್೯ ಮೂಲಕ ರೋಗ ಲಕ್ಷಣ ಪತ್ತೆ ಮಾಡಲಾಗುತ್ತೆ. ಆರೆಂಜ್. ಮ್ಯಾಂಗೋ, ಲೆಮೆನ್   ಪ್ಲೇವರ್ ಗಳನ್ನು ಹೊಂದಿರುವ  ಸ್ಮೆಲ್ ಕಾಡ್೯ ಬಳಕೆ ಮಾಡಲು ನಿರ್ಧರಿಸಲಾಗಿದೆಯಂತೆ.

ಮಾಲ್ ಹಾಗೂ ಕಚೇರಿಗಳಿಗೆ ಬರುವ ಜನರಿಗೆ ಫ್ಲೇವರ್ ಕಾರ್ಡ್ ಗಳನ್ನು ನೀಡಲಾಗುತ್ತೆ.ಅವರು ಎಲ್ಲಾ ಫ್ಲೇವರ್ ಗಳನ್ನು ಪತ್ತೆ ಮಾಡಿದ್ರೆ ಅವರಿಗೆ ಒಳಗೆ ಎಂಟ್ರಿ ಕೊಡಲಾಗುತ್ತೆ.ರುಚಿಯನ್ನು ಗ್ರಹಿಸಲು ವಿಫಲವಾದವರಿಗೆ ನೋ ಎಂಟ್ರಿ..ಅವರನ್ನು ನಂತರದ ಚಿಕಿತ್ಸೆಗೊಳಪಡಿಸುವ ಐಡ್ಯಾ ಮಾಡಿಕೊಂಡಿದೆ ಬಿಬಿಎಂಪಿ.ಆದ್ರೆ ಕೆಲವೊಮ್ಮೆ ಮಾಮೂಲು ಕಾರಣಗಳಿಗೂ ರುಚಿ ಗ್ರಹಿಸದ ಸ್ತಿತಿಯಲ್ಲಿ ಜನರಿರುತ್ತಾರೆ.ಅಂಥವರನ್ನು ಕೊರೊನಾ ಸೋಂಕಿತರೆಂದು ಅನುಮಾನಿಸಲಾಗುತ್ತಾ..ಇದು ಕೇವಲ ಹಣ ಪೋಲಿನ ದುರ್ಮಾರ್ಗ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಭಾಸ್ಕರನ್.

ಸ್ಮೆಲ್ ಕಾರ್ಡ್ ಪ್ರಯೋಗಿಸಿ ಕೊರೊನಾ ಸೋಂಕನ್ನು ಪತ್ತೆ ಮಾಡುವ ವಿಧಾನ ಅಳವಡಿಸಿಕೊಳ್ಳುವ ಬಗ್ಗೆ ಸಿಎಂಗೆ ಈಗಾಗ್ಲೇ ಪತ್ರ ಬರೆಯಲಾಗಿದೆಯಂತೆ.ಇದಕ್ಕೆ ಅನುಮೋದನೆಯೂ ಸಿಗುತ್ತೆಂದೇ ಇಟ್ಟುಕೊಳ್ಳೋಣ..ಸೋಂಕಿತರು ಪತ್ತೆಯಾಗ್ತಾರೋ ಇಲ್ವೋ ಗೊತ್ತಿಲ್ಲ..ಆ ಉಪಕರಣಗಳ ಖರೀದಿ ನೆವದಲ್ಲಿ ಮತ್ತಷ್ಟು ಕೋಟಿಗಳು ಲೂಟಿಕೋರರ ಪಾಲಾಗುವುದಂತೂ ಗ್ಯಾರಂಟಿ.ಇದರಲ್ಲಿ ಯಾರ್ಯಾರಿಗೆಲ್ಲಾ ಪರ್ಸಂಟೇಜ್ ಹೋಗಲಿದೆ ಎನ್ನುವುದನ್ನು ತಿಳಿಸಿಹೇಳಬೇಕಿಲ್ಲವೇನೋ..

ಅಂದ್ಹಾಗೆ ವಾಸ್ತವದ ನೆಲೆಗಟ್ಟಿನಲ್ಲಿ ನೋಡೋದಾದ್ರೆ ಸ್ಮೆಲ್ ಕಾರ್ಡ್ ಗಳ ಪ್ರಯೋಗ ಕೊರೊನಾ ಲೂಟಿಗೆ ಮಾಡಿಕೊಂಡ ಐಡ್ಯಾದ ಮುಂದುವರೆದ ಭಾಗವಾಗಲಿದೆಯೇ ಹೊರತು ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ಪರಿಣಾಮಕಾರಿ ವ್ಯವಸ್ಥೆಯಾಗೊಕ್ಕೆ ಸಾಧ್ಯವಿಲ್ಲ ಎನ್ನುವುದು ಕೊರೊನಾ ಲೂಟಿಯನ್ನು ತೀರಾ ಹತ್ತಿರದಿಂದ ನೋಡುತ್ತಾ ಬಂದವರ ಆರೋಪ.ಆದ್ರೆ ಒಂದಂತೂ ಸತ್ಯ, ಜನ ಇದನ್ನು ವಿರೋಧಿಸಿದ್ರೂ ದುಡ್ ಹೊಡೀಲೇ ಬೇಕೆನ್ನುವ ಮನಸ್ತಿತಿಯಲ್ಲಿರುವ ಬಿಬಿಎಂಪಿ ಸ್ಮೆಲ್ ಕಾರ್ಡ್ ಟೆಸ್ಟ್ ಜಾರಿಗೆ  ತರದೇ ಬಿಡೊಲ್ಲ.ಮತ್ತಷ್ಟು ಕೋಟಿ ಹಣವನ್ನು ನೀರಿನಂತೆ ಪೋಲ್ ಮಾಡ್ದೆ ಬಿಡೊಲ್ಲ..ಇದಂತೂ ಸತ್ಯ..  

Spread the love
Leave A Reply

Your email address will not be published.

Flash News