ವಾಟಾಳ್ ನಾಗರಾಜ್ ಹೋರಾಟಗಳ ಸಾಕ್ಷಿಪ್ರಜ್ಞೆ “ಧರ್ಮಪತ್ನಿ” ಜ್ಞಾನಾಂಬಿಕೆ ಇನ್ನಿಲ್ಲ

0

ಬೆಂಗಳೂರು:ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಅವರಿಗೆ ಪತ್ನಿವಿಯೋಗ  ಉಂಟಾಗಿದೆ.60 ವರ್ಷದ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ಹಾಗೂ ಕುಟುಂಬವನ್ನು ಬಿಟ್ಟು ಅಗಲಿದ್ದಾರೆ.ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ ಇಂದು ಸಂಜೆ ಶೇಷಾದ್ರಿಪುರಂನ ನಿವಾಸದಲ್ಲಿ ಕೊನೆಯುಸಿರೆಳೆದರು.

ಹತ್ತಿರತ್ತರ ಮೂರುವರೆ ದಶಕಗಳ ಕಾಲ ವಾಟಾಳ್ ನಾಗರಾಜ್ ಅವರೊಂದಿಗೆ ದಾಂಪತ್ಯ ನಡೆಸಿ ಅವರ ಎಲ್ಲಾ ರೀತಿಯ ಹೋರಾಟಗಳು-ಸುಃ?ಖ ದುಃಖಕ್ಕೆ ಸಾಕ್ಷಿಪ್ರಜ್ಞೆಯಂತಿದ್ದ ಜ್ಞಾನಾಂಬಿಕೆ ಅವರು ಕಳೆದ ಕೆಲ ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದರು.ಅವರಿಗೆ ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.ಡಯಾಲಿಸಿಸ್ ಗೂ ಒಳಗಾಗಿದ್ದ ಜ್ಞಾನಾಂಬಿಕೆ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿತ್ತು.ಈ ಕಾರಣಕ್ಕೆ ವೈದ್ಯರ ಸಲಹೆ ಮೇರೆಗೆ ಮನೆಗೆ ತರಲಾಗಿತ್ತು.ಇಂದು ಬೆಳಗ್ಗೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಗಾಬರಿಗೊಂಡ ವಾಟಾಳ್ ಕುಟುಂಬ ಮನೆಯಲ್ಲೇ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದೆ.ವೈದ್ಯರು ಕೂಡ ಸಾಕಷ್ಟು ಪ್ರಯಾಸ ಪಟ್ಟರೂ ಸಂಜೆವೇಳೆಗೆ ಅವರು ಕೊನೆಯುಸಿರೆಳೆದರು.

ಮೃತರ ಪಾರ್ಥೀವ ಶರೀರವನ್ನು ವಾಟಾಳ್ ಅವರ ಸ್ವಂತ ಮನೆಯಿರುವ ಡಾಲರ್ಸ್ ಕಾಲೋನಿಯಲ್ಲಿ ಇಡಲಾಗಿದೆ.ನಾಳೆ ಬೆಳಗ್ಗೆ  9-00 ಘಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ 16 ಗ್ರಾಮದ ಜಮೀನಿನಲ್ಲಿ ವಾಟಾಳ್ ಅವರ ಪತ್ನಿಯ  ಅಂತ್ಯಕ್ರಿಯೆ ನಡೆಯಲಿದೆ.

ಗಣ್ಯರ ಸಂತಾಪ:ವಾಟಾಳ್ ಎನ್ನುವ ಅತ್ಯದ್ಭುತ ಹಾಗೂ ವರ್ಣರಂಜಿತ ವ್ಯಕ್ತಿಯ ಪ್ರತಿಯೊಂದು ಬೆಳವಣಿಗೆಯಲ್ಲೂ ನಿರ್ಣಾಯಕ ಪಾತ್ರ ವಹಿಸಿದಂಥವರು ಅವರ ಪತ್ನಿ ಜ್ಞಾನಾಂಬಿಕೆ.ಅವರಿಲ್ಲದೆ ತಾನಿಲ್ಲ..ತಾನು ಅಪೂರ್ಣ ಎಂದು ವಾಟಾಳ್ ಎಲ್ಲೆಡೆ ಹೇಳುತ್ತಿದ್ದರು.ಈಗ ಅವರೇ ವಾಟಾಳ್ ಅವರನ್ನು ಬಿಟ್ಟಗಲಿರುವ ಬಗ್ಗೆ ನಾಡಿನಾದ್ಯಂತ ವ್ಯಾಪಕ ಸಂತಾಪ ವ್ಯಕ್ತವಾಗುತ್ತಿದೆ.ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಮಾಜಿ ಸಿಎಂ ಸಿದ್ಧರಾಮಯ್ಯ,ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ,ಮಾಜಿ ಸಿಎಂ ಕುಮಾರಸ್ವಾಮಿ,ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಗಣ್ಯರು ವಾಟಾಳ್ ಅವರ ಪತ್ನಿ ಜ್ಞಾನಾಂಬಿಕೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  

Spread the love
Leave A Reply

Your email address will not be published.

Flash News