ಬಿಡಿಎ ಕ್ಯಾಂಪಸ್ ಗೆ “ಎಸಿಬಿ-ಬಿಎಂಟಿಎಫ್ ಗೆ ನೋ ಎಂಟ್ರಿ” ವಿವಾದಾತ್ಮಕ ಸುತ್ತೋಲೆ ಹೊರಡಿಸಿದ ಕಮಿಷನರ್ “ಹರೋಹರ”..ಮಹಾದೇವ್…

0
ಮತ್ತೊಂದು ಯಡವಟ್ಟಿನ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ ಬಿಡಿಎ ಕಮಿಷನರ್ ಮಹಾದೇವ್
ಮತ್ತೊಂದು ಯಡವಟ್ಟಿನ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ ಬಿಡಿಎ ಕಮಿಷನರ್ ಮಹಾದೇವ್

ಬೆಂಗಳೂರು:ಬಿಡಿಎ ಕಮಿಷನರ್ ಮಹಾದೇವ್ ಅವರಿಗೇನ್ ಬಂದಿದೆಯೋ ಗೊತ್ತಿಲ್ಲ..ಬಿಡಿಎ ಸರ್ಕಾರಿ ಕಚೇರಿಯೋ ಅಥವಾ ತಮ್ಮ ಜಹಗೀರ್ ದಾರ್ ಎಂದ್ಕೊಂಡಿದ್ದಾರೇನೋ ಗೊತ್ತಾಗ್ತಿಲ್ಲ..ಬಿಡಿಎನ ಇಡೀ ವ್ಯವಸ್ಥೆ ಹಾಗೂ ಆಡಳಿತ ತನ್ನ ಮೂಗಿನ ನೇರಕ್ಕೆ ನಡೆಯಬೇಕು.ತಮ್ ಕಣ್ಣಿನ ಅಂಚಿನಲ್ಲೇ ಎಲ್ಲವೂ ಇರಬೇಕು ಎಂದ್ಕೊಂಡಂತೆ…ದಿನಕ್ಕೊಂದು ರೂಲ್ಸ್..ಘಳಿಗೆಗೊಂದು ನಿಯಮ…ಮಾಡಲು ಶುರುಮಾಡಿದ್ದಾರೆ. ಅವರದೇ ಕಚೇರಿಯಿಂದ ಹೊರಟಿರುವ ಈ ಸುತ್ತೋಲೆ ಅವರದೇ ಸರ್ವಾಧಿಕಾರಿ ಧೋರಣೆಗೆ ಕೈಗನ್ನಡಿ ಹಿಡಿದಂತಿದೆ..ಅವರ ವಿವಾದಾತ್ಮಕ ಸುತ್ತೋಲೆಯ ಪ್ರತಿ ಕನ್ನಡ ಫ್ಲಾಶ್ ನ್ಯೂಸ್ ಗೆ ಲಭಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿನೇ ದಿನೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದರೆ ಅದನ್ನು ಮೇಲಕ್ಕೆತ್ತಬೇಕಾದ ಹೊಣೆಗಾರಿಕೆಯ ಅಧಿಕಾರಿಗಳೆಲ್ಲಾ ಜವಾಬ್ದಾರಿ ಮರೆತಂತೆ ಆಡಳಿತ ನಡೆಸುತ್ತಿದ್ದಾರೆ.ಅಧಿಕಾರ ವಹಿಸಿಕೊಂಡ ದಿನಗಳಿಂದ್ಲೂ ಇಂತದ್ದೇ ಗಂಭೀರ ಆರೋಪಕ್ಕೆ ತುತ್ತಾಗಿದ್ದಾರೆ ಕಮಿಷನರ್ ಮಹಾದೇವ್..ಬಿಡಿಎಯನ್ನು ಉದ್ಧಾರ ಮಾಡೋದನ್ನು ಬಿಟ್ಟು ಅನಾವಶ್ಯಕ ವಿಷಯಗಳಿಗೆ ತಲೆಕೆಡಿಸಿಕೊಂಡು ವ್ಯವಸ್ಥೆಯನ್ನು ಬುಡಮೇಲುಗೊಳಿಸ್ತಿದ್ದಾರೆನ್ನುವ ಆರೋಪವೂ ಅವರ ಮೇಲಿದೆ.

ಇದೆಂಥಾ ತಲೆಪ್ರತಿಷ್ಟೆಯ ಫರ್ಮಾನೋ..?  8ನೇ ಜುಲೈರಂದು ಮಾನ್ಯ ಕಮಿಷನರ್ ಮಹಾದೇವ್ ಅವರ ಕಚೇರಿಯಿಂದ ಬಿಡಿಎ ನ ಎಲ್ಲಾ ವಿಭಾಗೀಯ ಕಚೇರಿಗಳಿಗೆ ಒಂದು ಸುತ್ತೋಲೆ ರವಾನೆಯಾಗುತ್ತೆ..ಆ ಸುತ್ತೋಲೆ ನೋಡಿ ಬಿಎಂಟಿಎಫ್,ಎಸಿಬಿಯಂಥ ತನಿಖಾ ಸಂಸ್ಥೆಗಳೇ ತಬ್ಬಿಬ್ಬಾಗಿವೆ.ಇದಕ್ಕೆ ಕಾರಣ ಏನ್ ಗೊತ್ತಾ..ಬಿಡಿಎನಲ್ಲಿರುವ ಜಾಗೃತದಳ ಹಾಗೂ ವಿಶೇಷ ಕಾರ್ಯನಿರತ ಪಡೆ ಬಿಟ್ಟು ಉಳಿದ ಯಾವುದೇ ತನಿಖಾ ಏಜೆನ್ಸಿಗಳಿಗೂ ಬಿಡಿಎ ನಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಕೇಳುವ ಅಧಿಕಾರವೇ ಇಲ್ಲ ಎನ್ನುವುದನ್ನು ಈ ಸುತ್ತೋಲೆ ಸಾರಿ ಹೇಳುವಂತಿದೆ.

ಎಸಿಬಿ ಹಾಗು ಬಿಎಂಟಿಎಫ್ ಗೆ ಸರ್ಕಾರಿ ಸ್ವಾಮ್ಯದ ಯಾವುದೇ ಇಲಾಖೆಗಳಲ್ಲಿ ನಡೆಯುವ ಅಕ್ರಮ-ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಂಕೆ ವ್ಯಕ್ತವಾದ್ರೂ ಅದರ ಬಗ್ಗೆ ಪ್ರಶ್ನಿಸುವ ಅಧಿಕಾರವಿದೆ.ಅಗತ್ಯಬಿದ್ದರೆ ಮೇಲಾಧಿಕಾರಿಗಳ ಪರ್ಮಿಷನ್ ಪಡೆದು ಶಂಕಾಸ್ಪದರನ್ನು ದಾಖಲೆ ಸಮೇತ ವಶಕ್ಕೆ ಪಡೆದು,ವಿಚಾರಣೆಗೊಳಪಡಿಸುವ ಪರಮಾಧಿಕಾರವಿದೆ.ಇದನ್ನು ಬಿಡಿಎ ಕೊಡೋದಲ್ಲ..ಅಥವಾ..ಬಿಬಿಎಂಪಿ ನೀಡೋದಲ್ಲ..ಸರ್ಕಾರವೇ ಅಧಿಕಾರಯುತವಾಗಿ ನೀಡಿದ ಅವಕಾಶ,ಈ ಪುಟ್ಟ ಮಾಹಿತಿಯೂ ಕಮಿಷನರ್ ಗೆ ಇಲ್ಲವಾಯ್ದೆ ಹೋಯ್ತಲ್ಲ ಎನ್ನುವುದು ದೌರ್ಭಾಗ್ಯಪೂರ್ಣ.ಅಥವಾ ಎಲ್ಲಾ ವಿಷಯಗಳಲ್ಲೂ ಕಮಿಷನರ್ ಕಿವಿ ಊದುವ ,ಮಾಹಿತಿಗಳ ಮೂಲಕ ಮಾರ್ಗದರ್ಶನ ನೀಡುವವರು ಮಹಾದೇವ್ ಸಾಹೇಬ್ರಿಗೆ ಇದನ್ನೆಲ್ಲಾ ಹೇಳಲಿಲ್ವಾ ಗೊತ್ತಾಗ್ತಿಲ್ಲ.

ಬಿಡಿಎ ನಲ್ಲಿ ಭ್ರಷ್ಟಾಚಾರ ನಡುದ್ರೆ ಅದನ್ನು ತನಿಖೆ ಮಾಡಬಾರದೆಂದ್ರೆ ಅದೆಂಥಾ ನ್ಯಾಯ.. ಮಹಾದೇವ್ ಓರ್ವ ಕಮಿಷನರ್ ಆಗಿ ಈ ರೀತಿಯ ಆದೇಶ ನೀಡುವುದು ಓರ್ವ ಐಎಎಸ್ ಅಧಿಕಾರಿಯಾಗಿ ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆ ಈಗ ಶುರುವಾಗಿದೆ.ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರೇ ಕಮಿಷನರ್ ಧೋರಣೆಯನ್ನು ಪ್ರಶ್ನಿಸಲಾರಂಭಿಸಿದ್ದಾರೆ.ಕಮಿಷನರ್ ಮಹಾದೇವ್ ಈ ರೀತಿ ಆದೇಶ-ಫರ್ಮಾನ್ ಹೊರಡಿಸುವ ಮೂಲಕ ಬಿಡಿಎಯನ್ನು ವಿಚಾರಣೆ-ತನಿಖೆ ವ್ಯವಸ್ಥೆಯಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ.ಭ್ರಷ್ಟರಿಂದ ತುಂಬಿ ಹೋಗಿರುವ ಬಿಡಿಎ ನಲ್ಲಿ ಏನೇ ಅಕ್ರಮ ನಡುದ್ರೂ ಅದನ್ನು ಯಾರೂ ಪ್ರಶ್ನಿಸಬಾರದೆನ್ನು ಉದ್ದೇಶ ಹೊಂದಿದ್ದಾರಾ ಎಂದು ಸಾಮಾಜಿಕ ಕಾರ್ಯಕರ್ತ ಚಾಮುಂಡಿ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಹಾದೇವ್ ಅವರು ತಮ್ಮ ಸುತ್ತೋಲೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಇರುವ ವ್ಯಾಜ್ಯಗಳು..ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಲು ಪ್ರಾದಿಕಾರದ ವ್ಯಾಪ್ತಿಯಲ್ಲೇ ತನಿಖಾ ಸಂಸ್ಥೆಗಳಿವೆ.ಅವು ಪೊಲೀಸ್ ಠಾಣೆಗಳಿಗೆ ಕೆಲಸ ಮಾಡುತ್ತವೆ.ನಮ್ಮ ವಿಚಾರಗಳನ್ನು ತನಿಖೆ ಮಾಡಲು ನಮ್ಮದೇ ಏಜೆನ್ಸಿಗಳಿರುವಾಗ ಬೇರೊಂದು ಏಜೆನ್ಸಿಗಳ ಅವಶ್ಯಕತೆ ಇದೆಯೇ ಎನ್ನುವ ವರ್ಷನ್ ನಲ್ಲಿ ವಿಚಾರಗಳನ್ನು ಮಂಡಿಸಿರಬಹುದು.ಆದ್ರೆ ಪ್ರಾಧಿಕಾರ ವ್ಯಾಪ್ತಿಯ ವಿವಾದ-ದೂರು-ಅಕ್ರಮಗಳ ತನಿಖೆಗೆಂದೇ ಸರ್ಕಾರ ಬಿಎಂಟಿಎಫ್ ನ್ನು ನಿಯೋಜಿಸಿದೆ.ಅಲ್ಲದೇ ಎಸಿಬಿಗೂ ತನಿಖೆಯ ಅಧಿಕಾರ ನೀಡಿದೆ.ಅವು ಮೇಲಾಧಿಕಾರಿಗಳ ಪರ್ಮಿಷನ್ ಪಡೆದು ಬಿಡಿಎ ಆವರಣ ಪ್ರವೇಶಿಸ್ಬೋದು..ತನಿಖೆ ನಡೆಸ್ಬೋದೆನ್ನುವ ಮಾಹಿತಿ ಮಹಾದೇವ್ ಅವರಿಗೆ ಇದ್ದಂತಿಲ್ಲವೇನೋ..ಹಾಗಾಗಿಯೇ ಇಂತದ್ದೊಂದು ವಿವಾದಾತ್ಮಕ ಸುತ್ತೋಲೆ ಅವರ ಕಚೇರಿಯಿಂದ ಹೊರಬಿದ್ದಿರಬೇಕು ಎನಿಸುತ್ತೆ ಎನ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಕುಮಾರ್.

ಬಿಡಿಎ ಕ್ಯಾಂಪಸ್ ಗೆ ಬರೊಕ್ಕೆ ಕಮಿಷನರ್  ಪೂರ್ವಾನುಮತಿ  ಬೇಕಂತೆ..ಯಾರೂ ಮಾಹಿತಿ-ದಾಖಲೆ ಕೊಡುವಂಗಿಲ್ಲವಂತೆ..: ಪ್ರಾಧಿಕಾರಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮ ಪೂರ್ವಾನುಮತಿಯಿಲ್ಲದೆ ಎಲ್ಲೂ ಸರ್ಕ್ಯೂಲೆಟ್ ಆಗಬಾರದೆನ್ನುವ ಅವರ ನಿಲುವಿಗೆ ಎಲ್ಲರ ಸಹಮತ ಇದೆ.ಒಂದು ಸಂಸ್ಥೆಯ ಮುಖ್ಯಸ್ಥರಾಗಿ ಹಾಗೆ ಆದೇಶಿಸುವ ಅಧಿಕಾರ ಅವರಿಗಿದೆ.ಅದು ಪ್ರಶ್ನಾತೀತ ಕೂಡ.ಆದರೆ ಪ್ರಾದಿಕಾರಕ್ಕೆ ಸಂಬಂದಿಸಿದ ವಿಚಾರಗಳ ವಿಚಾರಣೆಗೆ ಬೇರೆ ತನಿಖಾ ಸಂಸ್ಥೆಗಳು ಎಂಟ್ರಿನೇ ಆಗಬಾರದು.ಎಂಟ್ರಿ ಆದ್ರೂ ತನ್ನ ಅನುಮತಿಯಿಲ್ಲದೆ ಯಾರಿಗೂ ಮಾಹಿತಿ-ದಾಖಲೆ ನೀಡಬಾರದೆಂದು ಆದೇಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೇ ಎಲ್ಲರ ಪ್ರಶ್ನೆ.

ಬಿಡಿಎ ಕಮಿಷನರ್ ವಿರುದ್ದ ಬಿಎಂಟಿಎಫ್-ಎಸಿಬಿ ಅಧಿಕಾರಿಗಳು ಗರಂ-ಮೇಲಾಧಿಕಾರಿಗಳಿಗೆ ದೂರು ನೀಡೊಕ್ಕೆ ಸಿದ್ಧತೆ: ಬಿಡಿಎ ಅಕ್ರಮಗಳ ಕೊಂಪೆ ಎನ್ನುವುದು ಸ್ವತಃ ಮಹಾದೇವ್ ಅವರಿಗು ಗೊತ್ತಿದೆ.ವ್ಯವಸ್ಥೆ ಸರಿಯಾಗಬೇಕಾದ್ರೆ ಭ್ರಷ್ಟರ ಹೆಡೆಮುರಿ ಕಟ್ಟುವ ಕೆಲಸ ಆಧ್ಯತೆಯಲ್ಲಿ ನಡೆಯಬೇಕಿದೆ ಎನ್ನುವುದು ಕೂಡ ಚೆನ್ನಾಗಿ ತಿಳಿದಿದೆ.ಇದೆಲ್ಲಾ ಗೊತ್ತಾದ ಹೊರತಾಗ್ಯೂ ಬಿಡಿಎ ವಿಚಾರಗಳಲ್ಲಿ ಬಿಎಂಟಿಎಫ್-ಎಸಿಬಿಗಳು ಪ್ರಾಧಿಕಾರದೊಳಗೆ ಪ್ರವೇಶಿಸಲೇಬಾರದು..ಪ್ರವೇಶಿಸಿದ್ರೂ ಯಾವ್ದೇ ಸಿಬ್ಬಂದಿ ಮಾಹಿತಿ-ದಾಖಲೆ ಕೊಡಬಾರದೆಂದು ಹೇಳೊಕ್ಕೆ ಅವರ್ಯಾರು..ಆ ಅಧಿಕಾರ ನಿಜಕ್ಕೂ ಅವರಿಗಿದೆಯಾ.ಇದರ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ಬಿಎಂಟಿಎಫ್ ಹಾಗು ಎಸಿಬಿ ಮೇಲಾಧಿಕಾರಿಗಳು ಕೂಡ ಬಿಡಿಎ ಕಮಿಷನರ್ ಸುತ್ತೋಲೆಗೆ ಕೆಂಡಾಮಂಡ ಲವಾಗಿದ್ದು ತಮ್ಮ ಅಧಿಕಾರವನ್ನು ಮೊಟಕುಗೊಳಿಸಲು ಅವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಪ್ರಶ್ನಿಸಿದ್ದಾರಲ್ಲದೇ ಪೊಲೀಸ್ ಇಲಾಖೆ ಮುಖ್ಯಸ್ಥರ ಗಮನಕ್ಕೂ ಈ ವಿಷಯ ತರಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ.

ಬಿಡಿಎ ಕಮಿಷನರ್ ಆಗಿ ತನ್ನ ತಾಕತ್ತೇನು ಎನ್ನುವುದನ್ನು ಪ್ರೂವ್ ಮಾಡಲಿಕ್ಕೆ ಹೋಗಿ, ಅಗತ್ಯವೇ ಇಲ್ಲದಿದ್ದ ಸುತ್ತೋಲೆ ಹೊರಡಿಸಿ ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು ನಿಜಕ್ಕೂ ದುರಾದೃಷ್ಟಕರವಲ್ದೇ  ಇನ್ನೇನು.? 

Spread the love
Leave A Reply

Your email address will not be published.

Flash News